ಭಾರೀ ಮೊತ್ತಕ್ಕೆ ಶಾರುಖ್‌ ಖಾನ್‌ನ KKR ಟೀಮ್‌ನಲ್ಲಿನ ಅರ್ಧ ಪಾಲನ್ನು ಮಾರಾಟ ಮಾಡಲಿರುವ ನಟಿ ಜೂಹಿ ಚಾವ್ಲಾ ಗಂಡ

Published : Nov 18, 2026, 07:34 PM IST
KKR Stake Sale

ಸಾರಾಂಶ

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸಹ-ಮಾಲೀಕ ಜಯ್ ಮೆಹ್ತಾ ತಮ್ಮ ಪಾಲಿನಲ್ಲಿ ಅರ್ಧದಷ್ಟನ್ನು ಮಾರಾಟ ಮಾಡಲು ಸಜ್ಜಾಗಿದ್ದಾರೆ. ಅಮೆರಿಕದ ದೈತ್ಯ ಹೂಡಿಕೆ ಸಂಸ್ಥೆಯೊಂದಿಗೆ ಈ ವ್ಯವಹಾರ ನಡೆಯಲಿದೆ.

ಬೆಂಗಳೂರು (ನ.18): ಮೂರು ಬಾರಿಯ ಐಪಿಎಲ್ ಚಾಂಪಿಯನ್ 'ಕೋಲ್ಕತ್ತಾ ನೈಟ್ ರೈಡರ್ಸ್' (KKR) ತಂಡದ ಮಾಲೀಕತ್ವದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಫ್ರಾಂಚೈಸಿಯ ಸಹ-ಮಾಲೀಕ (Co-owner) ಹಾಗೂ ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರ ಪತಿ ಜಯ್ ಮೆಹ್ತಾ ತಂಡದಲ್ಲಿನ ತಮ್ಮ ಪಾಲಿನ ಅರ್ಧದಷ್ಟನ್ನು ಮಾರಾಟ ಮಾಡಲು ಸಜ್ಜಾಗಿದ್ದಾರೆ. ವರದಿಗಳ ಪ್ರಕಾರ, ಜಯ್ ಮೆಹ್ತಾ ತಮ್ಮ ಬಳಿಯಿರುವ ಶೇ. 45ರಷ್ಟು ಪಾಲಿನಲ್ಲಿ ಅರ್ಧದಷ್ಟು ಅಂದರೆ ಶೇ. 22.5ರಷ್ಟು ಪಾಲನ್ನು ಅಮೆರಿಕದ ದೈತ್ಯ ಹೂಡಿಕೆ ನಿರ್ವಹಣಾ ಕಂಪನಿಯಾದ 'ಏರಿಸ್ ಮ್ಯಾನೇಜ್‌ಮೆಂಟ್' (Ares Management) ಸಂಸ್ಥೆಗೆ ಮಾರಾಟ ಮಾಡಲಿದ್ದಾರೆ. ಇಂಗ್ಲಿಷ್ ಪ್ರೀಮಿಯರ್ ಲೀಗ್‌ನ ಖ್ಯಾತ ಫುಟ್‌ಬಾಲ್ ಕ್ಲಬ್ ಚೆಲ್ಸಿ ಎಫ್‌ಸಿ (Chelsea FC) ಮತ್ತು ಎನ್‌ಎಫ್‌ಎಲ್ (NFL) ತಂಡ ಮಿಯಾಮಿ ಡಾಲ್ಫಿನ್ಸ್ (Miami Dolphins) ಮಾಲೀಕತ್ವವನ್ನೂ ಇದೇ ಕಂಪನಿ ಹೊಂದಿದೆ.

