ಮಾಲ್ಡೀವ್ಸ್ ಕಥೆ ಹೇಳಿ ಗುರುವಿನ ಕಾಲೆಳೆದು ಕಿಚಾಯಿಸಿದ ಕೆಎಲ್ ರಾಹುಲ್; ಈ ಕಾಮೆಂಟ್ ಭಾರೀ ವೈರಲ್

Published : Sep 08, 2026, 06:40 PM IST
kl rahul

ಸಾರಾಂಶ

ಇಂಗ್ಲೆಂಡ್ ಸೀಮಿತ ಓವರ್‌ಗಳ ಕ್ರಿಕೆಟ್ ತಂಡಕ್ಕೆ ಮೆಂಟರ್ ಆಗಿ ನೇಮಕಗೊಳ್ಳುವ ಮೂಲಕ ಮಾಜಿ ನಾಯಕ ಕೆವಿನ್ ಪೀಟರ್ಸನ್ ಮತ್ತೆ ಇಂಗ್ಲೆಂಡ್ ತಂಡಕ್ಕೆ ಮರಳಿದ್ದಾರೆ. ಈ ಹೊಸ ಜವಾಬ್ದಾರಿಯಲ್ಲೂ ‘ಮಾಲ್ಡೀವ್ಸ್ ರಜೆ’ ಇದೆಯೇ ಎಂದು ಕೇಳುವ ಮೂಲಕ ಕೆಎಲ್ ರಾಹುಲ್ ಅವರು ಪೀಟರ್ಸನ್ ಅವರ ಕಾಲೆಳೆದು ಕಿಚಾಯಿಸಿದ್ದಾರೆ.

ಇಂಗ್ಲೆಂಡ್ ಕ್ರಿಕೆಟ್‌ನ ದಿಗ್ಗಜ ಬ್ಯಾಟರ್ ಕೆವಿನ್ ಪೀಟರ್ಸನ್ (Kevin Pietersen) ಬರೋಬ್ಬರಿ 12 ವರ್ಷಗಳ ನಂತರ ಮತ್ತೆ ರಾಷ್ಟ್ರೀಯ ತಂಡದ ಗೂಡಿಗೆ ಮರಳಿದ್ದಾರೆ. ಈ ಬಾರಿ ಅವರು ಬ್ಯಾಟ್ ಹಿಡಿದು ಮೈದಾನಕ್ಕಿಳಿಯುತ್ತಿಲ್ಲ, ಬದಲಾಗಿ ಇಂಗ್ಲೆಂಡ್‌ನ ಸೀಮಿತ ಓವರ್‌ಗಳ ತಂಡಕ್ಕೆ ‘ಮೆಂಟರ್’ ಆಗಿ ನೇಮಕಗೊಂಡಿದ್ದಾರೆ. ಪೀಟರ್ಸನ್ ಅವರ ಈ ಹೊಸ ಇನ್ನಿಂಗ್ಸ್ ಕುರಿತ ಪೋಸ್ಟ್‌ಗೆ ಟೀಮ್ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಮಾಡಿರುವ ಕಾಮೆಂಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಪೀಟರ್ಸನ್ ಕಾಲೆಳೆದ ಕೆಎಲ್ ರಾಹುಲ್!

ಇತ್ತೀಚೆಗಷ್ಟೇ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಪೀಟರ್ಸನ್ ಮೆಂಟರ್ ಆಗಿ ಕೆಲಸ ಮಾಡಿದ್ದರು. ಈ ವೇಳೆ ಕೆಎಲ್ ರಾಹುಲ್ ಮತ್ತು ಪೀಟರ್ಸನ್ ನಡುವೆ ಉತ್ತಮ ಬಾಂಧವ್ಯ ಬೆಳೆದಿತ್ತು. ಈಗ ಪೀಟರ್ಸನ್ ಇಂಗ್ಲೆಂಡ್ ತಂಡದ ಮೆಂಟರ್ ಆಗಿ ಅಧಿಕೃತವಾಗಿ ಆಯ್ಕೆಯಾದ ಸುದ್ದಿಯನ್ನು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿತ್ತು.

ಇದಕ್ಕೆ ಕೆಎಲ್ ರಾಹುಲ್ ಬಹಳ ತಮಾಷೆಯಾಗಿ ಪ್ರತಿಕ್ರಿಯಿಸಿದ್ದು..ಈ ಹೊಸ ಜವಾಬ್ದಾರಿಯ ಪ್ಯಾಕೇಜ್‌ನಲ್ಲಿ ಮಾಲ್ಡೀವ್ಸ್ ರಜೆಯೂ ಸೇರಿದೆಯೇ? ಎಂದು ಪ್ರಶ್ನಿಸುವ ಮೂಲಕ ಪೀಟರ್ಸನ್ ಕಾಲೆಳೆದಿದ್ದಾರೆ. ರಾಹುಲ್ ಅವರ ಈ ಕಾಮೆಂಟ್‌ಗೆ ಪೀಟರ್ಸನ್ ನಗುಮುಖದ ಎಮೋಜಿ ಹಾಕಿ ಪ್ರತಿಕ್ರಿಯಿಸಿದ್ದರೆ, ಅಭಿಮಾನಿಗಳು ಮಾತ್ರ ಫುಲ್ ಖುಷಿಯಾಗಿದ್ದಾರೆ.

