IPL 2023 ಸಿಎಸ್‌ಕೆ ಅಭಿಮಾನಿಗಳಿಗೆ ಗುಡ್ ನ್ಯೂಸ್, ಜಡೇಜಾರನ್ನು ಉಳಿಸಿಕೊಂಡ ಧೋನಿ!

By Suvarna News  |  First Published Nov 4, 2022, 6:43 PM IST

ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಸಿಹಿ ಸುದ್ದಿ. ನಾಯಕ ಎಂ.ಎಸ್ ಧೋನಿ ಮಾತಿನಿಂದ ಸಿಎಸ್‌ಕೆ ತಂಡ ರವೀಂದ್ರ ಜಡೇಜಾರನ್ನು ತಂಡದಲ್ಲೇ ಉಳಿಸಿಕೊಂಡಿದೆ. 


ಚೆನ್ನೈ(ನ.04): ಐಪಿಎಲ್ 2023ರ ಟೂರ್ನಿಗೆ ತಯಾರಿಗಳು ಆರಂಭಗೊಂಡಿದೆ. ಮಿನಿ ಹರಾಜಿಗಾಗಿ 10 ಫ್ರಾಂಚೈಸಿಗಳು ಸಾಕಷ್ಟು ಸಿದ್ದತೆ ನಡೆಸುತ್ತಿದೆ. ಮುಂದಿನ ತಿಂಗಳು ಆಟಾಗಾರರ ಮಿನಿ ಹರಾಜು ನಡೆಯಲಿದೆ. ಇದಕ್ಕೂ ಮೊದಲು ಒಪ್ಪಂದದಿಂದ ಕೈಬಿಡುವ ಆಟಗಾರರು, ಟ್ರಾನ್ಸ್‌ಫರ್ ಮಾಡಲಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಬೇಕು. ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ರವೀಂದ್ರ ಜಡೇಜಾರನ್ನು ಕೈಬಿಡಲು ಮುಂದಾಗಿತ್ತು. ಆದರೆ ನಾಯಕ ಎಂ.ಎಸ್.ಧೋನಿ ಮಾತಿನಿಂದ ಫ್ರಾಂಚೈಸಿ ರವೀಂದ್ರ ಜಡೇಜಾರನ್ನು ತಂಡದಲ್ಲೇ ಉಳಿಸಿಕೊಂಡಿದೆ.  

ಕಳೆದ ಆವೃತ್ತಿಯಲ್ಲಿ ಎಂಎಸ್. ಧೋನಿ ದಿಢೀರ್ ನಾಯಕತ್ವದಿಂದ ಹಿಂದೆ ಸರಿದು ರವಿಂದ್ರ ಜಡೇಜಾಗೆ ನಾಯಕತ್ವ ನೀಡಲಾಗಿತ್ತು. ಆದರೆ ಜಡೇಜಾ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹೀನಾಯ ಪ್ರದರ್ಶನ ನೀಡಿತ್ತು. ಇಷ್ಟೇ ಅಲ್ಲ ಸ್ವತಃ ಜಡೇಜಾ ಕೂಡ ಕಳಪೆ ಪ್ರದರ್ಶನ ನೀಡಿದ್ದರು. ಜಡೇಜಾ ನಾಯಕತ್ವದಲ್ಲಿ ಬರೋಬ್ಬರಿ 10 ಸೋಲು ಕಂಡಿತ್ತು. ಇತ್ತ ಇಂಜುರಿಗೆ ತುತ್ತಾದ ಜಡೇಜಾ ಟೂರ್ನಿಯಿಂದ ಹೊರಬಿದ್ದರು. ಇತ್ತ ಧೋನಿ ಮತ್ತೆ ನಾಯಕತ್ವ ವಹಿಸಿಕೊಂಡರು. ಕಳಪೆ ಪ್ರದರ್ಶನ ನೀಡಿದ ಜಡೇಜಾ ಮುಂದಿನ ಆವೃತ್ತಿಯಲ್ಲಿ ಚೆನ್ನೈ ಉಳಿಸಿಕೊಳ್ಳುವುದಿಲ್ಲ ಅನ್ನೋ ಮಾತುಗಳು ಆಗಲೇ ಕೇಳಿಬಂದಿತ್ತು. 

Tap to resize

Latest Videos

 

ಇವನಿಗೆ ಮದುವೆ ಮಾಡಿ, ಜವಾಬ್ದಾರಿ ಬಂದ್ರೆ ಸುಧಾರಿಸಬಹುದು; ಧವನ್‌ಗೆ ಜಡ್ಡು ಹೀಗಂದಿದ್ದೇಕೆ..? ವಿಡಿಯೋ ವೈರಲ್

ಮೂಲಗಳ ಪ್ರಕಾರ ಚೆನ್ನೈ ಸೂಪರ್ ಕಿಂಗ್ಸ್ ಸತತ ಸೋಲಿಗೆ ಫ್ರಾಂಚೈಸಿ ನೇರವಾಗಿ ರವೀಂದ್ರ ಜಡೇಜಾ ಬಳಿ ನಾಯಕತ್ವದಿಂದ ಕೆಳಗಿಳಿಯುವಂತೆ ಸೂಚಿಸಿತ್ತು. ಇದು ಜಡೇಜಾ ಮನಸ್ತಾಪಕ್ಕೆ ಕಾರಣವಾಗಿತ್ತು. ಹೀಗಾಗಿ ಚೆನ್ನೈ ತೊರೆಯಲು ಜಡೇಜಾ ಕೂಡ ಸಜ್ಜಾಗಿದ್ದರು. ಇತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಲವು ಪೋಸ್ಟ್‌ಗಳನ್ನು ತಮ್ಮ ಜಾಲತಾಣ ಖಾತೆಗಳಿಂದ ಡಿಲೀಟ್ ಮಾಡಿದ್ದರು. ಟ್ರೇಡ್ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿಕೊಳ್ಳಲು ಜಡೇಜಾ ಸಜ್ಜಾಗಿದ್ದರು.

