
ಸ್ಟಾಕ್ಹೋಮ್(ಸೆ.11): ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್, ಸ್ವೀಡನ್ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲಿರುವ 51 ವರ್ಷದ ರೋಡ್ಸ್, ಟೂರ್ನಿ ಮುಕ್ತಾಯಗೊಂಡ ಬಳಿಕ ಕುಟುಂಬ ಸಮೇತ ಸ್ವೀಡನ್‌ಗೆ ತೆರಳಲಿದ್ದಾರೆ.
‘ದೇಶದಲ್ಲಿ ಕ್ರಿಕೆಟ್ ಅತಿವೇಗವಾಗಿ ಬೆಳೆಯುತ್ತಿರುವ ಕ್ರೀಡೆಗಳ ಪೈಕಿ 2ನೇ ಸ್ಥಾನದಲ್ಲಿದೆ. ಕಳೆದ 2 ವರ್ಷಗಳಲ್ಲಿ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಶೇ.300ರಷ್ಟು ಏರಿಕೆಯಾಗಿದೆ. ರೋಡ್ಸ್‌ರ ಅನುಭವ ದೇಶದಲ್ಲಿ ಕ್ರಿಕೆಟ್ ಏಳಿಗೆಗೆ ಮತ್ತಷ್ಟು ಸಹಕಾರಿಯಾಗಲಿದೆ’ ಎಂದು ಸ್ವೀಡನ್ ಕ್ರಿಕೆಟ್ ಫೆಡರೇಷನ್ ತಿಳಿಸಿದೆ.
IPL 2020: ಕೊರೋನಾದಿಂದ ಮುಕ್ತವಾಗಿರಿಸಲು ವಿಶೇಷ ಪ್ಲಾನ್ ಮಾಡಿದ ಬಿಸಿಸಿಐ!
ಜಾಂಟಿ ರೋಡ್ಸ್ ಕೂಡಾ ಹೊಸ ಸವಾಲನ್ನು ಎದುರಿಸಲು ಸಿದ್ದರಿರುವುದಾಗಿ ತಿಳಿಸಿದ್ಧಾರೆ. 1992ರಿಂದ 2003ರ ಅವಧಿಯಲ್ಲಿ ರೋಡ್ಸ್ ದಕ್ಷಿಣ ಆಫ್ರಿಕಾ ತಂಡದ ಪರ 52 ಟೆಸ್ಟ್ ಹಾಗೂ 245 ಏಕದಿನ ಪಂದ್ಯಗಳನ್ನಾಡಿದ್ದಾರೆ. ವಿಶ್ವಕ್ರಿಕೆಟ್ ಕಂಡ ಶ್ರೇಷ್ಠ ಕ್ಷೇತ್ರ ರಕ್ಷಕರ ಪಟ್ಟಿಯಲ್ಲಿ ರೋಡ್ಸ್ ಅಗ್ರಗಣ್ಯ ಆಟಗಾರ ಎನಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.