ಇದೇ ಮೊದಲ ಬಾರಿಗೆ ರೈಲಿನ ಮೂಲಕ ದೆಹಲಿಗೆ ಪ್ರಯಾಣಿಸಿದ ಐಪಿಎಲ್ ಕ್ರಿಕೆಟಿಗರು

Published : May 09, 2025, 10:49 PM IST
ಇದೇ ಮೊದಲ ಬಾರಿಗೆ ರೈಲಿನ ಮೂಲಕ ದೆಹಲಿಗೆ ಪ್ರಯಾಣಿಸಿದ ಐಪಿಎಲ್ ಕ್ರಿಕೆಟಿಗರು

ಸಾರಾಂಶ

ಐಪಿಎಲ್ ಕ್ರಿಕೆಟಿಗರು ಇದೇ ಮೊದಲ ಬಾರಿಗೆ ರೈಲಿನ ಮೂಲಕ ಪ್ರಯಾಣಿಸಿದ್ದಾರೆ. ಒಂದು ದಿನ ಇಡೀ ಪ್ರಯಾಣಿಸಿ ದೆಹಲಿ ತಲುಪಿದ್ದಾರೆ. ಇದಕ್ಕೆ ಮುಖ್ಯ ಕಾರಣ ಪಾಕಿಸ್ತಾನ ನಡೆಸಿದ ಕ್ಷಿಪಣಿ ದಾಳಿ.

ನವದೆಹಲಿ(ಮೇ.09) ಐಪಿಎಲ್ ಮಿಲಿಯನ್ ಡಾಲರ್ ಟೂರ್ನಿ ಎಂದೇ ಜಪ್ರಿಯವಾಗಿದೆ. ಪ್ರತಿ ಫ್ರಾಂಚೈಸಿ ತನ್ನ ಆಟಗಾರರಿಗೆ ಅತ್ಯುತ್ತಮ ಸೌಲಭ್ಯ ಕಲ್ಪಿಸುತ್ತದೆ. ಒಂದು ಕ್ರೀಡಾಂಗಣದಿಂದ ಮತ್ತೊಂದು ಕ್ರೀಡಾಂಗಣಕ್ಕೆ ಆಟದಾರರು, ಸಿಬ್ಬಂದಿಗಳು ವಿಮಾನದಲ್ಲಿ ಪ್ರಯಾಣಿಸುತ್ತಾರೆ. ಇದು ಅನಿವಾರ್ಯ ಕೂಡ. ಆದರೆ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಟಗಾರರು ರೈಲಿನ ಮೂಲಕ ಪ್ರಯಾಣ ಮಾಡಿದ ಘಟನೆ ನಡೆದಿದೆ. ಒಂದು ಇಡೀ ದಿನ ಐಪಿಎಲ್ ಆಟಗಾರರು ರೈಲಿನ ಮೂಲಕ ಪ್ರಯಾಣ ಮಾಡಿದ್ದಾರೆ.ಇದಕ್ಕೆ ಮುಖ್ಯ ಕಾರಣ ಭಾರತ ಪಾಕಿಸ್ತಾನ ನಡುವಿನ ಯುದ್ಧ ಭೀತಿ.

ವಿಮಾನ ಸೇವೆ ರದ್ದಾದ ಕಾರಣ ರೈಲು ಪ್ರಯಾಣ
ಧರ್ಮಶಾಲಾದಲ್ಲಿ ಆಯೋಜಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಪಂದ್ಯವನ್ನು ಕೇಂದ್ರ ಗೃಹ ಇಲಾಖೆ ಸೂಚನೆ ಮೇರಗೆ ದಿಢೀರ್ ಸ್ಥಗಿತಗೊಳಿಸಾಗಿತ್ತು. ಪಾಕಿಸ್ತಾನ ಗಡಿಯಲ್ಲಿ ನಡೆಸಿದ ಕ್ಷಿಪಣಿ ಹಾಗೂ ಡ್ರೋನ್ ದಾಳಿಯಿಂದ ಪಂದ್ಯ ರದ್ದುಗೊಳಿಸಲಾಗಿತ್ತು. ಇನ್ನು ವಿಮಾನ ಸೇವೆಗಳು ರದ್ದಾಗಿತ್ತು. ಹೀಗಾಗಿ ಐಪಿಎಲ್ ಆಟಾಗಾರರು ಸುರಕ್ಷಿತವಾಗಿ ದೆಹಲಿ ತಲುಪಲು ಬೇರೆ ದಾರಿ ಇರಲಿಲ್ಲ. ಹೀಗಾಗಿ ಬಿಸಿಸಿಐ ಆಟಗಾರರಿಗೆ ವಿಶೇಷ ರೈಲು ವ್ಯವಸ್ಥೆ ಮಾಡಿತ್ತು. ಈ ರೈಲಿನ ಮೂಲಕ ಐಪಿಎಲ್ ಆಟಗಾರರು ದೆಹಲಿಗೆ ಪ್ರಯಾಣಿಸಿದ್ದಾರೆ. 

