ಜಸ್ಪ್ರೀತ್ ಬುಮ್ರಾ ಬೆಂಕಿ ಬೌಲಿಂಗ್, ಕೇಪ್‌ಟೌನ್ ಟೆಸ್ಟ್‌ ಗೆಲ್ಲಲು ಭಾರತಕ್ಕೆ ಕೇವಲ 79 ರನ್‌ ಗುರಿ

Published : Jan 04, 2024, 03:31 PM ISTUpdated : Jan 04, 2024, 03:36 PM IST
ಜಸ್ಪ್ರೀತ್ ಬುಮ್ರಾ ಬೆಂಕಿ ಬೌಲಿಂಗ್, ಕೇಪ್‌ಟೌನ್ ಟೆಸ್ಟ್‌ ಗೆಲ್ಲಲು ಭಾರತಕ್ಕೆ ಕೇವಲ 79 ರನ್‌ ಗುರಿ

ಸಾರಾಂಶ

ಅನಿರೀಕ್ಷಿತ ಬೌನ್ಸ್ ಹಾಗೂ ಸೀಮ್ ಮೂವ್‌ಮೆಂಟ್ ಇರುವ ಪಿಚ್‌ನಲ್ಲಿ ಮೊದಲ ದಿನವೇ ದಾಖಲೆಯ 23 ವಿಕೆಟ್‌ಗಳು ಪತನವಾಗಿದ್ದವು. ಮೊದಲ ದಿನದಾಟದಂತ್ಯದ ವೇಳೆಗೆ ಎರಡನೇ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು 3 ವಿಕೆಟ್ ಕಳೆದುಕೊಂಡು 62 ರನ್ ಬಾರಿಸಿತ್ತು.

ಕೇಪ್‌ಟೌನ್(ಜ.04): ಏಯ್ಡನ್ ಮಾರ್ಕ್‌ರಮ್ ಸ್ಪೋಟಕ ಶತಕದ ಹೊರತಾಗಿಯೂ ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಕರಾರುವಕ್ಕಾದ ದಾಳಿಗೆ ತತ್ತರಿಸಿದ ಆತಿಥೇಯ ದಕ್ಷಿಣ ಆಫ್ರಿಕಾ ತಂಡವು ಎರಡನೇ ಇನಿಂಗ್ಸ್‌ನಲ್ಲಿ ಕೇವಲ 176 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಕೇಪ್‌ಟೌನ್ ಟೆಸ್ಟ್ ಪಂದ್ಯ ಗೆದ್ದು ಸರಣಿ ಸಮಬಲ ಸಾಧಿಸಲು ಭಾರತಕ್ಕೆ ಕೇವಲ 79 ರನ್ ಗುರಿ ಸಿಕ್ಕಿದೆ. 

ಅನಿರೀಕ್ಷಿತ ಬೌನ್ಸ್ ಹಾಗೂ ಸೀಮ್ ಮೂವ್‌ಮೆಂಟ್ ಇರುವ ಪಿಚ್‌ನಲ್ಲಿ ಮೊದಲ ದಿನವೇ ದಾಖಲೆಯ 23 ವಿಕೆಟ್‌ಗಳು ಪತನವಾಗಿದ್ದವು. ಮೊದಲ ದಿನದಾಟದಂತ್ಯದ ವೇಳೆಗೆ ಎರಡನೇ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು 3 ವಿಕೆಟ್ ಕಳೆದುಕೊಂಡು 62 ರನ್ ಬಾರಿಸಿತ್ತು. ಈ ಮೂಲಕ 36 ರನ್ ಹಿನ್ನಡೆಯಲಿತ್ತು. ಎರಡನೇ ದಿನದಾಟದ ಆರಂಭದಲ್ಲೇ ವೇಗಿ ಜಸ್ಪ್ರೀತ್ ಬುಮ್ರಾ ಬಿರುಗಾಳಿಯಂತಹ ದಾಳಿ ನಡೆಸುವ ಮೂಲಕ ಹರಿಣಗಳ ಬ್ಯಾಟಿಂಗ್ ಪಡೆ ಪೆವಿಲಿಯನ್ ಪೆರೇಡ್ ನಡೆಸುವಂತೆ ಮಾಡಿದರು.

ICC ವರ್ಷದ ಟಿ20 ಕ್ರಿಕೆಟಿಗ ರೇಸ್‌ನಲ್ಲಿ ಸೂರ್ಯಕುಮಾರ್ ಯಾದವ್..!

