IPL Auction 2022 ರಾಯುಡುಗೆ 6.75 ಕೋಟಿ ನೀಡಿದ ಸಿಎಸ್‌ಕೆ, ಪಂಜಾಬ್ ಪಾಲಾದ ಜಾನಿ ಬೈರ್‌ಸ್ಟೋ!

Published : Feb 12, 2022, 05:34 PM ISTUpdated : Feb 13, 2022, 01:22 PM IST
IPL Auction 2022 ರಾಯುಡುಗೆ 6.75 ಕೋಟಿ ನೀಡಿದ ಸಿಎಸ್‌ಕೆ, ಪಂಜಾಬ್ ಪಾಲಾದ ಜಾನಿ ಬೈರ್‌ಸ್ಟೋ!

ಸಾರಾಂಶ

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೆ ರಾಯುಡು ಅಂಬಾಟಿ ರಾಯುಡುಗೆ 6.75 ಕೋಟಿ ರೂಪಾಯಿ ಜಾನಿ ಬೈರ್‌ಸ್ಟೋಗೆ 6.75 ಕೋಟಿ ನೀಡಿದ ಪಂಜಾಬ್ 

ಬೆಂಗಳೂರು(ಫೆ.12): ಐಪಿಎಲ್ ಹರಾಜು(IPL Auction 2022) ಪ್ರಕ್ರಿಯೆಯಲ್ಲಿ ಬಿರುಸಿನ ಮಾರಾಟ ನಡೆಯುತ್ತಿದೆ. ಇಶಾನ್ ಕಿಶನ್ 15.25 ಕೋಟಿ ರೂಪಾಯಿಗೆ ಸೇಲ್ ಆಗುವ ಮೂಲಕ ಈ ಬಾರಿಯ ಹರಾಜಿನ ಇದುವರೆಗಿನ ಗರಿಷ್ಠ ಎನಿಸಿಕೊಂಡಿದ್ದಾರೆ. ಇತ್ತ ಅಂಬಾಟಿ ರಾಯುಡು(Ambati Rayudu) ಮತ್ತೆ ಚೆನ್ನೈ ಸೂಪರ್ ಕಿಂಗ್ಸ್(CSK) ತಂಡ ಸೇರಿಕೊಂಡಿದ್ದರೆ, ಇಂಗ್ಲೆಂಡ್ ಕ್ರಿಕೆಟಿಗ ಜಾನಿ ಬೈರ್‌ಸ್ಟೋ(jonny bairstow) ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ.

2 ಕೋಟಿ ರೂಪಾಯಿ ಮೂಲ ಬೆಲೆ ಹೊಂದಿದ್ದ ಅಂಬಾಟಿ ರಾಯುಡು ಖರೀದಿಸಲು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಜಿದ್ದಾಜಿದ್ದಿ ನಡೆಯಿತು. ಪಟ್ಟು ಬಿಡದ ಚೆನ್ನೈ ಸೂಪರ್ ಕಿಂಗ್ಸ್ 6.25 ಕೋಟಿ ರೂಪಾಯಿ ನೀಡಿ ರಾಯುಡು ಖರೀದಿಸುವಲ್ಲಿ ಸಿಎಸ್‌ಕೆ ಯಶಸ್ವಿಯಾಯಿತು.  ಕಳೆದ ಆವೃತ್ತಿಯಲ್ಲಿ ಅಂಬಾಟಿ ರಾಯುಡು ಚೆನ್ನೈ ಪರ ಆಡಿದ್ದರು. 

IPL Auction 2022 ಆರ್‌ಸಿಬಿ ತಂಡಕ್ಕೆ ದಿನೇಶ್ ಕಾರ್ತಿಕ್, 5.50 ಕೋಟಿ ರೂಗೆ ಸೇಲ್!

ಐಪಿಎಲ್ ಟೂರ್ನಿಯಲ್ಲಿ ಅಂಬಾಟಿ ರಾಯುಡು ಚೆನ್ನೈ ಸೂಪರ್ ಕಿಂಗ್ಸ್ ಪರ ಮಿಂಚಿನ ಪ್ರದರ್ಶನದ ಮೂಲಕ ಗಮನಸೆಳೆದಿದ್ದಾರೆ. ಹೀಗಾಗಿ ಚೆನ್ನೈ ರಾಯುಡು ಖರೀದಿಗೆ ಪಟ್ಟು ಹಿಡಿಯಿತು. ಕೊನೆಗೂ ರಾಯುಡು ಖರೀದಿಸುವಲ್ಲಿ ಯಶಸ್ವಿಯಾಯಿತು. 

ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿರುವ ಅಂಬಾಟಿ ರಾಯುಡು ಇದೀಗ ಮತ್ತೆ ಚೆನ್ನೈ ತಂಡ ಸೇರಿಕೊಂಡಿದ್ದಾರೆ. 2021ರ ಐಪಿಎಲ್ ಆವೃತ್ತಿಯಲ್ಲಿ ಅಂಬಾಟಿ ರಾಯುಡು 16 ಪಂದ್ಯದಿಂದ 257 ರನ್ ಸಿಡಿಸಿದ್ದಾರೆ. ಅಜೇಯ 72 ರನ್ ಕಳೆದ ಆವೃತ್ತಿಯಲ್ಲಿ ರಾಯುಡು ಗರಿಷ್ಠ ಮೊತ್ತವಾಗಿದೆ. 2 ಅರ್ಧಶತಕ ಸಿಡಿಸಿದ್ದಾರೆ.

