ಟಿ20 ವಿಶ್ವಕಪ್ ಆಡೋ ಆಸೆ ಕೈಬಿಟ್ಟರಾ ಕೆ ಎಲ್ ರಾಹುಲ್..?

By Suvarna NewsFirst Published Mar 25, 2024, 3:06 PM IST
Highlights

ಮುಂಬರುವ ಜೂನ್‌ನಲ್ಲಿ ನಡೆಯೋ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾದಲ್ಲಿ ಒಂದು ಸ್ಥಾನ ಖಾಲಿ ಇದೆ ಅಂದ್ರೆ ಅದು ವಿಕೆಟ್ ಕೀಪರ್ ಸ್ಥಾನ. ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯೋ ಚುಟುಕು ಸಮರಕ್ಕೆ ಐಪಿಎಲ್ ಮೂಲಕ ಭಾರತೀಯರು ಸಿದ್ದತೆ ಮಾಡಿಕೊಳ್ತಿದ್ದಾರೆ.

ಬೆಂಗಳೂರು(ಮಾ.25): ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾದಲ್ಲಿ ವಿಕೆಟ್ ಕೀಪರ್ ಸ್ಥಾನ ಖಾಲಿ ಇದೆ. ಆ ಸ್ಥಾನಕ್ಕೆ ಹಲವು ಕೀಪರ್ಸ್ ರೇಸ್‌ನಲ್ಲಿದ್ದಾರೆ. ಆದ್ರೀಗ ಆ ರೇಸ್ನಿಂದ ಒಬ್ಬ ಆಟಗಾರ ಹಿಂದೆ ಸರಿದಿದ್ದಾನೆ. ಆತ ಹಿಂದೆ ಸರಿದ್ದಿದ್ದೇಗೆ..? ಆತ ಐಪಿಎಲ್‌ನಲ್ಲಿ ಮಾಡಿದ ಮಿಸ್ಟೇಕ್ ಏನು ಅನ್ನೋ ಎಲ್ಲಾ ಡಿಟೇಲ್ಸ್ ಇಲ್ಲಿದೆ ನೋಡಿ.

ಐಪಿಎಲ್‌ನಲ್ಲಿ ಮತ್ತೆ ಆರಂಭಿಕನಾಗಿ ಆಡಿದ ಕನ್ನಡಿಗ..!

Latest Videos

ಮುಂಬರುವ ಜೂನ್‌ನಲ್ಲಿ ನಡೆಯೋ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾದಲ್ಲಿ ಒಂದು ಸ್ಥಾನ ಖಾಲಿ ಇದೆ ಅಂದ್ರೆ ಅದು ವಿಕೆಟ್ ಕೀಪರ್ ಸ್ಥಾನ. ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯೋ ಚುಟುಕು ಸಮರಕ್ಕೆ ಐಪಿಎಲ್ ಮೂಲಕ ಭಾರತೀಯರು ಸಿದ್ದತೆ ಮಾಡಿಕೊಳ್ತಿದ್ದಾರೆ. ಟೀಂ ಇಂಡಿಯಾದಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಸ್ಥಾನ ಖಾಲಿ ಇದ್ದು, ಆ ಸ್ಥಾನದ ಮೇಲೆ ಹಲವಾರು ಪ್ಲೇಯರ್ಸ್ ಕಣ್ಣಿಟ್ಟಿದ್ದಾರೆ. ಅದರಲ್ಲಿ ಕೆಎಲ್ ರಾಹುಲ್ ಸಹ ಒಬ್ಬರು ಅಂತ ಎಲ್ಲರೂ ಅಂದುಕೊಂಡಿದ್ರು. ಆದ್ರೆ ಅದು ಸುಳ್ಳು ಅಂತ ಸ್ವತಃ ಕನ್ನಡಿಗನೇ ಹೇಳಿದ್ದಾನೆ. ಹೇಳಿಲ್ಲ. ಆತನ ವರ್ತನೆಯಿಂದ ಗೊತ್ತಾಗಿದೆ.

IPL ಮ್ಯಾಚ್ ನಡೆಯುವಾಗಲೇ ರೋಹಿತ್ ಶರ್ಮಾ-ಹಾರ್ದಿಕ್ ಪಾಂಡ್ಯ ಫ್ಯಾನ್ಸ್ ಬಡಿದಾಟ..! ವಿಡಿಯೋ ವೈರಲ್

