
ಮುಂಬೈ(ನ.30): ಐಪಿಎಲ್(IPL) ಟೂರ್ನಿಯಲ್ಲಿ ಅತ್ಯಂತ ಬಲಿಷ್ಠ ತಂಡ ಮುಂಬೈ ಇಂಡಿಯನ್ಸ್ ಈ ಬಾರಿ ನಾಲ್ವರು ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಅತ್ಯಂತ ಯಶಸ್ವಿ ನಾಯಕ ರೋಹಿತ್ ಶರ್ಮಾರನ್ನು(Rohit Sharma) ಉಳಿಸಿಕೊಂಡಿದೆ. ಇದರ ಜೊತೆಗೆ ವೇಗಿ ಜಸ್ಪ್ರೀತ್ ಬುಮ್ರಾ, ಆಲ್ರೌಂಡರ್ ಕೀರನ್ ಪೋಲಾರ್ಡ್ ಹಾಗೂ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್‌ರನ್ನು ರಿಟೈನ್ ಮಾಡಿಕೊಳ್ಳಲಾಗಿದೆ.
ಮುಂಬೈ ತಂಡದಲ್ಲಿ ಉಳಿಸಿಕೊಂಡ ಆಟಗಾರರು
ರೋಹಿತ್ ಶರ್ಮಾ (16 ಕೋಟಿ ರೂಪಾಯಿ)
ಜಸ್ಪ್ರೀತ್ ಬುಮ್ರಾ (12 ಕೋಟಿ ರೂಪಾಯಿ)
ಸೂರ್ಯಕುಮಾರ್ ಯಾದವ್ (8 ಕೋಟಿ ರೂಪಾಯಿ)
ಕೀರನ್ ಪೋಲಾರ್ಡ್ ( 6 ಕೋಟಿ ರೂಪಾಯಿ)
ರೋಹಿತ್ ಶರ್ಮಾಗೆ 16 ಕೋಟಿ ರೂಪಾಯಿ ನೀಡಿ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಇನ್ನು ವೇಗಿ ಜಸ್ಪ್ರೀತ್ ಬುಮ್ರಾಗೆ 12 ಕೋಟಿ ರೂಪಾಯಿ, ಸೂರ್ಯಕುಮಾರ್ ಯಾದವ್‌ಗೆ 8 ಕೋಟಿ ಹಾಗೂ ಕೀರನ್ ಪೋಲಾರ್ಡ್‌ಗೆ 6 ಕೋಟಿ ರೂಪಾಯಿ ನೀಡಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಉಳಿಸಿಕೊಂಡಿದೆ.
IPL retention: ಪಾಂಡ್ಯ ಬ್ರದರ್ಸ್ ಔಟ್, ರೋಹಿತ್ ಶರ್ಮಾ ಸೇರಿ ನಾಲ್ವರ ಉಳಿಸಿಕೊಂಡ ಮುಂಬೈ!
ಐಪಿಎಲ್ ರಿಟೈನ್ ಅತ್ಯಂತ ಕಠಿಣವಾಗಿತ್ತು. ನಾಲ್ವರು ಆಟಗಾರರನ್ನು ಉಳಿಸಿಕೊಳ್ಳುವು ನಿಜಕ್ಕೂ ಕಷ್ಟವಾಗಿತ್ತು. ಕಾರಣ ಮುಂಬೈ ಇಂಡಿಯನ್ಸ್ ಕುಟುಂಬದಲ್ಲಿದ್ದ ಎಲ್ಲಾ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ತಂಡದ ಗೆಲುವಿನಲ್ಲಿ ಪ್ರಮುಖ ಕಾರಣಕರ್ತರಾಗಿದ್ದಾರೆ. ಪಂದ್ಯದಲ್ಲಿ ಅವಕಾಶ ಸಿಗದ ಆಟಗಾರರು ನೆಟ್ಸ್‌ನಲ್ಲಿ ಅಭ್ಯಾಸಕ್ಕೆ ಅತ್ಯುತ್ತಮವಾಗಿ ನೆರವಾಗಿದ್ದಾರೆ. ಆದರೆ ನಮಗೆ ಕೇವಲ ನಾಲ್ವರು ಆಟಗಾರರನ್ನು ಮಾತ್ರ ಉಳಿಸಿಕೊಳ್ಳುಲು ಅವಕಾಶವಿದೆ. ಹೀಗಾಗಿ ಇತರ ಆಟಗಾರರನ್ನು ಅನಿವಾರ್ಯವಾಗಿ ಕೈಬಿಡಬೇಕಾಗಿದೆ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಐಪಿಎಲ್ ರಿಟೈನ್(IPL retention) ಬಳಿಕ ಮುಂಬೈ ಇಂಡಿಯನ್ಸ್ ಬಳಿ 48 ಕೋಟಿ ರೂಪಾಯಿ ಬಾಕಿ ಉಳಿದಿದೆ. ಈ ತಿಂಗಳು ನಡೆಯಲಿರುವ ಐಪಿಎಲ್ ಮೆಘಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ 48 ಕೋಟಿ ಹಣದಲ್ಲಿ ಆಟಗಾರರ ಖರೀದಿ ಮಾಡಲಿದೆ.