ಏನಿದು ಮಾಲ್ಡೀವ್ಸ್ ಕಥೆ?

ರಾಹುಲ್ ಹೀಗೆ ಕೇಳಲು ಒಂದು ಬಲವಾದ ಕಾರಣವಿದೆ. ಐಪಿಎಲ್ 2025ರ ಸೀಸನ್ ಮಧ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಭ್ಯಾಸದ ನಡುವೆ ರಿಲ್ಯಾಕ್ಸ್ ಆಗಲು ಮಾಲ್ಡೀವ್ಸ್‌ಗೆ ಪ್ರವಾಸ ಕೈಗೊಂಡಿತ್ತು. ಆ ಸಮಯದಲ್ಲಿ ಮೆಂಟರ್ ಆಗಿದ್ದ ಪೀಟರ್ಸನ್ ಕೂಡ ಆಟಗಾರರ ಜೊತೆ ಮಾಲ್ಡೀವ್ಸ್‌ನಲ್ಲಿ ಮಜಾ ಮಾಡಿದ್ದರು. ಅದೇ ನೆನಪನ್ನು ಇಟ್ಟುಕೊಂಡು ರಾಹುಲ್ ಈಗ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯನ್ನು ಕಿಚಾಯಿಸಿದ್ದಾರೆ.

2027ರ ಏಕದಿನ ವಿಶ್ವಕಪ್ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ. ಅಲ್ಲಿನ ಪಿಚ್‌ಗಳ ಬಗ್ಗೆ ಪೀಟರ್ಸನ್ ಅವರಿಗೆ ಅಪಾರ ಜ್ಞಾನವಿದೆ. ಹೀಗಾಗಿ ಇಂಗ್ಲೆಂಡ್ ತಂಡವನ್ನು ಮತ್ತೆ ವಿಶ್ವದ ಬಲಿಷ್ಠ ತಂಡವನ್ನಾಗಿ ಕಟ್ಟಲು ಬ್ರೆಂಡನ್ ಮೆಕಲಮ್ ಅವರ ಕೋಚಿಂಗ್ ತಂಡಕ್ಕೆ ಪೀಟರ್ಸನ್ ಸೇರ್ಪಡೆಗೊಂಡಿದ್ದಾರೆ. ಶ್ರೀಲಂಕಾ ವಿರುದ್ಧದ ಮುಂಬರುವ ಸರಣಿಯಿಂದ ಪೀಟರ್ಸನ್ ತಮ್ಮ ಕೆಲಸ ಆರಂಭಿಸಲಿದ್ದಾರೆ.

ಮತ್ತೆ ಇಂಗ್ಲೆಂಡ್ ಸಮವಸ್ತ್ರ ಧರಿಸುತ್ತಿರುವುದು ಹೆಮ್ಮೆಯ ವಿಷಯ. ತಂಡದ ಆಟಗಾರರ ಸಾಮರ್ಥ್ಯವನ್ನು ಹೊರತರಲು ನಾನು ಶ್ರಮಿಸುತ್ತೇನೆ ಎಂದು ಪೀಟರ್ಸನ್ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಪೀಟರ್ಸನ್ ಅವರ ಕಮ್‌ಬ್ಯಾಕ್ ಮತ್ತು ರಾಹುಲ್ ಅವರ ಕಾಮೆಂಟ್ ಸದ್ಯ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ನನ್ಮಾತು ಕೇಳಿ, ಧೈರ್ಯವಾಗಿ ತಗೊಳ್ಳಿ' ಅಂತ ಇಶಾನ್‌ಗೆ ಹೇಳಿ DRS ತಗೊಂಡ ವೈಭವ್; ಮೊದಲ ಸಲ ಸಕ್ಸಸ್, ಎರಡನೇ ಸಲ ಫೇಲ್! ವಿಡಿಯೋ ವೈರಲ್
ವಿರಾಟ್ ಕೊಹ್ಲಿಯ ‘One8’ ಶೂ ಧರಿಸಿ ಮಿಂಚಿದ ಪಾಕಿಸ್ತಾನ ಮಹಿಳಾ ಕ್ರಿಕೆಟರ್ಸ್; ನಶ್ರಾ ಸಂಧು ಶೂಸ್ ವೈರಲ್!