
ಕೋಲ್ಕತಾ(ಮಾ.22) ಐಪಿಎಲ್ 2025ರ ಉದ್ಘಟನಾ ಪಂದ್ಯದಲ್ಲಿ ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್ ಆರಂಭದಲ್ಲಿ ಅಬ್ಬರಿಸಿದ ರೀತಿ ನೋಡಿದರೆ 200ರ ಗಡಿ ದಾಟುವ ಸೂಚನೆ ನೀಡಿತ್ತು. ಆದರೆ ಆರ್‌ಸಿಬಿ ಬೌಲಿಂಗ್ ದಾಳಿ ಮೂಲಕ ಕಮ್‌ಬ್ಯಾಕ್ ಮಾಡಿತ್ತು. ಇದರ ಪರಿಣಾಮ 174 ರನ್‌ಗೆ ಕೆಕೆಆರ್ ನಿಯಂತ್ರಿಸುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದೆ. 175 ರನ್ ಟಾರ್ಗೆಟ್‌ನ್ನು ರಜತ್ ಪಾಟೀದಾರ್ ತಂಡ ಯಶಸ್ವಿಯಾಗಿ ಚೇಸ್ ಮಾಡಲಿದೆ ಅನ್ನೋ ವಿಶ್ವಾಸದಲ್ಲಿದೆ.
ಆರ್‌ಸಿಬಿ ಬ್ಯಾಟಿಂಗ್ ಲೈನ್ ಉತ್ತಮವಾಗಿದೆ. ಇನ್ನು 175 ರನ್ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿಗೆ ಸವಾಲಿನ ಮೊತ್ತ ಅನ್ನೋದು ಸರಿ. ಆದರೆ ಅಸಾಧ್ಯವಲ್ಲ. ಇಷ್ಟೇ ಅಲ್ಲ ಉದ್ಘಾಟನಾ ಪಂದ್ಯ ಆರ್‌ಸಿಬಿ ಪರವಾಗಿದೆ. ಕಾರಣ ಆರಂಭದಲ್ಲಿ ಕೆಕೆಆರ್ ಅಬ್ಬರದ ಬ್ಯಾಟಿಂಗ್ ನಡೆಸಿತ್ತು.ಆದರೆ ಪ್ರತಿ ವರ್ಷ ಆರ್‌ಸಿಬಿ ಅಂತಿಮ ಸ್ಲಾಗ್ ಓವರ್‌ಗಳಲ್ಲಿ ದುಬಾರಿ ರನ್ ನೀಡುತ್ತಿತ್ತು. ಆದರೆ 15 ರಿಂದ 20 ಓವರ್ ಅಂದರೆ ಅಂತಿಮ 6 ಓವರ್‌ಗಳಲ್ಲಿ ಆರ್‌ಸಿಬಿ ಹೆಚ್ಚಿನ ರನ್ ಬಿಟ್ಟುಕೊಟ್ಟಿಲ್ಲಿ. ಪ್ರತಿ ಓವರ್‌ನಲಲ್ಲಿ 6 ರನ್‌ಗಿಂತ ಹೆಚ್ಚಿನ ರನ್ ನೀಡಿಲ್ಲ. ಇಷ್ಟೇ ಅಲ್ಲ ವಿಕೆಟ್ ಕಬಳಿಸಿ ಎದುರಾಳಿಯನ್ನು ನಿಯಂತ್ರಿಸಿದೆ.
ಈ ಎರಡು IPL ತಂಡಗಳು ಭಾರತ-ಪಾಕಿಸ್ತಾನ ಇದ್ದಂಗೆ ಎಂದ ಹರ್ಭಜನ್ ಸಿಂಗ್!
ಇದೀಗ ಡ್ಯೂ ಫ್ಯಾಕ್ಟರ್ ಕೂಡ ಆರ್‌ಸಿಬಿಗೆ ವರವಾಗಲಿದೆ. ಬ್ಯಾಟಿಂಗ್ ಫ್ರೆಂಡ್ಲಿ ಪಿಚ್ ಕೂಡ ಆರ್‌ಸಿಬಿಗೆ ಚೇಸಿಂಗ್ ಮಾಡಲು ಉತ್ತಮ ವೇದಿಕೆ ಕಲ್ಪಿಸಿದೆ. ಹೀಗಾಗಿ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಅಬ್ಬರಿಸುವ ಸಾಧ್ಯತೆಗಳು ದಟ್ಟವಾಗಿದೆ. ಕೆಕೆಆರ್ ಪ್ರಮುಖವಾಗಿ ಸ್ಪಿನ್ ನೆಚ್ಚಿಕೊಂಡಿದೆ.
ಕೆಕೆಆರ್ ಇನ್ನಿಂಗ್ಸ್
ಕೆಕೆಆರ್ ಪರ ನಾಯಕ ಅಜಿಂಕ್ಯ ರಹಾನೆ ಗರಿಷ್ಠ ಸ್ಕೋರ್ ಸಿಡಿಸಿದ್ದಾರೆ. ರಹಾನೆ 31 ಎಸೆತದಲ್ಲಿ 56 ರನ್ ಸಿಡಿಸಿದ್ದಾರೆ. ಇನ್ನು ಸುನಿಲ್ ನರೈನ್ 44 ರನ್ ಸಿಡಿಸಿದ್ದಾರೆ. ರಘುವಂಶಿ 30 ರನ್ ಕಾಣಿಕೆ ನೀಡಿದ್ದಾರೆ.
ಆರ್‌ಸಿಬಿ ಬ್ಯಾಟಿಂಗ್ ಲೈನ್ ಹಾಗೂ ಪ್ಲೇಯಿಂಗ್ 11
ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ರಜತ್ ಪಾಟೀದಾರ್(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕ್ರುನಾಲ್ ಪಾಂಡ್ಯ, ರಶಿಕ್ ದಾರ್ ಸಲಾಮ್, ಸುಯಾಶ್ ಶರ್ಮಾ, ಜೋಶ್ ಹೇಜಲ್‌ವುಡ್, ಯಶ್ ದಯಾಳ್
ಕೋಲ್ಕತಾ ನೈಟ್ ರೈಡರ್ಸ್ ಬೌಲಿಂಗ್ ಲೈನ್ ಹಾಗೂ ಪ್ಲೇಯಿಂಗ್ 11
ಕ್ವಿಂಟನ್ ಡಿಕಾಕ್, ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ(ನಾಯಕ), ರಿಂಕು ಸಿಂಗ್, ಅಂಗ್ರಿಶ್ ರಘುವಂಶಿ, ಸುನಿಲ್ ನರೈನ್, ಆ್ಯಂಡ್ರೆ ರಸೆಲ್, ರಮನ್‌ದೀಪ್ ಸಿಂಗ್, ಸ್ಪೆನ್ಸರ್ ಜಾನ್ಸನ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ,
IPL 2025: ಒಂದೇ ಸ್ಟೇಡಿಯಂನಲ್ಲಿ ಅತಿ ಹೆಚ್ಚು ರನ್ ಗಳಿಸಿದ 5 ಬ್ಯಾಟ್ಸ್‌ಮನ್‌ಗಳು
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.