IPL Auction 2024: ಧೋನಿಯಿಂದಲೂ ಮಾಡಲಾಗದ ಸಾಧನೆಯನ್ನು ರಚಿಸಿದ ರಿಷಬ್‌ ಪಂತ್‌!

Published : Dec 19, 2023, 05:15 PM ISTUpdated : Dec 19, 2023, 05:23 PM IST
IPL Auction 2024: ಧೋನಿಯಿಂದಲೂ ಮಾಡಲಾಗದ ಸಾಧನೆಯನ್ನು ರಚಿಸಿದ ರಿಷಬ್‌ ಪಂತ್‌!

ಸಾರಾಂಶ

Rishabh Pant IPL 2024: ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕ ರಿಷಭ್ ಪಂತ್ ವಿಶಿಷ್ಟ ಇತಿಹಾಸ ಸೃಷ್ಟಿಸಿದ್ದಾರೆ. ಐಪಿಎಲ್ ಹರಾಜಿನಲ್ಲಿ ಸಕ್ರಿಯವಾಗಿ ಭಾಗವಹಿಸಿದ ಮೊದಲ ನಾಯಕ ಎನಿಸಿಕೊಂಡಿದ್ದಾರೆ. ಐಪಿಎಲ್ ಹರಾಜಿನಲ್ಲಿ ಭಾಗವಹಿಸುವ ಮೂಲಕ ಪಂತ್ ಈ ವಿಶಿಷ್ಟ ಸಾಧನೆ ಮಾಡಿದರು.  

ದುಬೈ (ಡಿ.19): ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್, ದುಬೈನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2024 ಹರಾಜಿನಲ್ಲಿ ಭಾಗವಹಿಸಿದ್ದಾರೆ. ಕಳೆದ ವರ್ಷ ಹೊಸ ವರ್ಷದ ಮುನ್ನಾದಿನದಂದು ರೂರ್ಕಿ ಬಳಿ ರಸ್ತೆ ಅಪಘಾತದಲ್ಲಿ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಅದರ ನಂತರ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದ ರಿಷಭ್‌ ಪಂತ್‌, ತೀರಾ ಇತ್ತೀಚೆಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಪುನಃಶ್ಚೇತನ ಶಿಬಿರದಲ್ಲಿ ಭಾಗಿಯಾಗಿದ್ದರು. ಇದರ ನಡುವೆ, ಅವರು ಮೊದಲ ಬಾರಿಗೆ ದೊಡ್ಡ ಕ್ರಿಕೆಟ್ ವೇದಿಕೆಯಲ್ಲಿ ಕಾಣಿಸಿಕೊಂಡರು. ಮುಂದಿನ ವರ್ಷ ಐಪಿಎಲ್ 2024ರಲ್ಲಿ ಪಂತ್ ಭಾಗವಹಿಸಲಿದ್ದಾರೆ ಮತ್ತು ತಂಡವನ್ನು ಮುನ್ನಡೆಸಲಿದ್ದಾರೆ ಎಂದು 'ಕ್ರಿಕ್‌ಬಜ್' ಈಗಾಗಲೇ ವರದಿ ಮಾಡಿದೆ. ಫೆಬ್ರವರಿ ಅಂತ್ಯದ ವೇಳೆಗೆ ಪಂತ್ ಸಂಪೂರ್ಣ ಫಿಟ್ ಆಗುವ ನಿರೀಕ್ಷೆಯಿದೆ. ಮಾರ್ಚ್ ಕೊನೆಯ ವಾರದಲ್ಲಿ ಐಪಿಎಲ್ ಆರಂಭವಾಗುವ ನಿರೀಕ್ಷೆಯಿದೆ. ಪಂತ್ ಅನುಪಸ್ಥಿತಿಯಲ್ಲಿ, ಡೇವಿಡ್ ವಾರ್ನರ್ ಐಪಿಎಲ್ 2023 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ನಾಯಕ ಸ್ಥಾನ ವಹಿಸಿಕೊಂಡಿದ್ದರು. ಪಂತ್ ಅನುಪಸ್ಥಿತಿಯ ಕಾರಣ, ಐಪಿಎಲ್‌ನಲ್ಲಿ ಡೆಲ್ಲಿಯ ಪ್ರದರ್ಶನವು ತುಂಬಾ ಕಳಪೆಯಾಗಿತ್ತು.

