* ಬಹುನಿರೀಕ್ಷಿತ ಐಪಿಎಲ್ ಮೆಗಾ ಹರಾಜಿಗೆ ಕ್ಷಣಗಣನೆ ಆರಂಭ
* ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಆಟಗಾರರ ಹರಾಜು ಫೆಬ್ರವರಿ 12 ಹಾಗೂ 13ರಂದು ನಡೆಯಲಿದೆ.
* ಹರಾಜಿನಲ್ಲಿ ಒಟ್ಟು 600 ಆಟಗಾರರು ಭಾಗಿ
ಬೆಂಗಳೂರು(ಫೆ.12): ಬಹುನಿರೀಕ್ಷಿತ ಐಪಿಎಲ್ ಆಟಗಾರರ ಮೆಗಾ ಹರಾಜು (IPL Mega Auction 2022) ಪ್ರಕ್ರಿಯೆ ಶನಿವಾರ ಮತ್ತು ಭಾನುವಾರ ಇಲ್ಲಿನ ಪಂಚತಾರಾ ಹೋಟೆಲ್‌ನಲ್ಲಿ ನಡೆಯಲಿದೆ. ಹೊಸದಾಗಿ ಸೇರ್ಪಡೆಗೊಂಡಿರುವ ಲಖನೌ ಹಾಗೂ ಅಹಮದಾಬಾದ್ ಸೇರಿ ಒಟ್ಟು 10 ಫ್ರಾಂಚೈಸಿಗಳು ಕೋಟಿ ಕೋಟಿ ರು. ಹಣ ಖರ್ಚು ಮಾಡಿ ಬಲಿಷ್ಠ ತಂಡ ಕಟ್ಟಲು ಎದುರು ನೋಡುತ್ತಿವೆ. ಈ ವರ್ಷ ಹರಾಜಿನಲ್ಲಿ ಹಲವು ಆಟಗಾರರು ಕೋಟ್ಯಧಿಪತಿಗಳಾಗಲಿದ್ದಾರೆ. ಕನಿಷ್ಠ 10 ಆಟಗಾರರು 10 ಕೋಟಿ ರು.ಗಿಂತ ಹೆಚ್ಚು ಮೊತ್ತಕ್ಕೆ ಬಿಡ್ ಆಗುವ ನಿರೀಕ್ಷೆ ಇದೆ. ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಆಟಗಾರರ ಮೌಲ್ಯ 20 ಕೋಟಿ ರು. ತಲುಪಿದರೂ ಅಚ್ಚರಿಯಿಲ್ಲ.
ಶನಿವಾರ 161 ಆಟಗಾರರ ಹರಾಜು ನಡೆಯಲಿದ್ದು, ಭಾನುವಾರ ಉಳಿದ ಆಟಗಾರರ ಹರಾಜು ನಡೆಯಲಿದೆ. ಒಂದು ತಂಡ ಗರಿಷ್ಠ 90 ಕೋಟಿ ರು. ಖರ್ಚು ಮಾಡಬಹುದಾಗಿದ್ದು, ಆಟಗಾರರನ್ನು ಉಳಿಸಿಕೊಳ್ಳುವ ಪ್ರಕ್ರಿಯೆಗೆ ಈಗಾಗಲೇ ತಂಡಗಳು ಒಂದಷ್ಟುಹಣ ವೆಚ್ಚ ಮಾಡಿವೆ.
undefined
ಸೂಪರ್ ಸ್ಟಾರ್‌ಗಳಾದ ಎಂ.ಎಸ್.ಧೋನಿ (MS Dhoni), ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮಾ (Rohit Sharma) ಅವರನ್ನು ಅವರವರ ತಂಡಗಳು ಈಗಾಗಲೇ ರೀಟೈನ್ ಮಾಡಿಕೊಂಡಿವೆ. ಕೆ.ಎಲ್.ರಾಹುಲ್(KL Rahul), ರಿಷಭ್ ಪಂತ್ (Rishabh Pant), ಶುಭ್‌ಮನ್ ಗಿಲ್ ಸಹ ಹರಾಜಿಗೆ ಲಭ್ಯರಿಲ್ಲ. ಹೀಗಾಗಿ ಎಲ್ಲರ ಕಣ್ಣು ಶ್ರೇಯಸ್ ಅಯ್ಯರ್ (Shreyas Iyer), ಇಶಾನ್ ಕಿಶನ್ (Ishan Kishan), ದೀಪಕ್ ಚಹರ್, ಶಾರ್ದೂಲ್ ಠಾಕೂರ್, ಯಜುವೇಂದ್ರ ಚಹಲ್ ಸೇರಿ ಹಲವು ಭಾರತೀಯ ತಾರೆಯರು, ಡೇವಿಡ್ ವಾರ್ನರ್(David Warner), ಜೇಸನ್ ಹೋಲ್ಡರ್, ಜಾನಿ ಬೇರ್‌ಸ್ಟೋವ್ ಸೇರಿ ಕೆಲ ಪ್ರಮುಖ ವಿದೇಶಿ ಆಟಗಾರರ ಮೇಲಿದೆ.
