
ಬೆಂಗಳೂರು (ಅ.29): ಟೀಮ್ ಇಂಡಿಯಾ ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಟಿ20 ಸರಣಿ ಆಡುತ್ತಿದೆ. ಮುಂಬರುವ ಟಿ20 ವಿಶ್ವಕಪ್ 2026ನಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಯಾರಿ ನಡೆಸುತ್ತಿದೆ. ಹಾಗಿದ್ದರೂ ಮುಂಬರುವ ಐಪಿಎಲ್ ಋತುವಿನ ಬಜ್ ಈಗಾಗಲೇ ಆರಂಭವಾಗಿದೆ. ಆಟಗಾರರನ್ನು ತಂಡದಲ್ಲಿಯೇ ಉಳಿಸಿಕೊಳ್ಳುವ ರಿಟೆನ್ಶನ್ ಪ್ರಕ್ರಿಯೆಗೆ ಕಟ್ ಆಫ್ ಡೇಟ್ ಹಾಗೂ ತಾತ್ಕಾಲಿಕ ಆಕ್ಷನ್ ವಿಂಡೋ ಬಗ್ಗೆಯೂ ವರದಿಗಳು ಬಂದಿವೆ.
ಐಪಿಎಲ್ ಕ್ಯಾಲೆಂಡರ್‌ನಲ್ಲಿ ಈಗ ಎರಡು ಪ್ರಮುಖ ಗುರುತುಗಳನ್ನು ನಿಗದಿಪಡಿಸಲಾಗಿದೆ: ಕ್ರಿಕ್‌ಬಜ್ ವರದಿ ಮಾಡಿದಂತೆ ನವೆಂಬರ್ ಮಧ್ಯದಲ್ಲಿ ರಿಟೆನ್ಶನ್ ಕಟ್-ಆಫ್ ಮತ್ತು ಡಿಸೆಂಬರ್ ಮಧ್ಯದಲ್ಲಿ ಮಿನಿ-ಹರಾಜು ವಿಂಡೋ. ಆದರೆ, ಈ ವಿಚಾರಗಳನ್ನು ದೃಢೀಕರಿಸುವ ಪತ್ರಗಳು ಇನ್ನಷ್ಟೇ ಬರಬೇಕಿದೆ.
ಫ್ರಾಂಚೈಸಿ ಅಧಿಕಾರಿಗಳು ಆಂತಿರಿಕ ಟೈಮ್‌ಲೈನ್‌ಗಳ ಬಗ್ಗೆ ಕೆಲಸ ಮಾಡುತ್ತಿದ್ದಾರೆ. ಪ್ಲೇಯರ್ ರಿಟೆನ್ಶನ್ ಮತ್ತು ರಿಲೀಸ್ ಡೆಡ್‌ಲೈನ್ ಬಹುಶಃ ನ.15 ಆಗಿರಬಹುದು. ಹರಾಜು ಕಾರ್ಯಕ್ರಮ ಡಿಸೆಂಬರ್ 13 ರಿಂದ 15ರ ಒಳಗಡೆ ನಡೆಯಬಹುದು ಎನ್ನಲಾಗಿದ್ದು, ಈ ಬಗ್ಗೆ ಐಪಿಎಲ್ ಆಡಳಿತ ಮಂಡಳಿ ಅಧಿಕರತವಾಗಿ ಪ್ರಕಟಣೆ ನೀಡಬೇಕಿದೆ.
ತಂಡಗಳು ನವೆಂಬರ್ 15 ರೊಳಗೆ ಉಳಿಸಿಕೊಂಡಿರುವ ಮತ್ತು ಬಿಡುಗಡೆ ಮಾಡಿದ ಆಟಗಾರರ ಪಟ್ಟಿಗಳನ್ನು ಸಲ್ಲಿಸಲು ತಯಾರಿ ನಡೆಸುತ್ತಿವೆ, ಇದು ಈ ಬೆಳವಣಿಗೆಯಲ್ಲಿ ಅತ್ಯಂತ ಖಚಿತವಾದ ಅಂಶ. ಅಂತಿಮ ಅಧಿಕೃತ ದೃಢೀಕರಣದವರೆಗೆ ಡಿಸೆಂಬರ್ 13 ರಿಂದ 15 ರವರೆಗಿನ ಅವಧಿಯು ಮಿನಿ-ಹರಾಜಿಗೆ ಸಂಭಾವ್ಯ ಸಮಯವಾಗಿದೆ.
2023ರಲ್ಲಿ ದುಬೈ ಹಾಗೂ 2024ರಲ್ಲಿ ಜೆಡ್ಡಾದಲ್ಲಿ ಐಪಿಎಲ್ ಹರಾಜು ಕಾರ್ಯಕ್ರಮ ನಡೆದಿರುವ ಕಾರಣ ಈ ಬಾರಿ ವಿದೇಶದಲ್ಲಿ ಮಿನಿ ಹರಾಜು ನಡೆಯುವುದು ಅನುಮಾನ ಎನ್ನಲಾಗಿದೆ. ಆದರೆ, ಭಾರತದಲ್ಲಿ ಎಲ್ಲಿ ನಡೆಯುತ್ತದೆ ಎನ್ನುವುದು ಖಚಿತವಾಗಿಲ್ಲ.
