KCSA Election: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಚುನಾವಣೆಗೆ ವೇಳಾಪಟ್ಟಿ ಫಿಕ್ಸ್‌

By Suvarna NewsFirst Published Nov 5, 2022, 8:41 AM IST
Highlights

ಕೆಎಸ್‌ಸಿಎ ಚುನಾವಣೆ ಇದೇ ನವೆಂಬರ್ 20ರಂದು ನಡೆಯಲಿದೆ
ರೋಜರ್ ಬಿನ್ನಿ ಅವರಿಂದ ತೆರವಾದ ಕೆಎಸ್‌ಸಿಎ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಚುನಾವಣೆ
ನಾಮಪತ್ರ ಸಲ್ಲಿಸಲು ನವೆಂಬರ್ 05ರಂದು ಕೊನೆಯ ದಿನಾಂಕ

ಬೆಂಗಳೂರು(ನ.05): ರೋಜರ್‌ ಬಿನ್ನಿ ನಿರ್ಗಮನದಿಂದ ತೆರವಾಗಿರುವ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಯ)ಯ ಅಧ್ಯಕ್ಷ ಸ್ಥಾನ ಹಾಗೂ ಇತರೆ ಪದಾಧಿಕಾರಿಗಳ ಆಯ್ಕೆಗೆ ನವೆಂಬರ್ 20ಕ್ಕೆ ಚುನಾವಣೆ ನಡೆಯಲಿದೆ ಎಂದು ಕೆಎಸ್‌ಸಿಎ ತಿಳಿಸಿದೆ. ಸಂಸ್ಥೆಯ ಉಪಾಧ್ಯಕ್ಷ ಕಾರ್ಯದರ್ಶಿ, ಖಜಾಂಚಿ, ಜಂಟಿ ಕಾರ್ಯದರ್ಶಿ ಹಾಗೂ ಆಡಳಿತ ಸಮಿತಿ ಸದಸ್ಯರ ಆಯ್ಕೆ ನಡೆಯಲಿದ್ದು, ಶನಿವಾರ(ನ.05) ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದೆ. 

ಇನ್ನು 20ರಂದು ಚುನಾವಣೆ ನಡೆಯಲಿದ್ದು, ಅಂದೇ ರಾತ್ರಿ 7 ಗಂಟೆಗೆ ಫಲಿತಾಂಶ ಹೊರಬೀಳಲಿದೆ ಎಂದು ಕೆಎಸ್‌ಸಿಎ ಮಾಹಿತಿ ನೀಡಿದೆ. ಕೊನೆ ಬಾರಿ ಸಂಸ್ಥೆಗೆ 2019ರಲ್ಲಿ ಚುನಾವಣೆ ನಡೆದಿದ್ದು, ರೋಜರ್ ಬಿನ್ನಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇತ್ತೀಚೆಗಷ್ಟೇ ಅವರು ಬಿಸಿಸಿಐ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿರುವ ಹಿನ್ನೆಲೆ ಸಂಸ್ಥೆಗೆ ಹೊಸದಾಗಿ ಚುನಾವಣೆ ನಡೆಯಲಿದೆ.

ಯಾರು ಹೊಸ ಅಧ್ಯಕ್ಷ?

ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಈವರೆಗೂ ಯಾರೂ ನಾಮಪತ್ರ ಸಲ್ಲಿಸಿಲ್ಲ. ಸದ್ಯ ಉಪಾಧ್ಯಕ್ಷರಾಗಿರುವ ಜೆ.ಅಭಿರಾಮ್‌, ಕಾರ‍್ಯದರ್ಶಿ ಸಂತೋಷ್‌ ಮೆನನ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬಹುದು ಎನ್ನಲಾಗುತ್ತಿದೆ. ಜೊತೆಗೆ ಖಜಾಂಚಿ, ಅಧಿಕೃತ ವಕ್ತಾರರಾಗಿರುವ ವಿನಯ್‌ ಮೃತ್ಯುಂಜಯ ಅವರ ಹೆಸರು ಕೂಡಾ ಮುಂಚೂಣಿಯಲ್ಲಿದೆ. ಆದರೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ವಿನಯ್‌ ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಇಂದು ಮುಷ್ತಾಕ್‌ ಅಲಿ ಟಿ20 ಫೈನಲ್‌

ಕೋಲ್ಕತಾ: ಮುಷ್ತಾಕ್‌ ಅಲಿ ಟಿ20 ಟೂರ್ನಿಯ ಫೈನಲ್‌ ಹಣಾಹಣಿ ಶನಿವಾರ ನಡೆಯಲಿದ್ದು, ಹಿಮಾಚಲ ಪ್ರದೇಶ ಹಾಗೂ ಮುಂಬೈ ತಂಡಗಳು ಚೊಚ್ಚಲ ಬಾರಿ ಪ್ರಶಸ್ತಿ ಗೆಲ್ಲಲು ಹೋರಾಡಲಿವೆ. ಈ ಎರಡೂ ತಂಡಗಳು ಇದೇ ಮೊದಲ ಬಾರಿ ಫೈನಲ್‌ ಪ್ರವೇಶಿಸಿವೆ. 

