ಹಾರ್ದಿಕ್ ಪಾಂಡ್ಯ ಮತ್ತು ಸೀನಿಯರ್ಸ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾವನ್ನ ಲೀಡ್ ಮಾಡ್ತಿದ್ದಾರೆ. ಇದಾದ ಬಳಿಕ ಭಾರತ ತಂಡ, ಸೌತ್ ಆಫ್ರಿಕಾ, ಐರ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಆಡಲಿದೆ.
ಬೆಂಗಳೂರು(ನ.24): ಭಾರತ-ಆಸ್ಟ್ರೇಲಿಯಾ ಟಿ20 ಸರಣಿ ನಡೆಯುತ್ತಿದ್ದರೂ ಮುಂದಿನ ತಿಂಗಳು ಸೌತ್ ಆಫ್ರಿಕಾ ಸರಣಿಗೆ ಭಾರತ ಟಿ20 ತಂಡದ ನಾಯಕ ಯಾರು ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಹಾರ್ದಿಕ್ ಪಾಂಡ್ಯ ಇಂಜುರಿ. ಅವರ ಸ್ಥಾನಕ್ಕೆ ಹೊಸ ನಾಯಕನನ್ನ ನೇಮಿಸಬೇಕು. ಆತನೇ ಟಿ20 ವಿಶ್ವಕಪ್ನಲ್ಲೂ ತಂಡವನ್ನ ಲೀಡ್ ಮಾಡ್ತಾನಾ ಅನ್ನೋ ಪ್ರಶ್ನೆಯೂ ಹುಟ್ಟಿಕೊಂಡಿದೆ.
ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇಂಜುರಿ, ಟೀಂ ಇಂಡಿಯಾಗೆ ಭಾರಿ ತಲೆ ನೋವಾಗಿದೆ ಪರಿಣಮಿಸಿದೆ. ವಿಶ್ವಕಪ್ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಪಾದದ ನೋವಿಗೆ ತುತ್ತಾಗಿ ಟೂರ್ನಿಯಿಂದಲೇ ಹೊರಬಿದ್ದಿದ್ದ ಪಾಂಡ್ಯ ಅನುಪಸ್ಥಿತಿ ವರ್ಲ್ಡ್‌ಕಪ್ ಫೈನಲ್ನಲ್ಲೂ ಭಾರತಕ್ಕೆ ಕಾಡಿತ್ತು. ಹಾರ್ದಿಕ್ ಪ್ಲೇಯಿಂಗ್-11ನಲ್ಲಿ ಇದ್ದಿದ್ದರೆ ಫಲಿತಾಂಶವೇ ಬೇರೆ ಆಗ್ತಿತ್ತು. ಅದು ಬಿಡಿ, ಮುಗಿದು ಹೋದ ಕಥೆ. ಈಗ ಪಾಂಡ್ಯ ಐಪಿಎಲ್‌ವರೆಗೂ ಫಿಟ್ ಆಗಲ್ಲ ಅನ್ನೋ ಸುದ್ದಿ ಹೊರಬಿದ್ದಿದೆ.
undefined
ಹೌದು, ಪಾದದ ನೋವಿನಿಂದ ಬಳಲುತ್ತಿರುವ ಹಾರ್ದಿಕ್ ಪಾಂಡ್ಯ ಫುಲ್ ಫಿಟ್ನೆಸ್ ಸಾಧಿಸಲು ಮೂರು ತಿಂಗಳು ಬೇಕು ಅನ್ನೋ ಸುದ್ದಿ ಹೊರಬಿದ್ದಿದೆ. ಅಲ್ಲಿಗೆ ಪಾಂಡ್ಯ ಐಪಿಎಲ್‌ನವರೆಗೂ ಟೀಂ ಇಂಡಿಯಾ ಪರ ಯಾವ್ದೇ ಮ್ಯಾಚ್ ಆಡಲ್ಲ. ಫುಲ್ ಫಿಟ್ ಆಗಿ ಐಪಿಎಲ್‌ಗೆ ಕಣಕ್ಕಿಳಿಯಲಿದ್ದಾರೆ. ಸದ್ಯ ಅವರ ಟಾರ್ಗೆಟ್ ಸಹ ಕಲರ್ ಫುಲ್ ಟೂರ್ನಿಯೇ. ಅದಕ್ಕಾಗಿ ನಿಧಾನವಾಗಿ ತಯಾರಿ ಮಾಡಿಕೊಳ್ತಿದ್ದಾರೆ.
