ಯಾರ್ಕರ್ ಸ್ಪೆಷಲಿಸ್ಟ್​ ಜಸ್ಪ್ರೀತ್ ಬುಮ್ರಾ ಕಮ್​ಬ್ಯಾಕ್​ಗೆ ಮುಹೂರ್ತ ಫಿಕ್ಸ್..!

By Suvarna News  |  First Published Jul 11, 2023, 3:08 PM IST

ಗಾಯದ ಸಮಸ್ಯೆಯಿಂದಾಗಿ ಕ್ರಿಕೆಟ್‌ನಿಂದ ದೂರ ಉಳಿದಿರುವ ಜಸ್ಪ್ರೀತ್ ಬುಮ್ರಾ
ಐರ್ಲೆಂಡ್ ಎದುರಿನ ಸರಣಿ ವೇಳೆಗೆ ಬುಮ್ರಾ ಕಮ್‌ಬ್ಯಾಕ್‌
ನಾಯಕನಾಗಿ ತಂಡಕ್ಕೆ ಕಮ್‌ಬ್ಯಾಕ್‌ ಮಾಡಲು ಬುಮ್ರಾ ರೆಡಿ?


ಬೆಂಗಳೂರು(ಜು.11): ಕಳೆದೆರೆಡು ವರ್ಷಗಳಿಂದ ಟೀಂ ಇಂಡಿಯಾಗೆ ಇಂಜುರಿಯದ್ದೇ ದೊಡ್ಡ ಸಮಸ್ಯೆಯಾಗಿದೆ. T20 ವಿಶ್ವಕಪ್​ ಮತ್ತು WTC ಫೈನಲ್​ ವೇಳೆಯು ಇದೇ ಸಮಸ್ಯೆ ತಂಡವನ್ನ ಕಾಡಿತ್ತು. ಈಗ ಏಕದಿನ ವಿಶ್ವಕಪ್ ಟೂರ್ನಿ ಹತ್ತಿರವಾಗ್ತಿದ್ರು ಪ್ರಮುಖ ಆಟಗಾರರಿನ್ನು, ಇಂಜುರಿಯಿಂದ ಚೇತರಿಸಿಕೊಂಡಿಲ್ಲ.  ಆದ್ರೆ, ಯಾರ್ಕರ್ ಸ್ಪೆಷಲಿಸ್ಟ್​ ಜಸ್ಪ್ರೀತ್ ಬುಮ್ರಾ, ಸದ್ಯದಲ್ಲೇ ತಂಡಕ್ಕೆ ವಾಪಸ್ಸಾಗಲಿದ್ದಾರೆ. 

ಇಂಜುರಿಯಿಂದಾಗಿ ಕಳೆದೊಂದು ವರ್ಷದಿಂದ ಜಸ್ಪ್ರೀತ್ ಬುಮ್ರಾ ತಂಡದಿಂದ ಹೊರಗುಳಿದಿದ್ದಾರೆ. ಕಳೆದ ವರ್ಷ ಜೂನ್​ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ್ದ ಏಕದಿನ ಪಂದ್ಯವೇ ಲಾಸ್ಟ್.! ಅದಾದ ನಂತರ ಬುಮ್ರಾ ಮತ್ತೆ ಬಾಲ್​ ಮುಟ್ಟಿಲ್ಲ. ಏಷ್ಯಾಕಪ್, T20 ವಿಶ್ವಕಪ್​ ಟೂರ್ನಿಗಳಲ್ಲಿ ಬುಮ್ರಾ ಅಲಭ್ಯತೆ ತಂಡಕ್ಕೆ ಕಾಡಿತ್ತು. ಆದ್ರೀಗ, ಬುಮ್ರಾ ಕಮ್​ಬ್ಯಾಕ್​ಗೆ ಮುಹೂರ್ತ ನಿಗದಿಯಾಗಿದೆ. 

Latest Videos

undefined

ಕಮ್​ಬ್ಯಾಕ್ ಸರಣಿಯಲ್ಲೇ ಬುಮ್ರಾಗೆ ನಾಯಕನ ಪಟ್ಟ..!

ಯೆಸ್, ಇಂಜುರಿಯಿಂದ ಬುಮ್ರಾ ಸಂಪೂರ್ಣ ಚೇತರಿಸಿಕೊಂಡಿದ್ದಾರೆ.  ಐರ್ಲೆಂಡ್ ವಿರುದ್ಧದ T20 ಸರಣಿ ವೇಳೆ ತಂಡಕ್ಕೆ ಕಮ್​ಬ್ಯಾಕ್ ಮಾಡಲಿದ್ದಾರೆ. ಅಲ್ಲದೇ, ಕಮ್​ಬ್ಯಾಕ್ ಸರಣಿಯಲ್ಲೇ  ಬುಮ್ರಾಗೆ ನಾಯಕನ ಪಟ್ಟ ಕಟ್ಟಲು BCCI ಯೋಚಿಸ್ತಿದೆ. ವೆಸ್ಟ್​ ಇಂಡೀಸ್​ ವಿರುದ್ಧದ T20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಯುವಪಡೆಯನ್ನ ಮುನ್ನಡೆಸಲಿದ್ದಾರೆ. ಈ ಸರಣಿ ಮುಗಿದ ಕೆಲವೇ ದಿನಗಳಲ್ಲಿ ಟೀಂ ಇಂಡಿಯಾ ಐರ್ಲೆಂಡ್​ ವಿರುದ್ಧ T20 ಸರಣಿ ಆಡಲಿದೆ. ಇದಾದ ಕೆಲವೇ ದಿನಗಳಲ್ಲಿ ಏಷ್ಯಾಕಪ್ ಆರಂಭವಾಗಲಿದೆ. 

