ODI ಪಂದ್ಯಕ್ಕೂ ಮೊದಲು ಕೊಹ್ಲಿ ಕುರಿತ ರಹಸ್ಯವನ್ನ ಬಹಿರಂಗಪಡಿಸಿದ RCB ಸ್ಟಾರ್ ಡಫಿ

Published : Nov 01, 2026, 09:30 PM IST
Jacob Duffy Meets And Praises Virat Kohli

ಸಾರಾಂಶ

ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯನ್ನು ಗೆದ್ದಿದ್ದು, ನವೆಂಬರ್ 4ರಿಂದ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿಗಾಗಿ ವಿರಾಟ್ ಕೊಹ್ಲಿ ಅಭ್ಯಾಸ ಆರಂಭಿಸಿದ್ದು, ಕಿವೀಸ್ ವೇಗಿ ಜಾಕೋಬ್ ಡಫಿ ಕೊಹ್ಲಿಯ ಸರಳತೆಯನ್ನು ಕೊಂಡಾಡಿದ್ದಾರೆ. ಮೊದಲ ಮೂರು ಪಂದ್ಯಗಳಿಗೆ ಶುಭಮನ್ ಗಿಲ್ ಮತ್ತು ಉಳಿದ ಪಂದ್ಯಗಳಿಗೆ ಶ್ರೇಯಸ್ ಅಯ್ಯರ್ ನಾಯಕರಾಗಲಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಮುಕ್ತಾಯಗೊಂಡಿದ್ದು, ಭಾರತ ತಂಡವು 3-2 ಅಂತರದಿಂದ ಸರಣಿ ಗೆದ್ದುಕೊಂಡಿದೆ. ಇದೀಗ ನವೆಂಬರ್ 4ರಿಂದ ಆರಂಭವಾಗುವ ಏಕದಿನ ಪಂದ್ಯಗಳಿಗಾಗಿ ಎದುರು ನೋಡುತ್ತಿದೆ. ಏಕದಿನ ಸರಣಿಗೆ ತಂಡಕ್ಕೆ ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಬಲ ಹೆಚ್ಚಿಸಿದ್ದಾರೆ!

ಕೊಹ್ಲಿ ಭೇಟಿ ರಹಸ್ಯ ರಿವೀಲ್

ಪಂದ್ಯಕ್ಕಾಗಿ ಎರಡೂ ತಂಡಗಳು ಮೈದಾನದಲ್ಲಿ ಬೆವರು ಇಳಿಸುತ್ತಿದ್ದಾರೆ. ಈ ಮಧ್ಯೆ ಆರ್‍‌ಸಿಬಿ ವೇಗಿ ಜಾಕೋಬ್ ಡಫಿ, ಕೊಹ್ಲಿ ಕುರಿತ ಸ್ಫೋಟಕ ಹೇಳಿಕೆ ಒಂದನ್ನು ನೀಡಿದ್ದಾರೆ. ನಿನ್ನೆ ಕೊಹ್ಲಿಯನ್ನ ಭೇಟಿಯಾಗುವ ಅವಕಾಶ ಸಿಕ್ಕಿತು. ಅವರು ಜಿಮ್‌ನಲ್ಲಿದ್ದರು. ಅವರ ಭೇಟಿಯಿಂದು ತುಂಬಾ ಖುಷಿ ಆಯಿತು. ಅವರು ಇಲ್ಲಿಗೆ ಬಂದಿರೋದು ತುಂಬಾ ಸಂತೋಷ ಆಗಿದೆ ಎಂದಿದ್ದಾರೆ.

ಐಪಿಎಲ್‌ನಲ್ಲಿ ಡಫಿ ಅವರು ಕೊಹ್ಲಿ ಜೊತೆ ಡ್ರೆಸ್ಸಿಂಗ್ ರೂಮ್ ಶೇರ್ ಮಾಡುತ್ತಾರೆ. ಇದೇ ಕಾರಣಕ್ಕೆ ಕೊಹ್ಲಿ ಮೇಲೆ ವಿಶೇಷ ಗೌರವ ಹೊಂದಿದ್ದಾರೆ. ತಮ್ಮ ಹೇಳಿಕೆಯಲ್ಲಿ ಕೊಹ್ಲಿ ಅವರ ಸರಳತೆ, ವ್ಯಕ್ತಿತ್ವದ ಬಗ್ಗೆ ಕೊಂಡಾಡಿದ್ದಾರೆ. ಅವರು ಸ್ಟಾರ್ ಆಟಗಾರನಾಗಿದ್ದೂ, ತುಂಬಾ ಸರಳ ಜೀವಿ. ಅವರನ್ನು ನ್ಯೂಜಿಲೆಂಡ್ ನೆಲದಲ್ಲಿ ಎದುರಿಸುವುದು ಖುಷಿ ನೀಡಲಿದೆ. ಕೊಹ್ಲಿ ಸೂಪರ್‌ಸ್ಟಾರ್ ಆಗಿದ್ದರೂ ವಿದೇಶಿ ಆಟಗಾರರನ್ನು ಆರಾಮದಾಯಕವಾಗಿಸಲು ತನ್ನ ಕೈಲಾದಷ್ಟು ಪ್ರಯತ್ನಿಸುತ್ತಾರೆ ಎಂದು ಐಪಿಎಲ್‌ ವೇಳೆ ನೀಡಿದ ಸಹಕಾರದ ಬಗ್ಗೆ ಡಫಿ ಮಾತನ್ನಾಡಿದ್ದಾರೆ.

