ಐರ್ಲೆಂಡ್ ಎದುರು ಟಿ20 ಸರಣಿ ಸೋಲುತ್ತಿದ್ದಂತೆಯೇ ಹೆಡ್‌ ಕೋಚ್ ಗೌತಮ್ ಗಂಭೀರ್‌ರನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಿದ ಐಸ್‌ಲ್ಯಾಂಡ್!

Published : Jun 29, 2026, 11:52 AM IST
Gautam Gambhir Iceland Cricket

ಸಾರಾಂಶ

ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ತಂಡವು ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 2-0 ಅಂತರದಲ್ಲಿ ವೈಟ್‌ವಾಷ್ ಮುಖಭಂಗ ಅನುಭವಿಸಿದೆ. ಈ ಹೀನಾಯ ಸೋಲಿನ ಬಳಿಕ, ಕೋಚ್ ಗೌತಮ್ ಗಂಭೀರ್ ಅವರನ್ನು ಐಸ್‌ಲ್ಯಾಂಡ್ ಕ್ರಿಕೆಟ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದೆ.

Ireland Cricket Trolls Gautam Gambhir: ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ಕ್ರಿಕೆಟ್ ತಂಡವು 11ನೇ ಶ್ರೇಯಾಂಕಿತ ಐರ್ಲೆಂಡ್ ಎದುರು ಅವರ ನೆಲದಲ್ಲೇ 2-0 ಅಂತರದಲ್ಲಿ ಟಿ20 ಸರಣಿ ವೈಟ್‌ವಾಷ್ ಅನುಭವಿಸಿದೆ. ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಅನುಭವಿಸಿದ ಅತಿ ಅವಮಾನಕರ ಸರಣಿ ಸೋಲು ಇದಾಗಿದೆ. ಟೀಂ ಇಂಡಿಯಾ ಟಿ20 ಸರಣಿ ಸೋಲಿನ ಬೆನ್ನಲ್ಲೇ ಐರ್ಲೆಂಡ್ ಕ್ರಿಕೆಟ್ ತನ್ನ ಅಧಿಕೃತ ಎಕ್ಸ್(ಟ್ವಿಟರ್) ಖಾತೆಯಲ್ಲಿ ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಅವರನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಿದೆ. ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಐಸ್‌ಲ್ಯಾಂಡ್ ಕ್ರಿಕೆಟ್‌ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವ್ಯಂಗ್ಯವಾಗಿ, ಗೌತಮ್ ಗಂಭೀರ್ ಅವರನ್ನು ನಮ್ಮ ಕೋಚಿಂಗ್ ಸ್ಟಾಫ್ ಆಗಿ ನೇಮಕ ಮಾಡಿಕೊಳ್ಳುವ ಯಾವುದೇ ಆಲೋಚನೆ ನಮಗೆ ಇಲ್ಲ. ಗಂಭೀರ್ ಮಾರ್ಗದರ್ಶನದಲ್ಲಿ ಸ್ಟಾರ್ ಆಟಗಾರರನ್ನೊಳಗೊಂಡ ಭಾರತ ತಂಡವು ಐರ್ಲೆಂಡ್ ಎದುರು ಸೋತಿದ್ದು ಅದ್ಭುತ ಸಾಧನೆ ಎಂದು ಟ್ರೋಲ್ ಮಾಡಿದೆ.

ಐಸ್‌ಲ್ಯಾಂಡ್ ಕ್ರಿಕೆಟ್‌ನಿಂದ ಗಂಭೀರ್ ಟ್ರೋಲ್

'ನಾವು ಅದ್ಭುತ ಪ್ರತಿಭೆ ಹೊಂದಿದ್ದರೂ, ಗೌತಮ್ ಗಂಭೀರ್ ಅವರನ್ನು ಕೋಚಿಂಗ್ ಸಿಬ್ಬಂದಿಯನ್ನಾಗಿ ನೇಮಕ ಮಾಡಿಕೊಳ್ಳುವ ಯಾವುದೇ ಆಲೋಚನೆಯಿಲ್ಲ ಎನ್ನುವುದನ್ನು ಮತ್ತೊಮ್ಮೆ ಖಚಿತಪಡಿಸುತ್ತಿದ್ದೇವೆ. ಭಾರತದ ಇಂತಹ ಆಟಗಾರರನ್ನು ಕರೆದುಕೊಂಡು ಹೋಗಿ ಐರ್ಲೆಂಡ್‌ನಲ್ಲಿ ಇಂತಹ ಫಲಿತಾಂಶ ಪಡೆದುಕೊಂಡಿದ್ದು ನಿಜಕ್ಕೂ ಅದ್ಭುತ ಸಾಧನೆ' ಎಂದು ಐರ್ಲೆಂಡ್ ಕ್ರಿಕೆಟ್ ಟ್ರೋಲ್ ಮಾಡಿದೆ.

