ಭಾರತ-ಆಸೀಸ್‌ ಬೆಂಗಳೂರು ಪಂದ್ಯ: ನಾಳೆಯಿಂದ ಟಿಕೆಟ್‌ ಮಾರಾಟ

By Suvarna NewsFirst Published Jan 3, 2020, 10:14 AM IST
Highlights

ಸದ್ಯ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ತಯಾರಿ ನಡೆಸುತ್ತಿದೆ.  ಸರಣಿ ಬಳಿಕ ಆಸ್ಟ್ರೇಲಿಯಾ ವಿರುದ್ದ ಸರಣಿ ಆಡಲಿದೆ. ಜನವರಿ 19 ರಂದು ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯ ಆಯೋಜಿಸಲಾಗಿದೆ. ಈ ಪಂದ್ಯದ ಟಿಕೆಟ್ ನಾಳೆಯಿಂದ ಮಾರಟ ಪ್ರಕ್ರಿಯೆ ಆರಂಭವಾಗಲಿದೆ.

ಬೆಂಗಳೂರು(ಡ.03): ಜ.19ರಂದು ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಹಾಗೂ ಆಸ್ಪ್ರೇಲಿಯಾ ನಡುವಿನ ಏಕದಿನ ಪಂದ್ಯದ ಆನ್‌ಲೈನ್‌ ಟಿಕೆಟ್‌ ಮಾರಾಟ ಶನಿವಾರ (ಜ.4)ದಿಂದ ಆರಂಭಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

ಇದನ್ನೂ ಓದಿ: ಭಾರತ vs ಶ್ರೀಲಂಕಾ ಟಿ20 ಸರಣಿ ವೇಳಾಪಟ್ಟಿ, ತಂಡದ ವಿವರ ಇಲ್ಲಿದೆ!.

www.ksca.cricket ಇಲ್ಲವೇ ಪೇಟಿಎಂನಲ್ಲಿ ಟಿಕೆಟ್‌ ಖರೀದಿ ಮಾಡಬಹುದಾಗಿದೆ. ಆನ್‌ಲೈನ್‌ನಲ್ಲಿ .4000ದಿಂದ ಗರಿಷ್ಠ .10000 ಮುಖಬೆಲೆಯ ಟಿಕೆಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಜ.13ರಂದು ಕ್ರೀಡಾಂಗಣದಲ್ಲಿರುವ ಬಾಕ್ಸ್‌ ಆಫೀಸ್‌ನಲ್ಲಿ .500ರಿಂದ .3000 ಮುಖಬೆಲೆಯ ಟಿಕೆಟ್‌ಗಳನ್ನು ಮಾರಾಟ ಮಾಡಲಾಗುತ್ತದೆ. 

ಇದನ್ನೂ ಓದಿ: NCA ಸುಧಾರಣೆಗೆ ದ್ರಾವಿಡ್‌-ಗಂಗೂಲಿ ಸೂತ್ರ; ಬೆಂಗಳೂರಿನಲ್ಲೇ ಹೊಸ ಅಕಾಡೆಮಿ!

ಒಬ್ಬರಿಗೆ ಗರಿಷ್ಠ 2 ಟಿಕೆಟ್‌ ಮಾತ್ರ ಖರೀದಿಸಲು ಅವಕಾಶವಿದೆ ಎಂದು ಕೆಎಸ್‌ಸಿಎ ತಿಳಿಸಿದೆ. .2000 ಹಾಗೂ .3000 ಮುಖಬೆಲೆಯ ಟಿಕೆಟ್‌ಗಳು ಗೇಟ್‌ ನಂ.19ರ ಬಳಿ ಇರುವ ಕೌಂಟರ್‌ನಲ್ಲಿ ಮಾರಾಟವಾದರೆ, .500ರ ಟಿಕೆಟ್‌ಗಳು ಗೇಟ್‌ ನಂ.2ರ ಬಳಿ ಇರುವ ಕೌಂಟರ್‌ನಲ್ಲಿ ಲಭ್ಯವಿರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಭಾರತ -ಆಸ್ಟ್ರೇಲಿಯಾ 3 ಪಂದ್ಯಗಳ ಏಕದಿನ ಸರಣಿ ಆಯೋಜಿಸಲಾಗಿದೆ. ಜನವರಿ 14 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆಯಲಿದೆ. ಜನವರಿ 17ರಂದು ರಾಜ್‌ಕೋಟ್ ಹಾಗೂ ಜನವರಿ 19ರ ಅಂತಿಮ ಏಕದಿನ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
 

click me!