'ಅಪ್ಪ ರೂಂನಲ್ಲಿದ್ದಾರೆ, ಇನ್ನೊಂದು ತಿಂಗಳಲ್ಲಿ....': ರೋಹಿತ್ ಶರ್ಮಾ ಮಗಳು ಸಮೈರಾ ಮುದ್ದಾದ ವಿಡಿಯೋ ವೈರಲ್..!
ಟಿ20 ವಿಶ್ವಕಪ್‌ಗೆ ಯಾರಾಗ್ತಾರೆ ಭಾರತ ಟಿ20 ನಾಯಕ..?
ಹಾರ್ದಿಕ್ ಪಾಂಡ್ಯ ಮತ್ತು ಸೀನಿಯರ್ಸ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾವನ್ನ ಲೀಡ್ ಮಾಡ್ತಿದ್ದಾರೆ. ಇದಾದ ಬಳಿಕ ಭಾರತ ತಂಡ, ಸೌತ್ ಆಫ್ರಿಕಾ, ಐರ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಆಡಲಿದೆ. ಆಗ ಯಾರು ಟಿ20 ಕ್ಯಾಪ್ಟನ್ ಅನ್ನೋದು ಪ್ರಶ್ನೆ ಎದ್ದಿದೆ. ಇದರ ಜೊತೆ ಈ ಮೂರು ಸರಣಿಗೆ ನಾಯಕನಾದವನೇ ಜೂನ್‌ನಲ್ಲಿ ನಡೆಯೋ ಟಿ20 ವಿಶ್ವಕಪ್ನಲ್ಲೂ ತಂಡವನ್ನ ಮುನ್ನಡೆಸ್ತಾನಾ..? ಅಥವಾ ಹಾರ್ದಿಕ್ ಪಾಂಡ್ಯನೇ ನಾಯಕನಾಗ್ತಾನಾ ಅನ್ನೋ ಪ್ರಶ್ನೆಯೂ ಹುಟ್ಟಿಕೊಂಡಿದೆ.
ರಾಹುಲ್-ಶ್ರೇಯಸ್ ನಡುವೆ ಬಿದ್ದಿದ್ಯಾ ಫೈಟ್..?
2022ರ ಟಿ20 ವಿಶ್ವಕಪ್ ಬಳಿಕ ಕೆಎಲ್ ರಾಹುಲ್ ಟಿ20 ಟೀಮ್ನಲ್ಲಿಲ್ಲ. ಏಕದಿನ ವಿಶ್ವಕಪ್ ತಯಾರಿಗಾಗಿ ಅವರನ್ನ ಟಿ20 ಟೀಮ್ನಿಂದ ಕೈಬಿಡಲಾಗಿದೆ ಅಂತ ಬಿಸಿಸಿಐ ಹೇಳಿತ್ತು. ಇನ್ನು ಶ್ರೇಯಸ್ ಅಯ್ಯರ್ ಸಹ ಟಿ20 ತಂಡದಲ್ಲಿ ಇರಲಿಲ್ಲ. ಆದ್ರೂ ಆಸ್ಟ್ರೇಲಿಯಾ ವಿರುದ್ಧದ ಕೊನೆ ಎರಡು ಟಿ20 ಮ್ಯಾಚ್ಗೆ ಸೆಲೆಕ್ಟ್ ಆಗಿದ್ದು, ಅವರೇ ವೈಸ್ ಕ್ಯಾಪ್ಟನ್ ಕೂಡ. ಈಗ ಈ ಇಬ್ಬರಲ್ಲಿ ಒಬ್ಬರು ಭಾರತ ಟಿ20 ತಂಡದ ಖಾಯಂ ನಾಯಕ ಆಗ್ತಾರೆ ಅನ್ನೋ ಸುದ್ದಿಯೂ ಹರಿದಾಡ್ತಿದೆ. ಸದ್ಯ ಇಬ್ಬರು ಅದ್ಭುತ ಫಾರ್ಮ್ನಲ್ಲಿದ್ದು, ವಿಶ್ವಕಪ್ನಲ್ಲಿ ರನ್ ಹೊಳೆಯನ್ನೇ ಹರಿಸಿದ್ದಾರೆ. ಪದೇ ಪದೇ ಇಂಜುರಿಯಾಗೋ ಪಾಂಡ್ಯ ಬದಲು ಈ ಇಬ್ಬರಲ್ಲಿ ಒಬ್ಬರನ್ನ ಕ್ಯಾಪ್ಟನ್ ಮಾಡಲು ಬಿಸಿಸಿಐ ಮನಸ್ಸು ಮಾಡಿದೆ.
