
ಬೆಂಗಳೂರು: ಅಕ್ಟೋಬರ್ 15ರಿಂದ ಆರಂಭಗೊಳ್ಳಲಿರುವ 2025-26ರ ರಣಜಿ ಟ್ರೋಫಿಗೆ ಮಂಗಳವಾರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಎ) 37 ಸದಸ್ಯರ ಸಂಭವನೀಯರ ಪಟ್ಟಿಯನ್ನು ಪ್ರಕಟಿಸಿದೆ.
ಕೆ.ಎಲ್.ರಾಹುಲ್, ಮಯಾಂಕ್ ಅಗರ್‌ವಾಲ್ ಸೇರಿ ಪ್ರಮುಖ ಆಟಗಾರರ ಜೊತೆ ಕೆಲ ಹೊಸಬರಿಗೂ ಸ್ಥಾನ ಸಿಕ್ಕಿದೆ. ಎಲೈಟ್ 'ಬಿ' ಗುಂಪಿನಲ್ಲಿರುವ ಕರ್ನಾಟಕ ತನ್ನ ಮೊದಲ ಪಂದ್ಯವನ್ನು ರಾಜ್‌ಕೋಟ್‌ನಲ್ಲಿ ಸೌರಾಷ್ಟ್ರ ವಿರುದ್ದ ಆಡಲಿದೆ. 8 ಬಾರಿ ಚಾಂಪಿಯನ್ ತಂಡಕ್ಕೆ ಗುಂಪು ಹಂತದಲ್ಲಿ ಗೋವಾ, ಕೇರಳ, ಮಹಾರಾಷ್ಟ್ರ, ಚಂಡೀಗಢ, ಮಧ್ಯಪ್ರದೇಶ ಹಾಗೂ ಪಂಜಾಬ್ ಎದುರಾಗಲಿವೆ.
ಮಯಾಂಕ್ ಅಗರ್‌ವಾಲ್, ಕೆ.ಎಲ್.ರಾಹುಲ್, ಕರುಣ್ ನಾಯರ್, ದೇವದತ್ ಪಡಿಕ್ಕಲ್, ಆರ್.ಸ್ಮರಣ್, ಶ್ರೀಜಿತ್ ಕೆ.ಎಲ್. ರಾಹುಲ್, ಅನೀಶ್ ಕೆ.ವಿ., ಅಭಿನವ್ ಮನೋಹರ್, ನಿಕಿನ್ ಜೋಸ್, ಪ್ರಸಿದ್ ಕೃಷ್ಣ ವೈಶಾಖ್ ವಿಜಯ್ ಕುಮಾರ್, ವಿದ್ವತ್ ಕಾವೇರಪ್ಪ, ಶ್ರೇಯಸ್ ಗೋಪಾಲ್, ಮ್ಯಾಕ್‌ನೀಲ್ ನೊರೊನ್ಹಾ ವಿದ್ಯಾಧರ್ ಪಾಟೀಲ್, ಕೃತಿಕ್ ಕೃಷ್ಣ, ಹಾರ್ದಿಕ್ ರಾಜ್, ಶಿಖರ್ ಶೆಟ್ಟಿ, ಮೊಹ್ಸಿನ್ ಖಾನ್, ಅಭಿಲಾಶ್ ಶೆಟ್ಟಿ, ಪರಾಸ್ ಗುರ್ಬಾಕ್ಸ್ ಆರ್ಯಾ, ಶಶಿಕುಮಾರ್ ಕೆ, ವೆಂಕಟೇಶ್ ಎಂ., ಯಶೋವರ್ಧನ್ ಪರಂತಾಪ್, ಸಮರ್ಥ್ ನಾಗರಾಜ್, ಮಾಧವ್ ಆಚಾರ್, ಶ್ರೀಶಾ ಬಜಾಜ್, ಅಭಿಷೇಕ್ ಅಲ್ದಾವತ್, ಶರತ್ ಶ್ರೀನಿವಾಸ್, ಕಿಶನ್ ಬೆಡಾರೆ, ಮನ್ವಂತ್ ಕುಮಾರ್, ಕಾರ್ತಿಕೇಯ ಕೆ.ಪಿ., ಮೋನಿಶ್ ರೆಡ್ಡಿ, ಶುಭಾಂಗ್ ಹೆಗಡೆ, ಅಧೋಕ್ಷ್ ಹೆಗಡೆ, ಕುಮಾ ಎಲ್.ಆರ್., ಶರತ್ ಬಿ.ಆರ್.
