ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ಲೆಕ್ಕಾಚಾರ ಉಲ್ಟಾ-ಪಲ್ಟಾ..! ಬೆಂಗಳೂರು ಫ್ಯಾನ್ಸ್‌ಗೆ ಶಾಕ್..?

By Suvarna News  |  First Published Aug 28, 2024, 5:32 PM IST

ಲಕ್ನೋ ಸೂಪರ್ ಜೈಂಟ್ಸ್‌ನ ಓನರ್ ಸಂಜೀವ್ ಗೋಯೆಂಕಾ ಅವರೊಂದಿಗೆ ಕೆ ಎಲ್ ರಾಹುಲ್ ಅವರ ಭೇಟಿಯ ನಂತರ, ರಾಹುಲ್ ಅವರ ಮುಂದಿನ ನಡೆ ಏನು ಎಂಬ ಪ್ರಶ್ನೆ ಉದ್ಭವಿಸಿದೆ. ಲಖನೌ ತಂಡದಲ್ಲಿ ರಾಹುಲ್ ಉಳಿಯುತ್ತಾರೋ ಅಥವಾ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.


ಬೆಂಗಳೂರು: ನೀವೇನಾದ್ರೂ ಆರ್‌ಸಿಬಿ ಫ್ಯಾನ್ ಆಗಿದ್ರೆ, ಈಗ ನಾವೇಳೋ ಸುದ್ದಿ ಕೇಳಿ ನಿರಾಸೆಯಾಗೋದು ಪಕ್ಕಾ. ಯಾಕಂದ್ರೆ, ನೀವು ಯಾವ ಆಟಗಾರನನ್ನ ತಂಡಕ್ಕೆ ವೆಲ್‌ಕಮ್ ಮಾಡಲು ಕಾಯ್ತಿದ್ರೋ, ಅವರು ನಿಮ್ಮ ತಂಡಕ್ಕೆ ಬರೋದು ಅನುಮಾನವಾಗಿದೆ. ಲೆಕ್ಕಾಚಾರಗಳೆಲ್ಲಾ ಉಲ್ಟಾ-ಪಲ್ಟಾ ಆಗಿದೆ.  

ಮೆಗಾ ಆಕ್ಷನ್‌ಗೂ  ಮುನ್ನ ಲೆಕ್ಕಾಚಾರಗಳೆಲ್ಲಾ ಉಲ್ಟಾ-ಪಲ್ಟಾ..!

Tap to resize

Latest Videos

undefined

ಬೆಂಗಳೂರು: ಐಪಿಎಲ್‌ ಸೀಸನ್ 18ಕ್ಕೂ ಮುನ್ನ ಡಿಸೆಂಬರ್‌ನಲ್ಲಿ ಮೆಗಾ ಆಕ್ಷನ್ ನಡೆಯಲಿದೆ. ಈಗಾಗ್ಲೇ ಎಲ್ಲಾ ಫ್ರಾಂಚೈಸಿಗಳು ಹರಾಜಿಗೆ ಸಿದ್ಧತೆ ನಡೆಸಿವೆ. ತಂಡದಿಂದ ಯಾರನ್ನು ರಿಲೀಸ್ ಮಾಡೋದು..ಯಾರನ್ನು ಉಳಿಸಿಕೊಳ್ಳೋದು ಅನ್ನೋ ಟೆನ್ಷ್ನಲ್ಲಿವೆ. ಈ ನಡುವೆ RCB ಫ್ರಾಂಚೈಸಿಗಿಂತ, ಆರ್‌ಸಿಬಿ ಫ್ಯಾನ್ಸ್ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಕೆ ಎಲ್‌ ರಾಹುಲ್..!

ಕ್ರಿಕೆಟ್ ಮೂಲಕ ರೋಹಿತ್ ಶರ್ಮಾ ಗಳಿಸಿದ ಹಣವೆಷ್ಟು? ಒಂದು ಇನ್‌ಸ್ಟಾಗ್ರಾಂ ಪೋಸ್ಟ್‌ನಿಂದ ಹಿಟ್‌ಮ್ಯಾನ್‌ ಸಿಗೋದೆಷ್ಟು?

