ಜೂನ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಅಮೇರಿಕಾದಲ್ಲಿ ನಡೆಯೋ ಟಿ20 ವರ್ಲ್ಡ್‌ಕಪ್ ಆಡಲು ಆಟಗಾರರ ಮಧ್ಯೆ ರೇಸ್ ಬಿದ್ದಿದೆ. ಬಹುತೇಕ ಎಲ್ಲಾ ಸ್ಲಾಟ್ಗಳಿಗೂ ಪ್ಲೇಯರ್ಸ್ ಫಿಕ್ಸ್ ಆಗಿದ್ದಾರೆ. ಆದ್ರೆ ವಿಕೆಟ್ ಕೀಪರ್ ಸ್ಥಾನ ಮಾತ್ರ ಖಾಲಿ ಇದೆ.
ಬೆಂಗಳೂರು(ಜ.17): 2024ರ ಟಿ20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ ಇಂದು ತನ್ನ ಕೊನೆ ಟಿ20 ಮ್ಯಾಚ್ ಆಡ್ತಿದೆ. ಆದ್ರೂ ವರ್ಲ್ಡ್ಕಪ್ಗೆ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಯಾರು ಅನ್ನೋ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಎಲ್ಲಾ ಸ್ಲಾಟ್‌ಗಳಿಗೆ ಆಟಗಾರರು ಫಿಕ್ಸ್ ಆಗಿದ್ದಾರೆ. ಆದ್ರೆ ಕೀಪರ್ ಸ್ಲಾಟ್ ಖಾಲಿ ಇದೆ. ರೇಸ್‌ನಲ್ಲಿ ಪಂಚ ಪಾಂಡವರು ಇದ್ದಾರೆ.
ಯಾರಿಗೆ ಸಿಗಲಿದೆ ಯುರೋಪ್ ಟಿಕೆಟ್..?
ಜೂನ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಅಮೇರಿಕಾದಲ್ಲಿ ನಡೆಯೋ ಟಿ20 ವರ್ಲ್ಡ್‌ಕಪ್ ಆಡಲು ಆಟಗಾರರ ಮಧ್ಯೆ ರೇಸ್ ಬಿದ್ದಿದೆ. ಬಹುತೇಕ ಎಲ್ಲಾ ಸ್ಲಾಟ್ಗಳಿಗೂ ಪ್ಲೇಯರ್ಸ್ ಫಿಕ್ಸ್ ಆಗಿದ್ದಾರೆ. ಆದ್ರೆ ವಿಕೆಟ್ ಕೀಪರ್ ಸ್ಥಾನ ಮಾತ್ರ ಖಾಲಿ ಇದೆ. ವಿಕೆಟ್ ಕೀಪರ್ ಕಮ್ ಬ್ಯಾಟರ್ ಆಗಿ ಸ್ಥಾನ ಪಡೆಯಲು ಐವರು ಆಟಗಾರರು ರೇಸ್‌ನಲ್ಲಿದ್ದಾರೆ. ಈ ಐವರಲ್ಲಿ ಯಾರಿಗೆ ಬೇಕಾದ್ರೂ ವಿಶ್ವಕಪ್ ಫ್ಲೈಟ್ ಟಿಕೆಟ್ ಸಿಗಬಹುದು. ಯಾಕಂದ್ರೆ ಇನ್ನೂ ಯಾರಿಗೂ ಕನ್ಪರ್ಮ್ ಆಗಿಲ್ಲ ಈ ಸ್ಥಾನ.
Ayodhya Ram Mandir: ಪಾಕಿಸ್ತಾನದಲ್ಲಿ ಕೇಸರಿ ಧ್ವಜ ಹಿಡಿದು, ಮಾಜಿ ಕ್ರಿಕೆಟಿಗನ ಜೈ ಶ್ರೀರಾಮ್ ಘೋಷಣೆ!
ಸಿಕ್ಕ ಅವಕಾಶ ಬಳಸಿಕೊಳ್ತಿಲ್ಲ ಜಿತೇಶ್..!
ಮಹಾರಾಷ್ಟ್ರದ ಜಿತೇಶ್ ಶರ್ಮಾ, 7 ಟಿ20 ಇನ್ನಿಂಗ್ಸ್‌ಗಳಿಂದ 100 ರನ್ ಹೊಡೆದಿದ್ದಾರೆ. ಮೂರು ಕ್ಯಾಚ್, ಒಂದು ಸ್ಟಂಪೌಟ್ ಮಾಡಿದ್ದಾರೆ. ಅಫ್ಘನ್ ವಿರುದ್ಧದ ಸರಣಿಗೂ ಸೆಲೆಕ್ಟ್ ಆಗಿದ್ದು, ಮೊದಲ ಪಂದ್ಯದಲ್ಲಿ 31 ಮತ್ತು 2ನೇ ಪಂದ್ಯದಲ್ಲಿ ಡಕೌಟ್ ಆಗಿದ್ದಾರೆ. ಇಂದು ಅವರಿಗೆ ಮಹತ್ವದ ಪಂದ್ಯ. ಇಂದು ರನ್ ಹೊಡೆದು, ಐಪಿಎಲ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ್ರೆ ಜಿತೇಶ್‌ಗೆ ವಿಶ್ವಕಪ್ ಫ್ಲೈಟ್ ಟಿಕೆಟ್ ಸಿಗಲಿದೆ.
