ರಾಜ್ಯದ ಮಾಜಿ ಕ್ರಿಕೆ​ಟಿಗ ಕಸ್ತೂ​ರಿ ​ರಂಗನ್‌ ನಿಧ​ನ

Published : Aug 20, 2020, 01:37 PM IST
ರಾಜ್ಯದ ಮಾಜಿ ಕ್ರಿಕೆ​ಟಿಗ ಕಸ್ತೂ​ರಿ ​ರಂಗನ್‌ ನಿಧ​ನ

ಸಾರಾಂಶ

ಕರ್ನಾಟಕ ಕ್ರಿಕೆಟ್ ಕಂಡ ಸ್ಟಾರ್ ಆಲ್ರೌಂಡರ್ ಗೋಪಾಲಸ್ವಾಮಿ ಕಸ್ತೂರಿರಂಗನ್‌ (89) ಬೆಂಗಳೂರಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು(ಆ.20): ಹಿರಿಯ ಕ್ರಿಕೆ​ಟಿಗ ಗೋಪಾ​ಲ​ಸ್ವಾಮಿ ಕಸ್ತೂರಿರಂಗನ್‌ (89) ಬುಧ​ವಾರ ಇಲ್ಲಿನ ತಮ್ಮ ನಿವಾಸದಲ್ಲಿ ಹೃದ​ಯಾ​ಘಾತದಿಂದ ನಿಧ​ನ​ರಾ​ದರು. ಕಸ್ತೂರಿರಂಗನ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

1948ರಿಂದ 1963ರವರೆಗೂ ಮೈಸೂರು ರಾಜ್ಯದ ಪರ 36 ಪ್ರಥಮ ದರ್ಜೆ ಪಂದ್ಯ​ಗ​ಳಲ್ಲಿ ಆಡಿದ್ದ ವೇಗಿ 94 ವಿಕೆಟ್‌ ಕಬ​ಳಿ​ಸಿ​ದ್ದರು. ಕ್ರಿಕೆಟ್‌ ಪಿಚ್‌ಗಳ ಬಗ್ಗೆ ಅತ್ಯು​ತ್ತಮ ಜ್ಞಾನ ಹೊಂದಿದ್ದ ಕಸ್ತೂರಿರಂಗನ್‌ ಬಿಸಿ​ಸಿಐ ಪಿಚ್‌ ಕ್ಯುರೇ​ಟರ್‌ ಸಮಿ​ತಿಯ ಅಧ್ಯಕ್ಷರಾಗಿ ಕಾರ್ಯ​ನಿ​ರ್ವ​ಹಿ​ಸಿ​ದ್ದರು. ಕರ್ನಾ​ಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆ​ಎಸ್‌ಸಿಎ) ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿ​ಸಿ​ದ್ದರು. ಅವರ ನಿಧ​ನಕ್ಕೆ ಕೆಎಸ್‌ಸಿಎ ಸಂತಾಪ ಸೂಚಿ​ಸಿದೆ.

ಧೋನಿ ನಿವೃತ್ತಿಯ ಬೆನ್ನಲ್ಲೇ ಬಿಸಿಸಿಐನಿಂದ ಗುಡ್‌ ನ್ಯೂಸ್..!

ಇನ್ನುಳಿದಂತೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಅನಿಲ್‌ ಕುಂಬ್ಳೆ, ವಿಜಯ್‌ ಭಾರದ್ವಾಜ್‌, ದೊಡ್ಡ ಗಣೇಶ್‌ ಸೇರಿ​ದಂತೆ ಅನೇಕ ಮಾಜಿ ಕ್ರಿಕೆ​ಟಿ​ಗರು ಟ್ವೀಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

‘ಸೂಪರ್‌ಸ್ಟಾರ್ ತಯಾರಾಗುತ್ತಿದ್ದಾನೆ’; ವೈಭವ್ ಸೂರ್ಯವಂಶಿ ಬಗ್ಗೆ ಕೃಷ್ಣಮಾಚಾರಿ ಶ್ರೀಕಾಂತ್ ಭರ್ಜರಿ ಭವಿಷ್ಯ
ಮಹಿಳಾ ಏಷ್ಯಾಕಪ್‌ ಟಿ20: ಇಂದು ಭಾರತ ಎದುರು ಪಾಕಿಸ್ತಾನಕ್ಕೆ ಡು ಆರ್ ಡೈ ಮ್ಯಾಚ್! ಎಷ್ಟು ಗಂಟೆಗೆ ಆರಂಭ? ನೇರ ಪ್ರಸಾರ ಎಲ್ಲಿ?