BCCI President Election: ಬಿಸಿಸಿಐ 36ನೇ ಅಧ್ಯಕ್ಷರಾಗಿ ಕರ್ನಾಟಕದ ರೋಜರ್‌ ಬಿನ್ನಿ ಆಯ್ಕೆ

Published : Oct 18, 2022, 01:13 PM ISTUpdated : Oct 18, 2022, 01:32 PM IST
BCCI President Election: ಬಿಸಿಸಿಐ 36ನೇ ಅಧ್ಯಕ್ಷರಾಗಿ ಕರ್ನಾಟಕದ ರೋಜರ್‌ ಬಿನ್ನಿ ಆಯ್ಕೆ

ಸಾರಾಂಶ

Roger Binni new BCCI President: ಬಿಸಿಸಿಐನ 36ನೇ ಅಧ್ಯಕ್ಷರಾಗಿ 1983ರ ವಲ್ಡ್‌ಕಪ್‌ನ ಹೀರೋ ರೋಜರ್‌ ಬಿನ್ನಿ ಆಯ್ಕೆಯಾಗಿದ್ದಾರೆ. ಇಂದು ನಡೆದ ಬಿಸಿಸಿಐ ವಾರ್ಷಿಕ ಸಭೆಯಲ್ಲಿ ಅವಿರೋಧವಾಗಿ ಬಿನ್ನಿ ಅವರನ್ನು ಆಯ್ಕೆ ಮಾಡಲಾಗಿದೆ.

ನವದೆಹಲಿ: ನಿರೀಕ್ಷೆಯಂತೆ ಕರ್ನಾಟಕದ ರೋಜರ್‌ ಬಿನ್ನಿ ಬಿಸಿಸಿಐನ 36ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇಂದು ನಡೆದ ವಾರ್ಷಿಕ ಸಭೆಯಲ್ಲಿ ರೋಜರ್‌ ಬಿನ್ನಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಕಳೆದ ಮಂಗಳವವಾರ ಅವರು ಅಧ್ಯಕ್ಷ ಪದವಿಗೆ ನಾಮಪತ್ರ ಸಲ್ಲಿಸಿದ್ದರು ಸೌರವ್‌ ಗಂಗೂಲಿ ಅವರಿಂದ ತೆರವಾದ ಸ್ಥಾನಕ್ಕೆ ರೋಜರ್‌ ಬಿನ್ನಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಜೈ ಶಾ ಬಹುತೇಕ ಮುಂದುವರಿದಿದ್ದಾರೆ.ಇನ್ನು ಬಿಸಿಸಿಐ ಉನ್ನತ ಸ್ಥಾನದಲ್ಲಿ ಮಹತ್ತರ ಬದಲಾವಣೆ ಆಗಿದ್ದು, ಮುಂಬೈನ ಬಿಜೆಪಿಯ ಪ್ರಭಾವಿ ನಾಯಕ ಆಶಿಶ್‌ ಶೀಲರ್‌ ಖಜಾಂಚಿ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಪ್ರಸ್ತುತ ಖಜಾಂಚಿ ಅರುಣ್‌ ಸಿಂಗ್‌ ಧುಮಲ್‌ ಐಪಿಎಲ್‌ ಚೇರ್ಮನ್‌ ಆಗಿ ಆಯ್ಕೆಯಾಗಿದ್ದಾರೆ. ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ರಾಜೀವ್‌ ಶುಕ್ಲಾ ಉಪಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಇನ್ನು ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್‌ನ ದೇವಜಿತ್‌ ಸೈಕೀಯಾ ನೂತನ ಜಂಟಿ ಕಾರ್ಯದರ್ಶಿಯಾಗಿದ್ದಾರೆ. 

ಐಪಿಎಲ್‌ ಅಧ್ಯಕ್ಷ ಸ್ಥಾನಕ್ಕೆ ವಯೋಮಿತಿ ಇದೆ. 70 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಅಧ್ಯಕ್ಷರಾಗಿ ಉಳಿಯುವಂತಿಲ್ಲ.ಮುಂದಿನ ನವೆಂಬರ್‌ನಲ್ಲಿ 70ನೇ ವರ್ಷಕ್ಕೆ ಬ್ರಿಜೇಶ್‌ ಪಟೇಲ್‌ (Brijesh Patel) ಕಾಲಿಡಲಿದ್ದಾರೆ. ಆ ಕಾರಣದಿಂದಾಗಿ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದು ಅನಿವಾರ್ಯವಾಗಿತ್ತು. ಇನ್ನು ಬ್ರಿಜೇಶ್‌ ಪಟೇಲ್‌ ಸ್ಥಾನದ ಮೇಲೆ ಉತ್ತರ ಪ್ರದೇಶ ಕ್ರಿಕೆಟ್‌ ಅಸೋಸಿಯೇಷನ್‌ನ ರಾಜೀವ್‌ ಶುಕ್ಲಾ (Rajeev Shukla) ಕಣ್ಣಿಟ್ಟಿದ್ದರು. ಆದರೆ, ಬಿಸಿಸಿಐ ಆಡಳಿತದಲ್ಲಿ ಪ್ರಭಾವ ಬೀರಿರುವ ಬಿಜೆಪಿ, ಹಿಮಾಚಲ ಪ್ರದೇಶ ಮಾಜಿ ಸಿಎಂ ಪ್ರೇಮ್‌ ಕುಮಾರ್‌ ಧುಮಲ್‌ ಅವರ ಪುತ್ರ ಹಾಗೂ ಅನುರಾಗ್‌ ಠಾಕೂರ್‌ ಅವರ ಸಹೋದರ ಅರುಣ್‌ ಸಿಂಗ್‌ ಧುಮಲ್‌ ಅವರನ್ನು ಐಪಿಎಲ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಸಂಸದರು ಹಾಗೂ ಶಾಸಕರು ರಾಜ್ಯ ಕ್ರಿಕೆಟ್‌ ಸಂಸ್ಥೆ (State Cricket Association) ಹಾಗೂ ಬಿಸಿಸಿಐ (BCCI) ಆಡಳಿತದ ಭಾಗವಾಗಬಹುದು ಎಂದು ಸುಪ್ರೀಂ ಕೋರ್ಟ್‌ (Supreme Court) ಅನುಮತಿ ನೀಡಿದ ಬಳಿಕ, ಮುಂಬೈನ ಪ್ರಭಾವಿ ನಾಯಕ ಆಶಿಶ್‌ ಶೀಲರ್‌ (Ashish Shelar) ಖಜಾಂಚಿ (Treasurer) ಸ್ಥಾನಕ್ಕೆ ಸ್ಪರ್ಧೆ ಮಾಡಲಿದ್ದಾರೆ. ಇದಕ್ಕೂ ಮುನ್ನ ಶೀಲರ್‌ ತಾವು ಮುಂಬೈ ಕ್ರಿಕೆಟ್‌ ಸಂಸ್ಥೆಯ ಆಡಳಿತದಲ್ಲಿಯೇ ಇರುವುದಾಗಿ ಹೇಳಿದ್ದರೂ ಕೊನೆ ಕ್ಷಣದಲ್ಲಿ ನಿರ್ಧಾರ ಬದಲಾಯಿಸಿದ್ದಾರೆ. 

