ಬೆಂಗಳೂರು(ಫೆ.12): ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ತಂಡದ ಅವಶ್ಯಕತೆಗೆ ತಕ್ಕಂತೆ ಆಟಗಾರರನ್ನು ಖರೀದಿಸುತ್ತಿದೆ. ತಂಡದಲ್ಲಿ ಖಾಲಿ ಇರುವ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಸ್ಥಾನಕ್ಕೆ ಆರ್‌ಸಿಬಿ ತಂಡ ಹಿರಿಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಆಯ್ಕೆ ಮಾಡಿದೆ. ಹರಾಜಿನಲ್ಲಿ 5.50 ಕೋಟಿ ರೂಪಾಯಿ ನೀಡಿ ಕಾರ್ತಿಕ್ ಖರೀದಿಸಿದೆ.
ದಿನೇಶ್ ಕಾರ್ತಿಕ್ ಖರೀದಿಸಲು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತೀವ್ರ ಪೈಪೋಟಿ ನಡೆಸಿತು. ಕೊನೆಗೆ ಆರ್‌ಸಿಬಿ 5.5 ಕೋಟಿ ನೀಡುವ ಮೂಲಕ ಖರೀದಿ ಮಾಡಿದೆ. ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕನಾಗಿ, ಬಳಿಕ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಆಗಿ ಮಿಂಚಿದ ದಿನೇಶ್ ಕಾರ್ತಿಕ್ ಈ ಬಾರಿ ಆರ್‌ಸಿಬಿ ಪರ ಕಣಕ್ಕಿಳಿಯಲಿದ್ದಾರೆ.
IPL Auction 2022 : ಇಶಾನ್ ಕಿಶನ್ ಗೆ ಪಟ್ಟುಬಿಡದ ಮುಂಬೈ, ದಾಖಲೆಯ ಮೊತ್ತಕ್ಕೆ ಮಾರಾಟ!
ಒತ್ತಡ ಸಂದರ್ಭದಲ್ಲಿ ಚೇಸಿಂಗ್ ಮಾಡಬಲ್ಲ, ಪಂದ್ಯವನ್ನು ಫಿನೀಶ್ ಮಾಡಬಲ್ಲ ಕ್ರಿಕೆಟಿಗನ ಅವಶ್ಯಕತೆ ಇದೆ. ಪ್ರಮುಖವಾಗಿ 6ನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಹೆಚ್ಚು ಸೂಕ್ತವಾಗಿದ್ದಾರೆ. ಕಾರ್ತಿಕ್ ಅನುಭವ ಕೂಡ ನೆರವಾಗಲಿದೆ. ಹೀಗಾಗಿ ದಿನೇಶ್ ಕಾರ್ತಿಕ್ ಆಯ್ಕೆ ಮಾಡಿದ್ದೇವೆ ಎಂದು ಆರ್‌ಸಿಬಿ ಕೋಚ್ ಸಂಜಯ್ ಬಂಗಾರ್ ಹೇಳಿದ್ದಾರೆ.
IPL Auction 2022 ಸರೋಜಿನಿ ನಗರ ಮಾರ್ಕೆಟ್ ಲೆವೆಲ್‌ನಲ್ಲಿ ವಾರ್ನರ್ ಖರೀದಿ, ವಾಸಿಮ್ ಜಾಫರ್ ಟ್ವೀಟ್ ವೈರಲ್!
2015ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದಿನೇಶ್ ಕಾರ್ತಿಕ್ ಅವರಿಗೆ 10.50 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ಆದರೆ ಕಾರ್ತಿಕ್ ಆರ್‌ಸಿಬಿ ಪರ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. 2015ರಲ್ಲಿ ಕಾರ್ತಿಕ್ 16 ಪಂದ್ಯಗಳಿಂದ 141 ರನ್ ಸಿಡಿಸಿದ್ದರು. 28 ರನ್ ಕಾರ್ತಿಕ್ ವೈಯುಕ್ತಿ ಗರಿಷ್ಟ ಮೊತ್ತವಾಗಿತ್ತು. ಇನ್ನು ಬ್ಯಾಟಿಂಗ್ ಸರಾಸರಿ 25.76. ಹೀಗಾಗಿ 2016ರ ಆವೃತ್ತಿಯಲ್ಲಿ ಆರ್‌ಸಿಬಿ ಕಾರ್ತಿಕ್‌ರನ್ನು ಕೈಬಿಟ್ಟಿತ್ತು.