ಬುಮ್ರಾಗೆ 5 ವಿಕೆಟ್ ಗೊಂಚಲು: ಎರಡನೇ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡವು ತನ್ನ ಖಾತೆಗೆ ಎರಡು ರನ್ ಸೇರಿಸುವಷ್ಟರಲ್ಲಿ ಡೇವಿಡ್  ಬೆಡಿಂಗ್‌ಹ್ಯಾಮ್‌ ವಿಕೆಟ್ ಕಳೆದುಕೊಂಡಿತು. ಇನ್ನು ಇದರ ಬೆನ್ನಲ್ಲೇ ವಿಕೆಟ್ ಕೀಪರ್ ಬ್ಯಾಟರ್ ಕೈಲ್ ವೆರೈನ್‌(09) ಕೂಡಾ ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಸೇರಿದರು. ಬೌಲಿಂಗ್ ಆಲ್ರೌಂಡರ್‌ಗಳಾದ ಮಾರ್ಕೊ ಯಾನ್ಸೆನ್ ಹಾಗೂ ಕೇಶವ್ ಮಹಾರಾಜ್ ಅವರನ್ನು ಬಲಿ ಪಡೆಯುವ ಮೂಲಕ ಟೆಸ್ಟ್ ವೃತ್ತಿಜೀವನದಲ್ಲಿ 9ನೇ ಬಾರಿಗೆ 5 ವಿಕೆಟ್ ಗೊಂಚಲು ಪಡೆಯುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಬುಮ್ರಾ 61 ರನ್ ನೀಡಿ 6 ವಿಕೆಟ್ ಪಡೆದರು.

Cape Town Test 23 ವಿಕೆಟ್‌ ಪತನದೊಂದಿಗೆ 2024 ಆರಂಭ: ಸಚಿನ್‌ ತೆಂಡುಲ್ಕರ್ ಟ್ವೀಟ್ ವೈರಲ್

ಏಯ್ಡನ್ ಮಾರ್ಕ್‌ರಮ್ ಆಕರ್ಷಕ ಶತಕ: ಒಂದು ಕಡೆ ಬುಮ್ರಾ ಬೌಲಿಂಗ್‌ನಲ್ಲಿ ಬ್ಯಾಟಿಂಗ್‌ನಲ್ಲಿ ವಿಕೆಟ್ ಒಪ್ಪಿಸುತ್ತಾ ಪೆವಿಲಿಯನ್ ಪೆರೇಡ್ ನಡೆಸುತ್ತಿದ್ದರೆ, ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಏಯ್ಡನ್ ಮಾರ್ಕ್‌ರಮ್ ಆಕರ್ಷಕ ಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. ಕೇವಲ 99 ಎಸೆತಗಳನ್ನು ಎದುರಿಸಿ ಭಾರತ ಎದುರು ಚೊಚ್ಚಲ ಟೆಸ್ಟ್ ಶತಕ ಸಿಡಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಮಾರ್ಕ್‌ರಮ್ 103 ಎಸೆತಗಳನ್ನು ಎದುರಿಸಿ 17 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 106 ರನ್ ಬಾರಿಸಿ ಮೊಹಮ್ಮದ್ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು.

ಭಾರತ ಪರ ಎರಡನೇ ಇನಿಂಗ್ಸ್‌ನಲ್ಲಿ ಜಸ್ಪ್ರೀತ್ ಬುಮ್ರಾ 6 ವಿಕೆಟ್ ಪಡೆದರೆ, ಮುಕೇಶ್ ಕುಮಾರ್ 2, ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣ 1 ವಿಕೆಟ್ ಪಡೆದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಿನಿ ಹರಾಜಿನ ಬೆನ್ನಲ್ಲೇ KKR ತಂಡಕ್ಕೆ ಬಿಗ್ ಶಾಕ್! ₹9.2 ಕೋಟಿ ನೀಡಿ ಖರೀದಿಸಿದ ಈ ಸ್ಟಾರ್ ಕ್ರಿಕೆಟಿಗ ಐಪಿಎಲ್ ಆಡೋದೇ ಡೌಟ್!
ಟಿ20 ರ್‍ಯಾಂಕಿಂಗ್‌ನಲ್ಲಿ ಬುಮ್ರಾ ದಾಖಲೆ ಧೂಳೀಪಟ; ವರುಣ್ ಚಕ್ರವರ್ತಿ ಹೊಸ ದಾಖಲೆ