Republic Day: ಗಣತಂತ್ರ ದಿನದ ಸಂದೇಶ ರವಾನಿಸಿದ ಮೋದಿಗೆ ಧನ್ಯವಾದ ಅರ್ಪಿಸಿದ ಗೇಲ್‌, ಜಾಂಟಿ ರೋಡ್ಸ್..!

Suvarna News   | Asianet News
Published : Jan 26, 2022, 04:41 PM IST
Republic Day: ಗಣತಂತ್ರ ದಿನದ ಸಂದೇಶ ರವಾನಿಸಿದ ಮೋದಿಗೆ ಧನ್ಯವಾದ ಅರ್ಪಿಸಿದ ಗೇಲ್‌, ಜಾಂಟಿ ರೋಡ್ಸ್..!

ಸಾರಾಂಶ

* 73ನೇ ಗಣರಾಜ್ಯೋತ್ಸವಕ್ಕೆ ಶುಭ ಕೋರಿದ ಕ್ರಿಸ್ ಗೇಲ್‌, ಜಾಂಟಿ ರೂಡ್ಸ್ * ಹಲವು ಭಾರತೀಯ ಸ್ನೇಹಿತರಿಗೆ ಪತ್ರ ಬರೆದ ಪ್ರಧಾನಿ ನರೇಂದ್ರ ಮೋದಿ * ವಿದೇಶಿ ಆಟಗಾರರು ಭಾರತದೊಂದಿಗಿನ ಒಡನಾಟ ಸ್ಮರಿಸಿದ ಪ್ರಧಾನಿ 

ನವದೆಹಲಿ(ಜ.26): ದೇಶಾದಾದ್ಯಂತ ಅತ್ಯಂತ ಸಡಗರದಿಂದ 73ನೇ ಗಣರಾಜ್ಯೋತ್ಸವವನ್ನು (73rd Republic Day) ಆಚರಿಸಲಾಗುತ್ತಿದೆ. ಸ್ವಯಂ ಘೋಷಿತ ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್‌ (Chris Gayle) ಹಾಗೂ ದಕ್ಷಿಣ ಆಫ್ರಿಕಾ ತಂಡದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್‌(Jonty Rhodes), ಭಾರತದ 73ನೇ ಗಣತಂತ್ರ ದಿನಕ್ಕೆ ಶುಭಾಶಯಗಳನ್ನು ಕೋರಿದ್ದಾರೆ. ಈ ಇಬ್ಬರು ಕ್ರಿಕೆಟಿಗರು ವೈಯುಕ್ತಿಕವಾಗಿ ತಮಗೆ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಕಳಿಸಿದ್ದ ಸಂದೇಶದೊಂದಿಗೆ ಟ್ವೀಟ್ ಮೂಲಕ ಗಣರಾಜ್ಯೋತ್ಸವಕ್ಕೆ ಶುಭ ಕೋರಿದ್ದಾರೆ.

42 ವರ್ಷದ ವೆಸ್ಟ್ ಇಂಡೀಸ್ ಕ್ರಿಕೆಟಿಗ ಭಾರತದ ಜನರೊಂದಿಗಿನ ಒಡನಾಟವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. 73ನೇ ಗಣರಾಜ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಭಾರತಕ್ಕೆ ನಾನು ಶುಭಾಶಯಗಳನ್ನು ಕೋರುತ್ತೇನೆ. ನಾನು ಬೆಳಗ್ಗೆ ಎದ್ದು ಮೆಸೇಜ್ ನೋಡಿದಾಗ ಪ್ರಧಾನಿ ನರೇಂದ್ರ ಮೋದಿಯವರು ನನ್ನ ಹಾಗೂ ಭಾರತೀಯರೊಂದಿಗೆ ನಿಕಟ ಸಂಬಂಧವನ್ನು ಉಲ್ಲೇಖಿಸಿ ಪತ್ರ ಬರೆದಿದ್ದರು. ಯೂನಿವರ್ಸೆಲ್ ಬಾಸ್ ವತಿಯಿಂದ ನಿಮಗೆಲ್ಲರಿಗೂ ಪ್ರೀತಿಪೂರ್ವಕ ಅಭಿನಂದನೆಗಳು ಎಂದು ಕ್ರಿಸ್ ಗೇಲ್ ಟ್ವೀಟ್ ಮಾಡಿದ್ದಾರೆ.

