ಬಾಲ್ ಬಾಯ್‌ಗೆ ಶೇಕ್‌ಹ್ಯಾಂಡ್ ಮಾಡಿದ ಕೊಹ್ಲಿ, ಬಾಲಕರ ರಿಯಾಕ್ಷನ್‌ಗೆ ನೆಟ್ಟಿಗರು ಫಿದಾ

Published : Feb 09, 2025, 07:45 PM IST
ಬಾಲ್ ಬಾಯ್‌ಗೆ ಶೇಕ್‌ಹ್ಯಾಂಡ್ ಮಾಡಿದ ಕೊಹ್ಲಿ, ಬಾಲಕರ ರಿಯಾಕ್ಷನ್‌ಗೆ ನೆಟ್ಟಿಗರು ಫಿದಾ

ಸಾರಾಂಶ

ಭಾರತ ಇಂಗ್ಲೆಂಡ್ 2ನೇ ಏಕದಿನದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಬೌಂಡ್ರಿ ಲೈನ್ ಬಳಿ ಇದ್ದ ಬಾಲ್ ಬಾಯ್‌ಗೆ ಶೇಕ್‌ಹ್ಯಾಂಡ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಹಸ್ತಲಾಘವದಿಂದ ಇಬ್ಬರು ಬಾಲಕರು ಪುಳಕಿತರಾಗಿದ್ದಾರೆ. ಇವರ ರಿಯಾಕ್ಷನ್ ವಿಡಿಯೋ ಭಾರಿ ವೈರಲ್ ಆಗಿದೆ.  

ಕಟಕ್(ಫೆ.09) ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಏಕದಿನ ಪಂದ್ಯ ರೋಚಕ ಘಟ್ಟದತ್ತ ಸಾಗಿದೆ. ಇಂಗ್ಲೆಂಡ್ ಬೃಹತ್ ಮೊತ್ತ ಸಿಡಿಸಿದ್ದು, ಭಾರತ ದಿಟ್ಟ ಹೋರಾಟ ನೀಡುತ್ತಿದೆ. ಇದರ ನಡುವೆ ಬಾಲ್ ಬಾಯ್ ವಿಡಿಯೋ ಒಂದು ಭಾರಿ ವೈರಲ್ ಆಗಿದೆ. ಬೌಂಡರಿ ಲೈನ್ ಬಳಿ ಫೀಲ್ಡಿಂಗ್‌ನಲ್ಲಿದ್ದ ವಿರಾಟ್ ಕೊಹ್ಲಿ ಬಳಿ ಶೇಕ್‌ಹ್ಯಾಂಡ್ ಮಾಡಲು ಬಾಲಕರು ಕೈಚಾಚಿದ್ದಾರೆ. ಈ ವೇಳೆ ಕೊಹ್ಲಿ ಇಬ್ಬರು ಬಾಲಕರಿಗೆ ಹಸ್ತಲಾಘವ ಮಾಡಿದ್ದಾರೆ. ಆದರೆ ವಿರಾಟ್ ಕೊಹ್ಲಿ ಶೇಕ್‌ಹ್ಯಾಂಡ್ ಮಾಡಿದ್ದಾರೆ ಅನ್ನೋ ಕಾರಣದಿಂದ ಬಾಲಕರು ಪುಳಕಿತರಾಗಿದ್ದಾರೆ. ಇಬ್ಬರು ಬಾಲಕರ ರಿಯಾಕ್ಷನ್ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.

2ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ನಡೆಸಿತ್ತು. ಈ ವೇಳೆ ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿಯನ್ನೇ ಬಾಲ್ ಬಾಯ್ಸ್ ನೋಡುತ್ತಿದ್ದರು. ಬೌಂಡರಿ, ಸಿಕ್ಸರ್ ಬಂದಾಗ ಬಾಲ್ ಎತ್ತಿ ವಿರಾಟ್ ಕೊಹ್ಲಿಗೆ ನೀಡುತ್ತಿದ್ದರು. ವಿರಾಟ್ ಕೊಹ್ಲಿಯನ್ನು ರೋಲ್ ಮಾಡೆಲ್ ಆಗಿ ಕೊಂಡಾಡುತ್ತಿದ್ದ ಇಬ್ಬರು ಬಾಲ್ ಬಾಯ್‌ಗೆ ವಿಶೇಷ ಕ್ಷಣವಾಗಿತ್ತು. ತಮ್ಮ ರೋಲ್ ಮಾಡೆಲ್ ತಮ್ಮ ಪಕ್ಕದಲ್ಲೇ ಇದ್ದಾರೆ ಅನ್ನೋದು ಅವರ ಸಂಭ್ರಮ ಹೆಚ್ಚಿಸಿತ್ತು.

