ಪಾಂಡ್ಯ ಸಹೋದರರಿಗೆ ಪಿತೃ ವಿಯೋಗ; ಮುಷ್ತಾಕ್ ಅಲಿ ಟೂರ್ನಿಯಿಂದ ಹೊರನಡೆದ ಬರೋಡ ನಾಯಕ

By Suvarna News  |  First Published Jan 16, 2021, 11:46 AM IST

ಪಾಂಡ್ಯ ಸಹೋದರರಿಗೆ ಪಿತೃ ವಿಯೋಗ ಎದುರಾಗಿದೆ. ಹಿಮಾಂಶು ಪಾಂಡ್ಯ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ಬರೋಡ(ಜ.16): ಕೃನಾಲ್ ಪಾಂಡ್ಯ ಮತ್ತು ಹಾರ್ದಿಕ್ ಪಾಂಡ್ಯ ತಂದೆ ಹಿಮಾಂಶು ಪಾಂಡ್ಯ ಶನಿವಾರದವಾದ ಇಂದು(ಜ.16) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಬರೋಡ ತಂಡವನ್ನು ಮುನ್ನಡೆಸುತ್ತಿದ್ದ ಕೃನಾಲ್ ಪಾಂಡ್ಯ ಬಯೋ ಸೆಕ್ಯೂರ್ ಬಬಲ್ ತೊರೆದು ತಂದೆಯ ಅಂತಿಮ ದರ್ಶನಕ್ಕಾಗಿ ಹೊರ ನಡೆದಿದ್ದಾರೆ.

ಅಹಮದಾಬಾದ್‌ನಲ್ಲಿ ಜನಿಸಿದ ಕೃನಾಲ್‌ ಪಾಂಡ್ಯ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಬರೋಡ ತಂಡದ ಪರ 3 ಪಂದ್ಯಗಳನ್ನು ಆಡಿದ್ದರು. ಇದೀಗ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸು ಉದ್ದೇಶದಿಂದ ತಂಡವನ್ನು ತೊರೆದಿದ್ದಾರೆ ಎಂದು ಬರೋಡ ತಂಡದ ಸಿಇಒ ಶಿಶಿರ್‌ ಹಟನ್‌ಗಡಿ ಹೇಳಿದ್ದಾರೆ.

“Our intentions of letting Hardik and Krunal play cricket from a very young age was questioned and criticised by many. But we were not willing to change our plans, and it’s great to see what they have achieved now”

- Himanshu Pandya. RIP 🙏 pic.twitter.com/iN6Vd5vDFE

— Mumbai Indians (@mipaltan)

Tap to resize

Latest Videos

ಬ್ರಿಸ್ಬೇನ್ ಟೆಸ್ಟ್: ಭಾರತಕ್ಕೆ ಆರಂಭಿಕ ಆಘಾತ

ಕೃನಾಲ್‌ ಪಾಂಡ್ಯ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು, ಮತ್ತೊಬ್ಬ ಸಹೋದರ ಹಾರ್ದಿಕ್ ಪಾಂಡ್ಯ ದೇಸಿ ಟಿ20 ಲೀಗ್‌ನಲ್ಲಿ ಪಾಲ್ಗೊಂಡಿಲ್ಲ. ಹಾರ್ಡ್‌ ಹಿಟ್ಟರ್ ಹಾರ್ದಿಕ್‌ ಪಾಂಡ್ಯ ತವರಿನಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ದದ ಸರಣಿಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. 

ಕೃನಾಲ್‌ ಪಾಂಡ್ಯ ತಂಡ ತೊರೆಯುವ ಮುನ್ನ ತಂಡವನ್ನು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿಸಿದ್ದಾರೆ. ಕೃನಾಲ್ ಪಾಂಡ್ಯ ನೇತೃತ್ವದ ಬರೋಡ ತಂಡ 'ಸಿ' ಗುಂಪಿನಲ್ಲಿ ಸ್ಥಾನ ಪಡೆದಿದೆ. ಆಡಿದ ಮೂರು ಪಂದ್ಯಗಳ ಮೂರರಲ್ಲೂ ಗೆಲುವು ದಾಖಲಿಸುವ ಮೂಲಕ ಬರೋಡ ತಂಡ 'ಸಿ' ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

click me!