ICC: 2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಕನಸಿಗೆ ಬಲ; ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಮರುನೇಮಕ!

Published : Nov 16, 2026, 12:02 PM IST
Jay Shah

ಸಾರಾಂಶ

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷರಾಗಿ ಜಯ್ ಶಾ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಾಲಿಯಲ್ಲಿ ನಡೆದ ಸಭೆಯಲ್ಲಿ ಅವರ ನಾಯಕತ್ವದ ಮೇಲೆ ವಿಶ್ವಾಸ ವ್ಯಕ್ತಪಡಿಸಲಾಗಿದ್ದು, ಕ್ರಿಕೆಟ್‌ನ ಜಾಗತಿಕ ವಿಸ್ತರಣೆಗೆ ಒತ್ತು ನೀಡಲಾಗುವುದು.

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ( ಐಸಿಸಿ) ಅಧ್ಯಕ್ಷ ಸ್ಥಾನಕ್ಕೆ ಎರಡನೇ ಬಾರಿಗೆ ಜಯ್ ಶಾ ಮರು ಆಯ್ಕೆ ಆಗಿದ್ದಾರೆ. ಬಾಲಿಯಲ್ಲಿ ನಡೆದ ಸಭೆಯಲ್ಲಿ, ಎಲ್ಲಾ ನಿರ್ದೇಶಕರು ಸರ್ವಾನುಮತದಿಂದ ಅವರ ಹೆಸರನ್ನು ಪ್ರಸ್ತಾಪಿಸಿದ್ದು, ಎದುರಾಳಿ ಯಾವುದೇ ಅಭ್ಯರ್ಥಿಗಳಿಲ್ಲದ ಕಾರಣ, ಅವರು ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಜಯ್ ಶಾ ಶ್ಲಾಘಿಸಿದ ಐಸಿಸಿ!

ಜಯ್ ಶಾ ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆ ಬಗ್ಗೆ ಐಸಿಸಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹೀಗೆ ಬರೆದಿದೆ, ಬಾಲಿಯಲ್ಲಿ ನಡೆದ ಮಂಡಳಿ ಮತ್ತು ಸಮಿತಿ ಸಭೆಯಲ್ಲಿ ಎಲ್ಲಾ ನಿರ್ದೇಶಕರ ನಿರ್ಣಯದ ನಂತರ, ಜಯ್ ಶಾ ಅವರನ್ನು ಐಸಿಸಿ ಅಧ್ಯಕ್ಷರಾಗಿ ಎರಡನೇ ಅವಧಿಗೆ ವಿರೋಧವಿಲ್ಲದೆ ಮರು ಆಯ್ಕೆ ಮಾಡಲಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮಂಡಳಿ ಘೋಷಿಸಲು ಸಂತೋಷಪಡುತ್ತದೆ. ಈ ನಿರ್ಧಾರವು ಜಯ್ ಶಾ ನಾಯಕತ್ವದ ಮೇಲಿನ ಮಂಡಳಿಯ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಕ್ರಿಕೆಟ್‌ಗೆ ಈ ಸಮಯದಲ್ಲಿ ಈ ಹೆಜ್ಜೆ ನಿರ್ಣಾಯಕವಾಗಿದೆ. ಇದು ಕ್ರೀಡೆಯನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸಲು, ಅಭಿಮಾನಿಗಳ ನೆಲೆ ಹೆಚ್ಚಿಸಲು ಮತ್ತು ಭವಿಷ್ಯದ ಪ್ರಾಜೆಕ್ಟ್‌ಗಳಿಗಾಗಿ ಹೊಸ ಆದಾಯದ ಮೂಲ ತೆರೆಯಲು ಅನುವು ಮಾಡಿಕೊಡುತ್ತದೆ.

ಜೈ ಶಾ ಹೇಳಿದ್ದೇನು?

