ಐಸಿಸಿ ಟಿ20 ವಿಶ್ವಕಪ್‌: ಐರ್ಲೆಂಡ್‌, ಸ್ಕಾಟ್ಲೆಂಡ್‌ ತಂಡಗಳಿಗೆ KMF ಪ್ರಾಯೋಜಕತ್ವ

By Naveen KodaseFirst Published Apr 21, 2024, 9:58 AM IST
Highlights

ಸ್ಕಾಟ್ಲೆಂಡ್‌ ಹಾಗೂ ಐರ್ಲೆಂಡ್‌ ತಂಡಗಳ ಆಟಗಾರರ ಜೆರ್ಸಿಯ ತೋಳಿನ ಭಾಗ (ಉದಾ. ಬಲಗೈ ಆಟಗಾರನ ಎಡ ತೋಳು, ಎಡಗೈ ಆಟಗಾರ ಬಲ ತೋಳು)ದ ಮೇಲೆ ಕೆಎಂಎಫ್‌ನ ಲೋಗೋ ಇರಲಿದೆ. ಈ ಎರಡೂ ತಂಡಗಳ ಆಟಗಾರರು ನಂದಿನಿ ಉತ್ಪನ್ನಗಳ ಜಾಹೀರಾತು, ಸಾಮಾಜಿಕ ತಾಣಗಳಲ್ಲಿ ನಡೆಸುವ ಅಭಿಯಾನ, ಫೋಟೋಶೂಟ್‌ಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೆಂಗಳೂರು(ಏ.21): ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್‌) ಜೂ.1ರಿಂದ 29ರ ವರೆಗೂ ವೆಸ್ಟ್‌ಇಂಡೀಸ್‌, ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಐರ್ಲೆಂಡ್‌ ಹಾಗೂ ಸ್ಕಾಟ್ಕೆಂಡ್‌ ತಂಡಗಳಿಗೆ ಪ್ರಾಯೋಜಕತ್ವ ನೀಡಲಿದೆ. ಕ್ರಿಕೆಟ್‌ ತಂಡಗಳಿಗೆ ಕೆಎಂಎಫ್ ಪ್ರಾಯೋಜಕತ್ವ ನೀಡುತ್ತಿರುವುದು ಇದೇ ಮೊದಲು.

ಈ ಬೆಳವಣಿಗೆಯನ್ನು ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಖಚಿತಪಡಿಸಿರುವ ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್‌ ಅವರು, ‘ಶನಿವಾರ (ಏ.20)ರಂದು ಒಪ್ಪಂದ ಅಧಿಕೃತಗೊಂಡಿದೆ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ 'ಕನ್ನಡದ ನಂದಿನಿ'..? ಪ್ರಾಯೋಜಕತ್ವ ಪಡೆಯುವ ನಿರೀಕ್ಷೆಯಲ್ಲಿ KMF

ಸ್ಕಾಟ್ಲೆಂಡ್‌ ಹಾಗೂ ಐರ್ಲೆಂಡ್‌ ತಂಡಗಳ ಆಟಗಾರರ ಜೆರ್ಸಿಯ ತೋಳಿನ ಭಾಗ (ಉದಾ. ಬಲಗೈ ಆಟಗಾರನ ಎಡ ತೋಳು, ಎಡಗೈ ಆಟಗಾರ ಬಲ ತೋಳು)ದ ಮೇಲೆ ಕೆಎಂಎಫ್‌ನ ಲೋಗೋ ಇರಲಿದೆ. ಈ ಎರಡೂ ತಂಡಗಳ ಆಟಗಾರರು ನಂದಿನಿ ಉತ್ಪನ್ನಗಳ ಜಾಹೀರಾತು, ಸಾಮಾಜಿಕ ತಾಣಗಳಲ್ಲಿ ನಡೆಸುವ ಅಭಿಯಾನ, ಫೋಟೋಶೂಟ್‌ಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಶ್ವಕಪ್‌ ವೇಳೆ ಜಾಹೀರಾತುಗಳು ಪ್ರಸಾರಗೊಳ್ಳಲಿವೆ. ಇದು ಕರ್ನಾಟಕದಲ್ಲಿರುವ ಪ್ರತಿಯೊಬ್ಬರಿಗೂ ಹೆಮ್ಮೆಯ ಸಂಗತಿ ಎನಿಸಿದೆ’ ಎಂದಿದ್ದಾರೆ.

‘ವಿಶ್ವಕಪ್‌ ವೇಳೆ ಕೆಎಂಎಫ್‌ನ ಉತ್ಪನ್ನಗಳು ಅಮೆರಿಕದಲ್ಲಿ ಲಭ್ಯವಿರಲಿದ್ದು, ಕರ್ನಾಟಕದ ಬ್ರ್ಯಾಂಡ್‌ಗೆ ಜಾಗತಿಕ ಮನ್ನಣೆ ಸಿಗುವಂತೆ ಮಾಡುವುದು ನಮ್ಮ ಗುರಿ’ ಎಂದು ಜಗದೀಶ್‌ ಹೇಳಿದ್ದಾರೆ.

ಅಂಪೈರಿಂಗ್ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಅಶುತೋಶ್, ಈಗ ಪಂಜಾಬ್ ಪಾಲಿನ ಆಪತ್ಬಾಂಧವ..!

ಕಳೆದ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್‌ ತಂಡಕ್ಕೆ ಕೆಎಂಎಫ್‌ ಪ್ರಾಯೋಜಕತ್ವ ನೀಡಿತ್ತು. ಸದ್ಯ ನಡೆಯುತ್ತಿರುವ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪ್ರಾಯೋಜಕತ್ವ ಪಡೆಯಲು ಪ್ರಯತ್ನಿಸಿದರೂ, ತಂಡ ನಿಗದಿಪಡಿಸಿರುವ ದುಬಾರಿ ಮೊತ್ತವನ್ನು ಭರಿಸುವುದು ಕಷ್ಟವೆನಿಸಿದ ಕಾರಣ ಯೋಜನೆಯನ್ನು ಕೈಬಿಡಲಾಯಿತು ಎಂದು ಜಗದೀಶ್‌ ಮಾಹಿತಿ ಹಂಚಿಕೊಂಡಿದ್ದಾರೆ.
 

click me!