IPL 2024 ಪ್ರೀತಿ ಹುಡುಗರು ವೆರಿ ಡೇಂಜರಸ್..! ತವರಿನಲ್ಲೇ RCB ಮೇಲೆ ಹೆಚ್ಚಿದ ಒತ್ತಡ

By Suvarna NewsFirst Published Mar 25, 2024, 2:07 PM IST
Highlights

ಪಂಜಾಬ್ ಕಿಂಗ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದು ಬೀಗುತ್ತಿದೆ. 175 ರನ್ ಚೇಸ್ ಮಾಡಿ ಗೆದ್ದಿರುವುದು ಪಂಜಾಬ್ ರಾಜರ ಆತ್ಮವಿಶ್ವಾಸ ಹೆಚ್ಚಿಸಿದೆ. ಶಿಖರ್ ಧವನ್, ಅಲ್ ಮೋಸ್ಟ್ ಕೊನೆ ಐಪಿಎಲ್ ಆಡ್ತಿದ್ದಾರೆ. ಇದುವರೆಗೂ ಐಪಿಎಲ್ ಟ್ರೋಫಿ ಗೆಲ್ಲದ ಪಂಜಾಬ್ ತಂಡವನ್ನು ಈ ಸಲ ಚಾಂಪಿಯನ್ ಮಾಡಲು ಎದುರು ನೋಡ್ತಿದ್ದಾರೆ.

ಬೆಂಗಳೂರು(ಮಾ.25): ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಈ ಐಪಿಎಲ್‌ನಲ್ಲಿ ತನ್ನ ಎರಡನೇ ಪಂದ್ಯ ಆಡ್ತಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರೆಡ್ ಆರ್ಮಿ ಪಡೆಗೆ ಪಂಜಾಬ್ ರಾಜರು ಸವಾಲು ಒಡ್ಡಲಿದ್ದಾರೆ. RCB ಮೊದಲ ಗೆಲುವಿಗಾಗಿ ಹೋರಾಟ ನಡೆಸಿದ್ರೆ, ಪಂಜಾಬ್, ಗೆಲುವಿನ ಅಭಿಯಾನ ಮುಂದುವರೆಸಿಕೊಂಡು ಹೋಗಲು ಎದುರು ನೋಡ್ತಿದೆ. ಎರಡು ಟೀಮ್ಸ್ ಬಲಿಷ್ಠವಾಗಿರೋದ್ರಿಂದ ಇಂದು ಬಿಗ್ ಫೈಟ್ ನಿರೀಕ್ಷಿಸಲಾಗಿದೆ. 

ಪಂಜಾಬ್ ರಾಜರ ಮೇಲೆ ಯುದ್ಧ ಗೆಲ್ಲುತ್ತಾ ಆರ್ಸಿಬಿ..?

ಈ ಸಲ ಕಪ್ ನಮ್ದೆ.. ಈ ಸಲ ಕಪ್ ನಮ್ದೆ.. ಅಂತ ಹೇಳಿದ್ದೇ ಬಂತು.. ಬರೋಬ್ಬರಿ 16 ವರ್ಷಗಳಿಂದ ಒಂದು ಬಾರಿಯೂ ಐಪಿಎಲ್ ಕಪ್ ಗೆದ್ದಿಲ್ಲ RCB. ರೆಡ್ ಆರ್ಮಿ ಪಡೆಯ ಅಭಿಮಾನಿಗಳು ಮಾತ್ರ ಈ ಸಲ ಕಪ್ ನಮ್ದೆ ಅನ್ನೋ ಅಭಿಯಾನವನ್ನ ನಿಲ್ಲಿಸಿಲ್ಲ. ತಂಡ ಬದಲಾದ್ರೂ, ನಾಯಕರು ಬದಲಾದ್ರೂ RCB ನಸೀಬು ಮಾತ್ರ ಬದಲಾಗಲಿಲ್ಲ. ಒಂದು ಸಲವೂ ಚಾಂಪಿಯನ್ ಆಗದ ರೆಡ್ ಆರ್ಮಿ ಪಡೆ, ಈ ಸಲ ಚಾಂಪಿಯನ್ ಆಗಲು ಎದುರು ನೋಡ್ತಿದೆ. ಆದ್ರೆ ಆಡಿದ ಮೊದಲ ಪಂದ್ಯದಲ್ಲೇ ಸಿಎಸ್‌ಕೆ  ವಿರುದ್ಧ ಸೋತು ತಲೆ ತಗ್ಗಿಸಿಕೊಂಡು ನಿಂತಿದೆ. 

