ಟೆಸ್ಟ್ ಕ್ರಿಕೆಟಿಗ ಎಂದು ಎಲ್ಲಾ ಫ್ರಾಂಚೈಸಿಗಳು ಚೇತೇಶ್ವರ್ ಪೂಜಾರ ಅವರನ್ನು ಐಪಿಎಲ್ ಟೂರ್ನಿಯಿಂದ ಕೈಬಿಟ್ಟಿತ್ತು. ಆದರೆ ಬರೋಬ್ಬರಿ 6 ವರ್ಷಗಳ ಬಳಿಕ ಪೂಜಾರ ಮತ್ತೆ ಐಪಿಎಲ್ ತಂಡ ಸೇರಿಕೊಂಡಿದ್ದಾರೆ. ಯಾವ ತಂಡ? ಎಷ್ಟು ಮೊತ್ತ? ಇಲ್ಲಿದೆ
ಚೆನ್ನೈ(ಫೆ.18): ಟೆಸ್ಟ್ ಕ್ರಿಕೆಟ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿರುವ ಚೇತೇಶ್ವರ್ ಪೂಜಾರ ಅವರಿಗೆ ಐಪಿಎಲ್ ಟೂರ್ನಿಯಲ್ಲಿ ಹೆಚ್ಚಿನ ಅವಕಾಶ ಸಿಕ್ಕಿಲ್ಲ. 2014ರಲ್ಲಿ ಕೊನೆಯ ಬಾರಿಗೆ ಐಪಿಎಲ್ ಟೂರ್ನಿಯಲ್ಲಿ ಕಾಣಿಸಿಕೊಂಡ ಪೂಜಾರ ಬಳಿಕ ಲೀಗ್ ಟೂರ್ನಿಯಲ್ಲಿ ಕಾಣಿಸಿಕೊಂಡಿಲ್ಲ. ಇದೀಗ 6 ವರ್ಷಗಳ ಬಳಿಕ ಚೇತೇಶ್ವರ್ ಪೂಜಾರ ಐಪಿಎಲ್‌ಕೆ ಕಮ್‌ಬ್ಯಾಕ್ ಮಾಡಿದ್ದಾರೆ.
IPL ಹರಾಜು: 15 ಕೋಟಿ ರೂಪಾಯಿ ನೀಡಿ ಕೈಲ್ ಜಾಮಿಸನ್ ಖರೀದಿಸಿದ RCB!
undefined
ಚೆನ್ನೈ ಸೂಪರ್ ಕಿಂಗ್ಸ್, ಚೇತೇಶ್ವರ್ ಪೂಜಾರ ಅವರನ್ನು ಖರೀದಿಸಿದೆ. 50 ಲಕ್ಷ ರೂಪಾಯಿ ಬೆಲೆಗೆ ಪೂಜಾರ ಸಿಎಸ್‌ಕೆ ತಂಡ ಸೇರಿಕೊಂಡಿದ್ದಾರೆ. ಈ ಮೂಲಕ ವೈಟ್ ಜರ್ಸಿ ಆಟಗಾರ ಇದೀಗ ಹಳದಿ ಜರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
2014ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದ ಪೂಜಾರಾಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ. ಇನ್ನು ಐಪಿಎಲ್ ಟೂರ್ನಿಯಲ್ಲಿ ಪೂಜಾರ 30 ಪಂದ್ಯವನ್ನು ಆಡಿರುವ ಪೂಜಾರ 390 ರನ್ ಸಿಡಿಸಿದ್ದಾರೆ. ಪೂಜಾರ ಸರಾಸರಿ 20.53.