ಬೆಂಗಳೂರು: 2025–26 ದೇಶೀಯ ಮುಂಗಾರು ಕರ್ನಾಟಕದ ವಿವಿಧ ವಯೋಮಿತಿ ಕ್ರಿಕೆಟ್ ತಳಗಳಿಗಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಯ್ಕೆ ಸಮಿತಿಗಳನ್ನು ರಾಜ್ಯ ಮಂಡಳಿ ಮಂಗಳವಾರ ಪ್ರಕಟಿಸಿದೆ.
ಆಯ್ಕೆ ಸಮಿತಿಯ ಪರವಾಗಿ ರಾಜ್ಯ ಮಂಡಳಿ ಸದಸ್ಯ ಕಿಟ್ಟಿ ಅನಂತ ನೇಮಕಗೊಂಡಿದ್ದಾರೆ. ಕಿಟ್ಟಿ 1996–97 ರಿಂದ 2009ರವರೆಗೆ ಒಟ್ಟು 46 ಪ್ರಥಮ ದರ್ಜೆ ಹಾಗೂ 28 ಲಿಸ್ಟ್–ಎ ಪಂದ್ಯಗಳಲ್ಲಿ ಕರ್ನಾಟಕ ಪರ ಆಡಿದ್ದಾರೆ. ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ರಾಜ್ಯದ ಮಾಜಿ ಕ್ರಿಕೆಟಿಗರಾದ ಅಮಿತ್ ವರ್ಮಾ, ಸಿ. ರಫು ಹಾಗೂ 61 ವರ್ಷದ ತೇಜಸ್ವಾಲ್ ತಳಾರಿ ಅವರನ್ನು ನೇಮಕಗೊಳಿಸಲಾಗಿದೆ.
ಅಂಡರ್–23 ವಯೋಮಿತಿಯ ತಳದ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಕೆ.ಎಸ್. ಅಜಿತ್ ನೇಮಕಗೊಂಡಿದ್ದಾರೆ. ಸಮಿತಿಯ ಸದಸ್ಯರಾಗಿ ಅಮಿತ್ ವರ್ಮಾ, ಸುನಿಲ್ ರಾಜು ಹಾಗೂ ಎಸ್. ಪ್ರಕಾಶ್ ನೇಮಕಗೊಂಡಿದ್ದಾರೆ. ಪುರುಷರ ಹಾಗೂ ಬಾಲಕರ ಅಂಡರ್–19, 16 ಹಾಗೂ 14 ತಳದ ಆಯ್ಕೆ ಸಮಿತಿಗಳ ಅಧ್ಯಕ್ಷರಾಗಿ ರಾಜ್ಯ ಮಂಡಳಿ ಸದಸ್ಯ ಬಿ.ಎನ್. ಅನಿಲ್ ನೇಮಕಗೊಂಡಿದ್ದಾರೆ.
ಹೀಗೆಯೇ ಅಂಡರ್–23 ಮಹಿಳಾ ತಳದ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಸುನಂದ ಅಜಿತ್ ನೇಮಕಗೊಂಡಿದ್ದು, ಸದಸ್ಯರಾಗಿ ರೇಖಾ, ಡಾ. ಪಾರ್ವತಿ ನಾಯಕ್, ಮುನಿರತ್ನ ಅರಳಸನ್ನು ನೇಮಕಗೊಂಡಿದ್ದಾರೆ. ಇನ್ನು ಅಂಡರ್–19, 15 ಹಾಗೂ 14 ತಳದ ಸಮಿತಿಯ ಮುಖ್ಯಸ್ಥರಾಗಿ ಶಾಂತಾ ರಂಗಸ್ವಾಮಿ, ಸದಸ್ಯೆಯರಾಗಿ ರೇಣುಕಾ ಮಹಾದೇವ, ಸವಿತಾ ಶಿರೂರ ಅವರನ್ನು ನೇಮಕ ಮಾಡಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.