ಯೆಸ್, ಸದ್ಯ ಕ್ರಿಕೆಟ್ ಜಗತ್ತಿನ ಒನ್ ಆಫ್ ದಿ ಕ್ಲಾಸ್ಟ್ ಬ್ಯಾಟ್ಸ್ಮನ್. ರಾಹುಲ್ ಸ್ಟೈಲಿಶ್ ಬ್ಯಾಟಿಂಗ್ಗೆ ಫಿದಾ ಆಗದವರೆ ಇಲ್ಲ ಅಂದ್ರೆ ತಪ್ಪಿಲ್ಲ. . ಆದ್ರೆ, ಈ ಕನ್ನಡಿಗ ಐಪಿಎಲ್‌ನಲ್ಲಿ ಆರ್‌ಸಿಬಿಯಲ್ಲಿಲ್ಲ ಅನ್ನೋದೆ ಕನ್ನಡಿಗರ ಬೇಸರ. ರಾಹುಲ್ರಂಥ ಪ್ಲೇಯರ್ RCBಯಲ್ಲಿದ್ದಿದ್ರೆ, RCB ತಂಡದ ಕ್ರೇಝ್ ಮತ್ತಷ್ಟು ಹೆಚ್ಚುತ್ತಿತ್ತು. ಆದ್ರೆ, ನಮ್ಮ ಹುಡುಗ  ದೂರದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನ ಮುನ್ನಡೆಸುತ್ತಿದ್ದಾನೆ. 

ರಾಹುಲ್ ಇದಾನೆ ಅನ್ನೋ ಕಾರಣಕ್ಕೆ ಕನ್ನಡಿಗರು ಲಕ್ನೋ ತಂಡಕ್ಕೆ ಸಪೋರ್ಟ್ ಮಾಡ್ತಿದ್ದಾರೆ. ಆದ್ರೆ, ಮುಂದಿನ IPLನೊಳಗಾಗಿ ರಾಹುಲ್ RCB ತಂಡಕ್ಕೆ ಎಂಟ್ರಿ ನೀಡ್ತಾರೆ ಎನ್ನಲಾಗಿತ್ತು. ಈ ವರ್ಷದ ಐಪಿಎಲ್‌ನಲ್ಲಿ ಹೈದ್ರಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಸನ್ರೈಸರ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಹೀನಾಯ ಸೋಲು ಕಂಡಿತ್ತು. ಈ ಸೋಲು ಲಖನೌ ಸೂಪರ್ ಜೈಂಟ್ಸ್‌ ಓನರ್ ಸಂಜೀವ್ ಗೋಯೆಂಕಾರಿಗೆ ಸಹಿಸಿಕೊಳ್ಳಲು ಆಗಲಿಲ್ಲ. ಇದ್ರಿಂದ ಪಂದ್ಯದ ನಂತರ ನಾಯಕ ಕೆ.ಎಲ್ ರಾಹುಲ್ ಮೇಲೆ ಮುಗಿಬಿದ್ದಿದ್ರು. ಕ್ರಿಕೆಟ್ ಬಗ್ಗೆ ಗಂಧ, ಗಾಳಿ ಇಲ್ಲದ ವ್ಯಕ್ತಿ ದುಡ್ಡಿನ ಮದದಲ್ಲಿ ಕೂಗಾಡ್ತಿದ್ರೆ, ರಾಹುಲ್ ಮಾತ್ರ ಸುಮ್ಮನೆ ನಿಂತಿದ್ರು.

'ನನ್ನಿಂದ ಮಹಾಪರಾಧವಾಯ್ತು..!' ಕೈ ಮುಗಿದು ಅಭಿಮಾನಿಗಳ ಕ್ಷಮೆ ಕೋರಿದ ದಿನೇಶ್ ಕಾರ್ತಿಕ್‌..!

