ಟಿ20: ಗುವಾಹಟಿಗೆ ಬಂದಿಳಿದ ಲಂಕಾ ತಂಡಕ್ಕೆ ಬಿಗಿ ಭದ್ರತೆ!

Kannadaprabha News   | Asianet News
Published : Jan 03, 2020, 10:27 AM IST
ಟಿ20: ಗುವಾಹಟಿಗೆ ಬಂದಿಳಿದ ಲಂಕಾ ತಂಡಕ್ಕೆ ಬಿಗಿ ಭದ್ರತೆ!

ಸಾರಾಂಶ

ಪೌರತ್ವ ಕಾಯ್ದೆ ವಿರೋಧಿಸಿ ಅಸ್ಸಾಂನಲ್ಲಿ ಭಾರಿ ಪ್ರತಿಭಟನೆ ನಡೆದಿತ್ತು. ಇದರಿಂದ ರಣಜಿ ಹಾಗೂ ಐಎಸ್ಎಲ್ ಫುಟ್ಬಾಲ್ ಪಂದ್ಯಗಳು ರದ್ದಾಗಿತ್ತು. ಹೀಗಾಗಿ ಲಂಕಾ ವಿರುದ್ದದ ಮೊದಲ ಟಿ20 ಪಂದ್ಯಕ್ಕೆ ಗುವಾಹಟಿಗೆ ಆಗಮಿಸಿದ ಶ್ರೀಲಂಕಾ ತಂಡಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿದೆ.

ಗುವಾಹಟಿ(ಜ.03): ಭಾರತ ವಿರುದ್ಧ 3 ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿರುವ ಶ್ರೀಲಂಕಾ ತಂಡ, ಭಾನುವಾರ ನಡೆಯಲಿರುವ ಮೊದಲ ಪಂದ್ಯವನ್ನಾಡಲು ಗುರುವಾರ ಇಲ್ಲಿಗೆ ಆಗಮಿಸಿತು. ಲಸಿತ್‌ ಮಾಲಿಂಗ ನೇತೃತ್ವದ ತಂಡವನ್ನು ಬಿಗಿ ಭದ್ರತೆ ನಡುವೆ ವಿಮಾನ ನಿಲ್ದಾಣದಿಂದ ಹೋಟೆಲ್‌ಗೆ ಕರೆದೊಯ್ಯಲಾಯಿತು. 

ಇದನ್ನೂ ಓದಿ: ಭಾರತ vs ಶ್ರೀಲಂಕಾ ಟಿ20 ಸರಣಿ ವೇಳಾಪಟ್ಟಿ, ತಂಡದ ವಿವರ ಇಲ್ಲಿದೆ!

ಪೌರತ್ವ ಮಸೂದೆ ವಿರೋಧಿಸಿ ಇತ್ತೀಚೆಗೆಗಷ್ಟೇ ಇಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು. ರಣಜಿ ಟ್ರೋಫಿ ಹಾಗೂ ಅಂಡರ್‌-19 ಪಂದ್ಯಗಳು ರದ್ದುಗೊಂಡಿದ್ದವು. ಹೀಗಾಗಿ ಪಂದ್ಯ ನಡೆಯುವುದು ಅನುಮಾನ ಎನ್ನಲಾಗಿತ್ತು. ಆದರೆ ಸದ್ಯ ಪರಿಸ್ಥಿತಿ ಶಾಂತವಾಗಿದ್ದು, ಪಂದ್ಯ ನಡೆಸಲು ಯಾವುದೇ ಅಡ್ಡಿಯಿಲ್ಲ ಎಂದು ಅಸ್ಸಾಂ ಕ್ರಿಕೆಟ್‌ ಸಂಸ್ಥೆ ಅಧಿಕಾರಿ ತಿಳಿಸಿದ್ದಾರೆ. 

ಇದನ್ನೂ ಓದಿ: ಭಾರತ-ಆಸೀಸ್‌ ಬೆಂಗಳೂರು ಪಂದ್ಯ: ನಾಳೆಯಿಂದ ಟಿಕೆಟ್‌ ಮಾರಾಟ

ಶುಕ್ರವಾರ ಭಾರತ ತಂಡದ ಆಟಗಾರರು ಆಗಮಿಸಲಿದ್ದು, ಸಂಜೆ ಅಭ್ಯಾಸ ನಡೆಸುವ ಸಾಧ್ಯತೆ ಇದೆ. 2ನೇ ಟಿ20 ಪಂದ್ಯ ಜ.7ರಂದು ಇಂದೋರ್‌ನಲ್ಲಿ ನಡೆದರೆ, ಜ.10ಕ್ಕೆ ಪುಣೆಯಲ್ಲಿ ಅಂತಿಮ ಪಂದ್ಯ ನಡೆಯಲಿದೆ. ಟಿ20 ವಿಶ್ವಕಪ್‌ ದೃಷ್ಟಿಯಿಂದ ಎರಡೂ ತಂಡಗಳಿಗೆ ಈ ಸರಣಿ ಮಹತ್ವದೆನಿಸಿದೆ.

ಭಾರತ ತಂಡ:
ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ರವೀಂದ್ರ ಜಡೇಜಾ, ಶಿವಂ ದುಬೆ, ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ನವದೀಪ್ ಸೈನಿ, ಶಾರ್ದೂಲ್ ಠಾಕೂ್, ಮನೀಶ್ ಪಾಂಡೆ, ವಾಶಿಂಗ್ಟನ್ ಸುಂದರ್, ಸಂಜು ಸಾಮ್ಸನ್

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

U19 Asia Cup: ಪಾಕಿಸ್ತಾನ ಎದುರು ಮುಗ್ಗರಿಸಿದ 14 ವರ್ಷದ ವೈಭವ್ ಸೂರ್ಯವಂಶಿ; ಸ್ಪರ್ಧಾತ್ಮಕ ಮೊತ್ತದತ್ತ ಯುವ ಪಡೆ ದಾಪುಗಾಲು
ಸಂಜು ಇನ್, ಗಿಲ್ ಔಟ್: ಮೂರನೇ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ; ಯಾರಿಗೆಲ್ಲಾ ಸಿಗಲಿದೆ ಚಾನ್ಸ್?