IPL Auction 2022: ಮೆಗಾ ಹರಾಜಿಗಾಗಿ ಬೆಂಗಳೂರಿಗೆ ಬಂದಿಳಿದ ಫ್ರಾಂಚೈಸಿಗಳು..!
ಹರಾಜಿನಲ್ಲಿ ಒಟ್ಟು 600 ಆಟಗಾರರು ಪಾಲ್ಗೊಳ್ಳಲಿದ್ದು, ಇದರಲ್ಲಿ 380 ಭಾರತೀಯ ಹಾಗೂ 220 ವಿದೇಶಿ ಆಟಗಾರರಾಗಿದ್ದಾರೆ. 228 ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದಾರೆ. 355 ಆಟಗಾರರು ಈ ವರೆಗೂ ಅಂ.ರಾ.ಕ್ರಿಕೆಟ್‌ನಲ್ಲಿ ಆಡಿಲ್ಲ. ಐಸಿಸಿ ಅಸೋಸಿಯೇಟ್ ರಾಷ್ಟ್ರಗಳ ಒಟ್ಟು 7 ಆಟಗಾರರು ಹರಾಜಿನಲ್ಲಿದ್ದಾರೆ. 48 ಆಟಗಾರರು ತಮ್ಮ ಮೂಲಬೆಲೆಯನ್ನು 2 ಕೋಟಿ ರು.ಗೆ ನಿಗದಿ ಮಾಡಿಕೊಂಡಿದ್ದರೆ, 20 ಆಟಗಾರರು 1.5 ಕೋಟಿ ರು. ಮೂಲಬೆಲೆ ಹೊಂದಿದ್ದಾರೆ. 34 ಆಟಗಾರರ ಮೂಲ ಬೆಲೆ 1 ಕೋಟಿ ರು. ಇದೆ.
The 2022 is almost here, where your favourite teams’ future will be decided! This is where their road to success shall begin.
Catch every move from the mega auction:
Feb 12-13, 11 AM onwards | & pic.twitter.com/ECigmZQtBN
ವಿದೇಶಿ ಆಟಗಾರರಿಗೂ ಇರಲಿದೆ ಭಾರೀ ಬೇಡಿಕೆ
ಡೇವಿಡ್ ವಾರ್ನರ್, ಕ್ವಿಂಟನ್ ಡಿ ಕಾಕ್, ಕಗಿಸೋ ರಬಾಡ(Kagiso Rabada), ಜೇಸನ್ ಹೋಲ್ಡರ್, ಜೇಸನ್ ರಾಯ್, ಜಾನಿ ಬೇರ್‌ಸ್ಟೋವ್, ಪ್ಯಾಟ್ ಕಮಿನ್ಸ್ ಸೇರಿ ಇನ್ನೂ ಅನೇಕ ವಿದೇಶಿ ಆಟಗಾರರು ಹರಾಜಿಗೆ ಲಭ್ಯರಿದ್ದು ದೊಡ್ಡ ಮೊತ್ತಕ್ಕೆ ಬಿಕರಿಯಾಗುವ ನಿರೀಕ್ಷೆ ಇದೆ.
IPL Auction 2022: ಮೆಗಾ ಹರಾಜು ಆರಂಭ ಎಷ್ಟು ಗಂಟೆಯಿಂದ..? ಇಲ್ಲಿದೆ ಉತ್ತರ
ಹರಾಜಿಗೆ 17ರ ನೂರ್, 43ರ ಇಮ್ರಾನ್ ತಾಹಿರ್!
ಈ ವರ್ಷ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಅತಿಕಿರಿಯ ಆಟಗಾರ ಎಂದರೆ ಅದು ಅಷ್ಘಾನಿಸ್ತಾನದ 17 ವರ್ಷದ ಸ್ಪಿನ್ನರ್ ನೂರ್ ಅಹ್ಮದ್. ದ.ಆಫ್ರಿಕಾದ 43 ವರ್ಷದ ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ ಅತಿಹಿರಿಯ ಆಟಗಾರ ಎನಿಸಿದ್ದಾರೆ.
ಹರಾಜು ಆರಂಭ: ಮಧ್ಯಾಹ್ನ 12ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್