ಒಂದೇ ವರ್ಷದಲ್ಲಿ ಕೆ.ಗೌತಮ್ ಮೌಲ್ಯ ದಾಖಲೆಯ ಇಳಿಕೆ
ಕಳೆದ ವರ್ಷ 9.25 ಕೋಟಿಗೆ ಚೆನ್ನೈ ತಂಡ ಸೇರಿದ್ದ ಕೆ.ಗೌತಮ್
ಹಾಲಿ ವರ್ಷದ ಹರಾಜಿನಲ್ಲಿ 90 ಲಕ್ಷಕ್ಕೆ ಲಕ್ನೋ ತಂಡಕ್ಕೆ ಸೇರ್ಪಡೆ
ಬೆಂಗಳೂರು (ಫೆ. 13): ಷೇರು ಮಾರ್ಕೆಟ್ ನಲ್ಲಿ ಒಂದು ಕಂಪನಿಯ ಮೌಲ್ಯ ಏರಿಳಿಕೆಯಾಗುವ ರೀತಿಯಲ್ಲೇ ಕರ್ನಾಟಕದ ಸ್ಟಾರ್ ಆಲ್ರೌಂಡರ್ ಕೃಷ್ಣಪ್ಪ ಗೌತಮ್ (Krishnappa Gowtham) ಅವರ ಮೌಲ್ಯದಲ್ಲಿ ದಾಖಲೆಯ ಮಟ್ಟದ ಇಳಿಕೆಯಾಗಿದೆ. ಒಂದೇ ವರ್ಷದಲ್ಲಿ ಕೆ.ಗೌತಮ್ ಅವರ ಐಪಿಎಲ್ (IPL) ಮೌಲ್ಯದಲ್ಲಿ 8.35 ಕೋಟಿ ರೂಪಾಯಿ ಇಳಿಕೆಯಾಗಿದೆ ಎಂದರೆ ಅಚ್ಚರಿಯಾಗದೇ ಇರದು. ಕಳೆದ ವರ್ಷದ ಐಪಿಎಲ್ ಹರಾಜಿನಲ್ಲಿ (IPL Auction) 9.25 ಕೋಟಿ ರೂಪಾಯಿಗೆ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡ ಸೇರಿಕೊಂಡಿದ್ದ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಈ ಬಾರಿ ಕೇವಲ 90 ಲಕ್ಷಕ್ಕೆ ಲಕ್ನೋ ಸೂಪರ್ ಜೈಂಟ್ಸ್ (Lucknow Supergiants) ತಂಡದ ಪಾಲಾಗಿದ್ದಾರೆ.
2ನೇ ದಿನದ ಐಪಿಎಲ್ ಹರಾಜಿನಲ್ಲಿ ಕೆ.ಗೌತಮ್ (K.Gowtham) ಹೆಸರು ಬಂದಾಗ ಕೆಲ ಫ್ರಾಂಚೈಸಿಗಳು ಬಿಡ್ ಮಾಡಿದರಾದರೂ ಕೊನೆಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ 90 ಲಕ್ಷಕ್ಕೆ ಕೆ.ಗೌತಮ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಯಶಸ್ವಿಯಾಯಿತು. ಕಳೆದ ಋತುವಿನಲ್ಲಿ, ಭಾರತದ ಆಲ್-ರೌಂಡರ್ ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಅನ್‌ಕ್ಯಾಪ್ಡ್ ಆಟಗಾರನಾಗುವ ಮೂಲಕ ದಾಖಲೆಯನ್ನು ಸ್ಥಾಪಿಸಿದರು, ಅಂದು ಚೆನ್ನೈ ಸೂಪರ್ ಕಿಂಗ್ಸ್ ಇವರನ್ನು ದಾಖಲೆಯ ಮೊತ್ತಕ್ಕೆ ಖರೀದಿ ಮಾಡಿತ್ತು.
33 ವರ್ಷದ ಕರ್ನಾಟಕದ ಕ್ರಿಕೆಟಿಗ ಅವರು ನಾಯಕ ಎಂಎಸ್ ಧೋನಿಯವರ ನಂಬಿಕೆಯನ್ನು ಗಳಿಸಲು ಸಾಧ್ಯವಾಗಲಿಲ್ಲ. ಯಾಕೆಂದರೆ, ಕಳೆದ ವರ್ಷ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಶಸ್ತಿ ವಿಜೇತ ಅಭಿಯಾನದಲ್ಲಿ ಒಂದೇ ಒಂದು ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. ಕೊನೆಗೆ ಒಂದೂ ಪಂದ್ಯವಾಡದೇ ಅವರನ್ನು ಮೆಗಾ ಹರಾಜಿಗೆ ತಂಡ ಬಿಡುಗಡೆ ಮಾಡಿತ್ತು. 50 ಲಕ್ಷ ರೂಪಾಯಿ ಮೂಲಬೆಲೆ ಹೊಂದಿದ್ದ ಕೆ.. ಗೌತಮ್ ಅವರನ್ನು ಖರೀದಿ ಮಾಡುವ ವೇಳೆ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಕೋಲ್ಕತ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಪೈಪೋಟಿ ಎದುರಾಯಿತು. ಆದರೆ, ಕೆಲ ಬಿಡ್ ಗಳ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೆಕೆಆರ್ ರೇಸ್ ನಿಂದ ಹೊರಬಿದ್ದವು.
K Gowtham is the next all-rounder and he is SOLD to for INR 90 Lakh
— IndianPremierLeague (@IPL)
IPL Auction 2022 Live: 4 ಕೋಟಿಗೆ ಶಿವಂ ದುಬೆ ಖರೀದಿಸಿದ ಚೆನ್ನೈ, ಹೈದರಾಬಾದ್ ತೆಕ್ಕೆಗೆ ಮಾರ್ಕೊ ಯಾನ್ಸೆನ್!...
