IPL ಅಂದ್ರೆ ಇಂಗ್ಲೆಂಡ್ ಆಟಗಾರರಿಗೆ ಲೆಕ್ಕಕ್ಕಿಲ್ವಾ..? ಫ್ರಾಂಚೈಸಿಗಳ ಚಿಂತೆ ಹೆಚ್ಚಿಸಿದ ಆಂಗ್ಲ ಕ್ರಿಕೆಟರ್ಸ್..!

By Suvarna NewsFirst Published Mar 15, 2024, 1:39 PM IST
Highlights

17ನೇ ಆವೃತ್ತಿಯ ಐಪಿಎಲ್ ಆರಂಭಕ್ಕಿನ್ನು ಕೇವಲ 8 ದಿನ ಮಾತ್ರ ಬಾಕಿ ಉಳಿದಿದೆ. ಮಾರ್ಚ್ 22 ರಂದು ಡಿಫೆಂಡಿಂಗ್ ಚಾಂಪಿಯನ್ CSK ಮತ್ತು RCB ನಡುವೆ ಮೊದಲ ಪಂದ್ಯ ನಡೆಯಲಿದೆ. ಆದ್ರೆ, ಈ ನಡುವೆ ಲೀಗ್ ಹತ್ತಿರವಾಗ್ತಿದ್ದಂತೆ ಇಂಗ್ಲೆಂಡ್ ಕ್ರಿಕೆಟರ್ಸ್ ಫ್ರಾಂಚೈಸಿಗಳ ಚಿಂತೆ ಹೆಚ್ಚಿಸಿದ್ದಾರೆ.

ಬೆಂಗಳೂರು(ಮಾ.15): ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17ರ ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಇನ್ನೊಂದು ವಾರದಲ್ಲಿ ಕಲರ್ಫುಲ್ ಲೀಗ್‌ಗೆ ಕಿಕ್‌ಸ್ಟಾರ್ಟ್ ಸಿಗಲಿದೆ. ಆದ್ರೆ, ಈ ನಡುವೆ ವಿವಿಧ ತಂಡಗಳ ಮ್ಯಾನೇಜ್‌ಮೆಂಟ್, ಫ್ರಾಂಚೈಸಿಗಳಿಗೆ ಹೊಸ ಚಿಂತೆ ಶುರುವಾಗಿದೆ. ಏನದು ಚಿಂತೆ ಅಂತೀರಾ..? ಈ ಸ್ಟೋರಿ ನೋಡಿ.

ಟೂರ್ನಿ ಹತ್ತಿರವಾಗ್ತಿದ್ದಂತೆ ಇಂಗ್ಲೆಂಡ್ ಆಟಗಾರರು ಜೂಟ್ ಹೇಳ್ತಾರೆ ..!

17ನೇ ಆವೃತ್ತಿಯ ಐಪಿಎಲ್ ಆರಂಭಕ್ಕಿನ್ನು ಕೇವಲ 8 ದಿನ ಮಾತ್ರ ಬಾಕಿ ಉಳಿದಿದೆ. ಮಾರ್ಚ್ 22 ರಂದು ಡಿಫೆಂಡಿಂಗ್ ಚಾಂಪಿಯನ್ CSK ಮತ್ತು RCB ನಡುವೆ ಮೊದಲ ಪಂದ್ಯ ನಡೆಯಲಿದೆ. ಆದ್ರೆ, ಈ ನಡುವೆ ಲೀಗ್ ಹತ್ತಿರವಾಗ್ತಿದ್ದಂತೆ ಇಂಗ್ಲೆಂಡ್ ಕ್ರಿಕೆಟರ್ಸ್ ಫ್ರಾಂಚೈಸಿಗಳ ಚಿಂತೆ ಹೆಚ್ಚಿಸಿದ್ದಾರೆ. ಯಾಕಂದ್ರೆ, IPL ಆಡೋದಕ್ಕೆ ಹೆಸರು  ರಿಜಿಸ್ಟರ್ ಮಾಡಿಸೋದು, ಹರಾಜಿನಲ್ಲಿ ಕೋಟಿ ಕೋಟಿ ರೂಪಾಯಿಗೆ ಸೇಲ್ ಆಗೋದು. ಸರಿಯಾಗಿ ಟೂರ್ನಿ ಆರಂಭವಾಗೋ ಹೊತ್ತಿಗೆ ಜೂಟ್ ಹೇಳೋದು ಆಂಗ್ಲ ಪ್ಲೇಯರ್ಸ್‌ಗೆ ಅಭ್ಯಾಸವಾಗಿ ಹೋಗಿದೆ.

IPL 2024: ಈ ಸಲ ಕಪ್ ಗೆಲ್ಲಬೇಕಿದ್ದರೆ RCB ಈ 5 ಕೆಲಸ ಮಾಡಲೇಬೇಕು..! 

IPL ಸೀಸನ್ 17 ಶುರುವಾಗೋದಕ್ಕೆ ಮೊದಲೇ ಕೆಲ ಇಂಗ್ಲೀಷ್ ಆಟಗಾರರು ಲೀಗ್‌ನಿಂದ ಹಿಂದೆ ಸರಿದಿದ್ದಾರೆ. ವೈಯಕ್ತಿಕ ಕಾರಣ, ವರ್ಕ್‌ಲೋಡ್ ಮ್ಯಾನೇಜ್ಮೆಂಟ್ ಅಂತ ಟೂರ್ನಿಗೆ ಚಕ್ಕರ್ ಕೊಡ್ತಿದ್ದಾರೆ. 

