
ಚಟ್ಟೋಗ್ರಾಮ್(ಫೆ.08): ಚೊಚ್ಚಲ ಟೆಸ್ಟ್‌ನ 2ನೇ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎನ್ನುವ ದಾಖಲೆ ಬರೆದ ಕೈಲ್ ಮೇಯರ್ಸ್, ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ವಿಂಡೀಸ್ 3 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಲು ನೆರವಾಗಿದ್ದಾರೆ.
ಆತಿಥೇಯ ಬಾಂಗ್ಲಾದೇಶ ನೀಡಿದ್ದ 395 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ್ದ ವಿಂಡೀಸ್‌ಗೆ ಮೇಯರ್ಸ್ (ಅಜೇಯ 210) ಹಾಗೂ ಬೋನರ್(86) ಆಸರೆಯಾದರು. ವಿಂಡೀಸ್ ಟೆಸ್ಟ್ ಇತಿಹಾಸದ 5ನೇ ಹಾಗೂ ಏಷ್ಯಾದಲ್ಲಿ ಅತಿದೊಡ್ಡ ಗುರಿ ಬೆನ್ನತ್ತಿದ ದಾಖಲೆ ಬರೆದಿದೆ.
ಒಂದು ಹಂತದಲ್ಲಿ ಕೇವಲ 59 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸೋಲಿನ ಆತಂಕ್ಕೆ ಸಿಲುಕಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಕೈಲ್ ಮೇಯರ್ಸ್ ಆಸರೆಯಾದರು. ಮೇಯರ್ಸ್ 20 ಬೌಂಡರಿ ಹಾಗೂ 7 ಮನಮೋಹಕ ಸಿಕ್ಸರ್‌ಗಳ ನೆರವಿನಿಂದ ಅಜೇಯ 210 ರನ್ ಬಾರಿಸಿ ಕೆರಿಯನ್ನರಿಗೆ ಸ್ಮರಣೀಯ ಗೆಲುವು ತಂದಿತ್ತರು.
ಗೆಲುವು ತಂದಿತ್ತರು. 6 ವಿಕೆಟ್ ಪತನ, 321ರನ್ ಹಿನ್ನಡೆ, ಚೆನ್ನೈ ಟೆಸ್ಟ್‌ನ 3ನೇ ದಿನವೂ ಭಾರತಕ್ಕೆ ಸಂಕಷ್ಟ!
ತಮ್ಮ ಇನಿಂಗ್ಸ್ ಬಗ್ಗೆ ಟ್ವೀಟ್ ಮಾಡಿರುವ ಕೈಲ್ ಮೇಯರ್ಸ್, ನಾನು ಯಾವಾಗಲೂ ಪಾಸಿಟಿವ್ ಆಗಿರುತ್ತೇನೆ ಹಾಗೆಯೇ ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟಿದ್ದೇನೆ. ನಾವು ಕೊನೆಯ ಕ್ಷಣದವರೆಗೂ ಹೋರಾಟ ಕೈಬಿಡುವುದಿಲ್ಲ. ಎಲ್ಲರ ಪ್ರೀತಿಗೆ ನಾನು ಋಣಿ ಎಂದಿದ್ದಾರೆ.
ಸ್ಕೋರ್:
ಬಾಂಗ್ಲಾದೇಶ: 430 ಹಾಗೂ 223/8 ಡಿ.
ವೆಸ್ಟ್ ಇಂಡೀಸ್: 259 ಹಾಗೂ 395/7
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.