ಐಪಿಎಲ್ ನಲ್ಲಿ 24 ಪಂದ್ಯಗಳನ್ನು ಆಡಿದ್ದ ಕೆ.ಗೌತಮ್ ಈವರೆಗೂ 13 ವಿಕೆಟ್ ಉರುಳಿಸಿದ್ದಾರೆ. 14.30ರ ಸರಾಸರಿಯಲ್ಲಿ ಕೆ. ಗೌತಮ್ 186 ರನ್ ಬಾರಿಸಿದ್ದಾರೆ. ಅವರ ಸ್ಟ್ರೈಕ್ ರೇಟ್170ರ ಆಸುಪಾಸಿನಲ್ಲಿದೆ. ಈವರೆಗೂ ನಾಲ್ಕು ಐಪಿಎಲ್ ಋತುವಿನಲ್ಲಿ ಆಡಿರುವ ಗೌತಮ್, 2018ರಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ 6.20 ಕೋಟಿ ರೂಪಾಯಿಗೆ ಮಾರಾಟವಾಗಿದ್ದರು. ಆ ವರ್ಷ ರಾಜಸ್ಥಾನ ಪರವಾಗಿ ಆಡಿದ 15 ಪಂದ್ಯಗಳಿಂದ 11 ವಿಕೆಟ್ ಉರುಳಿಸಿದ್ದರು. 2019ರಲ್ಲಿ ದಯನೀಯ ವೈಫಲ್ಯ ಕಂಡಿದ್ದ ಗೌತಮ್ ಆಡಿದ 7 ಪಂದ್ಯಗಳಿಂದ ಕೇವಲ 1 ವಿಕೆಟ್ ಉರುಳಿಸಿದರೆ, 2020ರಲ್ಲಿ ಆಡಿದ 2 ಪಂದ್ಯಗಳಿಂದ 1 ವಿಕೆಟ್ ಸಾಧನೆ ಮಾಡಿದ್ದರು. ಇನ್ನು 2021ರಲ್ಲಿ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದ್ದರೂ ಒಂದೇ ಒಂದು ಪಂದ್ಯವಾಡಲು ವಿಫಲವಾಗಿದ್ದರು. ಇದರ ಪ್ರಕಾರ, ಕಳೆದ ಮೂರು ಸೀಸನ್ ನ ಐಪಿಎಲ್ ನಲ್ಲಿ ಕೇವಲ 2 ವಿಕೆಟ್ ಮಾತ್ರವೇ ಉರುಳಿಸಿರುವ ಕೆ. ಗೌತಮ್ ಗೆ ತಮ್ಮ ಬ್ಯಾಟಿಂಗ್ ಶಕ್ತಿ ತೋರಿಸಲು ಹೆಚ್ಚಿನ ಅವಕಾಶವೇ ಸಿಗಲಿಲ್ಲ.
IPL Auction 2022 : ಲಿವಿಂಗ್‌ಸ್ಟೋನ್ ದುಬಾರಿ ವಿದೇಶಿ ಆಟಗಾರ, ಒಡೆನ್ ಸ್ಮಿತ್ ಗೆ ಐಪಿಎಲ್ ಜಾಕ್ ಪಾಟ್
ಟಿ20 ಮಾದರಿಯಲ್ಲಿ 67 ಪಂದ್ಯಗಳನ್ನು ಆಡಿರುವ ಕೆ. ಗೌತಮ್ 48 ವಿಕೆಟ್ ಉರುಳಿಸಿದ್ದು, 7.39ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಟಿ20 ಮಾದರಿಯಲ್ಲಿ 2 ಅರ್ಧಶತಕ ಬಾರಿಸಿರುವ ದಾಖಲೆಯೂ ಇದೆ. 2021ರ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯನ್ನೂ ವಿಶೇಷ ನಿರ್ವಹಣೆಯನ್ನು ತೋರಲು ವಿಫಲರಾಗಿದ್ದು ಅವರ ಮೌಲ್ಯದ ಇಳಿಕೆಗೆ ಕಾರಣವಾಗಿದೆ. ಆಡಿದ 5 ಪಂದ್ಯಗಳಿಂದ 7 ವಿಕೆಟ್ ಉರುಳಿಸಿದರೆ, ಕೇವಲ 16 ರನ್ ಬಾರಿಸಿದ್ದಾರೆ. ಇದೇ ಕಾರಣಕ್ಕಾಗಿ ಐಪಿಎಲ್ ನಲ್ಲಿ ದೊಡ್ಡ ಮಟ್ಟದ ಮೌಲ್ಯ ಕುಸಿತ ಕಂಡಿರುವ ಕೆ. ಗೌತಮ್ ಸೂಪರ್ ಜೈಂಟ್ ಪರ ಆಡುವ ಮೂಲಕ ಗಮನಸೆಳೆಯುವ ವಿಶ್ವಾಸದಲ್ಲಿದ್ದಾರೆ. ಲಕ್ನೋ ಸೂಪರ್‌ಜೈಂಟ್ ತಂಡದ ಬಗ್ಗೆ ಹೇಳುವುದಾದರೆ, ಈಗಾಗಲೇ ದೀಪಕ್ ಹೂಡಾ, ಕೃನಾಲ್ ಪಾಂಡ್ಯ ಅವರಂತಹ ಆಲ್ರೌಂಡರ್ ಗಳು ತಂಡದಲ್ಲಿದ್ದು, ಗೌತಮ್ ಕೂಡ ಇವರ ನಡುವೆ ಅವಕಾಶ ಪಡೆಯಬಹುದಾಗಿದೆ.