ಐಪಿಎಲ್ 2027ರಲ್ಲಿ ಕೊಹ್ಲಿ, ರೋಹಿತ್‌ಗಿಂತ ಹೆಚ್ಚು ಸ್ಯಾಲರಿ ಪಡೆಯಲಿದ್ದಾರೆ ಈ ಇಬ್ಬರು ಕ್ರಿಕೆಟರ್ಸ್

Published : Oct 04, 2026, 06:47 PM IST
kohli rohit

ಸಾರಾಂಶ

ಐಪಿಎಲ್ ಟೂರ್ನಿಯಲ್ಲಿ ಕ್ರಿಕೆಟಿಗರ ಗರಿಷ್ಠ ವೇತನ ಭಾರಿ ಸದ್ದು ಮಾಡುತ್ತದೆ. ಪಂತ್ ಡೆಲ್ಲಿ ತಂಡಕ್ಕೆ 15 ಕೋಟಿ ರೂ ಡೀಲ್ ಮೂಲಕ ಮರಳಿದ್ದಾರೆ. ಹಾಗಾದರೆ 2027ರಲ್ಲಿ ಕೊಹ್ಲಿ ಹಾಗೂ ರೋಹಿತ್‌ಗಿಂತ ಹೆಚ್ಚು ಸ್ಯಾಲರಿ ಪಡೆಯುವ ಇಬ್ಬರು ಕ್ರಿಕೆಟಿಗರು ಯಾರು

ಬೆಂಗಳೂರು (ಅ.04) ಐಪಿಎಲ್ 2027ರ ಟೂರ್ನಿಗೆ ಫ್ರಾಂಚೈಸಿಗಳ ತಯಾರಿ ಆರಂಭಗೊಂಡಿದೆ. ಆಟಗಾರ ರಿಟೆನ್ಶನ್, ರಿಲೀಸ್ ಪಟ್ಟಿ ತಯಾರಾಗಿದೆ. ಶೀಘ್ರದಲ್ಲೇ ಎಲ್ಲಾ ತಂಡಗಳು ಪಟ್ಟಿ ಬಿಡುಗಡೆ ಮಾಡಲಿದೆ. ಮಂಬರುವ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಸ್ಯಾಲರಿ ಪಡೆಯುವ ಕ್ರಿಕೆಟಿಗರು ಯಾರು ಅನ್ನೋ ಚರ್ಚೆ ಶುರುವಾಗಿದೆ. ಹರಾಜಿಗೂ ಮೊದಲು ಸದ್ಯ 10 ಫ್ರಾಂಚೈಸಿಗಳ ಪೈಕಿ ಇಬ್ಬರು ಕ್ರಿಕೆಟಿಗರು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗಿಂತ ಹೆಚ್ಚು ಸ್ಯಾಲರಿ ಪಡೆಯಲಿದ್ದಾರೆ.

ರಿಷಬ್ ಪಂತ್‌ಗಿಲ್ಲ ದುಬಾರಿ ಪಟ್ಟ

ರಿಷಬ್ ಪಂತ್ ಕಳೆದ ಐಪಿಎಲ್ ಟೂರ್ನಿಯಲ್ಲಿ ಲಖನೌ ಸೂಪರ್‌ಜೈಂಟ್ಸ್ ತಂಡದಿಂದ 27 ಕೋಟಿ ರೂಪಾಯಿ ಸ್ಯಾಲರಿ ಪಡೆದಿದ್ದರು. ಆದರೆ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಡೀಲ್‌ನಲ್ಲಿ 15 ಕೋಟಿ ರೂಪಾಯಿ ಪಡೆದಿದ್ದಾರೆ. ಹೀಗಾಗಿ ಪಂತ್ ದುಬಾರಿ ಆಟಗಾರನಲ್ಲ. ಲಖನೌ ತಂಡದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮರಳಿರುವ ರಿಷಬ್ ಪಂತ್, ಕೇವಲ 15 ಕೋಟಿ ರೂಪಾಯಿ ಪಡೆಯಲಿದ್ದಾರೆ.

ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಸ್ಯಾಲರಿ ಎಷ್ಟು

ಕಳೆದ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ 21 ಕೋಟಿ ರೂಪಾಯಿ ಸ್ಯಾಲರಿ ಪಡೆದಿದ್ದಾರೆ. ಇನ್ನು ರೋಹಿತ್ ಶರ್ಮಾ 16.30 ಕೋಟಿ ರೂಪಾಯಿ ಸ್ಯಾಲರಿ ಪಡೆದಿದ್ದಾರೆ. ರಿಟೇನ್ಸ್ ಮೂಲಕ ಕೊಂಚ ಸ್ಯಾಲರಿ ಹೆಚ್ಚಳವಾಗಲಿದೆ.

ಶ್ರೇಯಸ್ ಅಯ್ಯರ್-ಹೆನ್ರಿಚ್ ಸ್ಯಾಲರಿ

ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ 26.75 ಕೋಟಿ ರೂಪಾಯಿ ಸ್ಯಾಲರಿ ಪಡೆಯಲಿದ್ದಾರೆ. ಇನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ಹೆನ್ರಿಚ್ ಕ್ಲಾಸೆಲ್ 23 ಕೋಟಿ ರೂಪಾಯಿ ಪಡೆಯಲಿದ್ದಾರೆ. ಗರಿಷ್ಠ ವೇತನ ಪಡೆಯಲಿರುವ ವಿದೇಶಿ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಲಖನೌ ಸೂಪರ್ ಜೈಂಟ್ಸ್ ತಂಡದ ನಿಕೋಸಲ್ ಪೂರನ್ 21 ಕೋಟಿ ರೂಪಾಯಿ ಸ್ಯಾಲರಿ ಪಡೆಯುತ್ತಿದ್ದಾರೆ. ಪೂರನ್ ಹಾಗೂ ವಿರಾಟ್ ಕೊಹ್ಲಿ ವೇತನ ಒಂದೇ ಆಗಿದೆ. ಸದ್ಯ ರಿಟೇನ್ಶನ್ ಹಾಗೂ ರಿಲೀಸ್ ಪಟ್ಟಿ ಬಿಡುಗಡೆಯಾಗಿಲ್ಲ. ಜೊತೆಗೆ ಮಿನಿ ಹರಾಜು ನಡೆಯಲಿದೆ. ಇದರ ನಡುವೆ ಟ್ರೇಡ್ ಮಾತುಕತೆಗಳು ನಡೆಯುತ್ತಿದೆ. ಹೀಗಾಗಿ ಅಂತಿಮ ಕ್ಷಣದಲ್ಲಿ ಸ್ಯಾಲರಿಯಲ್ಲಿ ಕೆಲ ಬದಲಾವಣೆಗಳು ನಡೆಯಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾಷಣದ ನಡುವೆ ಕವಿ ಗುಲ್ಜಾರ್‌ಗೆ ನೀರು ಕೊಟ್ಟ ಸಚಿನ್ ತೆಂಡೂಲ್ಕರ್,ಹೃದಯಸ್ಪರ್ಶಿ ನಡೆಗೆ ಮೆಚ್ಚುಗೆ
ಶಾಯ್ ಹೋಪ್ ಟೀಂ ಇಂಡಿಯಾಗೆ ಸೋಲಿನ ರುಚಿ ತೋರಿಸಿದ್ದು ಹೇಗೆ? ಅವರ ತಂತ್ರದ ಹಿಂದೆ ಭಾರತದ ದಿಗ್ಗಜನ ಕೈವಾಡ