IPL Auction 2022: ಮೂಲ ಬೆಲೆ 2 ಕೋಟಿ ಹೊಂದಿರುವ 48 ಆಟಗಾರರ ಕಂಪ್ಲೀಟ್‌ ಡೀಟೈಲ್ಸ್‌..!

By Contributor Asianet  |  First Published Feb 2, 2022, 5:56 PM IST

* 2022ರ ಐಪಿಎಲ್ ಮೆಗಾ ಹರಾಜಿಗೆ ಕ್ಷಣಗಣನೆ ಆರಂಭ

* ಫೆಬ್ರವರಿ 12 ಹಾಗೂ 13ರಂದು ನಡೆಯಲಿದೆ ಐಪಿಎಲ್ ಮೆಗಾ ಹರಾಜು

* 2 ಕೋಟಿ ಮೂಲ ಬೆಲೆ ಹೊಂದಿದ್ದಾರೆ 48 ಆಟಗಾರರು


ಬೆಂಗಳೂರು(ಫೆ.02): ಬಹುನಿರೀಕ್ಷಿತ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League 2022) ಆಟಗಾರರ ಹರಾಜಿಗೆ ಇದೀಗ ಕ್ಷಣಗಣನೆ ಆರಂಭವಾಗಿದೆ. ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯ ಆಟಗಾರರ ಹರಾಜಿಗೆ ಸುಮಾರು 1,214 ಮಂದಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಇದೀಗ ಈ ಪೈಕಿ ಒಟ್ಟು 590 ಆಟಗಾರರ ಹೆಸರನ್ನು ಬಿಸಿಸಿಐ (BCCI) ಶಾರ್ಟ್‌ಲಿಸ್ಟ್‌ ಮಾಡಿದ್ದು, ಇದೇ ಫೆಬ್ರವರಿ 12 ಹಾಗೂ 13ರಂದು ಐಪಿಎಲ್ ಆಟಗಾರರ ಹರಾಜು (IPL Mega Auction) ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆಯಲಿದೆ.

ಈ ಬಾರಿ ಒಟ್ಟು 10 ಐಪಿಎಲ್ ಫ್ರಾಂಚೈಸಿಗಳು ಹರಾಜಿನಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ತಮಗೆ ಬೇಕಾದ ಆಟಗಾರರನ್ನು ಖರೀದಿಸಲು ಸಾಕಷ್ಟು ಪೈಪೋಟಿ ಏರ್ಪಡುವ ಸಾಧ್ಯತೆಯಿದೆ. 15ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಸಾಕಷ್ಟು ಅಳೆದು-ತೂಗಿ ತಮಗೆ ಬೇಕಾದವರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳಲು ಫ್ರಾಂಚೈಸಿಗಳು ರಣತಂತ್ರ ಹೆಣೆಯಲಾರಂಭಿಸಿವೆ. 

Tap to resize

Latest Videos

ಇದೀಗ ಹರಾಜಿಗೆ ಲಭ್ಯವಿರುವ 590 ಆಟಗಾರರ ಪೈಕಿ 228 ಮಂದಿ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಆಟಗಾರರಾದರೆ, 355 ಮಂದಿ ಅಂತಾರಾಷ್ಟ್ರೀಯ ಪಂದ್ಯವನ್ನಾಡ ಆಟಗಾರರಾಗಿದ್ದಾರೆ. ಇನ್ನು 7 ಆಟಗಾರರ ಐಸಿಸಿ ಅಸೋಸಿಯೇಟ್‌ ರಾಷ್ಟ್ರಗಳ ಆಟಗಾರರಾಗಿದ್ದಾರೆ. ಇನ್ನು ಐಪಿಎಲ್‌ ಆಟಗಾರರ ಹರಾಜಿನಲ್ಲಿ ವಿವಿಧ ಕೆಟೆಗೆರೆಯಲ್ಲಿ ಆಟಗಾರರ ಮೂಲ ಬೆಲೆಯನ್ನು ನೀಡಲಾಗಿದೆ. ಈ ಪೈಕಿ ಗರಿಷ್ಠ ಮೂಲ ಬೆಲೆ 2 ಕೋಟಿ ರುಪಾಯಿ ನಿಗಧಿ ಪಡಿಸಲಾಗಿದೆ. ಈ ಗುಂಪಿನಲ್ಲಿ ಒಟ್ಟು 48 ಆಟಗಾರರು ಎರಡು ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದಾರೆ.

IPL Auction: ಐಪಿಎಲ್‌ ಹರಾಜಿಗೆ 590 ಆಟಗಾರರು ಶಾರ್ಟ್‌ಲಿಸ್ಟ್‌..!

2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿರುವ ಎಲ್ಲಾ 48 ಆಟಗಾರರ ವಿವರ ಇಲ್ಲಿದೆ ನೋಡಿ

1. ರವಿಚಂದ್ರನ್ ಅಶ್ವಿನ್‌: ಭಾರತದ ಅನುಭವಿ ಆಫ್‌ ಸ್ಪಿನ್ನರ್, ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದರು.