₹16,634 ಕೋಟಿಗೆ ಏರಿದ KKR ಒಟ್ಟು ಮೌಲ್ಯ

ಕ್ರಿಕ್‌ಬಜ್ (Cricbuzz) ವರದಿಯ ಪ್ರಕಾರ, ಜಯ್ ಮೆಹ್ತಾ ಮತ್ತು ಏರಿಸ್ ಮ್ಯಾನೇಜ್‌ಮೆಂಟ್ ನಡುವಿನ ಈ ಒಪ್ಪಂದವು ಸುಮಾರು 400 ಮಿಲಿಯನ್ ಡಾಲರ್ (ಅಂದಾಜು ₹3,730 ಕೋಟಿ) ಮೊತ್ತಕ್ಕೆ ನಡೆಯಲಿದೆ. ಈ ಒಪ್ಪಂದದ ಲೆಕ್ಕಾಚಾರದ ಪ್ರಕಾರ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಒಟ್ಟು ಮೌಲ್ಯವನ್ನು (Valuation) 1.78 ಬಿಲಿಯನ್ ಡಾಲರ್ (₹16,634 ಕೋಟಿ) ಎಂದು ಅಂದಾಜಿಸಲಾಗಿದೆ.

ಕೆಕೆಆರ್‌ನ ಈ ಮೌಲ್ಯವು ಇತ್ತೀಚೆಗೆ ಮಾರಾಟವಾದ ಇತರ ಐಪಿಎಲ್ ಫ್ರಾಂಚೈಸಿಗಳ ಮೌಲ್ಯಕ್ಕೆ ಸಂಪೂರ್ಣವಾಗಿ ಅನುಗುಣವಾಗಿದೆ. ಇತ್ತೀಚೆಗಷ್ಟೇ ರಾಜಸ್ಥಾನ್ ರಾಯಲ್ಸ್ ₹15,660 ಕೋಟಿಗೆ (1.65 ಬಿಲಿಯನ್ ಡಾಲರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ₹16,660 ಕೋಟಿಗೆ (1.78 ಬಿಲಿಯನ್ ಡಾಲರ್) ಮಾರಾಟವಾಗಿದ್ದವು.

ಶಾರುಖ್ ಖಾನ್ ಬಳಿ ಉಳಿಯಲಿದೆ ಶೇ. 55 ಪಾಲು; BCCIಗೂ ಸಿಗಲಿದೆ ₹200 ಕೋಟಿ

ಕೆಕೆಆರ್ ತಂಡದಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅತಿ ಹೆಚ್ಚು ಅಂದರೆ ಶೇ. 55ರಷ್ಟು ಪಾಲನ್ನು ಹೊಂದಿದ್ದು, ಮುಂದೆಯೂ ಅದು ಅವರ ಬಳಿಯೇ ಇರಲಿದೆ. 2007ರಲ್ಲಿ ಬಿಸಿಸಿಐ ಮೊದಲ ಬಾರಿಗೆ ಎಂಟು ಐಪಿಎಲ್ ತಂಡಗಳ ಹರಾಜು ನಡೆಸಿದಾಗ, ಶಾರುಖ್ ಖಾನ್, ಜೂಹಿ ಚಾವ್ಲಾ ಮತ್ತು ಜಯ್ ಮೆಹ್ತಾ ಅವರು 'ಕೋಲ್ಕತ್ತಾ ನೈಟ್ ರೈಡರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್' ಮೂಲಕ ಈ ಫ್ರಾಂಚೈಸಿಯನ್ನು ಖರೀದಿಸಿದ್ದರು.

ಜಯ್ ಮೆಹ್ತಾ ಮತ್ತು ಏರಿಸ್ ಮ್ಯಾನೇಜ್‌ಮೆಂಟ್ ನಡುವಿನ ಈ ವ್ಯವಹಾರವು ಸಂಪೂರ್ಣವಾಗಿ ನಗದು ಒಪ್ಪಂದವಾಗಿದ್ದು (All-cash deal), ಇದೀಗ ಅಂತಿಮ ಹಂತದಲ್ಲಿದೆ. ಈ ಒಪ್ಪಂದ ಪೂರ್ಣಗೊಳ್ಳಲು ಬಿಸಿಸಿಐನ ಔಪಚಾರಿಕ ಅನುಮೋದನೆ ಅಗತ್ಯವಿದ್ದು, ಬಿಸಿಸಿಐ ನೂತನ ಮಾಲೀಕರ ಸಂಪೂರ್ಣ ಪರಿಶೀಲನೆ ನಡೆಸಲಿದೆ. ಐಪಿಎಲ್ ನಿಯಮಗಳ ಪ್ರಕಾರ, ಈ ವಹಿವಾಟು ಮೌಲ್ಯದ ಶೇ. 5ರಷ್ಟು ಪಾಲು ಬಿಸಿಸಿಐಗೆ ಸೇರಲಿದ್ದು, ಇದರಿಂದ ಮಂಡಳಿಯ ಖಜಾನೆಗೆ ಸುಮಾರು 20 ಮಿಲಿಯನ್ ಡಾಲರ್ (ಅಂದಾಜು ₹200 ಕೋಟಿ) ಹರಿದು ಬರಲಿದೆ.

