ಹರ್ಭಜನ್‌ಗೆ 4 ಕೋಟಿ ರೂ. ವಂಚಿಸಿದ ಚೆನ್ನೈ ಉದ್ಯಮಿ, ದೂರು ದಾಖಲಿಸಿದ ಕ್ರಿಕೆಟರ್!

By Suvarna NewsFirst Published Sep 10, 2020, 8:08 PM IST
Highlights

IPL ಟೂರ್ನಿ ಆರಂಭಕ್ಕೂ ಮುನ್ನವೇ ಕ್ರಿಕೆಟಿಗ ಹರ್ಭಜನ್ ಸಿಂಗ್ ಭಾರಿ ಸದ್ದು ಮಾಡಿದರು. ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್‌ಮನ್ ಸುರೇಶ್ ರೈನಾ ಟೂರ್ನಿಯಿಂದ ಹಿಂದೆ ಸರಿದ ಬೆನ್ನಲ್ಲೇ ಹರ್ಭಜನ್ ಸಿಂಗ್ ಕೂಡ ಟೂರ್ನಿಯಿಂದ ವಾಪಸ್ ಆಗಿದ್ದಾರೆ. ಐಪಿಎಲ್ ಟೂರ್ನಿಗೆ ಕಾಯುತ್ತಿದ್ದ ಅಭಿಮಾನಿಗಳಿಗೆ ಭಜ್ಜಿ ಶಾಕ್ ನೀಡಿದ್ದರು. ಇದೀಗ ಹರ್ಭಜನ್‌ಗೆ ಬಹುದೊಡ್ಡ ಶಾಕ್ ಎದುರಾಗಿದೆ.

ಚೆನ್ನೈ(ಸೆ.10): ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದ ಚೆನ್ನೈ ಸೂಪರ್ ಕಿಂಗ್ಸ್ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ತವರಿಗೆ ವಾಪಸ್ ಆಗಿದ್ದಾರೆ. ವೈಯುಕ್ತಿಕ ಕಾರಣ ನೀಡಿ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿಯುವುದಾಗಿ  ಹರ್ಭಜನ್ ಸಿಂಗ್‌ ಹೇಳಿದ್ದಾರೆ. ಇದರಿಂದ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯಿಂದ ಬರಬೇಕಿದ್ದ 2 ಕೋಟಿ ರೂಪಾಯಿ ಹಣ ಇಲ್ಲದಾಗಿದೆ. ಇದರ ಬೆನ್ನಲ್ಲೇ ಹರ್ಭಜನ್‌ಗೆ ಚೆನ್ನೈ ಮೂಲದ ಉದ್ಯಮಿ ಬರೋಬ್ಬರಿ 4 ಕೋಟಿ ರೂಪಾಯಿ ವಂಚಿಸಿಲಾಗಿದೆ.

ಧೋನಿ ಪಡೆಗೆ ಮತ್ತೊಂದು ಶಾಕ್: ಸಿಎಸ್‌ಕೆ ತಂಡದಿಂದ ಹೊರಬಿದ್ದ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗ..!.

ಹರ್ಭಜನ್ ಸಿಂಗ್ ಪರಿಚಯಸ್ಥರ ಮೂಲಕ ಚೆನ್ನೈ ಮೂಲದ ಉದ್ಯಮಿ ಜಿ ಮಹೇಶ್ ಪರಿಚಯವಾಗಿದ್ದರು.. 2015ರಲ್ಲಿ ಉದ್ಯಮಿ ಜಿ ಮಹೇಶ್‌ಗೆ ಹರ್ಭಜನ್ ಸಿಂಗ್ ಬರೋಬ್ಬರಿ 4 ಕೋಟಿ ರೂಪಾಯಿ ಸಾಲ ನೀಡಿದ್ದರು. ಒಂದು ವರ್ಷದೊಳಗೆ 4 ಕೋಟಿ ರೂಪಾಯಿ ಸಾಲ ಹಿಂತಿರುವುದಾಗಿ ಜಿ ಮಹೇಶ್, ಕ್ರಿಕೆಟಿಗ ಹರ್ಭಜನ್ ಸಿಂಗ್‌ಗೆ ಭರವಸೆ ನೀಡಿದ್ದರು.

ಇಡೀ ಕಾಲೋನಿ ಬಿಲ್ ನೀಡಿದ್ದೀರಾ? ದುಬಾರಿ ವಿದ್ಯುತ್ ಬಿಲ್ ನೋಡಿ ಹರ್ಭಜನ್ ಶಾಕ್!

ಬರೋಬ್ಬರಿ 5 ವರ್ಷಗಳಾದರೂ ಉದ್ಯಮಿ ಹಣ ಹಿಂತಿರುಗಿಸಲೇ ಇಲ್ಲ. ಕಳೆದ ತಿಂಗಳು ಉದ್ಯಮಿ 25 ಲಕ್ಷ ರೂಪಾಯಿ ಚೆಕ್ ನೀಡಿದ್ದರು. ಚೆಕ್ ವಿಥ್‌ಡ್ರಾ ಮಾಡಲು ಹೋದ ಭಜ್ಜಿಗೆ ಮತ್ತೆ ಶಾಕ್ ಆಗಿದೆ. ಕಾರಣ ಚೆಕ್ ಬೌನ್ಸ್ ಆಗಿದೆ. 5 ವರ್ಷಗಳಿಂದ ಹಣ ನೀಡುವುದಾಗಿ ಹೇಳಿ ಸತಾಯಿಸುತ್ತಿದ್ದ ಹರ್ಭಜನ್ ಸಿಂಗ್ ಚೆನ್ನೈಗೆ ತೆರಳಿ ದೂರು ನೀಡಿದ್ದಾರೆ.

ಹರ್ಭಜನ್ ಸಿಂಗ್ ನೀಡಿದ ದೂರು ಹಾಗೂ ದಾಖಲೆಗಳ ಆಧಾರದ ಮೇಲೆ ಚೆನ್ನೈ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಉದ್ಯಮಿಗೆ ನೊಟೀಸ್ ನೀಡಿದ್ದಾರೆ. ಇದರ ಬೆನ್ನಲ್ಲೇ ಉದ್ಯಮಿ ಮಹೇಶ್, ಈಗಾಗಲೇ ಮದ್ರಾಸ್ ಹೈಕೋರ್ಟ್‌ಗೆ ಆ್ಯಂಟಿಸಿಪೇಟರ್ ಬೇಲ್‌ಗೆ ಮನವಿ ಮಾಡಿದ್ದಾರೆ. ಹರ್ಭಜನ್ ಸಿಂಗ್‌ನಿಂದ ಪಡೆದುಕೊಂಡ ಸಾಲವನ್ನು ಹಿಂತುರಿಗಿಸಲಾಗಿದೆ ಎಂದು ಅಫಿದವಿತ್ ಸಲ್ಲಿಸಿದ್ದಾರೆ. 

click me!