ಚಾಂಪಿಯನ್ಸ್‌ ಟ್ರೋಫಿ ಗೆಲ್ಲೋದಲ್ಲ ಭಾರತ ಸೋಲೋದನ್ನು ಎದುರು ನೋಡುತ್ತಿರುವ ಪಾಕ್! ಪ್ರಧಾನಿ ಮಾತು ವೈರಲ್

ಬೌಂಡರಿ ಗೆರೆ ದಾಟಿದ ಚೆಂಡನ್ನು ಎತ್ತಿ ವಿರಾಟ್ ಕೊಹ್ಲಿಗೆ ನೀಡಿದ ಬಾಲ್ ಬಾಯ್ಸ್, ಧೈರ್ಯ ಮಾಡಿ ಕೊಹ್ಲಿಗೆ ಶೇಕ್ ಹ್ಯಾಂಡ್ ಮಾಡಲು ಕೈಚಾಚಿದ್ದಾರೆ. ಇತ್ತ ವಿರಾಟ್ ಕೊಹ್ಲಿ ಬೌಂಡರಿ ಲೈನ್ ಬಳಿ ಬಂದು ಬಾಲಕರಿಗೆ ಶೇಕ್ ಹ್ಯಾಂಡ್ ಮಾಡಿದ್ದಾರೆ. ತಮ್ಮ ರೋಲ್ ಮಾಡೆಲ್ ತಮಗೆ ಶೇಕ್ ಹ್ಯಾಂಡ್ ಮಾಡಿದ್ದಾರೆ ಎಂದು ಇಬ್ಬರು ಬಾಲಕರು ಪುಳಕಿತರಾಗಿದ್ದಾರೆ. ಇಷ್ಟೇ ಅಲ್ಲ ಈ ಬಾಲಕ ಖುಷಿಗೆ ಪಾರವೇ ಇರಲಿಲ್ಲ. ಅತೀವ ಸಂತಸದಿಂದ ನಲಿದಾಡಿದ್ದಾರೆ. ಈ ಬಾಲಕರ ರಿಯಾಕ್ಷನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

 

 

ಇದೀಗ ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ. ಬಾಲಿವುಡ್ ಸಿನಿಮಾವನ್ನು ವಿರಾಟ್ ಕೊಹ್ಲಿ ನಿಜ ಜೀವನಕ್ಕೆ ತಂದಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಇಬ್ಬರು ಬಾಲಕ ದಿನವನ್ನು ಮತ್ತಷ್ಟು ಸ್ಮರಣೀಯಗೊಳಿಸಿದ ವಿರಾಟ್ ಕೊಹ್ಲಿ ಎಂದು ಕೆಲವರು ಅಭಿಪ್ರಾಯ ವ್ಯಕ್ತಡಿಸಿದ್ದಾರೆ. 

ವಿರಾಟ್ ಕೊಹ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಈ ಬಾಲ್ ಬಾಯ್ಸ್ ರಿಯಾಕ್ಷನ್ ಕೂಡ ಎಲ್ಲಾ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕ್ಯಾಚ್ ಬಂದಾಗ ಬಾಲಕರು ಮತ್ತಷ್ಟು ಸಂಭ್ರಮ ಪಟ್ಟಿರುವುದು ಸೆರೆಯಾಗಿದೆ. ಕಾರಣ ಕೊಹ್ಲಿ ಕ್ಯಾಚ್ ಹಿಡಿದು ಔಟ್ ಮಾಡುತ್ತಾರೆ ಅನ್ನೋ ವಿಶ್ವಾಸ ಈ ಬಾಲಕರಲ್ಲಿ ಕಾಣುತ್ತಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. 

 

 

ಭಾರತ ಇಂಗ್ಲೆಂಡ್ 2ನೇ ಏಕದಿನ
2ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ದಿಟ್ಟ ಹೋರಾಟ ನೀಡಿದೆ. ಕಟಕ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಇಂಗ್ಲೆಂಡ್ 304 ರನ್ ಸಿಡಿಸಿದೆ. ಡಕೆಟ್ 65, ಜೋ ರೂಟ್ 69 ರನ್ ಸಿಡಿಸಿದರೆ, ಹ್ಯಾರಿ ಬ್ರೂಕ್ 31, ನಾಯಕ ಜೋಸ್ ಬಟ್ಲರ್ 34, ಲಿಯಾಮ್ ಲಿವಿಗ್ ಸ್ಟೋನ್ 41 ರನ್ ಸಿಡಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಟೀಂ ಇಂಡಿಯಾ ದಿಟ್ಟ ಹೋರಾಟ ನೀಡುತ್ತಿದೆ. ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಜೋಡಿ ಮೊದಲ ವಿಕೆಟ್‌ಗೆ 136 ರನ್ ಸಿಡಿಸಿದ್ದರು. ಗಿಲ್ 52 ಎಸೆತದಲ್ಲಿ 60 ರನ್ ಸಿಡಿಸಿದ್ದಾರೆ. ಇತ್ತ ನಾಯಕ ರೋಹಿತ್ ಶರ್ಮಾ ಹಾಫ್ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಭಾರತ, ಇಂಗ್ಲೆಂಡ್ ನೀಡಿದ ಟಾರ್ಗೆಟ್ ಚೇಸ್ ಮಾಡುವ ಸೂಚನೆ ನೀಡಿದೆ. 

ಆರ್‌ಸಿಬಿ ಹೊಸ ಜೆರ್ಸಿ ತೊಟ್ಟು ಕಾಣಿಸಿಕೊಂಡ ಸ್ಮೃತಿ ಮಂಧನಾ! ಈ ಸಲವೂ ಕಪ್ ನಮ್ದೇ
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!
ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