ಕ್ರಿಕ್‌ಬಜ್ ವರದಿಯ ಪ್ರಕಾರ, ಎಲ್ಲಾ ಫ್ರಾಂಚೈಸಿಗಳು ತಮ್ಮ ಟೀಮ್‌ಅನ್ನು ಬದಲಾಯಿಸೋದು ಅನುಮಾನ. ಆದರೆ, ಕಳೆದ ಆವೃತ್ತಿಯಲ್ಲಿ ಕೊನೆಯ ಎರಡು ಸ್ಥಾನ ಪಡೆದ ತಂಡಗಳಾದ ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಹೆಚ್ಚೂ ಕಡಿಮೆ ಸಂಪೂರ್ಣ ತಂಡ ಬದಲಾವಣೆ ಮಾಡುವ ಸಾಧ್ಯತೆ ಇದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ದೀಪಕ್ ಹೂಡಾ, ವಿಜಯ್ ಶಂಕರ್, ರಾಹುಲ್ ತ್ರಿಪಾಠಿ, ಸ್ಯಾಮ್ ಕರನ್ ಮತ್ತು ಡೆವೊನ್ ಕಾನ್ವೇ ಅವರಂತಹ ಆಟಗಾರರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈ ಹೆಸರು ಇನ್ನೂ ವರದಿಗಳಿವೆ ಯಾವುದೇ ಅಧಿಕೃತವಾಗಿಲ್ಲ. ಹರಾಜಿಗೆ ಮುಂಚಿತವಾಗಿ ಫ್ರಾಂಚೈಸಿ ಕೆಲವು ಪ್ಲೇಯರ್‌ಗಳನ್ನು ತೆಗೆದು ಹೊಸ ಆಟಗಾರರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ರವಿಚಂದ್ರನ್ ಅಶ್ವಿನ್ ಅವರ ನಿವೃತ್ತಿಯಿಂದಾಗಿ CSK ತನ್ನ ಹಣದಲ್ಲಿ ₹ 9.75 ಕೋಟಿ ಗಳಿಸಲಿದೆ.
ರಾಜಸ್ಥಾನ್ ರಾಯಲ್ಸ್ ವಿಚಾರದಲ್ಲಿ, ಸಂಜು ಸ್ಯಾಮ್ಸನ್ ಅವರ ಟ್ರೇಡಿಂಗ್ ಇನ್ನೂ ಹೆಡ್‌ಲೈನ್‌ನಲ್ಲಿದೆ. ವನಿಂದು ಹಸರಂಗ ಮತ್ತು ಮಹೇಶ್ ತೀಕ್ಷಣ ಅವರ ಬಗ್ಗೆಯೂ ಮಾತುಕತೆಗಳು ಬಂದಿದೆ. ಅದರೊಂದಿಗೆ ಕುಮಾರ ಸಂಗಕ್ಕರ ಮುಖ್ಯ ಕೋಚ್ ಆಗಿ ಬರುವ ಸಾಧ್ಯತೆಯೂ ಚರ್ಚೆಯಲ್ಲಿದೆ.
ಮಿನಿ-ಹರಾಜಿನ ಸಮಯದಲ್ಲಿ ಗಮನ ಸೆಳೆಯುವ ನಿರೀಕ್ಷೆಯ ಹೆಸರುಗಳಲ್ಲಿ, ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಎದ್ದು ಕಾಣುತ್ತಾರೆ. ಗಾಯದ ಕಾರಣದಿಂದಾಗಿ ಅವರು ಹಿಂದಿನ ಹರಾಜಿನಲ್ಲಿ ಭಾಗವಹಿಸಿರಲಿಲ್ಲ. ಈ ಬಾರಿ ಹರಾಜಿನಲ್ಲಿ ಅವರಿಗೆ ದೊಡ್ಡ ಮಟ್ಟದ ಬೇಡಿಕೆ ಬರಬಹುದು ಎನ್ನುವ ನಿರೀಕ್ಷೆ ಇದೆ.
ಡಿಸೆಂಬರ್‌ನಲ್ಲಿ ನಡೆಯಲಿರುವ ಮಿನಿ-ಹರಾಜಿಗಾಗಿ ಫ್ರಾಂಚೈಸಿಗಳು ಪ್ರಸ್ತುತ ಸ್ಲಾಟ್‌ಗಳನ್ನು ಮುಕ್ತಗೊಳಿಸಲು ಮತ್ತು ಹಣ ಗಳಿಸಲು ಕೆಲಸ ಮಾಡುತ್ತಿವೆ. ಹೆಚ್ಚಿನ ಫ್ರಾಂಚೈಸಿಗಳ ವಿಧಾನವು ಪ್ರಾಯೋಗಿಕವಾಗಿ ಉಳಿದಿದೆ: ಕೋರ್ ಟೀಮ್ ಉಳಿಸಿಕೊಳ್ಳುವುದು, ದುಬರ್ಲ ಆಟಗಾರರನ್ನು ತೆಗೆದುಹಾಕುವುದು. ದಿನಗಳು ಹತ್ತಿರವಾದಂತೆ ಈ ವಿಚಾರಗಳು ಇನ್ನಷ್ಟು ಆಸಕ್ತಿ ಮೂಡಿಸಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.