2. ಟ್ರೆಂಟ್ ಬೌಲ್ಟ್‌ : ನ್ಯೂಜಿಲೆಂಡ್ ಎಡಗೈ ವೇಗದ ಬೌಲರ್, ಕಳೆದ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು.

3. ಪ್ಯಾಟ್ ಕಮಿನ್ಸ್‌: ಆಸ್ಟ್ರೇಲಿಯಾ ತಂಡದ ವೇಗದ ಬೌಲರ್‌, ಕಳೆದ ಐಪಿಎಲ್‌ ಆವೃತ್ತಿಯಲ್ಲಿ ಕೋಲ್ಕತಾ ನೈಟ್‌ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದರು.

4. ಕ್ವಿಂಟನ್ ಡಿ ಕಾಕ್‌ : ದಕ್ಷಿಣ ಆಫ್ರಿಕಾದ ವಿಕೆಟ್‌ ಕೀಪರ್ ಬ್ಯಾಟರ್‌, ಕಳೆದ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು.

5. ಶಿಖರ್ ಧವನ್ : ಟೀಂ ಇಂಡಿಯಾ ಆರಂಭಿಕ ಬ್ಯಾಟರ್, ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದರು.

6. ಫಾಫ್ ಡು ಪ್ಲೆಸಿಸ್ : ದಕ್ಷಿಣ ಆಫ್ರಿಕಾದ ಅನುಭವಿ ಬ್ಯಾಟರ್, ಕಳೆದ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಪ್ರತಿನಿಧಿಸಿದ್ದರು.

7. ಶ್ರೇಯಸ್ ಅಯ್ಯರ್: ಟೀಂ ಇಂಡಿಯಾ ಅನುಭವಿ ಬ್ಯಾಟರ್, ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದರು.

8. ಕಗಿಸೋ ರಬಾಡ: ದಕ್ಷಿಣ ಆಫ್ರಿಕಾದ ಮಾರಕ ವೇಗಿ, ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದರು.

9. ಮೊಹಮ್ಮದ್ ಶಮಿ: ಟೀಂ ಇಂಡಿಯಾ ಅನುಭವಿ ವೇಗಿ, ಕಳೆದ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದರು.

10. ಡೇವಿಡ್ ವಾರ್ನರ್‌: ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್‌, ಕಳೆದ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದರು.

11. ದೇವದತ್ ಪಡಿಕ್ಕಲ್‌: ಟೀಂ ಇಂಡಿಯಾ ಆರಂಭಿಕ ಬ್ಯಾಟರ್, ಕಳೆದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದರು.

12. ಸುರೇಶ್ ರೈನಾ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು.

13. ಜೇಸನ್ ರಾಯಲ್‌: ಇಂಗ್ಲೆಂಡ್ ಸ್ಪೋಟಕ ಆರಂಭಿಕ ಬ್ಯಾಟರ್‌, ಕಳೆದ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದರು.

14. ಸ್ಟೀವ್ ಸ್ಮಿತ್: ಆಸ್ಟ್ರೇಲಿಯಾ ತಂಡದ ಅನುಭವಿ ಬ್ಯಾಟರ್, ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದರು.

15. ರಾಬಿನ್ ಉತ್ತಪ್ಪ: ಟೀಂ ಇಂಡಿಯಾ ಅನುಭವಿ ಕ್ರಿಕೆಟಿಗ, ಕಳೆದ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದರು.

