
ಮುಂಬೈ(ಜೂ.15): ವಿಶ್ವ ರಕ್ತದಾನ ದಿನಾಚರಣೆಯ ಅಂಗವಾಗಿ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ರಕ್ತದಾನ ಮಾಡಿ ಗಮನ ಸೆಳೆದಿದ್ದಾರೆ.
ಇದೇ ವೇಳೆ ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು, ಅದರಲ್ಲೂ ಕೋವಿಡ್ 19 ಪಿಡುಗಿನ ಸಂದರ್ಭದಲ್ಲಂತೂ ಎಲ್ಲರೂ ದಯವಿಟ್ಟು ರಕ್ತದಾನ ಮಾಡಿ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಮನವಿ ಮಾಡಿದ್ದಾರೆ. ‘ನಮಗೆಲ್ಲ ಜೀವ ಉಳಿಸುವ ಶಕ್ತಿ ಇದೆ. ಅದನ್ನು ಬಳಸೋಣ’ ಎಂದು ರಕ್ತದಾನ ಮಾಡಿದ ಬಳಿಕ ಕರೆ ನೀಡಿದರು.
ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಬಲಿಷ್ಠ ನ್ಯೂಜಿಲೆಂಡ್ ತಂಡ ಪ್ರಕಟ
ಮುಂಬೈನಲ್ಲಿ ರಕ್ತದಾನ ಶಿಬಿರಕ್ಕೆ ಭೇಟಿ ನೀಡಿದ ಸಚಿನ್ ತೆಂಡುಲ್ಕರ್, ವೈದ್ಯಕೀಯ ಚಿಕಿತ್ಸೆಯ ಸಂದರ್ಭದಲ್ಲಿ ಹಾಗೂ ಸರಿಯಾದ ಸಮಯದಲ್ಲಿ ರಕ್ತದ ಲಭ್ಯತೆ ಸೇರಿದಂತೆ ರಕ್ತದಾನ ಮಹತ್ವವನ್ನು ಸಚಿನ್ ತಿಳಿಹೇಳಿದರು. ಇತ್ತೀಚೆಗಷ್ಟೇ ತಮ್ಮ ಸಂಬಂಧಿಕರೊಬ್ಬರಿಗೆ ರಕ್ತದ ಅಗತ್ಯವಿತ್ತು ಎಂದು ತಮ್ಮ ವಿಡಿಯೋ ಮೂಲಕ ರಕ್ತದಾನದ ಜಾಗೃತಿ ಮೂಡಿಸಿದ್ದಾರೆ.
ಭಾರತದಲ್ಲಿ ಕ್ರಿಕೆಟ್ ದೇವರು ಎಂದೇ ಕರೆಯಲ್ಪಡು ಸಚಿನ್ ತೆಂಡುಲ್ಕರ್ ಟೀಂ ಇಂಡಿಯಾ ಪರ 200 ಟೆಸ್ಟ್ ಹಾಗೂ 463 ಏಕದಿನ ಪಂದ್ಯಗಳನ್ನಾಡಿದ್ದು, ಕ್ರಮವಾಗಿ 15,921 ಹಾಗೂ 18,426 ರನ್ ಬಾರಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕ ಬಾರಿಸಿದ ಏಕೈಕ ಬ್ಯಾಟ್ಸ್‌ಮನ್ ಎನ್ನುವ ಅಪರೂಪದ ದಾಖಲೆಗೂ ಸಚಿನ್ ಭಾಜನಾರಗಿದ್ದಾರೆ. ಇದಷ್ಟೇ ಅಲ್ಲದೇ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಹಾಗೂ ಏಕೈಕ ಕ್ರೀಡಾಪಟು ಎನ್ನುವ ಹಿರಿಮೆಯೂ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.