ಇನ್ನೂ ಒಂದು ವರ್ಷ ಕ್ರಿಕೆಟ್​ನಿಂದ ರಿಷಭ್‌ ಪಂತ್ ದೂರ..! ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾಗೆ ಶಾಕ್..!

ವರ್ಕ್​ಲೋಡ್ ಕಡಿಮೆ ಮಾಡೋ ಉದ್ದೇಶದಿಂದ ಹಾರ್ದಿಕ್ ಪಾಂಡ್ಯಗೆ ಐರ್ಲೆಂಡ್​ ಸರಣಿಯಿಂದ ರೆಸ್ಟ್ ನೀಡುವ ಸಾಧ್ಯತೆ ಇದೆ. ಇದರಿಂದ ಬುಮ್ರಾ ನಾಯಕತ್ವದಲ್ಲಿ IPLನಲ್ಲಿ ಮಿಂಚಿದ ಯುವ ಆಟಗಾರರಿಗೆ ಚಾನ್ಸ್ ನೀಡುವ ಪ್ಲಾನ್ BCCIನದ್ದಾಗಿದೆ. ಮತ್ತೊಂದೆಡೆ ಏಷ್ಯಾಕಪ್​ ಮತ್ತು ಏಕದಿನ ವಿಶ್ವಕಪ್​ ದೃಷ್ಟಿಯಿಂದ ಬುಮ್ರಾ ಫಿಟ್​ನೆಸ್ ಟೀಂ ಇಂಡಿಯಾಗೆ ತುಂಬಾನೇ ಅಗತ್ಯವಾಗಿದೆ. ಇದಕ್ಕಾಗಿ ಐರ್ಲೆಂಡ್​ ಸರಣಿಯಲ್ಲಿ ಬುಮ್ರಾರನ್ನ ಕಣಕ್ಕಿಳಿಸಲಾಗುತ್ತಿದೆ. 

ಐಪಿಎಲ್ ಸ್ಟಾರ್​ಗಳಿಗೆ ಸಿಗಲಿದ್ಯಾ ಐರ್ಲೆಂಡ್ ಟಿಕೆಟ್..?

ಯೆಸ್, ವೆಸ್ಟ್ ಇಂಡೀಸ್ ವಿರುದ್ಧದ T20 ಸರಣಿಯಲ್ಲೇ ರಿಂಕು ಸಿಂಗ್​ಗೆ ಚಾನ್ಸ್ ಸಿಗುತ್ತೆ ಅಂತ ಹೇಳಲಾಗಿತ್ತು. ಆದ್ರೆ, ರಿಂಕುಗೆ ವಿಂಡೀಸ್ ಫ್ಲೈಟ್ ಟಿಕೆಟ್ ಮಿಸ್ ಆಗಿದೆ. ಇದರಿಂದ ಐರ್ಲೆಂಡ್​ಗೆ ರಿಂಕುರನ್ನ ಕಳಿಸಿಸಲು ಬಿಸಿಸಿಐ ಮುಂದಾಗಿದೆ. ರಿಂಕು ಸಿಂಗ್‌ ಜೊತೆಗೆ ರಾಹುಲ್​ ತ್ರಿಪಾಠಿ, ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ವರುಣ್ ಚಕ್ರವರ್ತಿ, ಸುಯಶ್ ಶರ್ಮಗೂ ತಂಡದಲ್ಲಿ ಅವಕಾಶ ಸಿಗಲಿದೆ ಅನ್ನೋ ಮಾತುಗಳು ಕೇಳಿ ಬರ್ತಿವೆ. 

ODI World Cup 2023: ಈಡನ್‌ ಗಾರ್ಡನ್ಸ್‌ ಪಂದ್ಯಗಳ ಟಿಕೆಟ್‌ ಬೆಲೆ ಪ್ರಕಟ..! IPL ಗಿಂತ ವಿಶ್ವಕಪ್ ಟಿಕೆಟ್ ಚೀಪ್

ಒಟ್ಟಿನಲ್ಲಿ  ಐರ್ಲೆಂಡ್ ವಿರುದ್ಧ ಬುಮ್ರಾ ಟೀಂ ಇಂಡಿಯಾಗೆ ರೀ ಎಂಟ್ರಿ ನೀಡಲಿದ್ದಾರೆ. ಆದ್ರೆ, ಐರೀಶ್ ನೆಲದಲ್ಲಿ ಬುಮ್ರಾ ಮೊದಲಿನಂತೆ ಅಬ್ಬರಿಸ್ತಾರಾ..? ಹಳೆಯ ಖದರ್​ ತೋರಿಸ್ತಾರಾ ಅನ್ನೋದನ್ನ ಕಾದು ನೋಡ್ಬೇಕಿದೆ.

click me!