ಇದನ್ನೂ ಓದಿ: ಮೊಹಮ್ಮದ್ ಶಮಿಗೆ ಕೇವಲ ಒಂದೇ ಓವರ್‌ ನೀಡಿದ್ದೇಕೆ..? ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ರೋಹಿತ್ ಶರ್ಮಾ

ಬಿಸಿಸಿಐನ ಆಡಳಿತದ ಯಾವುದೇ ಹಂತದಲ್ಲಿ ಹಾಲಿ ಬಿಸಿಸಿಐ ಅಧ್ಯಕ್ಷ ಹಾಗೂ ಟೀಮ್‌ ಇಂಡಿಯಾ ಮಾಜಿ ನಾಯಕ ಸೌರವ್‌ ಗಂಗೂಲಿ (Sourav Ganguly ) ಇಲ್ಲದೇ ಇರುವುದು ಎಲ್ಲರ ಹುಬ್ಬೇರಿಸಿದೆ. ಅವರು ಅಧ್ಯಕ್ಷರಾಗಿ ಮುಂದುವರಿಯುವುದಿಲ್ಲ ಎನ್ನುವುದು ಈಗಾಗಲೇ ತೀರ್ಮಾನವಾಗಿತ್ತು. ಇತ್ತೀಚಿನ ದೆಹಲಿ ಸಭೆಯಲ್ಲಿ ಅವರ ಕಾರ್ಯನಿರ್ವಹಣೆಯ ಬಗ್ಗೆ ಟೀಕೆಗೊಳಗಾದ ಬಳಿಕ ಬಿಸಿಸಿಐ ಅಧ್ಯಕ್ಷರಾಗಿ ಅವರು ಮುಂದುವರಿಯುವುದು ಅನುಮಾನ ಎನ್ನಲಾಗಿತ್ತು. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಗೆ ಅವರು ನಾಮನಿರ್ದೇಶನಗೊಳ್ಳುತ್ತಾರೆಯೇ ಎನ್ನುವುದು ಕಾದು ನೋಡಬೇಕಿದೆ. ಆದರೆ, ಈ ಹಂತದಲ್ಲಿ ಅವರು ಐಸಿಸಿಸಿ ಅಧ್ಯಕ್ಷರಾಗುವುದು ಅನುಮಾನ ಎನ್ನಲಾಗಿದೆ.

BCCI ಅಧ್ಯಕ್ಷ ಹುದ್ದೆಗೆ ಸೌರವ್ ಗಂಗೂಲಿ ಸ್ಪರ್ಧೆ ಇಲ್ಲ; ದಾದಾ ಯುಗಾಂತ್ಯ..?

ಇನ್ನು ಜಗಮೋಹನ್‌ ದಾಲ್ಮಿಯಾ ಅವರ ಪುತ್ರ ಅವಿಶೇಕ್‌ ದಾಲ್ಮಿಯಾ, ಐಪಿಎಲ್‌ ಆಡಳಿತ ಮಂಡಳಿಯ ಸದಸ್ಯರಾಗಿ ಇರಲಿದ್ದಾರೆ. ಕಳೆದ ಬಿಸಿಸಿಐನಲ್ಲಿ ಐಪಿಎಲ್ ಜಿಸಿಯಲ್ಲಿದ್ದ ಮಾಮನ್ ಮಜುಂದಾರ್ ಅಪೆಕ್ಸ್ ಕೌನ್ಸಿಲ್‌ಗೆ ಬರಲಿದ್ದಾರೆ. ಈಶಾನ್ಯ ರಾಜ್ಯ ಮಿಜೋರಾಂನ ಪ್ರತಿನಿಧಿಯು ಅಪೆಕ್ಸ್ ಕೌನ್ಸಿಲ್‌ಗೆ ಚುನಾಯಿತ ಸದಸ್ಯನಾಗಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?
ಸಂಜು ಸ್ಯಾಮ್ಸನ್ ಔಟ್, ಶುಭ್‌ಮನ್ ಗಿಲ್ ಇನ್: ಅಸಲಿ ಸತ್ಯ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್!