IPL Auction 2022 ಮೊದಲ ಬಾರಿಗೆ ಸುರೇಶ್ ರೈನಾ ಅನ್‌ಸ್ಟೋಲ್ಡ್, ಮಾರಾಟವಾಗದೇ ಉಳಿದ ಆಟಗಾರರ ಲಿಸ್ಟ್!

ಐಪಿಎಲ್ ಟೂರ್ನಿಯಲ್ಲಿ ರಾಯುಡು 175 ಪಂದ್ಯ ಆಡಿದ್ದಾರೆ. ಈ ಮೂಲಕ 3916 ರನ್ ಸಿಡಿಸಿದ್ದಾರೆ. 1 ಶತಕ ಹಾಗೂ 21 ಅರ್ಧಶತಕ ಸಿಡಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಟ್ರೋಫಿ ಗೆಲುವಿನಲ್ಲಿ ಅಂಬಾಟಿ ರಾಯುಡು ಪಾತ್ರ ಪ್ರಮುಖವಾಗಿದೆ.

ಜಾನಿ ಬೈರ್‌ಸ್ಟೋ
ಕಳೆದ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿದ್ದ ಇಂಗ್ಲೆಂಡ್ ಕ್ರಿಕೆಟಿಗ ಜಾನಿ ಬೈರ್‌ಸ್ಟೋ ಈ ಬಾರಿ ಪಂಜಾಬ್ ಕಿಂಗ್ಸ್(Punjab Kings) ಪರ ಕಣಕ್ಕಿಳಿಯಲಿದ್ದಾರೆ. ಪಂಜಾಬ್ ತಂಡ 6.75 ಕೋಟಿ ರೂಪಾಯಿ ನೀಡಿ ಬೈರ್‌ಸ್ಟೋ ಖರೀದಿ ಮಾಡಿದೆ. 

2021ರಲ್ಲಿ ಜಾನಿ ಬೈರ್‌ಸ್ಟೋ ಕೇವಲ 7 ಪಂದ್ಯ ಮಾತ್ರ ಆಡಿದ್ದಾರೆ. 248 ರನ್ ಸಿಡಿಸಿದ್ದಾರೆ. ಇಷ್ಟೇ ಅಲ್ಲ 2 ಅರ್ಧಶತಕ ಸಿಡಿಸಿ ಮಿಂಚಿದ್ದರು. 2019ರಿಂದ ಐಪಿಎಲ್ ಟೂರ್ನಿಯಲ್ಲಿ ಸಕ್ರಿಯರಾಗಿರುವ ಜಾನಿ ಬೈರ್‌ಸ್ಟೋ 28 ಪಂದ್ಯಗಳನ್ನು ಆಡಿದ್ದಾರೆ. ಈ ಮೂಲಕ 1,038 ರನ್ ಸಿಡಿಸಿದ್ದಾರೆ. 1 ಶತಕ ಹಾಗೂ 7 ಅರ್ಧಶತಕ ಸಿಡಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್
ಅಂಬಾಟಿ ರಾಯುಡು ಚೆನ್ನೈ ತಂಡ ಸೇರಿಕೊಂಡಿರುವದು ಇದೀಗ ಈ ಬಾರಿಯೂ ಟ್ರೋಫಿ ಸಿಎಸ್‌ಕೆ ಪಾಲಾಗಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಅಂಬಾಟಿ ಇದ್ದ ತಂಡಕ್ಕೆ ಟ್ರೋಫಿ ಒಲಿಯಲಿದೆ ಅನ್ನೋ ಮಾತಿದೆ. ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ಯಶಸ್ವಿ ತಂಡ ಎಂದೇ ಗುರುತಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕು ಪ್ರಶಸ್ತಿ ಗೆದ್ದಿದೆ. 2010, 2011, 2018 ಹಾಗೂ 2021ರಲ್ಲಿ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ಇನ್ನು 2010 ಹಾಗೂ 2014ರಲ್ಲಿ ಚಾಂಪಿಯನ್ಸ್ ಲೀಗ್ ಟೂರ್ನಿ ಗೆದ್ದು ಕೊಂಡ ಸಾಧನೆ ಮಾಡಿದೆ. ಎಂ.ಎಸ್.ಧೋನಿ ನಾಯಕತ್ವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯೂ ಪ್ರಶಸ್ತಿ ಗೆಲುವಿಗಾಗಿಗ ಅತ್ಯುತ್ತಮ ತಂಡವನ್ನು ಆಯ್ಕೆ ಮಾಡಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?
ಸಂಜು ಸ್ಯಾಮ್ಸನ್ ಔಟ್, ಶುಭ್‌ಮನ್ ಗಿಲ್ ಇನ್: ಅಸಲಿ ಸತ್ಯ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್!