ಟೀಂ ಇಂಡಿಯಾ ವಿರುದ್ದ ಇತಿಹಾಸ ಬರೆದ ಐರ್ಲೆಂಡ್‌ಗೆ ಶಾಕ್, ರಾಜೀನಾಮೆ ಘೋಷಿಸಿದ ಪ್ರಧಾನ ಕೋಚ್

Published : Jun 29, 2026, 05:43 PM IST
India vs Ireland

ಸಾರಾಂಶ

ಭಾರತ ವಿರುದ್ಧ ಇದೇ ಮೊದಲ ಬಾರಿಗೆ 2 ಟಿ20 ಪಂದ್ಯ ಗೆದ್ದು ಸರಣಿ ಗೆಲುವು ದಾಖಲಿಸಿದ ಐರ್ಲೆಂಡ್ ಇತಿಹಾಸ ರಚಿಸಿದೆ. ಆದರೆ ಈ ಸರಣಿ ಗೆಲುವಿನ ಸಂಭ್ರಮದಲ್ಲೇ ಐರ್ಲೆಂಡ್ ತಂಡಕ್ಕೆ ಶಾಕ್ ಎದುರಾಗಿದೆ.ಹೆನ್ರಿಚ್ ಮಲನ್ ದಿಢೀರ್ ರಾಜೀನಾಮೆ ಘೋಷಿಸಿದ್ದಾರೆ.

ಐರ್ಲೆಂಡ್ (ಜೂ.29) ಐರ್ಲೆಂಡ್ ವಿರುದ್ದದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಮುಖಭಂಗ ಅನುಭವಿಸಿದೆ. ಇದೇ ಮೊದಲ ಬಾರಿಗೆ 11 ರ್ಯಾಂಕ್ ಟಿ20 ತಂಡದ ವಿರುದ್ದ ಚಾಂಪಿಯನ್ ಟೀಂ ಇಂಡಿಯಾ ಸೋಲಿಗೆ ಶರಣಾಗಿದೆ. ಇದೇ ಮೊದಲ ಬಾರಿಗೆ ಐರ್ಲೆಂಡ್ ತಂಡ ಭಾರತ ವಿರುದ್ಧ ಸರಣಿ ಗೆದ್ದು ಇತಿಹಾಸ ರಚಿಸಿದೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಎಲ್ಲಾ ವಿಭಾಗದಲ್ಲಿ ಭಾರತಕ್ಕಿಂತ ಐರ್ಲೆಂಡ್ ಉತ್ತಮ ಪ್ರದರ್ಶನ ನೀಡಿದೆ. ಐರ್ಲೆಂಡ್ ವಿಶ್ವದಾಖಲೆ ಬರೆದ ಬೆನ್ನಲ್ಲೇ ತಂಡದ ಪ್ರಧಾನ ಕೋಚ್ ಹೆನ್ರಿಚ್ ಮಲನ್ ರಾಜೀನಾಮೆ ಘೋಷಿಸಿದ್ದಾರೆ.

