Syed Mushtaq Ali Trophy: ಕರ್ನಾಟಕಕ್ಕೆ ಹ್ಯಾಟ್ರಿಕ್‌ ಗೆಲುವು!

By Kannadaprabha NewsFirst Published Nov 7, 2021, 7:29 AM IST
Highlights

*ಎಲೈಟ್‌ ಬಿ ಗುಂಪಿನಲ್ಲಿ ಅಗ್ರಸ್ಥಾನಕ್ಕೆ ಮನೀಷ್‌ ಬಳಗ
*ಮುಂಬೈ, ಛತ್ತಿಸ್‌ಗಢ ವಿರುದ್ಧ ಕರ್ನಾಟಕ ಗೆಲುವು
*ಸರ್ವಿಸಸ್‌ ವಿರುದ್ಧ 33 ರನ್‌ಗಳಿಂದ ಗೆಲುವು 
 

ಗುವಾಹಟಿ (ನ.7): ನಾಯಕ ಮನೀಶ್‌ ಪಾಂಡೆ ಆಕರ್ಷಕ ಅರ್ಧಶತಕ ಹಾಗೂ ಬೌಲರ್‌ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡ ಸರ್ವಿಸಸ್‌ ವಿರುದ್ಧ 33 ರನ್‌ಗಳಿಂದ ಗೆಲುವು ಸಾಧಿಸಿದೆ. ಇದರೊಂದಿಗೆ ರಾಜ್ಯ ತಂಡ ಹ್ಯಾಟ್ರಿಕ್‌ ಜಯ ಸಾಧಿಸಿ, ಎಲೈಟ್‌ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ಮುಂಬೈ ತಂಡದ ಎದುರು ಕರ್ನಾಟಕ ಕ್ರಿಕೆಟ್ ತಂಡವು 9 ರನ್‌ಗಳ ರೋಚಕ ಜಯ ಸಾಧಿಸಿತ್ತು ಹಾಗೂ ಛತ್ತಿಸ್‌ಗಢ ವಿರುದ್ಧ 4 ವಿಕೆಟ್‌ಗಳ ಜಯ ಸಾಧಿಸಿತ್ತು. 

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ ನಿಗದಿತ 20 ಓವರಲ್ಲಿ 6 ವಿಕೆಟ್‌ ಕಳೆದುಕೊಂಡು 142 ರನ್‌ ಕಲೆಹಾಕಿತು. ಮನೀಶ್‌ ಪಾಂಡೆ 48 ಎಸೆತದಲ್ಲಿ 51, ಮಯಾಂಕ್‌ ಅಗರ್‌ವಾಲ್‌ 28 ಹಾಗೂ ಅನಿರುದ್ಧ ಜೋಶಿ 16 ಎಸೆತದಲ್ಲಿ 23 ರನ್‌ ಬಾರಿಸಿ ತಂಡಕ್ಕೆ ಆಸರೆಯಾದರು. ಸರ್ವಿಸಸ್‌ ಪರ ದಿವೇಶ್‌ ಪಥಾನಿಯ 2 ವಿಕೆಟ್‌ ಕಿತ್ತರು. ಸಾಧಾರಣ ಗುರಿ ಬೆನ್ನತ್ತಿದ ಸರ್ವಿಸಸ್‌ 20 ಓವರಲ್ಲಿ 8 ವಿಕೆಟ್‌ ಕಳೆದುಕೊಂಡು 109 ರನ್‌ ಗಳಿಸಲಷ್ಟೇ ಶಕ್ತವಾಯಿತು. 

ಆಫ್ಘನ್‌ ವಿರುದ್ದ ಕಿವೀಸ್ ಸೋಲದಿದ್ದರೆ..? ಜಡೇಜಾ ಉತ್ತರಕ್ಕೆ ಪತ್ರಕರ್ತ ಕಕ್ಕಾಬಿಕ್ಕಿ!

ರಾಹುಲ್‌ ಸಿಂಗ್‌ 34, ಅಮಿತ್‌ ಪಚ್ಚಾರ 23, ಪಥಾನಿಯ 14 ರನ್‌ ಗಳಿಸಿದರು. ರಾಜ್ಯದ ಪರ ವಿಜಯ್‌ಕುಮಾರ್‌ ವೈಶಾಕ್‌ 3, ದರ್ಶನ್‌ ಎಂ.ಬಿ. 2 ವಿಕೆಟ್‌ ಕಬಳಿಸಿದರು. ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ 9 ರನ್‌ ರೋಚಕ ಜಯ ಸಾಧಿಸಿದ್ದ ಕರ್ನಾಟಕ, 2ನೇ ಪಂದ್ಯದಲ್ಲಿ ಛತ್ತೀಸ್‌ಗಢ ವಿರುದ್ಧ 4 ವಿಕೆಟ್‌ಗಳಿಂದ ಜಯ ಗಳಿಸಿತ್ತು. ಇದೀಗ ಮೂರನೇ ಪಂದ್ಯವನ್ನೂ ಗೆಲ್ಲುವ ಮೂಲಕ 12 ಅಂಕ ಗಳಿಸಿರುವ ರಾಜ್ಯ ತಂಡ ಎಲೈಟ್‌ ಬಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಸೋಮವಾರ ನಡೆಯುವ ನಾಲ್ಕನೇ ಪಂದ್ಯದಲ್ಲಿ ಕರ್ನಾಟಕ ತಂಡ ಬರೋಡ ಸವಾಲನ್ನು ಎದುರಿಸಲಿದೆ. ಸೋಮವಾರ (ನ.8) ರಂದು ಕರ್ನಾಟಕ ಬರೋಡಾ ತಂಡದೊಂದಿಗೆ ಸೆಣಸಾಡಲಿದೆ. 