25 ವರ್ಷದ ಪಂತ್ ಐಪಿಎಲ್ ಹರಾಜಿನಲ್ಲಿ ಸಕ್ರಿಯವಾಗಿ ಭಾಗವಹಿಸಿದ ಮೊದಲ ಹಾಲಿ ನಾಯಕರೆನಿಸಿಕೊಂಡರು. ಹರಾಜಿನ ಸಮಯದಲ್ಲಿ, ಐಪಿಎಲ್ ಹರಾಜು ಟೇಬಲ್‌ನಲ್ಲಿ ಸೌರವ್ ಗಂಗೂಲಿ ಮತ್ತು ರಿಕಿ ಪಾಂಟಿಂಗ್ ಅವರೊಂದಿಗೆ ರಿಷಬ್ ಪಂತ್ ಕಾಣಿಸಿಕೊಂಡರು. ಆಟಗಾರರ ಖರೀದಿಗೆ ಅವರು ಕೂಡ ಬಿಡ್‌ ಮಾಡಿದರು. ತಂಡದ ಹರಾಜಿನ ಪ್ಲ್ಯಾನ್‌ಗಳಲ್ಲೂ ಪಂತ್ ಭಾಗಿಯಾಗಿದ್ದರು. ಕೋಚ್ ಪಾಂಟಿಂಗ್ ಜತೆಗಿನ ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು ಎಂದು ಫ್ರಾಂಚೈಸಿ ಮೂಲಗಳು ತಿಳಿಸಿವೆ. ಕಳೆದ ವರ್ಷ, ಡಿಸೆಂಬರ್ 30 ರಂದು, ಮುಂಜಾನೆ, ರೂರ್ಕಿ ಬಳಿಯ ಗುರುಕುಲ್ ನರ್ಸನ್ ಪ್ರದೇಶದಲ್ಲಿ ರಿಷಬ್ ಪಂತ್ ಅವರ ಕಾರು ಅಪಘಾತಕ್ಕೀಡಾಗಿತ್ತು. ರಿಷಬ್ ಪಂತ್ ಅವರೇ ಕಾರು ಚಲಾಯಿಸುತ್ತಿದ್ದರು.

'ದೇಶಕ್ಕಾಗಿ ಆಡಿ, ದುಡ್ಡು ಬೇಡ ಅಂದ್ರು ಬರುತ್ತೆ.. ' ಕಮ್ಮಿನ್ಸ್‌ ಬೆಸ್ಟ್‌ ಉದಾಹರಣೆ ಎಂದ ಐಪಿಎಲ್‌ ಫ್ಯಾನ್ಸ್‌!

ಐಪಿಎಲ್‌ನಲ್ಲಿ ರಿಷಬ್ ಪಂತ್ ಪ್ರದರ್ಶನದ ಬಗ್ಗೆ ಮಾತನಾಡುವುದಾದರೆ, ಅವರು 98 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 2838 ರನ್ ಗಳಿಸಿದ್ದಾರೆ. ಆದರೆ ಪಂತ್ 33 ಟೆಸ್ಟ್‌ಗಳಲ್ಲಿ 2271 ರನ್ ಗಳಿಸಿದ್ದಾರೆ. ಅವರು 30 ಏಕದಿನ ಪಂದ್ಯಗಳಲ್ಲಿ ತಮ್ಮ ಬ್ಯಾಟಿಂಗ್‌ನಿಂದ 865 ರನ್ ಗಳಿಸಿದ್ದಾರೆ. 66 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 987 ರನ್ ಗಳಿಸಿದ್ದಾರೆ.

ಐಪಿಎಲ್‌ ಇತಿಹಾಸದ 10 ದುಬಾರಿ ಆಟಗಾರರು ಇವರು, ಮಿಚೆಲ್‌ ಸ್ಟಾರ್ಕ್‌ ನಂ.1

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