ಲಖನೌ ಓನರ್ ರಾಹುಲ್‌ರನ್ನ ನಡೆಸಿಕೊಂಡ ರೀತಿ ಅಭಿಮಾನಿಗಳಿಗೆ, ಅದರಲ್ಲೂ ಕನ್ನಡಿಗ ಆಕ್ರೋಶಕ್ಕೆ ಗುರಿಯಾಗಿತ್ತು. ಇದ್ರಿಂದ ರಾಹುಲ್ ಲಕ್ನೋ ತಂಡದಿಂದ ಹೊರಬರ್ತಾರೆ. ಆಕ್ಷನ್ನಲ್ಲಿ ಆರ್‌ಸಿಬಿ ಸೇರ್ತಾರೆ ಅಂತ RCB ಭಕ್ತರು ಅಂದುಕೊಂಡಿದ್ರು. ಆದ್ರೀಗ, ಅದು ಅನುಮಾನವಾಗಿದೆ. 

ರಾಹುಲ್‌ರನ್ನು ಕರೆಸಿಕೊಂಡು ತಂಡ ಬಿಡದಂತೆ ಮನವಿ..! 

ಯೆಸ್, ರಾಹುಲ್ ಲಖನೌ ಸೂಪರ್ ಜೈಂಟ್ಸ್‌ ಓನರ್ ಸಂಜೀವ್ ಗೋಯೆಂಕಾ ಅವರನ್ನು ಭೇಟಿಯಾಗಿದ್ದಾರೆ. ಕೊಲ್ಕತ್ತಾದ ತಮ್ಮ ಆಫೀಸಿಗೆ ಕರೆಸಿಕೊಂಡು ರಾಹುಲ್ ಜೊತೆ ಸಂಜೀವ್  ಮಾತನಾಡಿದ್ದಾರೆ.  ಈ ಮಾತುಕತೆಯ ಬೆನ್ನಲ್ಲೇ  ರಾಹುಲ್ ಮುಂದಿನ ನಡೆಯೇನು ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. 

ರಾಹುಲ್ ಲಖನೌ ತಂಡವನ್ನು ತೊರೆಯಲು ಮುಂದಾಗಿದ್ದು, ಇದೇ ಕಾರಣದಿಂದಾಗಿ ಅವರ ಮನವೊಲಿಸಿ ತಂಡದಲ್ಲೇ ಉಳಿಸಿಕೊಳ್ಳಲು LSG ಮಾಲೀಕರು ಮುಂದಾಗಿದ್ದಾರೆ ಅನ್ನೋ ಮಾತುಗಳು ಕೇಳಿಬರ್ತಿವೆ.  ಆದ್ರೆ, ರಾಹುಲ್ ತಮ್ಮ ಅಂತಿಮ ನಿರ್ಧಾರವನ್ನ ಇನ್ನು ತಿಳಿಸಿಲ್ಲ.  ಇದ್ರಿಂದ  ಕೆ ಎಲ್ ರಾಹುಲ್ ಲಕ್ನೋ ತಂಡದಲ್ಲೇ ಉಳಿಯಲಿದ್ದಾರಾ..? ಅಥವಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಅನ್ನೋದನ್ನ ಕಾದು ನೋಡಬೇಕಿದೆ. 

ಒಂದು ವೇಳೆ ಲಖನೌ ರಾಹುಲ್‌ರನ್ನು ರಿಟೇನ್ ಮಾಡಿಕೊಂಡ್ರೆ, ಆರ್‌ಸಿಬಿ &  ಕರ್ನಾಟಕದ ಕ್ರಿಕೆಟ್ ಫ್ಯಾನ್ಸ್ ಆಸೆ ನುಚ್ಚು ನೂರಾಗೋದಂತೂ ಪಕ್ಕಾ..!  

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 
 

click me!