ಕ್ರಿಸ್ ಗೇಲ್ ಟ್ವೀಟ್ ಮಾಡಿದ ಕೆಲವೇ ಕ್ಷಣಗಳು ಕಳೆದ ಬಳಿಕ ದಕ್ಷಿಣ ಆಫ್ರಿಕಾ ತಂಡದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಕೂಡಾ ಭಾರತದ ಗಣರಾಜ್ಯೋತ್ಸವಕ್ಕೆ ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ. ನಿಮ್ಮ ಪ್ರೀತಿ ಆದರಣೀಯ ಮಾತುಗಳಿಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು. ನಾನು ಪ್ರತಿ ಭಾರಿ ಭಾರತಕ್ಕೆ ಭೇಟಿ ನೀಡಿದಾಗಲೆಲ್ಲ ಒಂದಲ್ಲಾ ಒಂದು ಹೊಸ ವಿಚಾರಗಳನ್ನು ಕಲಿತುಕೊಂಡಿದ್ದೇನೆ. ಭಾರತದ ಜತೆಗೆ ನನ್ನ ಇಡೀ ಕುಟುಂಬ ಗಣರಾಜ್ಯೋತ್ಸವವನ್ನು ಆಚರಿಸಲಿದೆ. ಸಂವಿಧಾನದ ಮೂಲಕ ಭಾರತೀಯರ ಹಕ್ಕುಗಳನ್ನು ರಕ್ಷಿಸುವ ಗಣತಂತ್ರ ದಿನಾಚರಣೆಯ ಶುಭಾಶಯಗಳು. ಜೈ ಹಿಂದ್ ಎಂದು ಜಾಂಟಿ ರೋಟ್ಸ್‌ ಪ್ರಧಾನಿ ಮೋದಿ ಕಳಿಸಿದ ಸಂದೇಶದ ಜತೆಗೆ ಟ್ವೀಟ್ ಮಾಡಿದ್ದಾರೆ.

ನರೇಂದ್ರ ಮೋದಿ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್‌ಗೆ ಕಳಿಸಿದ ಪತ್ರದಲ್ಲಿ, ನಮ್ಮ ದೇಶದ ಮೇಲೆ ಮೇಲೆ ವಿಶೇಷ ಅಭಿಮಾನ ಹೊಂದಿರುವ ನಿಮ್ಮನ್ನೂ ಸೇರಿದಂತೆ ಭಾರತದ ಕೆಲವು ಸ್ನೇಹಿತರಿಗೆ ನಾನು ಪತ್ರವನನ್ನು ಬರೆಯುತ್ತಿದ್ದೇನೆ. ನಮ್ಮ ದೇಶ ಹಾಗೂ ದೇಶದ ಜನರ ಜತೆಗೆ ನಿಮ್ಮ ಒಡನಾಟವು ಹೀಗೆಯೇ ಮುಂದುವರೆಯಲಿದೆ ಎನ್ನುವ ವಿಶ್ವಾಸವಿದೆ. ಭಾರತದ ಜತೆಗೆ ನಿಮ್ಮ ಸಂಬಂಧ ಎಷ್ಟು ಅಗಾಧವಾಗಿದೆ ಎನ್ನುವುದು ನಿಮ್ಮ ಮಗಳಿಗೆ ಈ ಮಹಾನ್ ದೇಶದ ಹೆಸರಿಟ್ಟಿರುವುದೇ ಸಾಕ್ಷಿ. ನೀವು ನಿಜಕ್ಕೂ ಉಭಯ ದೇಶಗಳ ನಡುವಿನ ಅತಿದೊಡ್ಡ ರಾಯಭಾರಿಯಾಗಿದ್ದೀರ ಎಂದು ಮೋದಿ ಪತ್ರ ಬರೆದಿದ್ದಾರೆ.

IPL 2022: ನಮ್ಮಲ್ಲೇ ಐಪಿಎಲ್‌ ನಡೆಸಿ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಆಹ್ವಾನ..!

ಜಾಂಟಿ ರೋಡ್ಸ್‌ ಅವರ ಎರಡನೇ ಪತ್ನಿ ಮೆಲಾನಿ 2015ರಲ್ಲಿ ಮುಂಬೈನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಭಾರತದ ಭವ್ಯ ಪರಂಪರೆ, ವೈವಿದ್ಯತೆ ಹಾಗೂ ಸಂಪ್ರದಾಯಗಳಿಗೆ ಪ್ರಭಾವಿತರಾಗಿ ಈ ಹೆಣ್ಣು ಮಗುವಿಗೆ ಇಂಡಿಯಾ ಎಂದು ರೋಡ್ಸ್ ದಂಪತಿ ಹೆಸರಿಟ್ಟಿದ್ದಾರೆ.

ಜಾಗತಿಕ ಮಟ್ಟದಲ್ಲಿ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯು ಚುಟುಕು ಕ್ರಿಕೆಟ್‌ನಲ್ಲಿ ಒಂದು ರೀತಿ ಗೇಮ್ ಚೇಂಜರ್ ಎನಿಸಿಕೊಂಡಿದೆ. ಜಗತ್ತಿನ ನಾನಾ ಮೂಲೆಯ ಕ್ರಿಕೆಟಿಗರು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಹಾತೊರೆಯುತ್ತಾರೆ. ಐಪಿಎಲ್ ಮೂಲಕವೇ ಕ್ರಿಸ್ ಗೇಲ್‌, ಡೇವಿಡ್ ವಾರ್ನರ್, ಎಬಿ ಡಿವಿಲಿಯರ್ಸ್‌ ಅವರಂತಹ ಸ್ಟಾರ್ ಆಟಗಾರರು ಭಾರತದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!
ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