ಆದರೆ ಎಂ.ಎಸ್.ಧೋನಿ ಮಾತುಕತೆ ಮೂಲಕ ರವಿಂದರ ಜಡೇಜಾರನ್ನು ತಂಡದಲ್ಲೇ ಉಳಿಸಿಕೊಂಡಿದ್ದಾರೆ. ಜಡೇಜಾಗಿಂತ ಉತ್ತಮ ಆಟಗಾರ ಮತ್ತೊಬ್ಬನಿಲ್ಲ. ಆಲ್ರೌಂಡರ್ ಆಟದಲ್ಲಿ ಜಡೇಜಾ ನಂಬರ್ 1 . ಹೀಗಾಗಿ ರವೀಂದ್ರ ಜಡೇಜಾ ತಂಡದಲ್ಲಿ ಇರಬೇಕು ಎಂದು ಫ್ರಾಂಚೈಸಿಗೆ ಹೇಳಿದ್ದಾರೆ. ದೋನಿ ಮಾತಿಗೆ ಮರುಮಾತಿಲ್ಲದೇ ಜಡೇಜಾರನ್ನು ತಂಡದಲ್ಲೇ ಉಳಿಸಿಕೊಂಡಿದೆ.

IPL 2023 ಡಿ. 16ಕ್ಕೆ ಐಪಿಎಲ್ ಆಟಗಾರರ ಮಿನಿ ಹರಾಜು, ಜಡೇಜಾ ಖರೀದಿಗೆ ಹಲವು ಫ್ರಾಂಚೈಸಿ ತಯಾರಿ!

ಭಾರತದ ಆಲ್ರೌಂಡರ್‌ ರವೀಂದ್ರ ಜಡೇಜಾ ಮಂಡಿ ಗಾಯದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಏಷ್ಯಾಕಪ್‌ ಟಿ20 ಟೂರ್ನಿಯಿಂದ ಹೊರಬಿದ್ದ ಬಳಿಕ ಟಿ20 ವಿಶ್ವಕಪ್ ಟೂರ್ನಿಯಿಂದಲೂ ಜಡೇಜಾ ಹೊರಬಿದ್ದಿದ್ದಾರೆ.   

ತಾರಾ ಆಲ್ರೌಂಡರ್‌ ರವೀಂದ್ರ ಜಡೇಜಾ ಗಾಯದ ಕಾರಣದಿಂದ 15ನೇ ಆವೃತ್ತಿ ಐಪಿಎಲ್‌ನಿಂದ ಹೊರಬಿದ್ದ ಬೆನ್ನಲ್ಲೇ ಅವರಿಗೆ ತಂಡದ ಜೊತೆ ಮನಸ್ತಾಪ ಮೂಡಿದೆ ಎಂಬ ವದಂತಿಗಳು ಹರಿದಾಡಿತ್ತು. ಈ ಮನಸ್ತಾಪಕ್ಕೆ ನಂತರ ದಿನಗಳಲ್ಲಿ ಮತ್ತಷ್ಟು ದಾಖಲೆಗಳು ಲಭ್ಯವಾಗಿತ್ತು. ತಂಡದ ಮಾಜಿ ನಾಯಕ ಜಡೇಜಾ ಗಾಯಗೊಂಡಿದ್ದರಿಂದ ಟೂರ್ನಿಯ ಉಳಿದ ಪಂದ್ಯಗಳಿಗೆ ಗೈರಾಗಲಿದ್ದಾರೆ ಎಂದು ಫ್ರಾಂಚೈಸಿ ತಿಳಿಸಿತ್ತು. ಆದರೆ ತಂಡದ ಆಡಳಿತದೊಂದಿಗೆ ಮನಸ್ತಾಪವಾಗಿದ್ದರಿಂದಲೇ ಅವರು ಐಪಿಎಲ್‌ ತೊರೆದಿದ್ದಾರೆ ಎಂದು ಹೇಳಲಾಗಿತ್ತು.  ಸುಮಾರು 10 ವರ್ಷಗಳಿಂದ ತಂಡದ ಭಾಗವಾಗಿರುವ ಅವರನ್ನು ಇನ್‌ಸ್ಟಾಗ್ರಾಂನಲ್ಲಿ ಚೆನ್ನೈ ತಂಡ ಅನ್‌ಫಾಲೋ ಮಾಡಿದ್ದು ಈ ವದಂತಿಗಳಿಗೆ ಪುಷ್ಠಿ ಒದಗಿಸಿದೆ. ಈ ಬಾರಿ ಅವರಿಗೆ ತಂಡದ ನಾಯಕತ್ವ ವಹಿಸಿಲಾಗಿದ್ದರೂ ನಾಯಕತ್ವದ ಜೊತೆ ಆಟದಲ್ಲೂ ಅವರು ಸಂಪೂರ್ಣ ವಿಫಲರಾಗಿದ್ದರು. ಇದೇ ಕಾರಣಕ್ಕೆ ಅವರ ಮೇಲೆ ಫ್ರಾಂಚೈಸಿಯು ಅಸಮಾಧಾನಗೊಂಡಿದ್ದು, ಗಾಯದ ಕಾರಣ ನೀಡಿ ತಂಡದಿಂದಲೇ ಹೊರಹಾಕಲಾಗಿದೆ ಎಂದು ಸಾಮಾಜಿಕ ತಾಣಗಳಲ್ಲಿ ಹಲವರು ಪ್ರತಿಕ್ರಿಯಿಸಿದ್ದಾರೆ.
 

click me!