IPL retention: ನಾಯಕ, ಮಾಜಿ ನಾಯಕ ಔಟ್, ವರುಣ್, ವೆಂಕಟೇಶ್ ಸೇರಿ ನಾಲ್ವರ ಉಳಿಸಿಕೊಂಡ KKR!

Published : Nov 30, 2021, 11:08 PM ISTUpdated : Dec 01, 2021, 12:17 AM IST
IPL retention: ನಾಯಕ, ಮಾಜಿ ನಾಯಕ ಔಟ್, ವರುಣ್, ವೆಂಕಟೇಶ್ ಸೇರಿ ನಾಲ್ವರ ಉಳಿಸಿಕೊಂಡ KKR!

ಸಾರಾಂಶ

ಕೆಕೆಆರ್ ತಂಡದ ರಿಟೈನ್ ಹಾಗೂ ಕೈಬಿಟ್ಟ ಆಟಗಾರರ ಲಿಸ್ಟ್ ನಾಯಕ ಇಯಾನ್ ಮಾರ್ಗನ್, ಮಾಜಿ ನಾಯಕ ದಿನೇಶ್ ಕಾರ್ತಿಕ್ ಔಟ್ ನಾಲ್ವರು ಆಟಗಾರರ ಉಳಿಸಿಕೊಂಡ ಕೆಕೆಆರ್  

ಕೋಲ್ಕತಾ(ನ.30):  IPL 2022 ಟೂರ್ನಿಗೆ ಕೋಲ್ಕತಾ ನೈಟ್ ರೈಡರ್ಸ್(kolkata knight riders) ತಂಡ ಹೊಸ ಸ್ಟಾಟರ್ಜಿ ಮಾಡಿದೆ. ಹೊಸ ನಾಯಕತ್ವದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಕಾರಣ ರಿಟೆನ್ಶನ್‌ನಲ್ಲಿ ಕೆಕೆಆರ್ ಹಾಲಿ ನಾಯಕ ಇಯಾನ್ ಮಾರ್ಗನ್(eoin morgan) ಹಾಗೂ ಮಾಜಿ ನಾಯಕ ದಿನೇಶ್ ಕಾರ್ತಿಕ್(dinesh karthik) ಇಬ್ಬರನ್ನು ಕೈಬಿಟ್ಟಿದೆ. ಇತರ ಪ್ರಮುಖ ನಾಲ್ವರು ಆಟಗಾರರಾದ ಆ್ಯಂಡ್ರೆ ರಸೆಲ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್ ಹಾಗೂ ಸುನಿಲ್ ನರೈನ್ ಉಳಿಸಿಕೊಂಡಿದೆ. 

KKR ಉಳಿಸಿಕೊಂಡ ಆಟಗಾರರ ಪಟ್ಟಿ
ಆ್ಯಂಡ್ರೆ ರಸೆಲ್
ವರುಣ್ ಚಕ್ರವರ್ತಿ,
ವೆಂಕಟೇಶ್ ಅಯ್ಯರ್
ಸುನಿಲ್ ನರೈನ್

IPL retention: ಜಡೇಜಾಗೆ 16 ಕೋಟಿ, ಧೋನಿಗೆ 12 ಕೋಟಿ ನಾಲ್ವರ ಉಳಿಸಿಕೊಂಡ ಸಿಎಸ್‌ಕೆ!