ಸ್ಕೋರ್‌:

ಕರ್ನಾಟಕ 20 ಓವರಲ್ಲಿ 142/6 (ಪಾಂಡೆ 51, ಮಯಾಂಕ್‌ 28, ದಿವೇಶ್‌ 2-31),

ಸರ್ವಿಸಸ್‌ 20 ಓವರಲ್ಲಿ 109/8 (ರಾಹುಲ್‌ 34, ಅಮಿತ್‌ 23, ವಿಜಯ್‌ಕುಮಾರ್‌ 3-25, ದರ್ಶನ್‌ 2-30)

ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿ!

2022ರ ಐಪಿಎಲ್‌ಗೆ (IPL) ನಡೆಯುವ ಮೆಗಾ ಹರಾಜು ಪ್ರಕ್ರಿಯೆಗೂ ಮುನ್ನ ತಮ್ಮ ಸಾಮರ್ಥ್ಯ ಸಾಬೀತು ಪಡಿಸಲು ದೇಸಿ ಕ್ರಿಕೆಟಿಗರಿಗೆ ವೇದಿಕೆ ಇದಾಗಿದೆ . ಗುರುವಾರದಿಂದ (ನ. 4) ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿ (Syed Mushtaq Ali Trophy) ಆರಂಭವಾಗಿದ್ದು, ಎಲೈಟ್‌ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕ ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ ಜಯ ಸಾಧಿಸಿತ್ತು.

 ಸ್ಕಾಟ್ಲೆಂಡ್ ಎದುರು ಅಬ್ಬರಿಸಿ ಆತಿಯಾ ಶೆಟ್ಟಿ ಜತೆಗಿನ ಪ್ರೀತಿ ಅನಾವರಣ ಮಾಡಿದ ರಾಹುಲ್

ಕರ್ನಾಟಕಕ್ಕೆ ಮನೀಶ್‌ ಪಾಂಡೆ (Manish Pandey) ನಾಯಕರಾಗಿದ್ದು, ದೇವದತ್‌ ಪಡಿಕ್ಕಲ್‌ (Devdutt Padikkal), ಕೆ.ಗೌತಮ್‌, ಕರುಣ್‌ ನಾಯರ್‌, ಪ್ರಸಿದ್ಧ್ ಕೃಷ್ಣ ಸೇರಿದಂತೆ ಹಲವು ತಾರಾ ಆಟಗಾರರ ಬಲವಿದೆ. ಮುಂಬೈ‌ (Mumbai)  ತಂಡದಲ್ಲಿ ಅಜಿಂಕ್ಯ ರಹಾನೆ (Ajinkya Rahane) ನಾಯಕರಾಗಿದ್ದು ಪೃಥ್ವಿ ಶಾ (prithvi shaw), ಯಶಸ್ವಿ ಜೈಸ್ವಾಲ್‌, ಶಿವಂ ದುಬೆ, ಧವಳ್‌ ಕುಲಕರ್ಣಿಯಂತಹ ಅನುಭವಿಗಳಿದ್ದಾರೆ.

Team India ಏಕದಿನ ನಾಯಕತ್ವಕ್ಕೂ ವಿರಾಟ್‌ ಕೊಹ್ಲಿ ಗುಡ್‌ಬೈ?

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಲಕ್ನೋ (Lucknow), ಗುವಾಹಟಿ (Guwahati), ಬರೋಡಾ, ದೆಹಲಿ, ಹರಿಯಾಣ ಮತ್ತು ವಿಜಯವಾಡದಲ್ಲಿ ನಡೆಯಲಿದ್ದು, ನಾಕೌಟ್‌ ಪಂದ್ಯಗಳು (knockouts) ನವೆಂಬರ್ 16 ರಿಂದ ದೆಹಲಿಯಲ್ಲಿ (Delhi) ಪ್ರಾರಂಭವಾಗಲಿದ್ದು, ಫೈನಲ್ ಕೂಡ ದೆಹಲಿಯಲ್ಲಿ ನಡೆಯಲಿದೆ. ಒಟ್ಟು ಆರು ನಗರಗಳಲ್ಲಿ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿ ಪಂದ್ಯ ನಡೆಯಲಿವೆ

click me!