24 ವರ್ಷದ ಯುವ ಸ್ಪೋಟಕ ಬ್ಯಾಟರ್ ಫಿನ್ ಅಲೆನ್(Finn Allen), ಬಲಾಢ್ಯ ಪಾಕಿಸ್ತಾನ ಬೌಲರ್‌ಗಳ ಎದುರು ಕೇವಲ 62 ಎಸೆತಗಳನ್ನು ಎದುರಿಸಿ 16 ಮುಗಿಲೆತ್ತರದ ಸಿಕ್ಸರ್ ಸಹಿತ ವಿಸ್ಪೋಟಕ 137 ರನ್ ಸಿಡಿಸಿ ತಂಡ ಬೃಹತ್ ಗೆಲುವು ದಾಖಲಿಸುವಂತೆ ಮಾಡಿದ್ದಾರೆ. ಫಿನ್ ಅಲೆನ್ ಅವರ ಈ ವಿಸ್ಪೋಟಕ ಇನಿಂಗ್ಸ್‌ನಲ್ಲಿ 16 ಸಿಕ್ಸರ್ ಮಾತ್ರವಲ್ಲದೇ 5 ಆಕರ್ಷಕ ಬೌಂಡರಿಗಳು ಸೇರಿದ್ದವು.
ಡ್ಯುನೆಡಿನ್(ಜ.17): ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಆರ್‌ಸಿಬಿ ಮಾಜಿ ಕ್ರಿಕೆಟಿಗ ಹಾಗೂ ಕಿವೀಸ್ ಸ್ಪೋಟಕ ಆರಂಭಿಕ ಬ್ಯಾಟರ್ ಫಿನ್ ಅಲೆನ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಮಿಂಚಿದ್ದಾರೆ. ಆರ್‌ಸಿಬಿ ಫ್ರಾಂಚೈಸಿ ಮಾಡಿದ ಒಂದು ಯಡವಟ್ಟಿಗೆ ಬೆಲೆತೆರುವ ಕಾಲ ಬಂದಿದೆ ಎನ್ನುತ್ತಿದ್ದಾರೆ ಕ್ರಿಕೆಟ್ ಫ್ಯಾನ್ಸ್.
ಹೌದು, 24 ವರ್ಷದ ಯುವ ಸ್ಪೋಟಕ ಬ್ಯಾಟರ್ ಫಿನ್ ಅಲೆನ್(Finn Allen), ಬಲಾಢ್ಯ ಪಾಕಿಸ್ತಾನ ಬೌಲರ್‌ಗಳ ಎದುರು ಕೇವಲ 62 ಎಸೆತಗಳನ್ನು ಎದುರಿಸಿ 16 ಮುಗಿಲೆತ್ತರದ ಸಿಕ್ಸರ್ ಸಹಿತ ವಿಸ್ಪೋಟಕ 137 ರನ್ ಸಿಡಿಸಿ ತಂಡ ಬೃಹತ್ ಗೆಲುವು ದಾಖಲಿಸುವಂತೆ ಮಾಡಿದ್ದಾರೆ. ಫಿನ್ ಅಲೆನ್ ಅವರ ಈ ವಿಸ್ಪೋಟಕ ಇನಿಂಗ್ಸ್‌ನಲ್ಲಿ 16 ಸಿಕ್ಸರ್ ಮಾತ್ರವಲ್ಲದೇ 5 ಆಕರ್ಷಕ ಬೌಂಡರಿಗಳು ಸೇರಿದ್ದವು. ಫಿನ್ ಅಲೆನ್ ಅವರ ಈ ಇನಿಂಗ್ಸ್ ನೋಡಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಾಂಚೈಸಿಗೂ ಈಗ ಈ ಆಟಗಾರನನ್ನು ಕೈಬಿಟ್ಟು ತಪ್ಪು ಮಾಡಿದೆವು ಅನಿಸುತ್ತಿರಬೇಕು. 2024ರ ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಹರ್ಷಲ್ ಪಟೇಲ್, ಜೋಶ್ ಹೇಜಲ್‌ವುಡ್, ಫಿನ್ ಅಲೆನ್ ಸೇರಿದಂತೆ ಹಲವು ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ರಿಲೀಸ್ ಮಾಡಿತ್ತು.