16. ಶಕೀಬ್ ಅಲ್ ಹಸನ್: ಬಾಂಗ್ಲಾದೇಶ ಆಲ್ರೌಂಡರ್

17. ಡ್ವೇನ್ ಬ್ರಾವೋ: ವೆಸ್ಟ್ ಇಂಡೀಸ್ ಆಲ್ರೌಂಡರ್

18. ಮಿಚೆಲ್ ಮಾರ್ಶ್‌: ಆಸ್ಟ್ರೇಲಿಯಾದ ಆಲ್ರೌಂಡರ್

19. ಕೃನಾಲ್ ಪಾಂಡ್ಯ: ಟೀಂ ಇಂಡಿಯಾ ಆಲ್ರೌಂಡರ್

20. ಹರ್ಷಲ್ ಪಟೇಲ್: ಟೀಂ ಇಂಡಿಯಾ ಮಧ್ಯಮ ವೇಗದ ಬೌಲರ್

21. ಸ್ಯಾಮ್ ಬಿಲ್ಲಿಂಗ್ಸ್‌: ಇಂಗ್ಲೆಂಡ್ ಕ್ರಿಕೆಟರ್

22. ಇಶಾನ್ ಕಿಶನ್: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್

23. ದಿನೇಶ್ ಕಾರ್ತಿಕ್: ಟೀಂ ಇಂಡಿಯಾ ಅನುಭವಿ ವಿಕೆಟ್ ಕೀಪರ್ ಬ್ಯಾಟರ್

24. ಅಂಬಟಿ ರಾಯುಡು: ಟೀಂ ಇಂಡಿಯಾ ಅನುಭವಿ ಮಧ್ಯಮ ಕ್ರಮಾಂಕದ ಬ್ಯಾಟರ್

25. ಮ್ಯಾಥ್ಯೂ ವೇಡ್‌: ಅಸ್ಟ್ರೇಲಿಯಾದ ಅನುಭವಿ ಬ್ಯಾಟರ್

26. ದೀಪಕ್ ಚಹರ್: ಟೀಂ ಇಂಡಿಯಾ ವೇಗದ ಬೌಲರ್

27. ಲಾಕಿ ಫರ್ಗ್ಯೂಸನ್‌: ನ್ಯೂಜಿಲೆಂಡ್ ವೇಗದ ಬೌಲರ್

28. ಜೋಶ್ ಹೇಜಲ್‌ವುಡ್‌: ಆಸ್ಟ್ರೇಲಿಯಾದ ಅನುಭವಿ ವೇಗಿ

29. ಭುವನೇಶ್ವರ್ ಕುಮಾರ್: ಟೀಂ ಇಂಡಿಯಾ ಅನುಭವಿ ವೇಗಿ

30. ಮುಷ್ತಾಫಿಜುರ್ ರೆಹಮಾನ್: ಬಾಂಗ್ಲಾದೇಶ ಅನುಭವಿ ವೇಗಿ

31. ಶಾರ್ದೂಲ್ ಠಾಕೂರ್: ಟೀಂ ಇಂಡಿಯಾ ತಾರಾ ಆಲ್ರೌಂಡರ್

32. ಮಾರ್ಕ್‌ ವುಡ್‌: ಇಂಗ್ಲೆಂಡ್‌ ವೇಗದ ಬೌಲರ್

33. ಉಮೇಶ್ ಯಾದವ್: ಟೀಂ ಇಂಡಿಯಾ ವೇಗದ ಬೌಲರ್

34. ಯುಜುವೇಂದ್ರ ಚಹಲ್: ಟೀಂ ಇಂಡಿಯಾ ಲೆಗ್ ಸ್ಪಿನ್ನರ್

35. ಆದಿಲ್ ರಶೀದ್: ಇಂಗ್ಲೆಂಡ್ ಅನುಭವಿ ಲೆಗ್ ಸ್ಪಿನ್ನರ್

36. ಇಮ್ರಾನ್ ತಾಹಿರ್: ದಕ್ಷಿಣ ಆಫ್ರಿಕಾ ಅನುಭವಿ ಲೆಗ್ ಸ್ಪಿನ್ನರ್

37. ಮುಜೀಬ್ ಜದ್ರಾನ್‌: ಆಫ್ಘಾನಿಸ್ತಾನದ ಸ್ಟಾರ್ ಕ್ರಿಕೆಟರ್

38. ಆಡಂ ಜಂಪಾ: ಆಸ್ಟ್ರೇಲಿಯಾದ ಸ್ಟಾರ್ ಲೆಗ್ ಸ್ಪಿನ್ನರ್

39. ಕ್ರಿಸ್ ಜೋರ್ಡನ್: ಇಂಗ್ಲೆಂಡ್ ಸ್ಟಾರ್ ಆಲ್ರೌಂಡರ್

40. ನೇಥನ್ ಕೌಲ್ಟರ್‌-ನೈಲ್: ಆಸ್ಟ್ರೇಲಿಯಾದ ಅನುಭವಿ ವೇಗದ ಬೌಲರ್

41. ಎವಿನ್ ಲೆವಿಸ್‌: ವೆಸ್ಟ್ ಇಂಡೀಸ್ ಸ್ಪೋಕಟ ಆರಂಭಿಕ ಬ್ಯಾಟರ್

42. ಜೋಫ್ರಾ ಆರ್ಚರ್: ಇಂಗ್ಲೆಂಡ್ ಮಾರಕ ವೇಗದ ಬೌಲರ್

43. ಜೇಮ್ಸ್ ವಿನ್ಸ್‌: ಇಂಗ್ಲೆಂಡ್ ಸ್ಪೋಟಕ ಬ್ಯಾಟರ್‌

44. ಮರ್ಚೆಂಟ್ ಡಿ ಲಾಂಗೆ: ದಕ್ಷಿಣ ಆಫ್ರಿಕಾದ ವೇಗದ ಬೌಲರ್

45. ಸಕೀಬ್ ಮೊಹಮ್ಮದ್: ಇಂಗ್ಲೆಂಡ್ ವೇಗದ ಬೌಲರ್

46. ಆಸ್ಟನ್ ಆಗರ್: ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್

47. ಡೇವಿಡ್ ವಿಲ್ಲೆ: ಇಂಗ್ಲೆಂಡ್ ವೇಗದ ಬೌಲರ್

48. ಕ್ರೆಗ್ ಓವರ್‌ಟನ್‌: ಇಂಗ್ಲೆಂಡ್ ವೇಗದ ಬೌಲರ್
 

click me!