Irani Cup 2023: ಮಧ್ಯ ಪ್ರದೇಶ ಎದುರು ಶೇಷ ಭಾರತಕ್ಕೆ ಇನಿಂಗ್ಸ್‌ ಮುನ್ನಡೆ

Published : Mar 04, 2023, 10:12 AM IST
Irani Cup 2023: ಮಧ್ಯ ಪ್ರದೇಶ ಎದುರು ಶೇಷ ಭಾರತಕ್ಕೆ ಇನಿಂಗ್ಸ್‌ ಮುನ್ನಡೆ

ಸಾರಾಂಶ

ಇರಾನಿ ಕಪ್ ಟೂರ್ನಿಯಲ್ಲಿ ಶೇಷ ಭಾರತ ಪಡೆಗೆ ಮೊದಲ ಇನಿಂಗ್ಸ್ ಮುನ್ನಡೆ ಮೊದಲ ಇನಿಂಗ್ಸ್‌ನಲ್ಲಿ ಮಧ್ಯ ಪ್ರದೇಶ ಎದುರು 190 ರನ್‌ಗಳ ಮುನ್ನಡೆ ಪಡೆದ ರೆಸ್ಟ್ ಆಫ್ ಇಂಡಿಯಾ ಮತ್ತೊಂದು ಶತಕದತ್ತ ಯಶಸ್ವಿ ಜೈಸ್ವಾಲ್ ದಾಪುಗಾಲು

ಗ್ವಾಲಿಯರ್‌(ಮಾ.04): ಮಧ್ಯ​ಪ್ರ​ದೇಶ ವಿರು​ದ್ಧದ ಇರಾನಿ ಕಪ್‌ ಪಂದ್ಯ​ದಲ್ಲಿ ಶೇಷ ಭಾರತ(ರೆಸ್ಟ್‌ ಆಫ್‌ ಇಂಡಿಯಾ) ಬೃಹತ್‌ ಮುನ್ನಡೆ ಸಾಧಿ​ಸಿದೆ. ಮೊದಲ ಇನ್ನಿಂಗ್‌್ಸ​ನಲ್ಲಿ 484 ರನ್‌ ಗಳಿ​ಸಿದ್ದ ಶೇಷ ಭಾರತ, ಮಧ್ಯ​ಪ್ರ​ದೇ​ಶ​ವನ್ನು 294ಕ್ಕೆ ನಿಯಂತ್ರಿಸಿ 190 ರನ್‌ ಮುನ್ನಡೆ ಪಡೆ​ಯಿತು. ಹಷ್‌ರ್‍ ಗವಾಲಿ 54 ರನ್‌ಗೆ ವಿಕೆಟ್‌ ಒಪ್ಪಿ​ಸಿದ ಬಳಿಕ ಯಶ್‌ ದುಬೆ-ಶರ​ನ್ಸ್‌ ಜೈನ್‌​(66) ನಡುವೆ 6ನೇ ವಿಕೆ​ಟ್‌ಗೆ 96 ರನ್‌ ಜೊತೆ​ಯಾ​ಟ ಮೂಡಿಬಂತು. ದುಬೆ 109 ರನ್‌ ಗಳಿಸಿ ಔಟಾದರು. ಪುಲ್ಕಿತ್‌ ನಾರಂಗ್‌ 4, ನವ್‌​ದೀಪ್‌ ಸೈನಿ 3 ವಿಕೆಟ್‌ ಪಡೆ​ದ​ರು.