ಕೆಕೆಆರ್ ತಂಡದ ರಿಟೈನ್ ಕೊಂಚ ದುಬಾರಿಯಾಗಿದೆ. ಕಾರಣ 12 ಕೋಟಿಯ ಆ್ಯಂಡ್ರೆ ರೆಸಲ್‌ಗೆ(Andre Russell) 16 ಕೋಟಿ ರೂಪಾಯಿ ನೀಡಿ ಉಳಿಸಿಕೊಂಡಿದ್ದರೆ, 8 ಕೋಟಿ ರೂಪಾಯಿಯ ವರುಣ್ ಚಕ್ರವರ್ತಿಗೆ(Varun Chakravarthy) 12 ಕೋಟಿ ರೂಪಾಯಿ ನೀಡಿದೆ. ಇನ್ನು ವೆಂಕಟೇಶ್ ಅಯ್ಯರ್‌ಗೆ(Venkatesh Iye) 8 ಕೋಟಿ ಹಾಗೂ ಸುನಿಲ್ ನೈರನ್‌ಗೆ(Sunil Narine) 6 ಕೋಟಿ ರೂಪಾಯಿ ನೀಡಿದೆ. ಐಪಿಎಲ್ ಹರಾಜಿಗೆ ಕೋಲ್ಕತಾ ನೈಟ್ ರೈಡರ್ಸ್ ಬಳಿ 48 ಕೋಟಿ ರೂಪಾಯಿ ಉಳಿದುಕೊಂಡಿದೆ.

ಕೋಲ್ಕತಾ ನೈಟ್ ರೈಡರ್ಸ್ ಕೈಬಿಟ್ಟ ಆಟಗಾರರ ಪಟ್ಟಿ:
ಇಯಾನ್ ಮಾರ್ಗನ್, ದಿನೇಶ್ ಕಾರ್ತಿಕ್, ಗುರುಕೀರತ್ ಸಿಂಗ್, ಕುರಣ್ ನಾಯರ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ಶುಬಮನ್ ಗಿಲ್, ಹರ್ಭಜನ್ ಸಿಂಗ್, ಕಮಲೇಶ್ ನಾಗರಕೋಟಿ, ಕುಲ್ದೀಪ್ ಯಾದವ್, ಲ್ಯೂಕಿ ಫರ್ಗ್ಯೂಸನ್, ಪವನ್ ನೇಗಿ, ಪ್ರಸಿದ್ಧ್ ಕೃಷ್ಣ, ಸಂದೀಪ್ ವಾರಿಯರ್, ಶಿವಂ ಮಾವಿ, ಟಿಮ್ ಸೌಥಿ, ವೈಭವ್ ಅರೋರ, ಬೆನ್ ಕಟ್ಟಿಂಗ್, ಶಕೀಬ್ ಅಲ್ ಹಸನ್, ಶೆಲ್ಡನ್ ಜಾಕ್ಸನ್, ಟಿಮಿ ಸೈಫರ್ಟ್

ಕೋಲ್ಕತಾ ನೈಟ್ ರೈಡರ್ಸ್ ತಂಡ ಹೊಸ ಆಟಗಾರರನ್ನು ಖರೀದಿಸಿ ಹೊಸ ತಂಡದೊಂದಿಗೆ ಕಣಕ್ಕಿಳಿಯಲಿದೆ. 48 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿರುವ ಕೆಕೆಆರ್  ಹರಾಜು(IPL Players Auction) ತೀವ್ರ ಕುತೂಹಲ ಕೆರಳಿಸಿದೆ.

IPL retention: ಪಾಂಡ್ಯ ಬ್ರದರ್ಸ್ ಔಟ್, ರೋಹಿತ್ ಶರ್ಮಾ ಸೇರಿ ನಾಲ್ವರ ಉಳಿಸಿಕೊಂಡ ಮುಂಬೈ! 