ಐಸಿಸಿ ಅಧ್ಯಕ್ಷ ಜಯ್ ಶಾ ಈ ಹುದ್ದೆ ಅಲಂಕರಿಸುವುದು ಹೆಮ್ಮೆಯ ವಿಷಯ. ಇದು ನನಗೆ ದೊರೆತ ದೊಡ್ಡ ಜವಾಬ್ದಾರಿ ಎಂದು ಹೇಳಿದ್ದಾರೆ. ವಿಶ್ವಾದ್ಯಂತ ಕ್ರಿಕೆಟ್ ಅನ್ನು ಮುನ್ನಡೆಸಲು ಎಲ್ಲಾ ಸದಸ್ಯರೊಂದಿಗೆ ನಿಕಟವಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಕ್ರಿಕೆಟ್ ಪ್ರಸ್ತುತ ವಿಭಿನ್ನ ಹಂತದ ಮೂಲಕ ಸಾಗುತ್ತಿದೆ. 2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಅದರ ಸೇರ್ಪಡೆ ಹೊಸ ಪ್ರೇಕ್ಷಕರನ್ನು ತಲುಪಲು ಉತ್ತಮ ಅವಕಾಶ ಒದಗಿಸುತ್ತದೆ ಎಂದು ಅವರು ಹೇಳಿದ್ದಾರೆ.ಆಟಗಾರರು, ಅಭಿಮಾನಿಗಳು, ವ್ಯಾಪಾರ ಪಾಲುದಾರರು ಮತ್ತು ಕ್ರೀಡೆಗೆ ಸಂಬಂಧಿಸಿದ ಪ್ರತಿಯೊಬ್ಬರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಪರಿಗಣಿಸಲಾಗಿದೆ ಎಂದು ಶಾ ಪುನರುಚ್ಚರಿಸಿದ್ದಾರೆ.

36 ನೇ ವಯಸ್ಸಿನಲ್ಲಿ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಜಯ್ ಶಾ!

2024 ರಲ್ಲಿ ಮೊದಲ ಬಾರಿಗೆ ಜಯ್ ಶಾ ರನ್ನು ಐಸಿಸಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೇ ಅವರನ್ನು ಬದಲಾಯಿಸಿ, ಕೇವಲ 36 ವರ್ಷ ವಯಸ್ಸಿನಲ್ಲಿ, ಈ ಹುದ್ದೆಯನ್ನು ಅಲಂಕರಿಸಿದ ಅತ್ಯಂತ ಕಿರಿಯ ವ್ಯಕ್ತಿಯಾದರು. ಜಯ್ ಶಾ ಐಸಿಸಿಯ ಮುಖ್ಯಸ್ಥರಾಗಿರುವ ಐದನೇ ಭಾರತೀಯ. ಅವರಿಗೆ ಮೊದಲು, ಜಗಮೋಹನ್ ದಾಲ್ಮಿಯಾ, ಶರದ್ ಪವಾರ್, ಎನ್. ಶ್ರೀನಿವಾಸನ್ ಮತ್ತು ಶಶಾಂಕ್ ಮನೋಹರ್ ಕೂಡ ಈ ಹುದ್ದೆ ಅಲಂಕರಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

2029ರ ಚಾಂಪಿಯನ್ಸ್‌ ಟ್ರೋಫಿಗೆ ಭಾರತ ಆತಿಥ್ಯ; 2031ರ ಏಕದಿನ ವಿಶ್ವಕಪ್‌ ಬಾಂಗ್ಲಾದೇಶ ಜೊತೆ ಆಯೋಜನೆ! 2035ರವರೆಗಿನ ಐಸಿಸಿ ವೇಳಾಪಟ್ಟಿ ಪ್ರಕಟ
Food: ಮೊಸರು ನೀರಾಗುತ್ತಿದೆಯೇ ಅಥವಾ ಹುಳಿಯಾಗುತ್ತಿದೆಯೇ? ಹಾಗಾದ್ರೆ ಹೆಪ್ಪು ಹಾಕುವ ಈ ಪರ್ಫೆಕ್ಟ್ ವಿಧಾನ ಬಳಿಸಿ!