
ಮುಂಬೈ (ನ.10) ಐಪಿಎಲ್ ಟೂರ್ನಿ ಮತ್ತೊಂದು ಭಾರಿ ಬದಲಾವಣೆಗೆ ಸಜ್ಜಾಗುತ್ತಿದೆ. 2008ರಲ್ಲಿ ಆರಂಭಗೊಂಡ ಐಪಿಎಲ್ ಟೂರ್ನಿ ಹರಾಜು, ತಂಡ, ಆಟದ ನಿಯಮ ಸೇರಿದಂತೆ ಹಲವು ರೀತಿಯಲ್ಲಿ ಬದಲಾವಣೆ ಮಾಡಲಾಗಿದೆ. ಇದೀಗ 2027ರ ಐಪಿಎಲ್ ಟೂರ್ನಿಗೆ ಮಹತ್ತರ ಬದಲಾವಣೆ ಮಾಡಲು ಬಿಸಿಸಿಐ ಮುಂದಾಗಿದೆ. ಮೂಲಗಳ ಪ್ರಕಾರ 2027ರಲ್ಲಿ ಮತ್ತಿಬ್ಬರು ಹೊಸ ಅತಿಥಿಗಳಿಗೆ ಚಾನ್ಸ್ ನೀಡಲಾಗುತ್ತದೆ. ಈ ಕುರಿತು ಬಿಸಿಸಿಐ ಭಾರಿ ಹಲವು ಸುತ್ತಿನ ಮಾತುಕತೆ ನಡೆಸಿದ್ದು, ಪ್ರಾಥಮಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದೆ.
2027ರ ಐಪಿಎಲ್ ಟೂರ್ನಿಯಲ್ಲಿ ಹೊಸ ಅತಿಥಿಗಳು. ಹೌದು, 2027ರ ಐಪಿಎಲ್ ಟೂರ್ನಿಗೆ ಹೊಸ ಎರಡು ತಂಡಗಳ ಸೇರ್ಪಡೆಗೊಳಿಸಲು ಬಿಸಿಸಿಐ ಪ್ಲಾನ್ ಮಾಡಿದೆ. 8 ತಂಡಗಳಿಂದ ಆರಂಭಗೊಂಡ ಐಪಿಎಲ್ ಟೂರ್ನಿ ಬಳಿಕ ಮತ್ತೆರೆಡು ತಂಡ ಸೇರಿಕೊಂಡು 10 ತಂಡಗಳಾಗಿದೆ. ಆದರೆ ಇದೀಗ ತಂಡಗಳ ಸಂಖ್ಯೆಯನ್ನು 12ಕ್ಕೆ ಏರಿಸಲು ಮುಂದಾಗಿದೆ. ಸದ್ಯ ಈ ಕುರಿತ ಮಾತುಕತೆಗಳನ್ನು ಬಿಸಿಸಿಐ ನಡೆಸಿದೆ. 2027ರ ಅಥವಾ 2028ರ ಐಪಿಎಲ್ ಟೂರ್ನಿಗೆ ಮತ್ತೆರೆಡು ಹೊಸ ತಂಡಕ್ಕೆ ಅವಕಾಶ ನೀಡಲು ಬಿಸಿಸಿಐ ಎಲ್ಲಾ ಸಿದ್ದತೆ ನಡೆಸಿದೆ.