IPL retention: ಚಹಾಲ್, ಕನ್ನಡಿಗರ ಕೈಬಿಟ್ಟು, ಕೊಹ್ಲಿ ಸೇರಿ ಮೂವರ ಉಳಿಸಿಕೊಂಡ RCB!
ಮುಂಬೈ ಇಂಡಿಯನ್ಸ್ ಕೈಬಿಟ್ಟ ಪ್ಲೇಯರ್ಸ್:
ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ಇಶಾನ್ ಕಿಶನ್, ಅನ್ಮೋಲ್‌ಪ್ರೀತ್ ಸಿಂಗ್, ಕ್ರಿಸ್ ಲಿನ್, ಸೌರಬ್ ತಿವಾರಿ, ಆ್ಯಡಮ್ ಮಿಲ್ನೆ, ಧವಲ್ ಕುಲಕರ್ಣಿ, ಜಯಂತ್ ಯಾದವ್, ನಥನ್ ಕೌಲ್ಟರ್ ನೈಲ್, ಪಿಯೂಷ್ ಚಾವ್ಲ, ರಾಹುಲ್ ಚಹಾರ್, ಸಿಮ್ರಜಿತ್ ಸಿಂಗ್, ಟ್ರೆಂಟ್ ಬೌಲ್ಟ್, ಯುದ್ವೀರ್ ಸಿಂಗ್, ಅಂಕುಲ್ ರಾಯ್, ಜೇಮ್ಸ್ ನೀಶಮ್, ಮಾರ್ಕೋ ಜಾನ್ಸೇನ್, ರೂಶ್ ಕಲಾರಿಯಾ, ಆದಿತ್ಯ ತಾರೆ, ಕ್ವಿಂಟನ್ ಡಿಕಾಕ್.
ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಗರಿಷ್ಠ ಟ್ರೋಫಿ ಗೆದ್ದ ಸಾಧನೆ ಮಾಡಿದೆ. ಮುಂಬೈ 5 ಬಾರಿ ಟ್ರೋಫಿ ಗೆಲ್ಲುವ ಮೂಲಕ ದಾಖಲೆ ಬರೆದಿದೆ. ಎರಡನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕು ಬಾರಿ ಟ್ರೋಫಿ ಗೆದ್ದುಕೊಂಡಿದೆ.
2013ರಲ್ಲಿ ಮುಂಬೈ ಇಂಡಿಯನ್ಸ್ ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದುಕೊಂಡಿತು. ಬಳಿಕ ಟ್ರೋಫಿ ಗೆಲುವು ಮುಂಬೈ ಇಂಡಿಯನ್ಸ್‌ಗೆ ಸರಾಗವಾಗಿದೆ.
ಮುಂಬೈ ಇಂಡಿಯನ್ಸ್ ಚಾಂಪಿಯನ್ಸ್:
2013, ಮುಂಬೈ ಇಂಡಿಯನ್ಸ್( ಮೊದಲ ಬಾರಿ)
2015, ಮುಂಬೈ ಇಂಡಿಯನ್ಸ್( ಎರಡನೇ ಬಾರಿ)
2017, ಮುಂಬೈ ಇಂಡಿಯನ್ಸ್( ಮೂರನೇ ಬಾರಿ)
2019, ಮುಂಬೈ ಇಂಡಿಯನ್ಸ್(ನಾಲ್ಕನೇ ಬಾರಿ)
2020, ಮುಂಬೈ ಇಂಡಿಯನ್ಸ್(ಐದನೇ ಬಾರಿ
ವಿಶೇಷ ಅಂದರೆ ಮುಂಬೈ ಇಂಡಿಯನ್ಸ್ ತಂಡದ 5 ಟ್ರೋಫಿ ರೋಹಿತ್ ಶರ್ಮಾ ನಾಯಕತ್ವದಲ್ಲೇ ಗೆದ್ದುಕೊಂಡಿದೆ. 2021ರಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿರುವ ಮುಂಬೈ ಇಂಡಿಯನ್ಸ್ ಇದೀಗ 2022ರಲ್ಲಿ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ನಾಲ್ವರು ಪ್ರಮುಖ ಆಟಾಗರರನ್ನು ಉಳಿಸಿಕೊಂಡಿದೆ. ಇನ್ನು ಹರಾಜಿನಲ್ಲಿ ಹೊಸ ಆಟಗಾರರನ್ನು ಖರೀದಿ ಮಾಡಲಿದೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.