ಐಪಿಎಲ್ ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್ 213 ಪಂದ್ಯಗಳನ್ನು ಆಡಿದ್ದಾರೆ. 4046 ರನ್ ಸಿಡಿಸಿದ್ದಾರೆ. 97 ರನ್ ವೈಯುಕ್ತಿಕ ಗರಿಷ್ಠ ಮೊತ್ತ. 19 ಅರ್ಧಶತಕ ಸಿಡಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಖರೀದಿ:
ಫಾಫ್ ಡುಪ್ಲೆಸಿಸ್: 7 ಕೋಟಿ ರೂಪಾಯಿ
ಹರ್ಷಲ್ ಪಟೇಲ್ : 10.75 ಕೋಟಿ ರೂಪಾಯಿ
ವಾನಿಂದು ಹಸರಂಗ : 10.75 ಕೋಟಿ ರೂಪಾಯಿ
ದಿನೇಶ್ ಕಾರ್ತಿಕ್ : 5.50 ಕೋಟಿ ರೂಪಾಯಿ
ಜೋಶ್ ಹೆಜಲ್‌ವುಡ್ : 7.75 ಕೋಟಿ ರೂಪಾಯಿ
ಶೆಹಬಾಜ್ ಅಹಮ್ಮದ್ : 2.40 ಕೋಟಿ ರುಪಾಯಿ
ಆಕಾಶ್ ದೀಪ್ : 20 ಲಕ್ಷ ರೂಪಾಯಿ
ಅನೂಜ್ ರಾವತ್ :3.40 ಕೋಟಿ ರುಪಾಯಿ
ದಿನೇಶ್ ಕಾರ್ತಿಕ್ ಬೆಂಗಳೂರು ತಂಡದ ವಿಕೆಟ್ ಕೀಪರ್ ಹಾಗೂ ಫಿನೀಶರ್ ಜವಾಬ್ದಾರಿ ನಿರ್ವಹಿಸಬೇಕಿದೆ. ಟೀಂ ಇಂಡಿಯಾ ಪರ ಹಲವು ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ಫಿನೀಶಿಂಗ್ ಜವಾಬ್ಜಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಆದರೆ ಕಳೆದ ಕೆಲ ಆವೃತ್ತಿಗಳಿಂದ ನೀರಸ ಪ್ರದರ್ಶನ ನೀಡುತ್ತಿರುವ ದಿನೇಶ್ ಕಾರ್ತಿಕ್ ಇದೀಗ ಆರ್‌ಸಿಬಿ ಪರ ಅಬ್ಬರಿಸುವ ಸಾಧ್ಯತೆ ಇದೆಯಾ ಅನ್ನೋ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡುತ್ತಿದೆ. ಮಾಜಿ ಕ್ರಿಕೆಟಿಗರು ಕಾರ್ತಿಕ್ ಅರ್ಹ ಬೆಲೆ ಪಡೆದಿದ್ದಾರೆ. ವಿಜಯ್ ಹಜಾರೆ ಸೇರಿದಂತೆ ದೇಸಿ ಟೂರ್ನಿಗಳಲ್ಲಿ ತಮಿಳುನಾಡು ತಂಡವನ್ನು ದಿನೇಶ್ ಕಾರ್ತಿಕ್ ಸಮರ್ಥವಾಗಿ ಮುನ್ನಡೆಸಿದ್ದಾರೆ ಅನ್ನೋ ಮಾತುಗಳನ್ನು ಆಡಿದ್ದಾರೆ.