ಮೂರು ತಿಂಗಳ ಹಿಂದಷ್ಟೇ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ ಟೀಂ ಇಂಡಿಯಾ ಆಡಿದ ಮೊದಲ ಟಿ20 ಸರಣಿಯಲ್ಲೇ 2-0 ಅಂತರದಲ್ಲಿ ವೈಟ್‌ವಾಷ್ ಮುಖಭಂಗ ಅನುಭವಿಸಿದೆ. ಶ್ರೇಯಸ್ ಅಯ್ಯರ್ ನಾಯಕನಾದ ಮೊದಲ ಟಿ20 ಸರಣಿಯಲ್ಲೇ ಭಾರತಕ್ಕೆ ಹೀನಾಯ ಸೋಲು ಎದುರಾಗಿದೆ

ಬೆಲ್‌ಫಾಸ್ಟ್‌ನಲ್ಲಿ ನಡೆದ ಐರ್ಲೆಂಡ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ದಯನೀಯ ವೈಫಲ್ಯ ಅನುಭವಿಸಿದ ಟೀಂ ಇಂಡಿಯಾ 34 ರನ್‌ಗಳ ಹೀನಾಯ ಸೋಲು ಅನುಭವಿಸಿತ್ತು. ಈ ಮೂಲಕ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಐರ್ಲೆಂಡ್ 1-0 ಮುನ್ನಡೆ ಸಾಧಿಸಿತ್ತು. ಇದಾಗಿ ಎರಡು ದಿನಗಳ ಬಳಿಕ ನಡೆದ ಎರಡನೇ ಟಿ20 ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿ ಕಣಕ್ಕಿಳಿದ ಟೀಂ ಇಂಡಿಯಾ ಒಂದು ರನ್ ರೋಚಕ ಸೋಲು ಕಾಣುವ ಮೂಲಕ ವೈಟ್‌ವಾಷ್ ಮುಖಭಂಗ ಅನುಭವಿಸಿದೆ.

ಹೇಗಿತ್ತು ಭಾರತ-ಐರ್ಲೆಂಡ್ ಎರಡನೇ ಟಿ20 ಮ್ಯಾಚ್?

ಬೆಲ್ಫಾಸ್ಟ್‌: ಹಾಲಿ ವಿಶ್ವ ಟಿ20 ಚಾಂಪಿಯನ್‌ ಭಾರತ ತಂಡ ಐರ್ಲೆಂಡ್‌ ವಿರುದ್ಧ ಆಘಾತಕಾರಿಯಾಗಿ ಸರಣಿ ಸೋಲನುಭವಿಸಿದೆ. 2ನೇ ಹಾಗೂ ಕೊನೆ ಟಿ20 ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಭಾರತ 1 ರನ್‌ಗಳಿಂದ ಪರಾಭವಗೊಂಡಿತು. ಇದರೊಂದಿಗೆ ಆತಿಥೇಯ ಐರ್ಲೆಂಡ್‌ 0-2 ಅಂತರದಲ್ಲಿ ಸರಣಿ ಕೈವಶಪಡಿಸಿಕೊಂಡಿತು.

ಮೊದಲು ಬ್ಯಾಟ್‌ ಮಾಡಿದ ಐರ್ಲಂಡ್‌ 8 ವಿಕೆಟ್‌ಗೆ 154 ರನ್‌ ಕಲೆಹಾಕಿತು. ಹ್ಯಾರಿ ಟೆಕ್ಟರ್‌ 53, ಬೆನ್‌ ಕ್ಯಾಲಿಟ್ಜ್‌ 37 ರನ್‌ ಸಿಡಿಸಿದರು. ಭಾರತದ ಪರ ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಪ್ರಿನ್ಸ್‌ ಯಾದವ್‌ 4 ಓವರ್‌ನಲ್ಲಿ 22 ರನ್‌ಗೆ 3 ವಿಕೆಟ್‌ ಕಿತ್ತರು.

ಐರ್ಲೆಂಡ್ ನೀಡಿದ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಲು ಭಾರತಕ್ಕೆ ಸಾಧ್ಯವಾಗಲಿಲ್ಲ. ತಂಡ 20 ಓವರಲ್ಲಿ 9 ವಿಕೆಟ್‌ ನಷ್ಟದಲ್ಲಿ 153 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. 19 ರನ್‌ಗೇ 3 ವಿಕೆಟ್‌ ಕಳೆದುಕೊಂಡ ಬಳಿಕ ಚೇತರಿಸಿಕೊಂಡಿತು. ಆದರೆ ತಿಲಕ್‌ ವರ್ಮಾ(55) ಏಕಾಂಗಿ ಹೋರಾಟ ನಡೆಸಿದರೂ ತಂಡಕ್ಕೆ ಗೆಲಲ್ಲಾಗಲಿಲ್ಲ. ಕೊನೆ ಓವರ್‌ನಲ್ಲಿ 20 ರನ್‌ ಬೇಕಿದ್ದಾಗ ತಂಡ 18 ರನ್‌ ಗಳಿಸಿ ಶರಣಾಯಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐರ್ಲೆಂಡ್ ಎದುರು ಹೀನಾಯ ಸೋಲಿನ ಬೆನ್ನಲ್ಲೇ ಅಚ್ಚರಿ ಹೇಳಿಕೆ ಕೊಟ್ಟ ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್!
ಹರ್ಮನ್‌ಪ್ರೀತ್ ಕೌರ್ ಮತ್ತೆ ಕ್ಯಾಪ್ಟನ್ ಆಗಿ ಮುಂದುವರೆಯುತ್ತಾರಾ? ಅಚ್ಚರಿ ಹೇಳಿಕೆ ಕೊಟ್ಟ ಟೀಂ ಇಂಡಿಯಾ ಹೆಡ್ ಕೋಚ್..!