IPL 2023 ಸಿಎಸ್‌ಕೆ ಅಭಿಮಾನಿಗಳಿಗೆ ಗುಡ್ ನ್ಯೂಸ್, ಜಡೇಜಾರನ್ನು ಉಳಿಸಿಕೊಂಡ ಧೋನಿ!

ಗುಂಪು ಹಂತದಲ್ಲಿ ಎಲೈಟ್‌ ‘ಎ’ ಗುಂಪಿನಲ್ಲಿ 7 ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ ಅಗ್ರಸ್ಥಾನಿಯಾಗಿದ್ದ ಮುಂಬೈ ಕ್ವಾರ್ಟರ್‌ಫೈನಲ್‌ನಲ್ಲಿ ಸೌರಾಷ್ಟ್ರವನ್ನು ಸೋಲಿಸಿತ್ತು. ಬಳಿಕ ಸೆಮಿಫೈನಲ್‌ನಲ್ಲಿ ವಿದರ್ಭ ವಿರುದ್ಧ ಗೆದ್ದು ಪ್ರಶಸ್ತಿ ಸುತ್ತು ತಲುಪಿದೆ. ತಂಡದಲ್ಲಿ ಶ್ರೇಯಸ್‌ ಅಯ್ಯರ್‌, ಪೃಥ್ವಿ ಶಾ, ಸರ್ಫರಾಜ್‌ ಖಾನ್‌ ಸೇರಿದಂತೆ ಪ್ರಮುಖರ ದಂಡೇ ಇದ್ದು, ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದೆ. ಮತ್ತೊಂದೆಡೆ ಹಿಮಾಚಲ ಪ್ರದೇಶ 6 ಪಂದ್ಯಗಳಲ್ಲಿ 4 ಗೆಲುವಿನೊಂದಿಗೆ ಎಲೈಟ್‌ ‘ಡಿ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಕ್ವಾರ್ಟರ್‌ನಲ್ಲಿ ಬಂಗಾಳವನ್ನು ಸೋಲಿಸಿತ್ತು. ಸೆಮಿಫೈನಲ್‌ನಲ್ಲಿ ಪಂಜಾಬ್‌ ವಿರುದ್ಧ ಗೆಲುವು ಸಾಧಿಸಿತ್ತು.

ಪಂದ್ಯ: ಸಂಜೆ 4.30ಕ್ಕೆ

ಮಕೆಟಾ ದ.ಆಫ್ರಿಕಾ ಕ್ರಿಕೆಟ್‌ ಟೀಂ ಕೋಚ್‌

ಜೋಹಾನ್ಸ್‌ಬರ್ಗ್‌ : ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ನೂತನ ಪ್ರಧಾನ ಕೋಚ್‌ ಆಗಿ ಮಲಿಬಾಂಗ್ವೆ ಮಕೆಟಾ ಬುಧವಾರ ನೇಮಕಗೊಂಡಿದ್ದಾರೆ. ಮುಂದಿನ ತಿಂಗಳು ಆಸ್ಪ್ರೇಲಿಯಾದಲ್ಲಿ ನಡೆಯಲಿರುವ 3 ಪಂದ್ಯಗಳ ಟೆಸ್ಟ್‌ ಸರಣಿಗೂ ಮುನ್ನ ಅವರು ಹುದ್ದೆ ಅಲಂಕರಿಸಲಿದ್ದಾರೆ. ಟಿ20 ವಿಶ್ವಕಪ್‌ ಮುಕ್ತಾಯಗೊಂಡ ಬಳಿಕ ಮಾರ್ಕ್ ಬೌಷರ್‌ ಪ್ರಧಾನ ಕೋಚ್‌ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. 42 ವರ್ಷದ ಮಕೆಟಾ ಸದ್ಯ ದ.ಆಫ್ರಿಕಾ ‘ಎ’ ತಂಡದ ಕೋಚ್‌ ಹಾಗೂ ರಾಷ್ಟ್ರೀಯ ಅಕಾಡೆಮಿಯ ಮುಖ್ಯಸ್ಥರಾಗಿ ಕಾರ‍್ಯನಿರ್ವಹಿಸುತ್ತಿದ್ದಾರೆ.

click me!