ಭಾರತ ವಿಶ್ವಕಪ್ ಸೋತಿದ್ದು ಒಳ್ಳೆಯದ್ದೇ ಆಯ್ತು:ಮತ್ತೆ ವಿವಾದಾತ್ಮಕ ಹೇಳಿಕೆ ಕೊಟ್ಟ ಪಾಕಿ ಅಬ್ದುಲ್ ರಜಾಕ್..!
ಪಾಂಡ್ಯ ಇಂಜುರಿ, ಸೆಲೆಕ್ಟರ್ಸ್ಗೆ ತಲೆ ನೋವು..!
2022ರ ಟಿ20 ವಿಶ್ವಕಪ್ ಬಳಿಕ ಹಾರ್ದಿಕ್ ಪಾಂಡ್ಯ ಟಿ20 ತಂಡವನ್ನ ಲೀಡ್ ಮಾಡಿಕೊಂಡು ಬಂದಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಆದ್ರೆ 2024ರ ಟಿ20 ವಿಶ್ವಕಪ್ ಹತ್ತಿರವಿರುವಾಗ ಇಂಜುರಿಯಾಗಿದ್ದಾರೆ. ಈಗ ಹೊಸ ನಾಯಕನ್ನ ನೇಮಿಸಿದ್ರೆ ಆತನನ್ನೇ ಟಿ20 ವಿಶ್ವಕಪ್‌ಗೂ ನಾಯಕನ್ನಾಗಿ ಮಾಡೋದಾ..? ಅಥವಾ ಪಾಂಡ್ಯ ರಿಟರ್ನ್ ಆದ್ಮೇಲೆ ಅವರಿಗೆ ಟಿ20 ಕ್ಯಾಪ್ಟನ್ಸಿ ನೀಡ್ಬೇಕಾ ಅನ್ನೋ ಗೊಂದಲವೂ ಸೆಲೆಕ್ಟರ್ಸ್ಗಿದೆ. ಇದೇ ಬಿಸಿಸಿಐಗೂ ತಲೆ ನೋವಾಗಿರೋದು. ಸದಾ ಫಿಟ್ನೆಸ್ ಕಾಪಾಡಿಕೊಳ್ಳದವರನ್ನ ಕ್ಯಾಪ್ಟನ್ ಮಾಡಬಾರದು ಅನ್ನೋ ಕನಿಷ್ಟ ಜ್ಞಾನವೂ ಬಿಸಿಸಿಐಗಿಲ್ಲ. ಒಟ್ನಲ್ಲಿ ಸದ್ಯ ಬಿಸಿಸಿಐಗೆ ಟಿ20 ವಿಶ್ವಕಪ್ ಟಾರ್ಗೆಟ್ ಆಗಿದ್ದು, ಅದಕ್ಕಾಗಿ ಬಿಗ್ ಡಿಷಿಶನ್ ತೆಗೆದುಕೊಳ್ಳಲೇಬೇಕು.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್