RCB vs PBKS: ಇಂದಿನಿಂದ ಬೆಂಗಳೂರಿನಲ್ಲಿ IPL ಕ್ರಿಕೆಟ್ ಹಬ್ಬ..!

ಇಂದು ಆರ್‌ಸಿಬಿ ತಂಡ ತನ್ನ 2ನೇ ಪಂದ್ಯ ಆಡ್ತಿದೆ. ಹೌದು, ಇಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗ್ತಿವೆ. ಆದ್ರೆ ತವರಿನಲ್ಲಿ ಇದುಆರ್‌ಸಿಬಿಗೆ ಮೊದಲ ಪಂದ್ಯ. ತವರಿನಲ್ಲಿ ಗೆಲುವಿನ ಅಭಿಯಾನ ಆಗ್ಲಿ ಅನ್ನೋದೇ ಕೋಟ್ಯಂತರ RCB ಅಭಿಮಾನಿಗಳ ಆಸೆ. ಆರ್‌ಸಿಬಿ ಮೊದಲ ಗೆಲುವಿಗೆ ಎದುರು ನೋಡ್ತಿದ್ದರೆ, ಆಗ್ಲೇ ಒಂದು ಪಂದ್ಯ ಗೆದ್ದಿರುವ ಪಂಜಾಬ್ ರಾಜರು, ಮತ್ತೊಂದು ಪಂದ್ಯ ಗೆಲ್ಲಲು ಪ್ಲಾನ್ ಮಾಡ್ತಿದ್ದಾರೆ.

ಆರ್‌ಸಿಬಿ ಮೇಲೆ ಹೆಚ್ಚಿದ ಒತ್ತಡ

ಸಿಎಸ್‌ಕೆ ವಿರುದ್ಧ ಓಪನರ್ಸ್ ಉತ್ತಮ ಪ್ರದರ್ಶನ ನೀಡಿದ್ರೂ ಮಿಡಲ್ ಆರ್ಡರ್ ಕುಸಿದು ಬಿದ್ದ ಕಾರಣ ಆಘಾತ ಅನುಭವಿಸ್ತು. ಆದ್ರೂ ಕೊನೆಯಲ್ಲಿ ಅನೂಜ್ ರಾವತ್ ಮತ್ತು ದಿನೇಶ್ ಕಾರ್ತಿಕ್ ಬಿರುಸಿನ ಬ್ಯಾಟಿಂಗ್ ಮಾಡಿ ಒಳ್ಳೆ ಸ್ಕೋರ್ ಮಾಡಿದ್ದರು. ಆದ್ರೆ 174 ರನ್‌ಗಳನ್ನ ಬೌಲರ್ಗಳಿಂದ ಡಿಪೆಂಡ್ ಮಾಡಿಕೊಳ್ಳಲಾಗಲಿಲ್ಲ. ಮಯಾಂಕ್ ದಾಗರ್ ಬಿಟ್ರೆ ಉಳಿದ ಎಲ್ಲಾ ಬೌಲರ್ಸ್ ದುಬಾರಿಯಾದ್ರು. ಇದೇ ಸೋಲಿಗೆ ಕಾರಣವಾಯ್ತು. ಇಂದು ಎಲ್ಲಾ ಪ್ಲೇಯರ್ಸ್ ಉತ್ತಮ ಪ್ರದರ್ಶನ ನೀಡುವ ಒತ್ತಡದಲ್ಲಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಪಂಜಾಬ್ ಕಿಂಗ್ಸ್‌ ಕಟ್ಟಿಹಾಕುತ್ತಾ ಆರ್‌ಸಿಬಿ?