ಆಂಗ್ಲ ಕ್ರಿಕೆಟರ್ಸ್‌ನದ್ದು ಪ್ರತಿವರ್ಷ ಇದೇ ಕಥೆ..!

ಕಳೆದ ಸೀಸನ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದ ಜೇಸನ್ ರಾಯ್, ಈ ಬಾರಿ ಆಡ್ತಿಲ್ಲ. ವೈಯಕ್ತಿಕ ಕಾರಣ ನೀಡಿ ಟೂರ್ನಿಯಿಂದ ಔಟಾಗಿದ್ದಾರೆ. ಅವರ ಸ್ಥಾನದಲ್ಲಿ ಮತ್ತೊಬ್ಬ ಇಂಗ್ಲೆಂಡ್ ಆಟಗಾರ ಫಿಲ್ ಸಾಲ್ಟ್ KKR ತಂಡ ಸೇರಿಕೊಂಡಿದ್ದಾರೆ. ಜೇಸನ್ ರಾಯ್ 2020 ಮತ್ತು 2022 ರ ಸೀಸನ್‌ ಆರಂಭಕ್ಕೂ ಮುನ್ನ ಇದೇ ರೀತಿ ಟೂರ್ನಿಯಿಂದ ಹೊರನಡೆದಿದ್ರು. 

ವೇಗಿ ಗಸ್ ಅಟ್ಕಿನ್ಸನ್ ಕೂಡ KKR ತಂಡ ಪರ ಆಡಬೇಕಿತ್ತು. ಆದ್ರೆ, ವರ್ಕ್‌ಲೋಡ್ ಕಾರಣ ನೀಡಿ, IPLನಿಂದ ದೂರವಾಗಿದ್ದಾರೆ. ಇದ್ರಿಂದ ಶ್ರೀಲಂಕಾದ ದುಷ್ಮಂತ ಚಮಿರಾಗೆ ನೈಟ್‌ರಥಡರ್ಸ್ ತಂಡದಲ್ಲಿ ಸ್ಥಾನ ಸಿಕ್ಕಿದೆ. ಮಾರ್ಕ್‌ ವುಡ್ ಕಥೆಯೂ ಸೇಮ್. 2023ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿದ್ದ  ಮಾರ್ಕ್‌ ವುಡ್, ಈ ಸೀಸನ್ನಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ವಿಂಡೀಸ್ ಯುವ ವೇಗಿ ಷಮಾರ್ ಜೋಸೆಫ್ ಲಕ್ನೊ ತಂಡಕ್ಕೆ ಎಂಟ್ರಿ ನೀಡಿದ್ದಾರೆ. 

ಈ ಸಲವೂ ಆರ್‌ಸಿಬಿ ಪಂದ್ಯಗಳ ಟಿಕೆಟ್‌ ದುಬಾರಿ: ಬೆಂಗಳೂರು ಫ್ಯಾನ್ಸ್ ಕಂಗಾಲು..!

ಇನ್ನು ಡ್ಯಾಶಿಂಗ್ ಓಪನರ್ ಹ್ಯಾರಿ ಬ್ರೂಕ್ ಪರ್ಸನಲ್ ರೀಸನ್ಗಳಿಂದ ಲೀಗ್ನಿಂದ ಹೊರಗುಳಿಯೋ ನಿರ್ಧಾರ ಮಾಡಿದ್ದಾರೆ. IPL ಸೀಸನ್ 16ಕ್ಕೂ ಮುನ್ನ ನಡೆದ ಆಕ್ಷನ್ನಲ್ಲಿ ಸನ್ರೈಸರ್ಸ್ ಹೈದ್ರಾಬಾದ್ 13 ಕೋಟಿ ನೀಡಿ ಬ್ರೂಕ್ರನ್ನ ಖರೀದಿಸಿತ್ತು. ಆದ್ರೆ, ಪಡೆದ ಕಾಸಿಗೆ ತಕ್ಕ ಪ್ರದರ್ಶನ ನೀಡದೇ ಇದ್ದರಿಂದ  ಈ ವರ್ಷ ತಂಡದಿಂದ ಬಿಡುಗಡೆ ಮಾಡಿತ್ತು. ಕಳೆದ ಡಿಸೆಂಬರ್ನಲ್ಲಿ ನಡೆದ ಮಿನಿ ಆಕ್ಷನ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 4 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು.  

ಕಳೆದ ವರ್ಷವೇ IPLಗೆ ಎಂಟ್ರಿ ನೀಡಿದ್ದ ಜೋ ರೂಟ್, ಈ ವರ್ಷ IPLಆಡೋದಿಲ್ಲ ಅಂತ ಹೇಳಿದ್ದಾರೆ. ಒಟ್ಟಿನಲ್ಲಿ ಇಂಗ್ಲೆಂಡ್ ಆಟಗಾರರದ್ದು ಪ್ರತಿವರ್ಷ ಇದೇ ಕಥೆಯಾಗಿದೆ. ಇದೊಂಥರ ಬೆಕ್ಕಿಗೆ  ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಎನ್ನುವಂತಾಗಿದೆ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್

click me!