IPLನಲ್ಲಿ ನಿರಂತರವಾಗಿ ಹೆಚ್ಚುತ್ತಿದೆ ಅಮೆರಿಕನ್ ಕಂಪನಿಗಳ ಪ್ರಾಬಲ್ಯ

2022ರಲ್ಲಿ ಸಿವಿಸಿ ಕ್ಯಾಪಿಟಲ್ (CVC Capital) ಸಂಸ್ಥೆಯು ಗುಜರಾತ್ ಟೈಟಾನ್ಸ್ ತಂಡವನ್ನು ಖರೀದಿಸಿದಾಗಿನಿಂದ ಐಪಿಎಲ್‌ನಲ್ಲಿ ಅಮೆರಿಕನ್ ಕಂಪನಿಗಳ ಆಸಕ್ತಿ ವೇಗವಾಗಿ ಹೆಚ್ಚುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಲ್ಲೂ ಆದಿತ್ಯ ಬಿರ್ಲಾ ಗ್ರೂಪ್ ಮತ್ತು ಟೈಮ್ಸ್ ಗ್ರೂಪ್ ಜೊತೆಗೆ ಬ್ಲ್ಯಾಕ್‌ಸ್ಟೋನ್ (Blackstone) ಮತ್ತು ಬೋಲ್ಟ್ ವೆಂಚರ್ಸ್ (Bolt Ventures) ನಂತಹ ಅಮೆರಿಕನ್ ಕಂಪನಿಗಳು ಹೂಡಿಕೆದಾರರಾಗಿವೆ.

ಇನ್ನು ಏರಿಸ್ ಮ್ಯಾನೇಜ್‌ಮೆಂಟ್‌ಗೆ ಕ್ರಿಕೆಟ್ ಕ್ಷೇತ್ರ ಹೊಸದೇನಲ್ಲ; ಈ ಕಂಪನಿಯು ಕೇನ್ ಇಂಟರ್‌ನ್ಯಾಷನಲ್ ಜೊತೆಗೂಡಿ ಇಂಗ್ಲೆಂಡ್‌ನ 'ದಿ ಹಂಡ್ರೆಡ್' (The Hundred) ಟೂರ್ನಿಯ ನಾಟಿಂಗ್‌ಹ್ಯಾಮ್ ಮೂಲದ 'ಟ್ರೆಂಟ್ ರಾಕೆಟ್ಸ್' (Trent Rockets) ಫ್ರಾಂಚೈಸಿಯ ಸಹ-ಮಾಲೀಕತ್ವವನ್ನೂ ಹೊಂದಿದೆ. ಅಂದಹಾಗೆ, ಕೆಕೆಆರ್ ತಂಡವು 2012, 2014 ಮತ್ತು 2024ರಲ್ಲಿ ಐಪಿಎಲ್ ಪ್ರಶಸ್ತಿ ಗೆದ್ದಿದ್ದು, 2021ರಲ್ಲಿ ರನ್ನರ್-ಅಪ್ ಆಗಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಪಿಎಲ್ 2027 ಹರಾಜಿಗೂ ಮುನ್ನ RCB ಈ ಗೇಮ್‌ ಚೇಂಜರ್ ಆಟಗಾರನನ್ನು ಕೈಬಿಟ್ಟಿದ್ದೇಕೆ? ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಇರ್ಫಾನ್ ಪಠಾಣ್
2008ರಲ್ಲಿ ಧೋನಿ ಜೊತೆ ಮೊದಲ ಐಪಿಎಲ್‌ ಆಡಿದ್ದ CSK ಆಟಗಾರರು ಈಗ ಎಲ್ಲಿದ್ದಾರೆ? ಏನು ಮಾಡ್ತಿದ್ದಾರೆ? ಇಲ್ಲಿದೆ ಆಸಕ್ತಿದಾಯಕ ಮಾಹಿತಿ!