ಆಡೋದ್ರಲ್ಲೂ ಮುಂದು, ಹೂಡೋದ್ರಲ್ಲೂ ಮುಂದು..! ಈ Startup ಕಂಪನಿಗಳ ಮೇಲೆ ಹಣ ಹಾಕಿದ್ದಾರೆ ನಮ್ಮ ಕ್ರಿಕೆಟರ್ಸ್!
ಅಲೆನ್ ಬಿಟ್ಟು ಕೆಟ್ಟ ಆರ್‌ಸಿಬಿ:
ಹೊಡಿಬಡಿಯಾಟಕ್ಕೆ ಹೆಸರುವಾಸಿಯಾಗಿರುವ ಫಿನ್ ಅಲೆನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 2024ರ ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ತಂಡದಿಂದ ರಿಲೀಸ್ ಮಾಡಿತ್ತು. ಫಿನ್ ಅಲೆನ್ 2023ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ಭಾಗವಾಗಿದ್ದರು. ಈ ಮೊದಲು ಐಪಿಎಲ್ ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 80 ಲಕ್ಷ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಐಪಿಎಲ್ ಟೂರ್ನಿಗೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲೂ ಅಲೆನ್ ಮಿಂಚಿದ್ದರು. ಹೀಗಿದ್ದೂ 2023ರ ಐಪಿಎಲ್ ಟೂರ್ನಿಯಲ್ಲಿ ಅಲೆನ್‌ಗೆ ಒಂದೇ ಒಂದು ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿರಲಿಲ್ಲ. ಆರ್‌ಸಿಬಿ ಫ್ರಾಂಚೈಸಿಯು ಈ ಪ್ರತಿಭಾನ್ವಿತ ಸ್ಪೋಟಕ ಬ್ಯಾಟರ್‌ನನ್ನು ಕೇವಲ ವಾಟರ್‌ಬಾಯ್‌ಗೆ ಸೀಮಿತವಾಗಿಸಿತ್ತು. ಪರಿಣಾಮ ಆರ್‌ಸಿಬಿ ಫ್ರಾಂಚೈಸಿಯು 2023ರ ಐಪಿಎಲ್ ಟೂರ್ನಿಯಲ್ಲಿ ಲೀಗ್ ಹಂತದಲ್ಲಿಯೇ ಹೊರಬಿದ್ದು ಮುಖಭಂಗ ಅನುಭವಿಸಿತ್ತು.
ಬೆಂಗಳೂರಲ್ಲಿ ಟಿ20 ಸರಣಿ ಕ್ಲೀನ್‌ಸ್ವೀಪ್ ಮೇಲೆ ಕಣ್ಣಿಟ್ಟ ಟೀಂ ಇಂಡಿಯಾ
ಇನ್ನು ಕಳೆದ ಡಿಸೆಂಬರ್ 19ರಂದು ದುಬೈನಲ್ಲಿ ನಡೆದ 2024ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಫಿನ್ ಅಲೆನ್ ತಮ್ಮ ಹೆಸರನ್ನು ನೋಂದಾಯಿಸಿದ್ದರು. 75 ಲಕ್ಷ ರುಪಾಯಿ ಮೂಲಬೆಲೆ ಹೊಂದಿದ್ದ ಅಲೆನ್ ಅವರನ್ನು ಆರ್‌ಸಿಬಿ ಸೇರಿದಂತೆ ಯಾವೊಂದು ಫ್ರಾಂಚೈಸಿಯು ತನ್ನ ತೆಕ್ಕೆಗೆ ಸೆಳೆದುಕೊಳ್ಳಲಿ ಮನಸ್ಸು ಮಾಡಲಿಲ್ಲ. ಆದರೆ ಫಿನ್ ಅಲೆನ್, ಇದೀಗ ಪಾಕಿಸ್ತಾನದ ಮಾರಕ ದಾಳಿಯ ಎದುರು ಅವಿಸ್ಮರಣೀಯ ಇನಿಂಗ್ಸ್ ಆಡುವ ಮೂಲಕ ಆರ್‌ಸಿಬಿ ಫ್ರಾಂಚೈಸಿಯು ಮುಟ್ಟಿನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ.
ಫಿನ್ ಅಲೆನ್ ಅವರನ್ನು ಆರ್‌ಸಿಬಿ ತಂಡದಿಂದ ರಿಲೀಸ್ ಮಾಡಿದ್ದು ಸರಿಯೇ ಅಥವಾ ತಪ್ಪೇ ಎನ್ನುವುದನ್ನು ಕಮೆಂಟ್ ಮಾಡಿ.
