ಶನಿವಾರದ ಸಮರ: ಇಂದು ಎರಡು ಹೈವೋಲ್ಟೇಜ್ ಮ್ಯಾಚ್, ಸೇಡಿನ ಕದನಕ್ಕೆ ಕ್ಷಣಗಣನೆ

Kannadaprabha News   | Kannada Prabha
Published : Apr 25, 2026, 09:53 AM IST
SRH vs RR Match

ಸಾರಾಂಶ

ಅಜೇಯ ಓಟದಲ್ಲಿರುವ ಪಂಜಾಬ್ ಕಿಂಗ್ಸ್, ಸ್ಥಿರತೆ ಇಲ್ಲದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲಿದೆ. ಇನ್ನೊಂದು ಪಂದ್ಯದಲ್ಲಿ, ಸೇಡು ತೀರಿಸಿಕೊಳ್ಳಲು ರಾಜಸ್ಥಾನ ರಾಯಲ್ಸ್ ಕಾಯುತ್ತಿದ್ದು, ಸ್ಫೋಟಕ ಬ್ಯಾಟರ್‌ಗಳಾದ ವೈಭವ್ ಸೂರ್ಯವಂಶಿ ಮತ್ತು ಅಭಿಷೇಕ್ ವರ್ಮಾ ಅವರ ಮೇಲೆ ಎಲ್ಲರ ಕಣ್ಣಿದೆ.

ನವದೆಹಲಿ: ಅಜೇಯ ಓಟ ಮುಂದುವರಿಸಿರುವ ಪಂಜಾಬ್‌ ಕಿಂಗ್ಸ್‌ ಲೀಗ್‌ ಹಂತ ಇನ್ನೂ ಅರ್ಧದಷ್ಟು ಬಾಕಿ ಇರುವಾಗಲೇ ಪ್ಲೇ-ಆಫ್‌ನತ್ತ ದಾಪುಗಾಲು ಇಡಲು ಕಾತರಿಸುತ್ತಿದೆ. 

ಶನಿವಾರ ದೆಹಲಿ ಕ್ಯಾಪಿಟಲ್ಸ್‌ ವಿರುದ್ಧ ಸೆಣಸಲಿರುವ ಪಂಜಾಬ್‌ ಮತ್ತೊಮ್ಮೆ ಅಮೋಘ ಪ್ರದರ್ಶನ ತೋರಲು ಎದುರು ನೋಡುತ್ತಿದೆ. ಈ ಆವೃತ್ತಿಯಲ್ಲಿ ಪಂಜಾಬ್‌, ಸ್ಥಿರತೆ ಹಾಗೂ ಆತ್ಮವಿಶ್ವಾಸ ಎರಡನ್ನೂ ಪ್ರದರ್ಶಿಸಿದ್ದು, ಇತ್ತೀಚೆಗಷ್ಟೇ ಈ ಆವೃತ್ತಿಯ ಅತ್ಯಧಿಕ ಮೊತ್ತ ದಾಖಲಿಸಿತ್ತು. ಬ್ಯಾಟಿಂಗ್‌, ಬೌಲಿಂಗ್‌ನಲ್ಲಿ ಸಮತೋಲನ ಹೊಂದಿರುವ ಪಂಜಾಬ್‌ ಮತ್ತೊಮ್ಮೆ ಫೇವರಿಟ್‌ ಆಗಿ ಕಣಕ್ಕಿಳಿಯಲಿದೆ.

ಮತ್ತೊಂದೆಡೆ ಡೆಲ್ಲಿ, ಆಡಿರುವ 6 ಪಂದ್ಯಗಳಲ್ಲಿ 3ರಲ್ಲಿ ಸೋತಿದೆ. ಹಿಂದಿನ ಪಂದ್ಯದಲ್ಲಿ ಸನ್‌ರೈಸರ್ಸ್‌ ವಿರುದ್ಧ ದೊಡ್ಡ ಸೋಲಿಗೆ ಗುರಿಯಾಗಿತ್ತು. ತನ್ನ ಆಟದಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಡೆಲ್ಲಿ ಮುಂದಿರುವ ಅತಿದೊಡ್ಡ ಸವಾಲು.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ , ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಇಂದು ವೈಭವ್‌ vs ಅಭಿ: ಸಿಕ್ಸರ್‌ ಸುರಿಮಳೆ ನಿರೀಕ್ಷೆ

ಜೈಪುರ: ಶನಿವಾರ 2ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ಹಾಗೂ ಸನ್‌ರೈಸರ್ಸ್‌ ಹೈದ್ರಾಬಾದ್‌ ಮುಖಾಮುಖಿಯಾಗಲಿದ್ದು, ಈ ಪಂದ್ಯ ಭಾರತದ ಇಬ್ಬರು ಸ್ಫೋಟಕ ಆರಂಭಿಕ ಬ್ಯಾಟರ್‌ಗಳಾದ ವೈಭವ್‌ ಸೂರ್ಯವಂಶಿ ಹಾಗೂ ಅಭಿಷೇಕ್‌ ವರ್ಮಾ ನಡುವಿನ ಸೆಣಸಾಟ ಎಂದೇ ಬಿಂಬಿತವಾಗಿದೆ. ಇಬ್ಬರೂ ಈ ಆವೃತ್ತಿಯಲ್ಲಿ ಉತ್ತಮ ಲಯದಲ್ಲಿದ್ದು, ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದಾರೆ. 

ರಾಯಲ್ಸ್‌-ಸನ್‌ರೈಸರ್ಸ್ ಎರಡನೇ ಬಾರಿ ಮುಖಾಮುಖಿ

ಈ ತಂಡಗಳ ನಡುವೆ ಇದು 2ನೇ ಮುಖಾಮುಖಿ. ಏ.13ರಂದು ನಡೆದಿದ್ದ ಪಂದ್ಯದಲ್ಲಿ ಸನ್‌ರೈಸರ್ಸ್‌ 57 ರನ್‌ ಗೆಲುವು ಸಾಧಿಸಿತ್ತು. ಪ್ರಫುಲ್‌ ಹಿಂಗೆ ಅಮೋಘ ಬೌಲಿಂಗ್‌ ಪ್ರದರ್ಶನ ತೋರಿದ್ದರು. ಈ ಪಂದ್ಯದಲ್ಲಿ ರಾಜಸ್ಥಾನ ಸೇಡಿಗೆ ಕಾಯುತ್ತಿದೆ. ರಾಜಸ್ಥಾನ 6ನೇ ಗೆಲುವಿನ ಮೇಲೆ ಕಣ್ಣಿಟ್ಟರೆ, ಸನ್‌ರೈಸರ್ಸ್‌ 5ನೇ ಜಯಕ್ಕಾಗಿ ಹಾತೊರೆಯುತ್ತಿದೆ.

ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL 2026: ನಿನ್ನೆ ನಡೆದ ಆರ್‌ಸಿಬಿ - ಗುಜರಾತ್ ಟೈಟಾನ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?
ಗುಜರಾತ್ ಎದುರಿನ ಹೈವೋಲ್ಟೇಜ್‌ ಮ್ಯಾಚ್‌ಗೆ ಆರ್‌ಸಿಬಿ ತಂಡದಲ್ಲಿ ಎರಡು ಬದಲಾವಣೆ? ಕನ್ನಡಿಗನಿಗಿಲ್ಲ ಸ್ಥಾನ!