ಐರ್ಲೆಂಡ್ ಯಶಸ್ವಿ ಕೋಚ್ ರಾಜೀನಾಮೆಯಿಂದ ಕ್ರಿಕೆಟ್ ಮಂಡಳಿ ಶಾಕ್

ಕಳೆದ ನಾಲ್ಕು ವರ್ಷಗಳಿಂದ ಐರ್ಲೆಂಡ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಹೆನ್ರಿಜ್ ಮಲನ್ ರಾಜೀನಾಮೆ ಘೋಷಿಸಿದ್ದಾರೆ. ಐರ್ಲೆಂಡ್ ತಂಡ 2-0 ಅಂತರದಲ್ಲಿ ಭಾರತ ತಂಡವನ್ನು ಮಣಿಸಿದ ಬೆನ್ನಲ್ಲೇ ಮಲನ್ ಈ ನಿರ್ಧಾರ ಘೋಷಿಸಿದ್ದಾರೆ. ಇದು ತಂಡದ ಆಟಗಾರರು, ಐರ್ಲೆಂಡ್ ಕ್ರಿಕೆಟ್ ಮಂಡಳಿಗೂ ಅಚ್ಚರಿ ನೀಡಿದೆ. ಮಲನ್ ಮಾರ್ಗದರ್ಶನ ಅಡಿಯಲ್ಲಿ ಐರ್ಲೆಂಡ್ ತಂಡ ಅತ್ಯಂತ ಯಶಸ್ವಿ ತಂಡವಾಗಿ ಗುರುತಿಸಿಕೊಂಡಿದೆ. ಭಾರತ ವಿರುದ್ಧದ ಸರಣಿ ಗೆಲುವು ಮಾತ್ರವಲ್ಲ, ಸತತ ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆ, ವಿದೇಶಿ ಪ್ರವಾಸಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಹೆಗ್ಗಳಿಗೆ ಮಲನ್‌ಗಿದೆ.

2027ರ ವರೆಗೆ ಅವಧಿ ವಿಸ್ತರಣೆ ಮಾಡಿದ್ದ ಐರ್ಲೆಂಡ್ ಮಂಡಳಿ

ಐರ್ಲೆಂಡ್ ಯಶಸ್ವಿ ಕೋಚ್ ಆಗಿರುವ ಹೆನ್ರಿಚ್ ಮಲನ್ ಅವಧಿಯನ್ನು ಇತ್ತೀಚೆಗೆ ವಿಸ್ತರಣೆ ಮಾಡಲಾಗಿತ್ತು. 2027ರವರೆಗೆ ಹೆನ್ರಿಚ್ ಕೋಚ್ ಅವಧಿ ವಿಸ್ತರಣೆ ಮಾಡಲಾಗಿದೆ. 2022ರಲ್ಲಿ ಐರ್ಲೆಂಡ್ ತಂಡದ ಪ್ರಧಾನ ಕೋಚ್ ಆಗಿ ಜವಾಬ್ದಾರಿ ನಿರ್ವಹಿಸಿದ್ದರು. ಆದರೆ ಗೆಲುವು ಹಾಗೂ ಯಶಸ್ಸಿನ ಬೆನ್ನಲ್ಲೇ ಕೋಚ್ ರಾಜೀನಾಮೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಸಂಚಲನ ಮೂಡಿಸಿದೆ.

ಹೆನ್ರಿಚ್ ದಿಢೀರ್ ರಾಜೀನಾಮೆಗೆ ಕಾರಣವೇನು?

ಹೆನ್ರಿಚ್ ಮಲನ್ ದಿಢೀರ್ ರಾಜೀನಾಮೆ ನೀಡಲು ಒಂದು ಕಾರಣ ನೀಡಿದ್ದಾರೆ. ಇದು ಸರಿಯಾದ ಸಮಯ. ಗೆಲುವಿನ ಪೀಕ್‌ನಲ್ಲೇ ರಾಜೀನಾಮೆ ನೀಡುತ್ತಿದ್ದೇನೆ. ತಂಡವನ್ನು ಯಶಸ್ವಿಯಾಗಿ ಮಾರ್ಗದರ್ಶನ ನೀಡಿದ ತೃಪ್ತಿ ಇದೆ. ಇದು ಸರಿಯಾದ ಸಮಯ ಎಂದುಕೊಂಡಿದ್ದೇನೆ. ತಂಡದ ಪ್ರತಿಯೊಬ್ಬ ಆಟಗಾರರು ನನಗೆ ಸಹಕಾರ ನೀಡಿದ್ದಾರೆ. ಸಂಘಟಿತ ಹೋರಾಟದ ಮೂಲಕ ನಾವು ಯಶಸ್ಸು ಸಾಧಿಸಿದ್ದೇವೆ. ಹೊಸ ಮಾರ್ಗದರ್ಶಕರು ಇಲ್ಲಿಂದ ಐರ್ಲೆಂಡ್ ತಂಡವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ ಅನ್ನೋ ವಿಶ್ವಾಸವಿದೆ. ಈ ತಂಡಕ್ಕೆ ಆ ಸಾಮರ್ಥ್ಯವಿದೆ ಎಂದು ಹೆನ್ರಿಚ್ ಹೇಳಿದ್ದಾರೆ.