ಏಕದಿನ ಸರಣಿ ಆಡುವ ಉದ್ದೇಶದಿಂದ ಕೊಹ್ಲಿ ಅವರು ನ್ಯೂಜಿಲೆಂಡ್‌ನ ಆಕ್ಲೆಂಡ್ ತಲುಪಿದ್ದಾರೆ. ಅಭ್ಯಾಸದಲ್ಲಿ ತೊಡಗಿದ್ದು, ನೆಟ್ಸ್‌ನಲ್ಲಿ ಬೆವರು ಸುರಿಸುತ್ತಿರುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೊಹ್ಲಿ ಅಭ್ಯಾಸದ ದೃಶ್ಯಗಳು ಎದುರಾಳಿ ಬೌಲರ್‍‌ಗಳಿಗೆ ನಡುಕ ಹುಟ್ಟಿಸುವಂತಿದೆ. ಇನ್ನು ವಿರಾಟ್ ಕೊಹ್ಲಿ ಅವರಿಗೆ ಮುಂಬರುವ ವಿಶ್ವಕಪ್ ದೃಷ್ಟಿಯಿಂದ ನ್ಯೂಜಿಲೆಂಡ್ ವಿರುದ್ಧದ ಸರಣಿ ತುಂಬಾನೇ ಮುಖ್ಯವಾಗಿದೆ. ಟೀಂ ಇಂಡಿಯಾಗೆ ವಿಶ್ವಕಪ್ ಗೆಲ್ಲಿಸಿಕೊಟ್ಟೇ ಏಕದಿನ ಪಂದ್ಯಗಳಿಗೆ ಗುಡ್‌ಬೈ ಹೇಳುವುದು ಕೊಹ್ಲಿ ಕನಸು. ವಿರಾಟ್ ಅವರ ಕನಸು ಈಡೇರಬೇಕು ಅಂದ್ರೆ ಅವರು ಅತ್ಯುತ್ತಮವಾಗಿ ಆಡುತ್ತಿರಬೇಕು. ಜೊತೆಗೆ ಫಿಟ್ನೆಸ್ ಸದಾ ಕಾಲ ಕಾಪಾಡಿಕೊಳ್ಳಬೇಕಾಗುತ್ತದೆ. ಅಂದ್ಹಾಗೆ ಇದು ಕೇವಲ ಕೊಹ್ಲಿಗೆ ಮಾತ್ರವಲ್ಲ, ವಿಶ್ವ ಕಪ್ ದೃಷ್ಟಿಯಿಂದ ಇಡೀ ತಂಡಕ್ಕೆ ತುಂಬಾನೇ ಮುಖ್ಯವಾಗಿದೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಮೊದಲ ಮೂರು ಪಂದ್ಯಗಳಲ್ಲಿ ಶುಭಮನ್ ಗಿಲ್ ತಂಡವನ್ನು ಮುನ್ನಡೆಸಲಿದ್ದಾರೆ. ಆ ಬಳಿಕ ಅವರು ಟೆಸ್ಟ್ ಸರಣಿಗೆ ತಯಾರಿ ನಡೆಸಲಿದ್ದಾರೆ. ಗಿಲ್ ಬದಲಿಗೆ ಉಪನಾಯಕನಾಗಿ ತಂಡಕ್ಕೆ ಎಂಟ್ರಿ ನೀಡಿರುವ ಶ್ರೇಯಸ್ ಅಯ್ಯರ್, ಉಳಿದ ಎರಡು ಪಂದ್ಯಗಳಿಗೆ ನಾಯಕರಾಗಿ ಮುನ್ನಡೆಸಲಿದ್ದಾರೆ. ಏಕದಿನ ಪಂದ್ಯಗಳು ಮುಗಿದ ಬಳಿಕ ಟೆಸ್ಟ್ ಸರಣಿಯನ್ನು ಆಡಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IND vs NZ: ಸರಣಿ ಬೆನ್ನಲ್ಲೇ ಟೀಮ್ ಇಂಡಿಯಾದಿಂದ 8 ಆಟಗಾರರು ಔಟ್, 10 ಮಂದಿಗೆ ಎಂಟ್ರಿ; ಯಾರಿಗೆಲ್ಲ ಸಿಕ್ತು ಚಾನ್ಸ್?
ಕರ್ನಾಟಕ ರಾಜ್ಯೋತ್ಸವದಲ್ಲಿ ಕನ್ನಡಿಗರ ಹೃದಯ ಗೆದ್ದ ದಿನೇಶ್ ಕಾರ್ತಿಕ್ ಶುಭಾಶಯ..! RCB ಮನೆಮಗನ ಕನ್ನಡ ಪ್ರೀತಿಗೆ ಫ್ಯಾನ್ಸ್‌ ಫಿದಾ!