ಒಂದೇ ವಾರದಲ್ಲಿ ಐಪಿಎಲ್ ಪುನರ್ ಆರಂಭ, ಮಹತ್ವದ ಸುಳಿವು ನೀಡಿದ ಬಿಸಿಸಿಐ

ಧರ್ಮಶಾಲಾದಿಂದ ಜಲಂದರ್‌ಗೆ ಬಸ್ ಪ್ರಯಾಣ
ಸುರಕ್ಷತಾ ಕಾರಣದಿಂದ ವಿಮಾನ ಸೇವೆ ರದ್ದು ಮಾಡಲಾಗಿತ್ತು. ಇತ್ತ ಧರ್ಮಶಾಲಾದಿಂದ ಆಟದಾರರನ್ನು ರೈಲು ನಿಲ್ದಾಣಕ್ಕೆ ಕರೆದೊಯ್ಯುವುದು ಅತೀ ದೊಡ್ಡ ಸವಾಲಾಗಿತ್ತು. ಒಂದೆಡೆ ಸುರಕ್ಷತೆ ಮತ್ತೊಂದೆಡೆ ಡ್ರೋನ್, ಕ್ಷಿಪಣಿ ದಾಳಿ ಆತಂಕ ಎದುರಾಗಿತ್ತು. ಹೀಗಾಗಿ ಭಾರಿ ಭದ್ರತೆಯೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಆಟಗಾರರನ್ನು ಧರ್ಮಶಾಲಾದಿಂದ ಜಲಂಧರ್‌ಗೆ ರಸ್ತೆ ಮೂಲಕ ಕರೆ ತರಲಾಗಿತ್ತು. ತಂಡದ ಬಸ್‌ನಲ್ಲಿ ಆಟಗಾರರು ಪ್ರಯಾಣಿಸಿ ಜಲಂದರ್ ರೈಲು ನಿಲ್ದಾಣಕ್ಕೆ ಆಗಮಿಸಿದ್ದಾರೆ.

 

 

ಜಲಂದರ್ ರೈಲು ನಿಲ್ದಾಣದಿಂದ ದೆಹಲಿಗೆ ರೈಲು ಪ್ರಯಾಣ
ಜಲಂದರ್ ರೈಲು ನಿಲ್ದಾಣದಿಂದ ದೆಹಲಿಗೆ ರೈಲಿನ ಮೂಲಕ ಪ್ರಯಾಣ ಮಾಡಿದ್ದರೆ. ಇದು ಕನಿಷ್ಠ 7 ಗಂಟೆಗಳ ಪ್ರಯಾಣ. ಸುದೀರ್ಘ ಪ್ರಯಾಣದ ಬಳಿಕ ಇದೀಗ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರು ಸುರಕ್ಷಿತವಾಗಿ ದೆಹಲಿ ತಲುಪಿದ್ದಾರೆ.  ಕೆಎಲ್ ರಾಹುಲ್, ವಿದೇಶಿ ಕ್ರಿಕೆಟಿಗರು ಸೇರಿದಂತೆ ಎಲ್ಲಾ ಸ್ಟಾರ್ ಕ್ರಿಕೆಟಿಗರು ರೈಲಿನ ಮೂಲಕ ಪ್ರಯಾಣ ಮಾಡಿದ್ದಾರೆ. 

ಐಪಿಎಲ್ ಟೂರ್ನಿ ಮುಂದೂಡಿಕೆ, ಗಡಿಯಲ್ಲಿ ಮುಂದುವರಿದ ದಾಳಿ
ಭಾರತ ಪಾಕಿಸ್ತಾನ ಉದ್ವಿಘ್ನ ಪರಿಸ್ಥಿತಿ ತೀವ್ರಗೊಂಡಿದೆ. ಗಡಿಯಲ್ಲಿ ಮತ್ತೆ ಪಾಕಿಸ್ತಾನ ದಾಳಿ ನಡೆಸುತ್ತಿದೆ. ಇತ್ತ ಭದ್ರತಾ ಕಾರಣದಿಂದ ಐಪಿಎಲ್ ಪಂದ್ಯಗಳನ್ನು ಮುಂದೂಡಿಕೆ ಮಾಡಲಾಗಿದೆ.

ಪಾಕಿಸ್ತಾನಕ್ಕೆ ತೀವ್ರ ಮುಖಭಂಗ, ಪಿಎಸ್ಎಲ್ ಟೂರ್ನಿ ಆತಿಥ್ಯವಹಿಸಲು ದುಬೈ ಹಿಂದೇಟು
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಒಂದು ತಂಡ ಬಿಟ್ಟು ಆರ್‌ಸಿಬಿ, ಚೆನ್ನೈ ಸೇರಿ ಐಪಿಎಲ್‌ ತಂಡಗಳ ಬ್ರ್ಯಾಂಡ್ ಮೌಲ್ಯ ಭಾರೀ ಕುಸಿತ!
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!