ಮತ್ತೆರೆಡು ತಂಡಗಳ ಸೇರ್ಪಡೆ ಕುರಿತು ಮಾತುಕತೆಯಲ್ಲಿ ಪುಣೆ ಹಾಗೂ ವಡೋದರ ನಗರದ ಹೆಸರಿನಲ್ಲಿ ಫ್ರಾಂಚೈಸಿ ಪಡೆಯಲು ಮುಂದಾಗಿದೆ. ಭಾರಿ ಜನಪ್ರಿಯತೆ ಪಡೆದಿರುವ ಐಪಿಎಲ್ ಟೂರ್ನಿಯಲ್ಲಿ ಫ್ರಾಂಚೈಸಿ ಮೌಲ್ಯಗಳು ಅತೀ ದುಬಾರಿಯಾಗಿದೆ. ಹೊಸದಾಗಿ 2 ಫ್ರಾಂಚೈಸಿಗಳ ನಡುವೆ ಪೈಪೋಟಿಗಳು ತೀವ್ರಗೊಂಡಿದೆ. ಪ್ರತಿ ಫ್ರಾಂಚೈಸಿ ಬೆಲೆ ಸರಿಸುಮಾರು 8300 ಕೋಟಿ ರೂಪಾಯಿಗೂ ಅಧಿಕ ಬೆಲೆಯಲ್ಲಿ ಹರಾಜಾಗುವ ಸಾಧ್ಯತೆ ಇದೆ. ವಿದೇಶಿ ಹೂಡಿಕೆದಾರರು, ಖಾಸಗಿ ಈಗ್ವಿಟಿ ಫಂಡ್ಸ್, ಬೃಹತ್ ಉದ್ಯಮ ಸಂಸ್ಥೆಗಳು ಹೊಸ ಎರಡು ಫ್ರಾಂಚೈಸಿ ಖರೀದಿಗೆ ಆಸಕ್ತಿ ತೋರಿದೆ. ಲಖನೌ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ ಮೂಲಕ 10 ತಂಡಕ್ಕೆ ವಿಸ್ತರಣೆಗೊಂಡ ಐಪಿಎಲ್ ಟೂರ್ನಿ ಇದೀಗ 12ಕ್ಕೆ ಏರಿಕೆಯಾಗುವ ಎಲ್ಲಾ ಸಾಧ್ಯತೆಗಳಿವೆ.
ಪುಣೆ: ಈ ಹಿಂದೆ ಸಹಾರಾ ಪುಣೆ ವಾರಿಯರ್ಸ್ ಹಾಗೂ 2016-17ರಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡಗಳ ಮೂಲಕ ಪುಣೆ ನಗರ ಐಪಿಎಲ್ ಅನುಭವ ಹೊಂದಿದೆ. ಅಂತಾರಾಷ್ಟ್ರೀಯ ದರ್ಜೆಯ ಸುಸಜ್ಜಿತ ಕ್ರೀಡಾಂಗಣ ಹಾಗೂ ಭಾರಿ ಕ್ರಿಕೆಟ್ ಪ್ರೇಮಿಗಳನ್ನು ಹೊಂದಿರುವುದು ಪುಣೆಗೆ ಪ್ಲಸ್ ಪಾಯಿಂಟ್ ಆಗಿದೆ.
ವಡೋದರಾ: ಗುಜರಾತ್ ರಾಜ್ಯವನ್ನು ಕ್ರೀಡಾ ಹಬ್ ಆಗಿ ಅಭಿವೃದ್ಧಿಪಡಿಸುವ ಯೋಜನೆಯ ಭಾಗವಾಗಿ ಹಾಗೂ ನೂತನ ಅಂತಾರಾಷ್ಟ್ರೀಯ ಕ್ರೀಡಾಂಗಣಗಳ ನಿರ್ಮಾಣದ ಹಿನ್ನೆಲೆಯಲ್ಲಿ ವಡೋದರಾ ಎರಡನೇ ಪ್ರಮುಖ ನಗರವಾಗಿ ಹೊರಹೊಮ್ಮಿದೆ.
ಬಿಸಿಸಿಐ ತಂಡಗಳ ಸಂಖ್ಯೆ 12ಕ್ಕೆ ಏರಿಕೆ ಮಾಡಿದರೆ ಪಂದ್ಯಗಳ ಸಂಖ್ಯೆ ಹೆಚ್ಚಾಗಲಿದೆ. ಆಟಗಾರರ ಲಭ್ಯತೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಲಿದೆ. ಇನ್ನು ಇರುವ 2 ತಿಂಗಳಲ್ಲಿ ಪಂದ್ಯಗಳ ಸಂಖ್ಯೆ ಏರಿಕೆಯಾದರೆ ಸಮಸ್ಯೆಗಳು ತೀವ್ರಗೊಳ್ಳಲಿದೆ. ಇವೆಲ್ಲದರ ಕುರಿತು ಬಿಸಿಸಿಐ ಹಲವು ಸುತ್ತಿನ ಚರ್ಚೆ ನಡೆಸಿದೆ. ಸದ್ಯ ಯಾವುದೂ ಅಧಿಕೃತಗೊಂಡಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.