ಐರ್ಲೆಂಡ್ ತಂಡದ ಮಾರ್ಗದರ್ಶಕನಾಗಿ, ಕೋಚ್ ಆಗಿ ಕಾರ್ಯನಿರ್ವಿಹಿಸಿರುವ ಈ ನಾಲ್ಕು ವರ್ಷಗಳ ಅವಧಿ ಅತ್ಯಂತ ಅದ್ಭುತವಾಗಿತ್ತು. ನಾನು ಹಾಗೂ ನನ್ನ ಕುಟುಂಬ ಸಂಪೂರ್ಣವಾಗಿ ಐರ್ಲೆಂಡ್ ಕ್ರಿಕೆಟ್ ಕುಟುಂಬ ಜೊತೆ ಬೆರೆತಿದ್ದೇವೆ. ಉತ್ತಮ ಅನುಭವ ನಮಗಿದೆ. ಮೈದಾನದಲ್ಲಿ ನಿಂತು ಹಿಂದೆ ನೋಡಿದಾಗ ಐರ್ಲೆಂಡ್ ಕ್ರಿಕೆಟ್ ತಂಡವನ್ನು ಕಟ್ಟಿ ಬೆಳೆಸಿದ ಹೆಮ್ಮೆ ಇದೆ. ಅಬುಧಾಬಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಟೆಸ್ಟ್ ಗೆಲುವು, ತವರಿನಲ್ಲಿ ಜಿಂಬಾಬ್ವೆ ವಿರುದ್ದ ಟೆಸ್ಟ್ ಗೆಲುವು, ಭಾರತ ವಿರುದ್ಧ ಟಿ20 ಸರಣಿ ಗೆಲುವು, ಪಾಕಿಸ್ತಾನ, ಜಿಂಬಾಬ್ವೆ, ವೆಸ್ಟ್ ಇಂಡೀಸ್, ಸೌತ್ ಆಫ್ರಿಕಾ ತಂಡಗಳನ್ನು ಮಣಿಸಿ ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆ ಸೇರಿದಂತೆ ಪ್ರತಿ ಗೆಲುವು ಐರ್ಲೆಂಡ್ ತಂಡಕ್ಕೆ ಹೊಸ ಹುರುಪು ನೀಡಿದೆ ಎಂದು ಮಲನ್ ಹೇಳಿದ್ದಾರೆ. ಅತ್ಯಂತಚ ಹೆಮ್ಮೆಯಿಂದ ಕೋಚ್ ಹುದ್ದೆ ನಿರ್ವಹಿಸಿದ್ದೇನೆ, ಇದೀಗ ಅತ್ಯಂತ ಖುಷಿಯಿಂದ ನಿರ್ಗಮಿಸುತ್ತಿದ್ದೇನೆ ಎಂದಿದ್ದಾರೆ. 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತದ ಕೀರ್ತಿ ಹಾರಿಸೋ ತಾಕತ್ತಿರೋ Vaibhav Suryavanshi ಯನ್ನೇ ಮೂಲೆಗೆ ತಳ್ಳಿದ ಟೀಂ ಇಂಡಿಯಾ; ಸುನೀಲ್‌ ಗವಾಸ್ಕರ್‌
ಆಸೀಸ್ ಎದುರಿನ ಸೋಲಿನ ಹೊರತಾಗಿಯೂ ವಿಶ್ವದಾಖಲೆ ಬರೆದ ದೀಪ್ತಿ ಶರ್ಮಾ! ಈ ಸಾಧನೆ ಮಾಡಿದ ಜಗತ್ತಿನ ಮೊದಲ ಮಹಿಳಾ ಕ್ರಿಕೆಟರ್