
ವಿಜಯವಾಡ: ರಣಜಿ ಟ್ರೋಫಿ ದೇಸಿ ಕ್ರಿಕೆಟ್ ಟೂರ್ನಿಯ ಆಂಧ್ರ ವಿರುದ್ಧ ಪಂದ್ಯದ 2ನೇ ಇನ್ನಿಂಗ್ಸ್ನಲ್ಲೂ ಕುಸಿತ ಕಂಡ ಕರ್ನಾಟಕ ತಂಡಕ್ಕೆ ಕರುಣ್ ನಾಯರ್ ಆಸರೆಯಾಗಿದ್ದಾರೆ. ತಂಡ 3ನೇ ದಿನದಂತ್ಯಕ್ಕೆ 4 ವಿಕೆಟ್ಗೆ 176 ರನ್ ಗಳಿಸಿದ್ದು, 32 ರನ್ ಮುನ್ನಡೆಯಲ್ಲಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಕರ್ನಾಟಕ 274ಕ್ಕೆ ಆಲೌಟಾಗಿದ್ದರೆ, ಇದಕ್ಕುತ್ತರವಾಗಿ ಆಂಧ್ರ 418 ರನ್ ಸಿಡಿಸಿ 144 ರನ್ ಮುನ್ನಡೆ ಪಡೆಯಿತು. ಸೀರಾಂ ವೆಂಕಟ ರಾಹುಲ್ 119, ಸಸಿಕಾಂತ್ 39 ರನ್ ಸಿಡಿಸಿದರು. ಸ್ಪಿನ್ನರ್ ಶಿಖರ್ ಶೆಟ್ಟಿ 6 ವಿಕೆಟ್ ಕಿತ್ತರು.
ದೊಡ್ಡ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ರಾಜ್ಯ ತಂಡ 43 ರನ್ಗೆ 3 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ತಂಡವನ್ನು ಕಾಪಾಡಿದ್ದು ಕರುಣ್ ನಾಯರ್ ಹಾಗೂ ಮನ್ವಂತ್ ಕುಮಾರ್. ಈ ಜೋಡಿ 94 ರನ್ ಜೊತೆಯಾಟವಾಡಿತು. ಮನ್ವಂತ್ 44 ರನ್ಗೆ ಔಟಾಗಿದ್ದು, ಕರುಣ್ ಔಟಾಗದೆ 81 ರನ್ ಸಿಡಿಸಿ ನಾಯಕ ಆರ್.ಸ್ಮರಣ್(21) ಜೊತೆ ಕೊನೆ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ತಂಡ ಕೊನೆ ದಿನ ವೇಗವಾಗಿ ಆಟವಾಡಿ, ಆಂಧ್ರಕ್ಕೆ ದೊಡ್ಡ ಗುರಿ ನೀಡಿ ಗೆಲ್ಲಲು ಹೋರಾಡಬೇಕಿದೆ.
ಸ್ಕೋರ್: ಕರ್ನಾಟಕ 274/10 ಮತ್ತು 176/4(3ನೇ ದಿನದಂತ್ಯಕ್ಕೆ) (ಕರುಣ್ 81*, ಮನ್ವಂತ್ 44, ಸೌರಭ್ 3-41), ಆಂಧ್ರ 418/10 (ರಾಹುಲ್ 119, ಶಿಖರ್ 6-115, ಮಾಧವ್ 2-94, ರಿತೇಶ್ 2-109)
ಮಂಗಳವಾರ ಚಂಡೀಗಢ ವಿರುದ್ಧ ಮುಂಬೈ ಇನ್ನಿಂಗ್ಸ್ ಹಾಗೂ 155 ರನ್ ಗೆಲುವು ಸಾಧಿಸಿದರೆ, ತ್ರಿಪುರಾ ವಿರುದ್ಧ ಹೈದರಾಬಾದ್ ತಂಡ ಇನ್ನಿಂಗ್ಸ್ ಹಾಗೂ 40 ರನ್ಗಳಿಂದ ಜಯಗಳಿಸಿತು. ಬಿಹಾರ ವಿರುದ್ಧ ಉತ್ತರ ಪ್ರದೇಶ ಇನ್ನಿಂಗ್ಸ್ ಹಾಗೂ 267 ರನ್ ಭರ್ಜರಿ ಗೆಲುವು ಸಾಧಿಸಿತು. ಈ ಮೂರೂ ತಂಡಗಳು ತಲಾ 1 ಬೋನಸ್ ಸೇರಿ 7 ಅಂಕ ಸಂಪಾದಿಸಿವೆ.
ಶ್ರೀನಗರದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜಮ್ಮು-ಕಾಶ್ಮೀರ ವಿರುದ್ದ ಮಧ್ಯಪ್ರದೇಶ ಮೇಲುಗೈ ಸಾಧಿಸಿದೆ. ತಂಡ ಎರಡನೇ ಇನ್ನಿಂಗ್ಸ್ನಲ್ಲಿ ಐದು ವಿಕೆಟ್ಗೆ 151 ರನ್ ಗಳಿಸಿದ್ದು, ಒಟ್ಟಾರೆ 227 ರನ್ಗಳ ಮುನ್ನಡೆಯಲ್ಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.