ಬಳಿಕ 2ನೇ ಇನ್ನಿಂಗ್‌್ಸ ಆರಂಭಿ​ಸಿದ ಶೇಷ ಭಾರತ 3ನೇ ದಿನ​ದಂತ್ಯಕ್ಕೆ 1 ವಿಕೆ​ಟ್‌ಗೆ 85 ರನ್‌ ಗಳಿ​ಸಿದ್ದು, ಒಟ್ಟು 275 ರನ್‌ ಮುನ್ನ​ಡೆ​ಯ​ಲ್ಲಿದೆ. ನಾಯಕ ಮಯಾಂಕ್‌ ಅಗ​ರ್‌​ವಾ​ಲ್‌​(00) 2ನೇ ಇನ್ನಿಂಗ್‌್ಸ​ನಲ್ಲೂ ವಿಫ​ಲ​ರಾ​ದರು. ಯಶಸ್ವಿ ಜೈಸ್ವಾ​ಲ್‌​(​53 ಎಸೆ​ತ​ಗ​ಳಲ್ಲಿ 58), ಅಭಿ​ಮನ್ಯು ಈಶ್ವ​ರ​ನ್‌​(​26) ಕ್ರೀಸ್‌​ನ​ಲ್ಲಿ​ದ್ದಾರೆ.

ಶಸ್ತ್ರ​ಚಿ​ಕಿ​ತ್ಸೆ​ಗಾಗಿ ಬುಮ್ರಾ ನ್ಯೂಜಿ​ಲೆಂಡ್‌ಗೆ ಪ್ರಯಾ​ಣ?

ನವ​ದೆ​ಹ​ಲಿ: ಬೆನ್ನು ನೋವಿ​ನಿಂದಾಗಿ ಕಳೆದ 5 ತಿಂಗ​ಳು​ಗ​ಳಿಂದ ವೃತ್ತಿ​ಪರ ಕ್ರಿಕೆಟ್‌ನಿಂದ ದೂರ ಉಳಿ​ದಿ​ರುವ ಭಾರ​ತದ ವೇಗಿ ಜಸ್‌​ಪ್ರೀತ್‌ ಬುಮ್ರಾ ಶಸ್ತ್ರಚಿಕಿತ್ಸೆಗಾಗಿ ನ್ಯೂಜಿಲೆಂಡ್‌ಗೆ ತೆರ​ಳುವ ಸಾಧ್ಯತೆ ಇದೆ ಎಂದು ಮಾಧ್ಯ​ಮ​ಗ​ಳಲ್ಲಿ ವರ​ದಿ​ಯಾ​ಗಿದೆ. ನ್ಯೂಜಿ​ಲೆಂಡ್‌ ಮಾಜಿ ವೇಗಿ ಶೇನ್‌ ಬಾಂಡ್‌, ಇಂಗ್ಲೆಂಡ್‌ನ ಜೋಫ್ರಾ ಆರ್ಚರ್‌ ಸೇರಿ​ದಂತೆ ಪ್ರಮುಖ ಕ್ರಿಕೆ​ಟಿ​ಗ​ರಿಗೆ ಯಶ​ಸ್ವಿ​ಯಾಗಿ ಶಸ್ತ್ರ​ಚಿ​ಕಿತ್ಸೆ ನಡೆ​ಸಿದ ರೋವನ್‌ ಶೌಟೆನ್‌ ಅವರು ಬೂಮ್ರಾಗೂ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ ಎನ್ನಲಾಗಿದೆ. ಅಲ್ಲದೇ ಬುಮ್ರಾ ಸರ್ಜರಿ ಬಳಿಕ ಸುಮಾರು 20-24 ವಾರಗಳ ಕಾಲ ವಿಶ್ರಾಂತಿ ಪಡೆ​ಯ​ಲಿ​ದ್ದಾರೆ ಎಂದು ವರ​ದಿ​ಯಾ​ಗಿದೆ. ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಿಂದಲೂ ಬುಮ್ರಾ ಹೊರಬೀಳುವ ಸಾಧ್ಯತೆ ಇದೆ.