ಕೋಲ್ಕತಾ ನೈಟ್ ರೈಡರ್ಸ್ 2014ರ ವರೆಗೆ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿತ್ತು. ಬಳಿಕ ತನ್ನ ಬಲಿಷ್ಠತೆ ಕ್ಷೀಣಿಸುತ್ತಾ ಬಂದಿದೆ. ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೋಲ್ಕತಾ ನೈಟ್ ರೈಡರ್ಸ್  ಎರಡು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಕೋಲ್ಕತಾ ನೈಟ್ ರೈಡರ್ಸ್ ಚಾಂಪಿಯನ್ಸ್
2012, ಚಾಂಪಿಯನ್(ಮೊದಲ ಬಾರಿ)
2014, ಚಾಂಪಿಯನ್( ಎರಡನೇ ಬಾರಿ)

ದಿನೇಶ್ ಕಾರ್ತಿಕ್ ನಾಯಕತ್ವದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ದಿಟ್ಟ ಹೋರಾಟ ನೀಡಿತ್ತು. ಆದರೆ ನಿರೀಕ್ಷಿತ ಸ್ಥಾನ ಸಂಪಾದಿಸಲು ಸಾಧ್ಯವಾಗಿಲಿಲ್ಲ. ಹೀಗಾಗಿ ಕೆಕೆಆರ್ ದಿಢೀರ್ ನಾಯಕತ್ವ ಬದಲಾವಣೆ ಮಾಡಿತ್ತು. ಇಯಾನ್ ಮಾರ್ಗನ್‌ಗೆ ನಾಯಕತ್ವ ನೀಡಿ ಕಣಕ್ಕಿಳಿದಿತ್ತು. ಮಾರ್ಗನ್ ನಾಯಕತ್ವದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಫಲಿತಾಂಶದಲ್ಲಿ ಹೆಚ್ಚಿನ ಬದಲಾವಣೆಗಳಾಗಲಿಲ್ಲ. ಆದರೆ 2021ರ ಟೂರ್ನಿಯಲ್ಲಿ ಕೆಕೆಆರ್ ಉತ್ತಮ ಪ್ರದರ್ಶನ ನೀಡಿತು. 2021ರಲ್ಲಿ ಕೆಕೆಆರ್ 4ನೇ ಸ್ಥಾನ ಅಲಂಕರಿಸಿದೆ.

ಕಳೆದ ಆವೃತ್ತಿಯಲ್ಲಿ ಆ್ಯಂಡ್ರೆ ರಸೆಲ್ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಕೆಕೆಆರ್ ಪರ ಉತ್ತಮ ಹೋರಾಟ ನೀಡಿದ ಶುಭಮನ್ ಗಿಲ್ 17 ಪಂದ್ಯಗಳಿಂದ 478 ರನ್ ಸಿಡಿಸಿದ್ದರು. ಈ ಮೂಲಕ ಟಾಪ್ 10 ಸ್ಕೋರರ್ ಪಟ್ಟಿಯಲ್ಲಿ 8ನೇ ಸ್ಥಾನ ಅಲಂಕರಿಸಿದ್ದಾರೆ. ಇಷ್ಟೇ ಅಲ್ಲ 2021ರಲ್ಲಿ ಕೆಕೆಆರ್ ಪರ ಗರಿಷ್ಠ ರನ್ ಸಿಡಿಸಿದ ಆಟಗಾರ ದಾಖಲೆ ಬರೆದಿದ್ದಾರೆ. ಆದರೆ ಕೆಕೆಆರ್ ಗಿಲ್ ಕೈಬಿಟ್ಟಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL Mini Auction 2026: 1355 ಆಟಗಾರರಲ್ಲಿ 350 ಪ್ಲೇಯರ್ಸ್ ಶಾರ್ಟ್‌ಲಿಸ್ಟ್! ಇಲ್ಲಿದೆ ಹರಾಜಿನ ಕಂಪ್ಲೀಟ್ ಡೀಟೈಲ್ಸ್
ಸಡನ್ನಾಗಿ ಸೋಶಿಯಲ್‌ ಮೀಡಿಯಾದಲ್ಲಿ ಸನ್ನಿ ಲಿಯೋನ್‌ ಫೋಟೋ ಹಂಚಿಕೊಂಡ ಅಶ್ವಿನ್‌, ಇದಕ್ಕಿದೆ ಐಪಿಎಲ್ ಲಿಂಕ್‌!