
ನವದೆಹಲಿ(ಮಾ.15): 2ನೇ ಆವೃತ್ತಿ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ನ ನಾಕೌಟ್ ಹಂತಕ್ಕೆ ವೇದಿಕೆ ಸಜ್ಜುಗೊಂಡಿದ್ದು, ಶುಕ್ರವಾರ ನಡೆಯಲಿರುವ ಎಲಿಮಿನೇಟರ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಹಾಗೂ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಆರ್‌ಸಿಬಿ ಡಬ್ಲ್ಯುಪಿಎಲ್‌ನಲ್ಲಿ ಮೊದಲ ಬಾರಿ ನಾಕೌಟ್‌ಗೇರಿದ್ದು, ಚೊಚ್ಚಲ ಫೈನಲ್ ಮೇಲೆ ಕಣ್ಣಿಟ್ಟಿದೆ. ಅತ್ತ ಮುಂಬೈ ಸತತ 2ನೇ ಬಾರಿ ಪ್ರಶಸ್ತಿ ಸುತ್ತಿಗೇರುವ ನಿರೀಕ್ಷೆಯಲ್ಲಿದೆ. ಗೆಲ್ಲುವ ತಂಡ ನೇರವಾಗಿ ಫೈನಲ್‌ಗೇರಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭಾನುವಾರ ಪ್ರಶಸ್ತಿಗಾಗಿ ಸೆಣಸಾಡಲಿದೆ.
ನಮಗೆ 3 ಸ್ಟೇಡಿಯಂ ನಿರ್ವಹಿಸಲು ಆಗಲ್ಲ, ಧರ್ಮಶಾಲಾದಂತ ಸ್ಟೇಡಿಯಂ ನಿರ್ಮಾಣ ಕನಸಷ್ಟೇ: ವಾಸೀಂ ಅಕ್ರಂ
ಸ್ಮೃತಿ ಮಂಧನಾ ನಾಯಕತ್ವದ ಆರ್‌ಸಿಬಿ ಈ ಬಾರಿ ಸಾಧಾರಣ ಪ್ರದರ್ಶನ ತೋರಿದ್ದು, 8 ಪಂದ್ಯಗಳಲ್ಲಿ ತಲಾ 4 ಗೆಲುವು, 4 ಸೋಲು ಕಂಡು ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿತ್ತು. ಅತ್ತ ಹರ್ಮನ್‌ಪ್ರೀತ್ ಪಡೆ ಆಡಿದ 8 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿ 2ನೇ ಸ್ಥಾನಿಯಾಗಿದೆ. ಉಭಯ ತಂಡಗಳು ಲೀಗ್ ಹಂತದಲ್ಲಿ 2 ಬಾರಿ ಮುಖಾಮುಖಿಯಾಗಿದ್ದು, ಬೆಂಗಳೂರಿನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಆರ್‌ಸಿಬಿಗೆ 7 ವಿಕೆಟ್ ಸೋಲು ಎದುರಾಗಿತ್ತು. ಆದರೆ 2ನೇ ಪಂದ್ಯದಲ್ಲಿ ಸೇರುಡ ತೀರಿಸಿಕೊಂಡ ಆರ್‌ಸಿಬಿ, ಮುಂಬೈಯನ್ನು 7 ವಿಕೆಟ್‌ಗಳಿಂದ ಮಣಿಸಿ ನಾಕೌಟ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿದೆ.
ಪಂದ್ಯ: ರಾತ್ರಿ 7.30ಕ್ಕೆ,
ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೋ ಸಿನಿಮಾ
ಟಿ20 ವಿಶ್ವಕಪ್ ಸಮರಕ್ಕೆ ವಿರಾಟ್ ಕೊಹ್ಲಿ ಬೇಡ್ವಾ..? ರನ್ ಮಷಿನ್ ಪಾಲಿಗೆ ವಿಲನ್ ಆಗಿರೋದ್ಯಾರು..?
05ನೇ ಮುಖಾಮುಖಿ
ಆರ್‌ಸಿಬಿ-ಮುಂಬೈ ನಡುವೆ ಡಬ್ಲ್ಯುಪಿಎಲ್‌ನಲ್ಲಿದು 5ನೇ ಮುಖಾಮುಖಿ. ಮೊದಲ 4 ಪಂದ್ಯಗಳಲ್ಲಿ ಮುಂಬೈ 3 ಬಾರಿ, ಆರ್‌ಸಿಬಿ 1 ಬಾರಿ ಗೆದ್ದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.