ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಆರೋಪದಡಿ ಬಂಧಿತರಾಗಿರುವ ಬಳ್ಳಾರಿ ಟಸ್ಕರ್ಸ್ ತಂಡದ ನಾಯಕ ಸಿ.ಎಂ. ಗೌತಮ್ ಹಾಗೂ ಅಬ್ರಾರ್ ಖಾಜಿ ಅವರನ್ನು ಅಮಾನತು ಮಾಡಿ KSCA ಚಟುವಟಿಕೆಗಳಿಂದ ದೂರವಿಡಲಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು[ನ.08]: ಸ್ಫಾಟ್ ಫಿಕ್ಸಿಂಗ್ ಆರೋಪದ ಮೇರೆಗೆ ಬಂಧಿತರಾದ ಸಿ.ಎಂ. ಗೌತಮ್, ಅಬ್ರಾರ್ ಖಾಜಿ ಅವರನ್ನು ಕ್ರಿಕೆಟ್ ಚಟುವಟಿಕೆಗಳಿಂದ ಅಮಾನತುಗೊಳಿಸಿರುವುದಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ತಿಳಿಸಿದೆ. ಈ ಇಬ್ಬರು KSCA ನಡೆಸುವ ಯಾವುದೇ ಕ್ರಿಕೆಟ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಕಾರ್ಯದರ್ಶಿ ಸಂತೋಷ್ ಮೆನನ್ ತಿಳಿಸಿದ್ದಾರೆ.
KPL ಪಿಕ್ಸಿಂಗ್: ಭಾರತ ತಂಡದಲ್ಲಿ ಆಡುವ ಸಾಮರ್ಥ್ಯವಿದ್ದ ಗೌತಮ್..!
undefined
ಸ್ಫಾಟ್ ಫಿಕ್ಸಿಂಗ್, ಬೆಟ್ಟಿಂಗ್ ಪ್ರಕರಣದಲ್ಲಿ ಸಿಲುಕಿದ ಬೆಳಗಾವಿ ಪ್ಯಾಂಥರ್ಸ್ ಫ್ರಾಂಚೈಸಿ ಹಾಗೂ ತಂಡದ ಮಾಲಿಕರನ್ನು ಕೆಲ ದಿನಗಳ ಹಿಂದೆ ಅಮಾನತುಗೊಳಿಸಿದ್ದ KSCA, ಗೌತಮ್ ಹಾಗೂ ಖಾಜಿ ಪ್ರತಿನಿಧಿಸುತ್ತಿದ್ದ ಬಳ್ಳಾರಿ ಟಸ್ಕರ್ಸ್ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
ಗೌತಮ್ ಕಪಾಳಕ್ಕೆ ಬಾರಿಸಿ ಸತ್ಯ ಕಕ್ಕಿಸಿದ ಸಂದೀಪ್ ಪಾಟೀಲ್
ಕೆಪಿಎಲ್ ಪ್ರಕರಣದಲ್ಲಿ ಬಂಧನಕ್ಕೊಳಗಾದವರ ಸಂಖ್ಯೆ ಈಗ ಆರಕ್ಕೇರಿದೆ. ನಾಲ್ವರು ಆಟಗಾರರು, ಒಬ್ಬ ಫ್ರಾಂಚೈಸಿ ಮಾಲೀಕ, ಒಬ್ಬ ಬೌಲಿಂಗ್ ಕೋಚ್ ಇದ್ದಾರೆ. ಎಂ.ವಿಶ್ವನಾಥನ್, ನಿಶಾಂತ್ ಶೆಖಾವತ್, ಸಿ.ಎಂ.ಗೌತಮ್, ಅಬ್ರಾರ್ ಖಾಜಿ ಸಿಕ್ಕಿಬಿದ್ದ ಆಟಗಾರರು. ವಿನೂ ಪ್ರಸಾದ್ ಬಂಧಿತ ಕೋಚ್. ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲಿಕ ಅಶ್ಫಾಕ್ ಅಲಿ, ಈ ಪ್ರಕರಣ ದಲ್ಲಿ ಸಿಕ್ಕಿಬಿದ್ದ ಮೊದಲಿಗ.
ಫಿಕ್ಸಿಂಗ್ ತನಿಖೆ ಕೈಬಿಡಲು ಒತ್ತಡ: ಪೊಲೀಸ್ ಆಯುಕ್ತ
ಬೆಂಗಳೂರು: ಕೆಪಿಎಲ್ ಮ್ಯಾಚ್’ನ ಸ್ಫಾಟ್ ಫಿಕ್ಸಿಂಗ್ ಜಾಲದಲ್ಲಿ ಸಿಲುಕಿರುವ ಆಟಗಾರರಿಗೆ ಕ್ಷಮೆ ನೀಡಿ ಬಿಟ್ಟು ಬಿಡುವಂತೆ ಕೆಲವರು ಒತ್ತಡ ಹೇರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಎಷ್ಟೇ ಒತ್ತಡ ಬಂದರೂ ಪ್ರಕರಣದ ತಪ್ಪಿತಸ್ಥರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಗುರುವಾರ ನಗರದಲ್ಲಿ ಸುದಿಗಾರರೊಂದಿಗೆ ಮಾತನಾಡಿದ ಅವರು, ಮ್ಯಾಚ್ ಫಿಕ್ಸಿಂಗ್ ಜಾಲದಲ್ಲಿ ಆಟಗಾರರು, ಉದ್ಯಮಿಗಳು ಹಾಗೂ ಬ್ರೋಕರ್’ಗಳು ಸೇರಿದಂತೆ ತುಂಬಾ ಜನರು ಇದ್ದಾರೆ. ಮುಂದಿನ ಹಂತದ ತನಿಖೆಯಲ್ಲಿ ಮತ್ತಷ್ಟು ದೊಡ್ಡವರ ಹೆಸರು ಹೊರಗೆ ಬರಲಿದೆ ಎಂದು ಆಯುಕ್ತರು ಹೇಳಿದರು.