ರಾಹುಲ್, ಟಿ20 ವಿಶ್ವಕಪ್ ಆಡ್ಬೇಕು ಅಂದ್ರೆ ಅವರು ಕೀಪಿಂಗ್ ಜೊತೆ ಲೋ ಆರ್ಡರ್ನಲ್ಲಿ ಬ್ಯಾಟಿಂಗ್ ಮಾಡ್ಬೇಕು. ಹಾಗಾಗಿ ಐಪಿಎಲ್‌ನಲ್ಲಿ ಅವರು, ಲಕ್ನೋ ಸೂಪರ್ ಜೈಂಟ್ಸ್ ಪರ ಕೀಪಿಂಗ್ ಜೊತೆ ಲೋ ಆರ್ಡರ್ನಲ್ಲಿ ಆಡ್ತಾರೆ ಅನ್ನಲಾಗಿತ್ತು. ಕೀಪಿಂಗ್ ಏನೋ ಮಾಡಿದ್ರು. ಆದ್ರೆ ಓಪನರ್ ಆಗಿ ಕಣಕ್ಕಿಳಿಯೋ ಮೂಲಕ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದ್ರು. ಎಂದಿನಂತೆ ಮತ್ತೆ ಆರಂಭಿಕನಾಗಿ ಆರಂಭದಲ್ಲಿ ರನ್ ಗಳಿಸಲು ಪರದಾಡಿದ ರಾಹುಲ್, ಅಮೇಲೆ ಭರ್ಜರಿಯಾಗಿ ಬ್ಯಾಟ್ ಬೀಸಿ, ಹಾಫ್ ಸೆಂಚುರಿ ಹೊಡೆದು ಔಟಾದ್ರು.

ರಾಹುಲ್ ನಿರ್ಧಾರ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದಂತೂ ಸತ್ಯ. ಯಾಕೋ ಅವರು ಟಿ20 ವಿಶ್ವಕಪ್ ಆಡೋ ಆಸೆ ಕೈಬಿಟ್ಟಿದ್ದಾರಾ ಅನ್ನೋ ಪ್ರಶ್ನೆ ಮೂಡಿದೆ. ಯಾಕಂದ್ರೆ ಅವರು ಮತ್ತೆ ಆರಂಭಿಕನಾಗಿ ಆಡಿದ್ದು. ಸದ್ಯ ಕೀಪರ್ ಸ್ಥಾನಕ್ಕೆ ಪಂತ್, ಜುರೆಲ್, ಜಿತೇಶ್, ಇಶಾನ್, ಸಂಜು ಹೀಗೆ ಸಾಲು ಸಾಲು ಆಟಗಾರರಿದ್ದಾರೆ. ಆದ್ರೆ ಇದರಲ್ಲಿ ರಾಹುಲ್ ಮತ್ತು ಇಶಾನ್ ಬಿಟ್ರೆ ಉಳಿದವರೆಲ್ಲಾ ಮಿಡಲ್ ಮತ್ತು ಲೋ ಆರ್ಡರ್ನಲ್ಲಿ ಬ್ಯಾಟಿಂಗ್ ಮಾಡ್ತಿದ್ದಾರೆ.

ಅಲ್ಲಿಗೆ ರಾಹುಲ್, ಟಿ20 ವಿಶ್ವಕಪ್ ಆಡೋ ಆಸೆಯನ್ನ ಕೈಬಿಟ್ಟಿದ್ದಾರೆ ಅನಿಸ್ತಿದೆ. ಯುವ ಕೀಪರ್ಗಳ ಜೊತೆ ಫೈಟ್ ಮಾಡಲು ರಾಹುಲ್ರಿಂದ ಸಾಧ್ಯವಾಗ್ತಿಲ್ವಾ..? ಅಥವಾ ಲೋ ಆರ್ಡರ್ನಲ್ಲಿ ಆಡಲು ಫ್ರಾಂಚೈಸಿ ಒಪ್ಪಲಿಲ್ವಾ..? ಗೊತ್ತಿಲ್ಲ. ಒಟ್ನಲ್ಲಿ ರಾಹುಲ್ ಟಿ20 ವರ್ಲ್ಡ್‌ಕಪ್ ಆಡೋ ಕನಸು ಬಹುತೇಕ ಭಗ್ನಗೊಂಡಿದೆ. ಕಳೆದ ಟಿ20 ವಿಶ್ವಕಪ್ನಲ್ಲಿ ರನ್ ಗಳಿಸಲು ಪರದಾಡಿಯೇ ರಾಹುಲ್, ಟಿ20 ಟೀಮ್ನಿಂದ ಕಿಕೌಟ್ ಆಗಿದ್ದು. ಅದಕ್ಕಾಗಿಯೇ ಅವರು ಈ ಸಲದ ಟಿ20 ವರ್ಲ್ಡ್‌ಕಪ್ ಆಡೋ ಆಸೆ ಬಿಟ್ಟಿರುವುದು. ಅಲ್ಲಿಗೆ ರಾಹುಲ್ ಟಿ20 ಕೆರಿಯರ್ ಕ್ಲೋಸ್.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

click me!