ರೆಡ್ ಆರ್ಮಿಗೆ ಸಿಗಲಿದೆ ಭಾರಿ ಬೆಂಬಲ

ಇಂದು ತವರಿನಲ್ಲಿ ಆಡುತ್ತಿರುವುದರಿಂದ ಆರ್‌ಸಿಬಿಗೆ ಭಾರಿ ಪ್ರೇಕ್ಷಕರ ಬೆಂಬಲ ಸಿಗಲಿದೆ. ವಿರಾಟ್ ಕೊಹ್ಲಿಗೆ ಇಲ್ಲಿ ಫ್ಯಾನ್ಸ್ ಜಾಸ್ತಿ ಇದ್ದಾರೆ. ತವರಿನ  ಪ್ರೇಕ್ಷಕರ ಎದುರು ಆರ್ಭಟಿಸಲು ರೆಡ್ ಆರ್ಮಿ ಹುಡುಗರು ರೆಡಿಯಾಗಿದ್ದಾರೆ. ಸಾಂಘಿಕ ಪ್ರದರ್ಶನ ನೀಡಿದ್ರೆ ಮಾತ್ರ ಗೆಲುವು ದಕ್ಕಲಿದೆ. ಆಕಸ್ಮಾತ್ ಸ್ವಲ್ಪ ಯಾಮಾರಿದ್ರೂ ಪಂಜಾಬ್ ರಾಜರು, ರೆಡ್ ಅರ್ಮಿ ಮೇಲೆ ಸವಾರಿ ಮಾಡಿ ಬಿಡ್ತಾರೆ.

ಪ್ರೀತಿ ಹುಡುಗರು ವೆರಿ ಡೇಂಜರಸ್

ಪಂಜಾಬ್ ಕಿಂಗ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದು ಬೀಗುತ್ತಿದೆ. 175 ರನ್ ಚೇಸ್ ಮಾಡಿ ಗೆದ್ದಿರುವುದು ಪಂಜಾಬ್ ರಾಜರ ಆತ್ಮವಿಶ್ವಾಸ ಹೆಚ್ಚಿಸಿದೆ. ಶಿಖರ್ ಧವನ್, ಅಲ್ ಮೋಸ್ಟ್ ಕೊನೆ ಐಪಿಎಲ್ ಆಡ್ತಿದ್ದಾರೆ. ಇದುವರೆಗೂ ಐಪಿಎಲ್ ಟ್ರೋಫಿ ಗೆಲ್ಲದ ಪಂಜಾಬ್ ತಂಡವನ್ನು ಈ ಸಲ ಚಾಂಪಿಯನ್ ಮಾಡಲು ಎದುರು ನೋಡ್ತಿದ್ದಾರೆ. ಟೀಮ್ ಕಾಂಬಿನೇಶನ್ ಉತ್ತಮವಾಗಿರೋದ್ರಿಂದ ಪಂಜಾಬ್ ತಂಡವನ್ನ ಈಸಿಯಾಗಿ ಸೋಲಿಸಲು ಆಗೋಲ್ಲ.

ಆರ್‌ಸಿಬಿ ತಂಡ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗೆದ್ದಿದಕ್ಕಿಂತ ಸೋತ ಪಂದ್ಯಗಳೇ ಜಾಸ್ತಿ. 16 ವರ್ಷಗಳ ಕಪ್ ಬರ ನೀಗಿಸಿಕೊಳ್ಳೋ ಒತ್ತಡದಲ್ಲಿದೆ. ಟೀಮ್‌ಗೆ ಕೆಲ ಹೊಸ ಆಟಗಾರ ಎಂಟ್ರಿಯಾಗಿದೆ. ಇಪ್ಯಾಕ್ಟ್ ಪ್ಲೇಯರ್ ನಿಯಮವನ್ನ ಸದ್ಭಳಕೆ ಮಾಡಿಕೊಂಡ್ರೆ ಆರ್ಸಿಬಿಗೆ ಇಂದು ಗೆಲುವು ದಕ್ಕಲಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಎರಡು ರೆಡ್ ಅರ್ಮಿ ಪಡೆಗಳ ವಾರ್ನಲ್ಲಿ ಗೆಲ್ಲೋರ್ಯಾರು..? ಯಾವ ಭಾವುಟ ಇಂದು ಬೆಂಗಳೂರಿನಲ್ಲಿ ಹಾರಾಡಲಿದೆ ಅನ್ನೋ ಕುತೂಹಲವಿದೆ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
 

click me!