ಬೆಂಚ್ ಕಾಯುವುದೇ ಸಂಜು ಕೆಲಸ..!
ಸಂಜು ಸ್ಯಾಮ್ಸನ್ 2015ರಲ್ಲೇ ಟಿ20 ಕ್ರಿಕೆಟ್‌ಗೆ ಡೆಬ್ಯು ಮಾಡಿದ್ರೂ ಇದುವರೆಗೂ ಅವರು ಆಡಿರೋದು ಜಸ್ಟ್ 24 ಪಂದ್ಯಗಳನ್ನ ಮಾತ್ರ. ಆಡಿದಕ್ಕಿಂತ ಬೆಂಚ್ ಕಾಯ್ದಿದ್ದೇ ಜಾಸ್ತಿ. ಸೌತ್ ಆಫ್ರಿಕಾ ವಿರುದ್ಧ ಒನ್ಡೇಯಲ್ಲಿ ಸೆಂಚುರಿ ಹೊಡೆದ್ರೂ ಅಫ್ಘನ್ ಟಿ20ಯಲ್ಲಿ ಬೆಂಚ್ ಕಾಯ್ತಿದ್ದಾರೆ. ಅವರ ಟಿ20 ಬ್ಯಾಟಿಂಗ್ ಪರ್ಫಾಮೆನ್ಸ್ ಅಷ್ಟಕಷ್ಟೆ. ಸಂಜು ಟಿ20 ವಿಶ್ವಕಪ್ ಭವಿಷ್ಯ ಸಹ ಐಪಿಎಲ್ ಪರ್ಫಾಮೆನ್ಸ್ ಮೇಲೆ ನಿಂತಿದೆ.
ಈ ಆಟಗಾರನನ್ನು ಕೈಬಿಟ್ಟು ಮಹಾ ಯಡವಟ್ಟು ಮಾಡಿಕೊಂಡ ಆರ್‌ಸಿಬಿ..! ಒಂದೇ ಪಂದ್ಯದಲ್ಲಿ 16 ಸಿಕ್ಸರ್..!
ರಾಹುಲ್-ಇಶಾನ್ಗೂ ಇದೆ ಚಾನ್ಸ್..!
ಕೆಎಲ್ ರಾಹುಲ್, ಓಪನರ್ ಆಗಿ ವಿಫಲರಾಗಿದ್ದಾರೆ. ಹಾಗಾಗಿ ಅವರು ಈಗ ಟೆಸ್ಟ್ ಮತ್ತು ಒನ್ಡೇಯಲ್ಲಿ ನಂಬರ್ 5 ಸ್ಲಾಟ್ನಲ್ಲಿ ಆಡ್ತಿದ್ದಾರೆ. ಅಲ್ಲೇನು ಕ್ಲಿಕ್ ಆಗಿದ್ದಾರೆ. ಆದ್ರೆ ಟಿ20ಯಲ್ಲಿ ಅವರು ಲೋ ಆರ್ಡರ್ನಲ್ಲಿ ಆಡಿದ ಅನುಭವಿಲ್ಲ. ಐಪಿಎಲ್‌ನಲ್ಲಿ 4 ಅಥವಾ 5ನೇ ಕ್ರಮಾಂಕದಲ್ಲಿ ಆಡಿ ಸಕ್ಸಸ್ ಆದ್ರೆ ರಾಹುಲ್ಗೂ ಸಿಗಲಿದೆ ವಿಶ್ವಕಪ್ನಲ್ಲಿ ಸ್ಥಾನ.
ಇಶಾನ್ ಕಿಶನ್ ಮತ್ತು ರಿಷಬ್ ಪಂತ್ ಸಹ ಐಪಿಎಲ್ ಮೇಲೆ ಕಣ್ಣಿಟ್ಟಿದ್ದಾರೆ. ಇಶಾನ್ ಸದ್ಯ ರೆಸ್ಟ್ನಲ್ಲಿದ್ದಾರೆ. ಪಂತ್, ಅಪಘಾತದಿಂದ ಚೇತರಿಸಿಕೊಳ್ತಿದ್ದಾರೆ. ಈ ಎಡಗೈ ಬ್ಯಾಟರ್ಗಳಿಬ್ಬರು ಈಗ ಕಲರ್ ಫುಲ್ ಟೂರ್ನಿಯಲ್ಲಿ ರನ್ ಗಳಿಸೋ ಒತ್ತಡದಲ್ಲಿದ್ದಾರೆ. ಒಟ್ನಲ್ಲಿ ಟಿ20 ವಿಶ್ವಕಪ್ನಲ್ಲಿ ಕೀಪರ್ ಯಾರು ಅನ್ನೋದು ಐಪಿಎಲ್‌ನಲ್ಲಿ ಡಿಸೈಡ್ ಆಗಲಿದೆ.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್