ರಾಜ್ಯದ ಮಾಜಿ ಕ್ರಿಕೆಟಿಗ ಪಿ.ಎಸ್‌.ವಿಶ್ವನಾಥ್‌ ನಿಧನ

ಬೆಂಗಳೂರು: ರಾಜ್ಯದ ಮಾಜಿ ಕ್ರಿಕೆಟಿಗ, ಆಡಳಿತಗಾರ ಪಿ.ಎಸ್‌.ವಿಶ್ವನಾಥ್‌(96) ಅವರು ಶುಕ್ರವಾರ ನಿಧನರಾದರು. 1926ರಲ್ಲಿ ಜನಿಸಿದ್ದ ಅವರು, 1948-49ರಿಂದ 1957-58ರ ಅವಧಿಯಲ್ಲಿ 9 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದರು. ಬಳಿಕ ಮ್ಯಾಚ್‌ ರೆಫ್ರಿ, ಕೆಎಸ್‌ಸಿಎ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರು ಬೆಂಗಳೂರು ಮುನ್ಸಿಪಾಲಿಟಿಯ ಮೊದಲ ಅಧ್ಯಕ್ಷ ಪುಟ್ಟಣ್ಣ ಚೆಟ್ಟಿಅವರ ಮೊಮ್ಮಗ. ವಿಶ್ವನಾಥ್‌ರ ನಿಧನಕ್ಕೆ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

Ind vs Aus ಮೂರೇ ದಿನಕ್ಕೆ ಮುಗಿದ ಪಂದ್ಯದ ಬಗ್ಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಚ್ಚರಿಯ ಹೇಳಿಕೆ..!

2ನೇ ಏಕ​ದಿ​ನ: ಬಾಂಗ್ಲಾ ವಿರು​ದ್ಧ ಗೆದ್ದ ಇಂಗ್ಲೆಂಡ್‌

ಢಾಕಾ: ಬಾಂಗ್ಲಾ​ದೇಶ ವಿರುದ್ಧದ 2ನೇ ಏಕ​ದಿನ ಪಂದ್ಯ​ದಲ್ಲಿ ಇಂಗ್ಲೆಂಡ್‌ 132 ರನ್‌ ಗೆಲುವು ಸಾಧಿ​ಸಿದ್ದು, 3 ಪಂದ್ಯ​ಗಳ ಸರ​ಣಿ​ಯನ್ನು 2-0 ಅಂತ​ರ​ದಲ್ಲಿ ಗೆದ್ದು​ಕೊಂಡಿ​ದೆ. ಮೊದಲು ಬ್ಯಾಟ್‌ ಮಾಡಿದ ಪ್ರವಾಸಿ ಇಂಗ್ಲೆಂಡ್‌ ಜೇಸನ್‌ ರಾಯ್‌(124 ಎಸೆ​ತ​ಗ​ಳಲ್ಲಿ 132ರ ಶತ​ಕದ ನೆರ​ವಿ​ನಿಂದ 50 ಓವ​ರಲ್ಲಿ 7 ವಿಕೆ​ಟ್‌ಗೆ 326 ರನ್‌ ಕಲೆ​ಹಾ​ಕಿತು. ಬಟ್ಲರ್‌ 76, ಮೊಯೀನ್‌ ಅಲಿ 42, ಸ್ಯಾಮ್‌ ಕರ್ರನ್‌ 33 ರನ್‌ ಕೊಡುಗೆ ನೀಡಿ​ದರು. ಬೃಹತ್‌ ಗುರಿ ಬೆನ್ನ​ತ್ತಿದ ಬಾಂಗ್ಲಾ 44.4 ಓವ​ರ್‌​ಗ​ಳಲ್ಲಿ 194ಕ್ಕೆ ಆಲೌ​ಟಾ​ಯಿತು. ಶಕೀ​ಬ್‌​(58) ಹೊರ​ತು​ಪ​ಡಿಸಿ ಉಳಿ​ದ​ವರು ಮಿಂಚ​ಲಿಲ್ಲ. ಕರ್ರನ್‌, ಆದಿಲ್‌ ರಶೀದ್‌ ತಲಾ 4 ವಿಕೆಟ್‌ ಕಿತ್ತ​ರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

14 ವರ್ಷದ ವೈಭವ್ ಸೂರ್ಯವಂಶಿ 95 ಎಸೆತಕ್ಕೆ 171; ಯುವ ಭಾರತಕ್ಕೆ 234 ರನ್ ಜಯ!
ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!